Breaking News

Yearly Archives: 2025

ಮಾಜಿ ಸಚಿವ ಮುನೇನಕೊಪ್ಪ ನೇತೃತ್ವದಲ್ಲಿ ರೈತರ ಪ್ರತಿಭಟನಾ ಧರಣಿ…. ಧಾರವಾಡ ಡಿಸಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಅನ್ನದಾತರು.*

ಮಾಜಿ ಸಚಿವ ಮುನೇನಕೊಪ್ಪ ನೇತೃತ್ವದಲ್ಲಿ ರೈತರ ಪ್ರತಿಭಟನಾ ಧರಣಿ…. ಧಾರವಾಡ ಡಿಸಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಅನ್ನದಾತರು.* ವಿಪರೀತ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ಬಿಡುಗಡೆಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ನವಲಗುಂದ ರೈತರು ಪ್ರತಿಭಟನಾ ಧರಣಿ ಕೈಗೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ …

Read More »

ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.

ಹುಕ್ಕೇರಿ : ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ. ಹುಕ್ಕೇರಿ ನಗರದಲ್ಲಿ ಅಗಷ್ಟ 29 ಮತ್ತು 30 ರಂದು ಕ್ಯಾರಗುಡ್ಡ ಅವಜೀಕರ ಮಹಾರಾಜರ ಮತ್ತು ಜಗನ್ನಾಥ ಮಹಾರಾಜರ ಸ್ಮರಣಾರ್ಥ ಸಪ್ತಾಹ ಮತ್ತು ಮಂಜುನಾಥ ಮಹಾರಾಜರ ಕಲ್ಯಾಣ ಮಹೋತ್ಸವ ಜರುಗಲಿದೆ ಎಂದು ಮಂಜುನಾಥ ಮಹಾರಾಜರು ಹೇಳಿದರು. ಅವರು ಇಂದು ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆಯನ್ನು ಪರಶೀಲಿಸಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಶುಕ್ರವಾರ ದಿನಾಂಕ …

Read More »

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP? ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಉಚ್ವಾಟಿಸಿದ ಬಳಿಕ ಯತ್ನಾಳ ಹೊಸ ಪಕ್ಷ ಸ್ಥಾಪನೆ ಕುರಿತು ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದ ಯತ್ನಾಳರಿಗೆ ಬಿಜೆಪಿ ಗೇಟ್ ಪಾಸ್ ನೀಡಿತ್ತು. ಬಳಿಕ ವಿಜಯೇಂದ್ರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸದೇ ಹೋದಲ್ಲಿ ವಿಜಯದಶಮಿಗೆ ಹೊಸ ರಾಜಕೀಯ …

Read More »

ಮನೆ‌ ಕುಸಿದು ನಾಲ್ವರಿಗೆ ಗಂಭೀರ ಗಾಯ; ಮಾಜಿ ಶಾಸಕ ನಡಹಳ್ಳಿ ಸಾಂತ್ವನ

ವಿಜಯಪುರ :ಮನೆ‌ ಕುಸಿದು ನಾಲ್ವರಿಗೆ ಗಂಭೀರ ಗಾಯ; ಮಾಜಿ ಶಾಸಕ ನಡಹಳ್ಳಿ ಸಾಂತ್ವನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅರೇಮುರಾಳ ಗ್ರಾಮದಲ್ಲಿ ನಿರಂತರ‌ ಮಳೆಗೆ ಮನೆ ಕುಸಿದು ನಾಲ್ವರಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರುದ್ರಪ್ಪ ಬಂಡಿವಡ್ಡರ, ಮಲ್ಲಮ್ಮ ಬಂಡಿವಡ್ಡರ, ಶಾರದಾ ಬಂಡಿವಡ್ಡರ, ರುಶಾಂಬಂಡಿವಡ್ಡರ ಗಾಯಗೊಂಡವರು. ಮನೆಯಲ್ಲಿದ್ದ ಬಹುತೇಕ ಎಲ್ಲ ಸಾಮಗ್ರಿಗಳು, ದಿನಬಳಕೆ ವಸ್ತುಗಳು ನಾಶವಾಗಿವೆ. ಮಧ್ಯರಾತ್ರಿಯೇ ಘಟನೆ ನಡೆದಿದ್ದರೂ ಗ್ರಾಮ …

Read More »

ಬೆಳಗಾವಿ ಜಿಲ್ಲೆಯಾದ್ಯಾಂತ ಆದ ಭಾರಿ ಮಳೆಯಿಂದಾಗಿ ರೈತರ ಬೆಳೆ ಸಂಪೂರ್ಣವಾಗಿ ನಾಶ

ಬೆಳಗಾವಿ ಜಿಲ್ಲೆಯಾದ್ಯಾಂತ ಆದ ಭಾರಿ ಮಳೆಯಿಂದಾಗಿ ರೈತರ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಬೆಳೆಹಾನಿಗೆ ಎಕರೆಗೆ ₹25,000 ಪರಿಹಾರ ನೀಡುವಂತೆ ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ ಬೆಳಗಾವಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಭಾರತೀಯ ಕಿಸಾನ್ ಸಂಘ, ಕರ್ನಾಟಕ ಪ್ರದೇಶ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಸರದಾರ ಮಾತನಾಡುತ್ತಾ,ಪ್ರತೀ ವರ್ಷವಂತೆಯೇ ಈ …

Read More »

ಸೆಂಟಿಮೀಟರ್ ಎತ್ತರದ ಗಣೇಶ ಮೂರ್ತಿಗಳಿಗೆ ವಿಶ್ವ ದಾಖಲೆ!

ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ಗಣೇಶನ ಹಬ್ಬದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಬೃಹತ್​ ಗಾತ್ರದ ಗಣೇಶ ಮೂರ್ತಿಗಳು ಮಾತ್ರ. ಆದರೆ, ಇಲ್ಲೊಬ್ಬ ಕಲಾವಿದೆ ಸೆಂಟಿಮೀಟರ್ ಅಳತೆಯ ಗಾತ್ರದ ವಿವಿಧ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಲಂಬೋದರನ ಮೂರ್ತಿಗಳು ವಿಶ್ವದಾಖಲೆಗೆ ಮನ್ನಣೆಯಾಗಿರುವುದು ಗಮನಾರ್ಹ. ಜ್ಯೋತಿ ಶಾಂತರಾಜು ಅವರು ಇಂತಹದ್ದೊಂದು ಸಾಧನೆ ಮಾಡಿದ ಕಲಾವಿದೆ. ಶುದ್ಧ ಜೇಡಿ ಮಣ್ಣು ಮತ್ತು ಒಂದು ಸಣ್ಣ ಬ್ಲೇಡ್ ಸಿಕ್ಕರೆ ಸಾಕು ಜ್ಯೋತಿ ಅವರ ಕೈಯಲ್ಲಿ ಮಿಲಿಮೀಟರ್ (mm) …

Read More »

ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್​ವೇರ್ ಎಂಜಿನಿಯರ್​ ಶ್ರುತಿ ಸಮಯಪ್ರಜ್ಞೆಯಿಂದ ಮನೆ ಕಳ್ಳತನ ತಪ್ಪಿದೆ.

ಬಾಗಲಕೋಟೆ, ಆಗಸ್ಟ್ 28: ಒಬ್ಬನ ಮುಖಕ್ಕೆ ಮಂಕಿ ಕ್ಯಾಪ್, ಮತ್ತೊಬ್ಬನ ಮುಖದಲ್ಲಿ ಮಾಸ್ಕ್, ಮೈಮೇಲೆ ಶರ್ಟ್ ಇದೆ ಆದರೆ ಪ್ಯಾಂಟೇ ಇಲ್ಲ. ಇರೋದು ಬರೀ ಚಡ್ಡಿ! ಅವರು ಕಳ್ಳಬೆಕ್ಕಿನಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದಿದ್ದರು. ಇವರು ಬರುತ್ತಿರುವುದು ಮನೆ ಒಳಗಿದ್ದವರಿಗಂತೂ ಗೊತ್ತಾಗಿಲ್ಲ. ಆದರೆ, ದೂರದ ಅಮೆರಿಕದಲ್ಲಿ ಕೂತಿದ್ದ ಮನೆ ಮಗಳಿಗೆ ಗೊತ್ತಾಗಿತ್ತು. ಇದು ಬಾಗಲಕೋಟೆ (Bagalkot) ಜಿಲ್ಲೆಯ ಮುಧೋಳದಲ್ಲಿರುವ (Mudhol) ನಿವೃತ್ತ ಪಿಡಬ್ಲ್ಯುಡಿ ಎಂಜಿನಿಯರ್​ ಹನುಮಂತಗೌಡರ ಮನೆಯಲ್ಲಿ ನಡೆದ ಘಟನೆ. ಮಂಗಳವಾರ ರಾತ್ರಿ ನಾಲ್ಕು ಜನರ …

Read More »

ಕರಡಿ ದಾಳಿಯಿಂದ ಕಣ್ಣು ಕಳೆದುಕೊಂಡ ಹೊರಗುತ್ತಿಗೆ ನೌಕರನಿಗೆ ಸಹಾಯ ಹಸ್ತ ಚಾಚಿದ ಅಧಿಕಾರಿಗಳು

ಮೈಸೂರು: ಕರಡಿ ದಾಳಿಯಿಂದ ಒಂದು ಕಣ್ಣು ಕಳೆದುಕೊಂಡ ಹೊರಗುತ್ತಿಗೆ ನೌಕರನಿಗೆ ​ಅರಣ್ಯಾಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ‌‌ ನೆರವು ನೀಡಿದ್ದಾರೆ. ಕಳೆದ ಜು.15 ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಕರಡಿ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹೊರಗುತ್ತಿಗೆ ನೌಕರ ಮಾದ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವ ಮೂಲಕ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಹೆಚ್.ಡಿ. ಕೋಟೆ ತಾಲೂಕಿನ ಸೋಗಹಳ್ಳಿ …

Read More »

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

ಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ತಾಲೂಕು ಆಡಳಿತ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಆದರೆ ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಈ …

Read More »

ನೂತನವಾಗಿ ಆರಂಭಗೊಂಡ ಆವಿಷ್ಕಾರ ಹೋಟೆಲ್ ಸತೀಶ ಜಾರಕಿಹೊಳಿ ಅವರು ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಗೋಕಾಕ: ನಗರದ ರಿದ್ದಿ ಸಿದ್ಧಿ ಕಾರ್ಖಾನೆ ಹತ್ತಿರ ನೂತನವಾಗಿ ಆರಂಭಗೊಂಡ ಆವಿಷ್ಕಾರ ಹೋಟೆಲ್ ವನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಆರೀಫ್ ಪಿರಜಾದೆ ಹಾಗೂ ಹೊಟೇಲ್ ಮಾಲೀಕರಾದ ಹುಂಡೆಕರ ಇದ್ದರು

Read More »