Breaking News

Yearly Archives: 2025

ಮೊದಲ ಬಾರಿಗೆ ಎರಡು ಹೆಬ್ಬಾವು ರಕ್ಷಿಸಿದ ಉರಗರಕ್ಷಕ ರಮೇಶ್

ಹಾವೇರಿ: ಸುಮಾರು 13,600 ಹಾವುಗಳನ್ನು ಹಿಡಿದಿರುವ ಉರಗರಕ್ಷಕ ರಮೇಶ್​ ಹಾನಗಲ್​ ಅವರು ಇದೇ ಮೊದಲ ಬಾರಿಗೆ ಎರಡು ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಜಿಲ್ಲೆಯ ಕ್ಯಾಸನೂರು ಗ್ರಾಮದ ಎಸ್.ಜಿ.ಪಾಟೀಲ ಎಂಬವರ ಅಡಿಕೆ ಹಾಗೂ ಬಾಳೆ ತೋಟಗಳಲ್ಲಿ ಗುರುವಾರ ಎರಡು ಹೆಬ್ಬಾವುಗಳು ಕಾಣಿಸಿಕೊಂಡಿದ್ದವು. ಹಾವೇರಿಯ ಉರಗರಕ್ಷಕ ರಮೇಶ್‌ ಅವರಿಗೆ ಹಾನಗಲ್ ತಾಲೂಕಿನ ಚಿಕ್ಕೌಂಶಿ ಹೊಸೂರು ಗ್ರಾಮದಿಂದ ಎಂದಿನಂತೆ ಹಾವು ಬಂದಿವೆ ಎಂಬ ಕರೆ ಬಂತು. ಎಂದಿನಂತೆ ಹಾವು ಹಿಡಿಯಲು ಹೋಗಿದ್ದ ರಮೇಶ್​ ಅವರಿಗೆ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್​ ಚುನಾವಣೆ ಕಾವು ಜಿಲ್ಲೆಯಲ್ಲಿ ಏರಿದೆ. ಈ ಬಾರಿ ತಾವೇ ಗೆದ್ದು ಬೀಗಬೇಕು ಎಂದು ಜಾರಕಿಹೊಳಿ ಸಹೋದರರು ಪಣ ತೊಟ್ಟಿದ್ದಾರೆ.

ಬೆಳಗಾವಿ: ಈ ಬಾರಿ ಬೆಳಗಾವಿ ಡಿಸಿಸಿ ಬ್ಯಾಂಕ್ ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಜಾರಕಿಹೊಳಿ ಸಹೋದರರು ಪಣ ತೊಟ್ಟಿದ್ದಾರೆ. ಈ ಗುರಿ ಸಾಧಿಸಲು ಕೆಲ ತಾಲ್ಲೂಕುಗಳಲ್ಲಿ ಎದುರು-ಬದುರು ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಯಾರೇ ಗೆದ್ದರೂ ತಮಗೇ ಪ್ಲಸ್ ಆಗಬೇಕು ಎಂಬ ಲೆಕ್ಕಾಚಾರ ಈ ಸಹೋದರರದ್ದು ಎಂದು ಜಿಲ್ಲೆಯ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅದು ವಿಧಾನಸಭೆ, ಲೋಕಸಭೆ ಚುನಾವಣೆ ಇರಲಿ. ಸಹಕಾರ ರಂಗದ ಸಣ್ಣ ಸೊಸೈಟಿ ಚುನಾವಣೆಯೇ ಇರಲಿ. ಬೆಳಗಾವಿಯಲ್ಲಿ ಚುನಾವಣೆ ನಡೆಯುತ್ತಿದೆ …

Read More »

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು

ಪರಿಸರ ದಿನಾಚರಣೆ ಮುನ್ನಾ ದಿನ ಅರಣ್ಯ ಪ್ರದೇಶದಲ್ಲಿ ಮಕ್ಕಳ ಸಂಭ್ರಮ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿ ನೆಟ್ಟ ಮಕ್ಕಳು ಮಕ್ಕಳಲ್ಲಿ ಮೂಡಿದ ಪರಿಸರ ಜಾಗೃತಿ ತುಂತುರು ಮಳೆ ಆ ನಡುವೆ ಹೆಚ್ಚು ಹಸಿರನ ವಾತಾವರಣ ಇದರ ಸವಿಯನ್ನು ಸವಿಯಲು ಎರಡು ಕಣ್ಣುಗಳು ನಾಲದು ಅಂತದರ ಮಧ್ಯೆ ವಿದ್ಯಾರ್ಥಿಗಳು ಚೆಂದನೆಯ ಧಿರಿಸು ಧರಿಸಿ ಕಾಡಿನ ಪರಿಸರದಲ್ಲಿ ಸಸಿ ನೆಡವುದು ಎಂದರೆ ಎಷ್ಟು ಅದ್ಭುತ ಅಲ್ಲವೇ ಹಾಗಾದ್ರೆ ಈ ಚಂದದ ದೃಶ್ಯ …

Read More »

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು.. ಈ ವಿಶೇಷ ಸಭೆಯಲ್ಲಿ ಬಸವೇಶ್ವರ ಬ್ಯಾಂಕಿನ ಮಂಡಳಿಯವರು, ವಾಣಿಜ್ಯ ಮಂಡಳಿ, ಇಂಜಿನಿಯರ್ಸ್‌ ಅಸೋಸಿಯೇಷನ್‌, ಸಿಎ ಅಸೋಸಿಯೇಷನ್‌ ಸದಸ್ಯರು ಹಾಗೂ ಖ್ಯಾತ ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಅತಿಥಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ಬೋರ್ಡ ಆಫ್ ಟ್ರಸ್ಟೀ ಅಧ್ಯಕ್ಷರಾದ ಕಿರಣ ಅಗಡಿ ಅವರು ಫೋರಮ್‌ನ …

Read More »

ಹೈಸ್ಟ್ರೀಟ್ ಕ್ಯಾಂಪ್’ನ ರಸ್ತೆ ಈಗ “ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”

ಹೈಸ್ಟ್ರೀಟ್ ಕ್ಯಾಂಪ್’ನ ರಸ್ತೆ ಈಗ “ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ”ಹೈಸ್ಟ್ರೀಟ್ ಕ್ಯಾಂಪ್’ ರಸ್ತೆಗೆ ಹೊಸ ಹೆಸರು“ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ” ಬೆಳಗಾವಿ ದಂಡು ಮಂಡಳಿಯಿಂದ ಕಾರ್ಯ ಹೊಸ ನಾಮಫಲಕ ಅಳವಡಿಕೆ ಬೆಳಗಾವಿ ಕ್ಯಾಂಪ್ ಹೈಸ್ಟ್ರೀಟ್ ರಸ್ತೆಗೆ ಛತ್ರಪತಿ ಶಿವಾಜೀ ಮಹಾರಾಜ್ ಮಾರ್ಗ ಎಂದು ದಂಡು ಮಂಡಳಿಯೂ ನಾಮಕರಣ ಮಾಡಿ ಫಲಕವನ್ನು ಅಳವಡಿಸಿದೆ. ಹೌದು, ಬೆಳಗಾವಿಯ ದಂಡು ಮಂಡಳಿಯ ಅಸ್ತಿತ್ವದಲ್ಲಿ ಬರುವ ಕ್ಯಾಂಪ್’ನ ಹೈಸ್ಟ್ರೀಟ್ ಮುಖ್ಯ ರಸ್ತೆಗೆ ಛತ್ರಪತಿ ಶಿವಾಜೀ ಮಹಾರಾಜ್ …

Read More »

ಚಡಚಣ ಎಸ್​ಬಿಐ ಬ್ಯಾಂಕ್ ದರೋಡೆ ಪ್ರಕರಣ: ನಾಲ್ವರು ಆರೋಪಿಗಳನ್ನ ಬಂಧಿಸಿದ ಪೊಲೀಸರು

ವಿಜಯಪುರ: ಕಳ್ಳರು ಚಾಪೆ ಕೆಳಗೆ ನುಗ್ಗಿದರೆ ಪೊಲೀಸರು ರಂಗೋಲಿ ಕೆಳಗೆ ನುಗ್ಗುವ ಮೂಲಕ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಎಸ್​ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹೆಡೆಮುರಿ ಕಟ್ಟುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆ.16ರಂದು ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆದಿದ್ದ ಎಸ್​ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರು ಬಳಸಿದ್ದ ಒಂದು ಕಾರು ಒಂದು ಬೈಕ್ ಹಾಗೂ ಒಟ್ಟು 9.01 ಕೆಜಿ …

Read More »

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನ ಕೊಲೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

ಗಂಗಾವತಿ(ಕೊಪ್ಪಳ): ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೆ.ವೆಂಕಟೇಶ ಅವರ ಕೊಲೆ ಆರೋಪಿಗಳನ್ನು ಇಂದು ಪೊಲೀಸರು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಭೀಮ್ ಅಲಿಯಾಸ್ ಭರತ್, ಸಲೀಂ, ವಿಜಯ್ ಹಾಗೂ ಧನರಾಜ್ ಪ್ರಕರಣದ ಬಂಧಿತ ಆರೋಪಿಗಳು. ಇದಕ್ಕೂ ಮುನ್ನ ಕೃತ್ಯ ನಡೆದ ರಾಣಾಪ್ರತಾಪ್ ಸಿಂಗ್ ವೃತ್ತ ಸಮೀಪದ ರಿಲಯನ್ಸ್ ಪಾಯಿಂಟ್‌ನ ಲೀಲಾವತಿ ಆಸ್ಪತ್ರೆಯ ಬಳಿ ಆರೋಪಿಗಳನ್ನು ಕರೆದೊಯ್ದ ಪೊಲೀಸರು ಸ್ಥಳ ಮಹಜರು ಮಾಡಿದರು. ವಿಚಾರಣೆ ಬಾಕಿ ಇದ್ದಲ್ಲಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು …

Read More »

ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3: ಭೂ ಪರಿಹಾರಕ್ಕೆ ಏಕರೂಪ ದರ ನಿಗದಿಪಡಿಸಿ ಸರ್ಕಾರ ಆದೇಶ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವ ಕುರಿತಂತೆ ಒಪ್ಪಂದದ ಐತೀರ್ಪು ರಚಿಸಲು ಏಕರೂಪ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಲಮಟ್ಟಿ ಜಲಾಶಯ ಎತ್ತರವನ್ನು 519.60 ಮೀಟರ್​ನಿಂದ 524.256 ಮೀಟರ್​ವರೆಗೆ ಎತ್ತರಿಸಲು ಅನುಮತಿ ನೀಡಲಾಗಿದೆ. ಇದರಿಂದ ಹಿನ್ನೀರಿನಲ್ಲಿ 75,563 ಎಕರೆ ಭೂಮಿ ಮುಳುಗಡೆಯಾಗಲಿದೆ. ಈ ಭೂಮಿಗೆ ಒಂದೇ ಹಂತದಲ್ಲಿ ಒಪ್ಪಂದದ ದರ ಅಥವಾ ಭೂ ಖರೀದಿ ಮೂಲಕ ಭೂಸ್ವಾಧೀನ ಮಾಡಲು …

Read More »

ಶಾಸಕ ಕೆ.ಸಿ.ವಿರೇಂದ್ರ ಪಪ್ಪಿಗೆ ಸೇರಿದ 50.33 ಕೋಟಿ ಮೌಲ್ಯದ 40 ಕೆ.ಜಿ. ಚಿನ್ನದ ಗಟ್ಟಿ ವಶ: ಇಡಿ

ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್‌ ದಂಧೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತೆ ದಾಳಿ ನಡೆಸಿ ಮುಂದುವರಿಸಿದ್ದಾರೆ. ಗುರುವಾರ ಚಳ್ಳಕೆರೆಯಲ್ಲಿ ವೀರೇಂದ್ರ ಪಪ್ಪಿಗೆ ಸೇರಿ ಎರಡು ಲಾಕರ್‌ಗಳನ್ನು ಜಪ್ತಿ ಮಾಡಿ 50.33 ಕೋಟಿ ರೂ. ಮೌಲ್ಯದ 40 ಕೆ.ಜಿ. ಚಿನ್ನದ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ. ಈ ಹಿಂದೆ 150 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಮತ್ತು 21 ಕೆ.ಜಿ. ಚಿನ್ನಗಳನ್ನು …

Read More »

ಚಿಕ್ಕೋಡಿ ಆಸ್ತಿ ವಿವಾದ, ಗಂಡ ಓಡಿಸುತ್ತಿದ್ದ ಕಾರಿಗೆ ಬೆಂಕಿ ಇಟ್ಟ ಪತ್ನಿ

ಚಿಕ್ಕೋಡಿ: ಆಸ್ತಿ ವಿವಾದ ಹಿನ್ನೆಲೆ ಗಂಡ ಓಡಿಸುತ್ತಿದ್ದ ಈಕೋ ಕಾರಿಗೆ ಪತ್ನಿ ಬೆಂಕಿ ಇಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೋಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಶಿವನಗೌಡ ಪಾಟೀಲ್ ಮತ್ತು ಪತ್ನಿ ಸಾವಿತ್ರಿ ಪಾಟೀಲ್‌ ನಡುವೆ ಕೌಟುಂಬಿಕ ಕಲಹ ಇತ್ತು. ಒಂದೇ ಮನೆಯಲ್ಲಿದ್ರೂ ಆಸ್ತಿ ಹಣಕ್ಕಾಗಿ ಗಂಡ ಹೆಂಡತಿ ಕಿತ್ತಾಟ ನಡೆಸುತಿದ್ರು. ಇಂದು ಇಬ್ಬರ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆ ಪತ್ನಿ ಗಂಡನ ಕಾರಿಗೆ ಬೆಂಕಿ ಇಟ್ಟಿದ್ದಾಳೆ. ಪೆಟ್ರೋಲ್ …

Read More »