ಹುಬ್ಬಳ್ಳಿ ಕೇಶ್ವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ವಿವಸ್ತ್ರಗೊಳಿಸಿ ಬಂಧನ ಆರೋಪ…ಧಾರವಾಡ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಆಕ್ರೋಶ. – ಹುಬ್ಬಳ್ಳಿ ಕೇಶ್ವಾಪುರ ಠಾಣೆಯ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರಗೊಳ್ಳಿಸಿ ಬಂಧಿಸಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಧಾರವಾಡದಲ್ಲಿ ಬಿಜೆಪಿ ಮಹಿಳಾ ಸೇರಿ ಪುರುಷ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ, ಡಿಸಿ ಕಚೇರಿ ಒಳ ನುಗ್ಗಲು ಯತ್ನಿಸಿ ಆಕ್ರೋಶ ಹೊರಹಾಕಿದರು. ನಗರ ಜಿಲ್ಲಾಧಿಕಾರಿ ಕಚೇರಿ …
Read More »Monthly Archives: ಜನವರಿ 2026
ವಿಜಯಪುರ ;ನಾಳೆ ಸಿಎಂರಿಂದ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ; ಸಚಿವ ಎಂ.ಬಿ.ಪಾಟೀಲರಿಂದ ಅಂತಿಮ ಹಂತದ ಸಿದ್ಧತೆಗಳ ಪರಿವೀಕ್ಷಣೆ
ವಿಜಯಪುರ ;ನಾಳೆ ಸಿಎಂರಿಂದ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ; ಸಚಿವ ಎಂ.ಬಿ.ಪಾಟೀಲರಿಂದ ಅಂತಿಮ ಹಂತದ ಸಿದ್ಧತೆಗಳ ಪರಿವೀಕ್ಷಣೆ ಆ್ಯಂಕರ್: ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಹವ್ಯಾಸಿ ಸೈಕ್ಲಿಸ್ಟ್ ಗಳು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳು ಇಲ್ಲಿದ್ದು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬೆಳ್ಳಿ, ಚಿನ್ನದ ಪದಕಗಳನ್ನು ಗೆದ್ದುತಂದು ವಿಜಯಪುರದ ಕೀರ್ತಿಯನ್ನು ಎಲ್ಲೆಡೆ ಬೆಳಗಿದ್ದಾರೆ. ವಿಜಯಪುರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲಿಸ್ಟ್ ಗಳು ತಯಾರಾಗುತ್ತಿದ್ದಾರೆ. ಇವರಿಗೆ ಅಭ್ಯಾಸ ಮಾಡಲು ಸೌಲಭ್ಯಗಳ ಕೊರತೆ ಇತ್ತು. …
Read More »ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ.
ಉಗಾರ ಲಯನ್ಸ್ ಕ್ಲಬ್ ಶಾಖೆಗೆ ಬೆಳಗಾವಿ ಝೊನಲ್ ಚೇರ್ಮನ್ ಮಲ್ಲಾರಿ ದಿವಟೆ ಭೇಟಿ. ಸಮಾಜದ ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ಇನ್ನೊಬ್ಬರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಉಗಾರದ ಲಯನ್ಸ್ ಕ್ಲಬ್ ಶಾಖೆ ಸದಸ್ಯರ ಸೇವೆ ಇನ್ನುಳಿದ ಶಾಖೆಗೆ ಮಾದರಿಯಾಗಿದೆ. ಎಂದು ಲಯನ್ಸ್ ಕ್ಲಬ್ ಬೆಳಗಾವಿ ಜಿಲ್ಲಾ ಝೋನಲ್ ಚೇರ್ಮನ್ ಮಲ್ಲಾರಿ ದಿವಟೆ ಉಗಾರದಲ್ಲಿ ಹೇಳಿದರು. ಬುಧವಾರ ಸಂಜೆ ಉಗಾರದ ಲಯನ್ಸ್ ಕ್ಲಬ್ ಶಾಖೆಗೆ ಭೇಟಿ ನೀಡಿ ಶಾಖೆಯ ಪ್ರಗತಿ …
Read More »ಬಂಜಾರಾ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡಿ ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ
ಬಂಜಾರಾ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡಿ ಬಂಜಾರಾ ಸಮಾಜದಿಂದ ಬೆಳಗಾವಿ ಮಹಾಪೌರರಿಗೆ ಮನವಿ ಬೆಳಗಾವಿ ನಗರದ ಸಂಗಮೇಶ್ವರ ನಗರದಲ್ಲಿರುವ ಮಹಾನಗರ ಪಾಲಿಕೆಯ 14 ಗುಂಟೆ ಜಾಗವನ್ನು ಬಂಜಾರಾ ಸಮುದಾಯದ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕೆಂದು ಸಮಾಜದ ಮುಖಂಡರು ಬೆಳಗಾವಿ ಮಹಾಪೌರ ಮಂಗೇಶ್ ಪವಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 25 ರಿಂದ 30 ಸಾವಿರದಷ್ಟು ಬಂಜಾರಾ ಸಮುದಾಯದ ಜನಸಂಖ್ಯೆ ಇದ್ದು, ಕಳೆದ ಹಲವು …
Read More »ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ; ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು; ಎಸ್ಪಿ ರಾಮರಾಜನ್ ಕೆ.
ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ; ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು; ಎಸ್ಪಿ ರಾಮರಾಜನ್ ಕೆ. ಇನಾಮದಾರ್ ಸಕ್ಕರೆ ಕಾರ್ಖಾನೆ ದುರಂತ ಮೃತರ ಸಂಖ್ಯೆ 7ಕ್ಕೆ ಏರಿಕೆ ನಿರ್ಲಕ್ಷ್ಯ ತೋರಿದ ಕಾರ್ಖಾನೆಯ ಮೂವರ ವಿರುದ್ಧ ಪ್ರಕರಣ ದಾಖಲು ಎಸ್ಪಿ ರಾಮರಾಜನ್ ಕೆ. ಮಾಧ್ಯಮಗೋಷ್ಟಿ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ಅವಘಡದಲ್ಲಿ ಬಲಿಯಾದ ಕಾರ್ಮಿಕರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಬುಧವಾರ ಮಧ್ಯಾಹ್ನ …
Read More »ಹಿಪ್ಪರಗಿ ಬ್ಯಾರೇಜ್ ಮೂಲಕ ಹರಿದು ಹೋದ ಕೃಷ್ಣೆಯ 10 ಅಡಿ ನೀರು!!! ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ
ಹಿಪ್ಪರಗಿ ಬ್ಯಾರೇಜ್ ಮೂಲಕ ಹರಿದು ಹೋದ ಕೃಷ್ಣೆಯ 10 ಅಡಿ ನೀರು!!! ಕೃಷ್ಣಾ ನದಿ ಬತ್ತಿ ಹೋಗುವ ಭೀತಿ, ರೈತರಲ್ಲಿ ಆತಂಕ • ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದು ಆತಂಕ • ಸಮುದ್ರ ಪಾಲಾದ 10 ಅಡಿ ಕೃಷ್ಣಾ ನೀರು • ಬತ್ತಿ ಹೋಗುವ ಭೀತಿಯಲ್ಲಿ ಕೃಷ್ಣಾ ನದಿ • ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರು, ಮೀನುಗಾರರ ಆಕ್ರೋಶ ಕಾಗವಾಡ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ 22ನೇ ಗೇಟ್ ಕಳೆದ ಜನವರಿ 6ರಂದು …
Read More »ಚುಳಕಿ ಗ್ರಾಮದ ಆಂತರಿಕ ರಸ್ತೆಗಳ ಸುಧಾರಣೆಗೆ ಚಾಲನೆ: ಮೂಲಭೂತ ಸೌಕರ್ಯಕ್ಕೆ ಆದ್ಯತೆ!
ಚುಳಕಿ ಗ್ರಾಮದ ಆಂತರಿಕ ರಸ್ತೆಗಳ ಸುಧಾರಣೆಗೆ ಚಾಲನೆ: ಮೂಲಭೂತ ಸೌಕರ್ಯಕ್ಕೆ ಆದ್ಯತೆ! 🏗️🛣️ ನಮ್ಮ ಸವದತ್ತಿ ಯಲ್ಲಮ್ಮ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಸಂಕಲ್ಪದೊಂದಿಗೆ, ಚುಳಕಿ ಗ್ರಾಮದಲ್ಲಿ ಮಹತ್ವದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಕಾಮಗಾರಿ ವಿವರ: ✅ ಯೋಜನೆ: ಸನ್ 2024-25ನೇ ಸಾಲಿನ ಲೆಕ್ಕ ಶೀರ್ಷಿಕೆ 5054ರ ಮಳೆ ಪರಿಹಾರ ಕಾರ್ಯಕ್ರಮದಡಿ, ಚುಳಕಿ ಗ್ರಾಮದ ನರಗುಂದ ಮುಖ್ಯ ರಸ್ತೆಯಿಂದ ಜನತಾ ಪ್ಲಾಟ್ (ಗೌಟನ್) ವ್ಯಾಪ್ತಿಯಲ್ಲಿ ಆಂತರಿಕ ಸಿಸಿ ರಸ್ತೆಗಳ …
Read More »ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದೆ!
ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದೆ! ಸವದತ್ತಿ ಗ್ರಾಮದ ಬ್ಲಾಕ್ ನಂ 2 (ಕಲಗುಡಿಯವರ ಹೊಲದ ಹತ್ತಿರ) ರೈತ ಬಾಂಧವರ ಅನುಕೂಲಕ್ಕಾಗಿ ಜಲ ಸಂಪನ್ಮೂಲ ಇಲಾಖೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (CADA) ವತಿಯಿಂದ ಹೊಸ ಯೋಜನೆಯೊಂದಕ್ಕೆ ಇಂದು ಚಾಲನೆ ನೀಡಲಾಯಿತು. ₹22 ಲಕ್ಷ ಅಂದಾಜು ವೆಚ್ಚದ ಹೊಲ ಬಸಿಗಾಲುವೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ಇಂದು ಯಶಸ್ವಿಯಾಗಿ ನೆರವೇರಿತು. ಯೋಜನೆಯ ವಿವರಗಳು: ಕಾಮಗಾರಿ: ಹೊಲ ಬಸಿಗಾಲುವೆ ನಿರ್ಮಾಣ ಅಂದಾಜು ವೆಚ್ಚ: …
Read More »ಕೈ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಸಚಿವ ಜಮೀರ್ ವಿರುದ್ಧ ಐಟಿಗೆ ದೂರು
ಕೈ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಸಚಿವ ಜಮೀರ್ ವಿರುದ್ಧ ಐಟಿಗೆ ದೂರು ಬೆಂಗಳೂರು: ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಗೆ ಬಲಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ಪರಿಹಾರ ರೂಪದಲ್ಲಿ 25 ಲಕ್ಷ ರೂ. ನಗದು ವಿತರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಹಿಂದೂ ಮುಖಂಡ ತೇಜಸ್ಗೌಡ ಎಂಬುವರು ಜಮೀರ್ ಅಹಮದ್ ವಿರುದ್ಧ ಐಟಿ ಇಲಾಖೆಗೆ …
Read More »ವಾಯವ್ಯ ಸಾರಿಗೆಯ ಪ್ರತಿಷ್ಠಿತ ಸಾರಿಗೆ ಬಸ್ಗಳ ಪ್ರಯಾಣ ದರ ಇಳಿಕೆ..!
ಹುಬ್ಬಳ್ಳಿ: ದೂರ ಮಾರ್ಗಗಳಲ್ಲಿ ಪ್ರಯಾಣ ಮಾಡುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಆಯ್ದ ಕೆಲವು ಮಾರ್ಗಗಳಲ್ಲಿ ಸಂಚರಿಸುವ ಪ್ರತಿಷ್ಠಿತ ಸಾರಿಗೆ ಬಸ್ಗಳ ಪ್ರಯಾಣ ದರದಲ್ಲಿ ಇಳಿಕೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ತಿಳಿಸಿದ್ದಾರೆ. ಪ್ರಸ್ತುತ ಕೆಲವು ದೂರ ಮಾರ್ಗದ ಪ್ರತಿಷ್ಟಿತ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ವಿವಿಧ ದೂರದ ಪ್ರಮುಖ ಸ್ಥಳಗಳ …
Read More »
Laxmi News 24×7