Breaking News

Yearly Archives: 2025

ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಮಾರಾಟ ಮಾಡುವುದಿಲ್ಲ. ಉದ್ದಿಮೆ ಡಾ. ರಮೇಶ್ ದೊಡ್ಡನವರ. ಮಾಹಿತಿ.

ಬೆಳಗಾವಿ ಜಿಲ್ಲೆಯ ಇನ್ನಿತರ ಸಕ್ಕರೆ ಕಾರ್ಖಾನೆಗಳನ್ನು ಹೋಲಿಸಿದರೆ ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಚಿನ್ನದಂತೆ ಕಾರ್ಖಾನೆ ಇದೆ. ಈ ಸಕ್ಕರೆ ಕಾರ್ಖಾನೆ ಮಾರಾಟ ಮಾಡಲಿದ್ದಾರೆ ಎಂಬ ಊಹಾಪೋಹ ನಮ್ಮ ಏಳಿಗೆ ಸಹಿಸದೇ ಇರುವರು ಹೇಳುತ್ತಿದ್ದಾರೆ. ಯಾವ ಕಾಲಕ್ಕೆ ಸಕ್ಕರೆ ಕಾರ್ಖಾನೆ ಮಾರಾಟ ಮಾಡುವುದಿಲ್ಲ. 13 ವರ್ಷಗಳಲ್ಲಿ ರೈತರು, ಕಾರ್ಮಿಕರು ಸಾತ ನೀಡಿದ್ದು ಈ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಸಹಕರಿಸಿರಿ. ಎಂದು ಉದ್ಯಮಿ ಹಾಗೂ ಸಕ್ಕರೆ ಕಾರ್ಖಾನೆಯ ಮುಖ್ಯಸ್ಥರಾದ …

Read More »

ಅಕ್ರಮ ಸಾರಾಯಿ ಮಾರಾಟ ಮತ್ತು ಮಾದಕ ವಸ್ತು ಸೇವನೆ ಒಟ್ಟು 2 ಪ್ರಕರಣಗಳಲ್ಲಿ ಮೂವರು ಅಂದರ್…

ಅಕ್ರಮ ಸಾರಾಯಿ ಮಾರಾಟ ಮತ್ತು ಮಾದಕ ವಸ್ತು ಸೇವನೆ ಒಟ್ಟು 2 ಪ್ರಕರಣಗಳಲ್ಲಿ ಮೂವರು ಅಂದರ್… ಅಕ್ರಮ ಸಾರಾಯಿ ಮಾರಾಟ ಮತ್ತು ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಒಟ್ಟು 2 ಪ್ರಕರಣಗಳಲ್ಲಿ 3 ಜನ ಆರೋಪಿತರನ್ನು ವಶ ಪಡೆದುಕೊಂಡು ಅವರಿಂದ ರೂ.8090/- ಮೌಲ್ಯದ ಅಕ್ರಮ ಸರಾಯಿ ಜಪ್ತಪಡಿಸಿಕೊಳ್ಳಲಾಗಿದೆ. ಮಾರಿಹಾಳ ಪೊಲೀಸರು ಅಕ್ರಮ ಸರಾಯಿ ಮಾರಾಟದ ಮೇಲೆ ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ದಿನಾಂಕ: 18/10/2025 ರಂದು, ಬೆಳಗಾವಿ ಸುಳೇಭಾವಿ, …

Read More »

ದೀಪಾವಳಿ ಹಬ್ಬದ ದಿನವೂ ಸಮೀಕ್ಷೆ ಮಾಡುವಂತೆ ಆದೇಶ; ಬಳ್ಳಾರಿಯಲ್ಲಿ ಶಿಕ್ಷಕರ ಪ್ರತಿಭಟನೆ

ಬಳ್ಳಾರಿ: ರಾಜ್ಯಾದ್ಯಂತ ನಿನ್ನೆಯವರೆಗೆ(ಶನಿವಾರ) ಸಮೀಕ್ಷೆ ನಡೆಸಲು ಆದೇಶವಿತ್ತು. ಗಣತಿಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಬಳ್ಳಾರಿಯಲ್ಲಿ ಇನ್ನೆರಡು ದಿನ ಗಣತಿ ಮಾಡುವಂತೆ ಆದೇಶ ನೀಡಲಾಗಿದೆ. ಆದರೆ, ಹಬ್ಬದ ರಜಾ ದಿನದಲ್ಲಿಯೂ ಗಣತಿ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶಿಕ್ಷಕರು, ತಾಲೂಕು ಪಂಚಾಯತಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ದೀಪಾವಳಿ ರಜೆ ಇದೆ, ಯಾರ ಮನೆಗೆ ಹೋದ್ರೂ ಹಬ್ಬದ ದಿನ ಏಕೆ ಬಂದಿದ್ದೀರಿ ಎಂದು ನಮಗೇ ಬೈಯುತ್ತಾರೆ. ಹೀಗಾಗಿ, …

Read More »

ಹಾಸನಾಂಬೆಯ ದರ್ಶನ ಪಡೆದ ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ ಕುಟುಂಬ

ಹಾಸನ: ಹಾಸನಾಂಬ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು ಹತ್ತನೇ ದಿನ. ಇಂದೂ ಕೂಡಾ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಸಿನಿಮಾ ನಟರಾದ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗು ಕಾಂತಾರ ಚಿತ್ರದ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದರು. ಭಾನುವಾರವಾದ್ದರಿಂದ ಹೊರ ಜಿಲ್ಲೆಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಹೀಗಾಗಿ ಧರ್ಮದರ್ಶನ ಸಾಲು ಬ್ಯಾರಿಕೇಡ್ ದಾಟಿ ಸುಮಾರು 4.5 ಕಿಲೋ ಮೀಟರ್ …

Read More »

ಬಾಗಲಕೋಟೆಯಲ್ಲಿ ಬೆಂಕಿ ಅವಘಡ…7 ಜನರಿಗೆ ಗಾಯ

ಬಾಗಲಕೋಟೆಯಲ್ಲಿ ಬೆಂಕಿ ಅವಘಡ…7 ಜನರಿಗೆ ಗಾಯ ಗಾಯಾಳುಗಳ ಆರೋಗ್ಯ ವಿಚಾರಿಸಿದ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಘಟನಾ ಸ್ಥಳಕ್ಕೆ ಮತ್ತು ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿದರು. ಶಾಸಕ ಜೆ.ಟಿ. ಪಾಟೀಲ್ ಅವರೊಂದಿಗೆ ಸಚಿವರು, ಘಟನೆಯಲ್ಲಿ ಗಾಯಗೊಂಡಿರುವ 8 ಜನ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಘಟನೆ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯರಿಂದ …

Read More »

RSS ಬಿಸಿಬಿಸಿ ಚರ್ಚೆಗೆ ತುಪ್ಪ ಸುರಿದು ವಿವಾದದ ಕಿಡಿ ಹೊತ್ತಿಸಿದ ಸಚಿವ ಶಿವರಾಜ್ ತಂಗಡಗಿ

ಕೊಪ್ಪಳ, (ಅಕ್ಟೋಬರ್ 18): ಸಾರ್ವಜನಿಕ ಸ್ಥಳಗಳಲ್ಲಿ ಆರ್​ ಎಸ್​ಎಸ್​  (RSS) ಕಾರ್ಯಚಟುವಟಿಕೆಗಳಿಗೆ ನಿರ್ಬಂಧಿಸುವ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ನಡುವೆ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ ಬಿಜೆಪಿ ನಾಯಕರು ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಮರ ಸಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಪ್ರತ್ಯಾರೋಪ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಸಚಿವ ಶಿವರಾಜ್ ತಂಗಡಗಿ (Shivaraj Tangadagi)  RSS ಒಪ್ಪುವವರು ದೇಶಪ್ರೇಮಿಗಳಲ್ಲ, ದೇಶ ವಿರೋಧಿಗಳು ಎಂದು …

Read More »

10 ಲಕ್ಷ ಅಸಲಿ ನೋಟಿಗೆ 30 ಲಕ್ಷ ರೂ ನಕಲಿ ನೋಟಿನ ಆಮಿಷ

ಬೆಂಗಳೂರು, ಅಕ್ಟೋಬರ್​​ 19: ಅದು ತಮಿಳುನಾಡಿನ ಕಿಲಾಡಿ ಗ್ಯಾಂಗ್. ಜನರಿಗೆ ಮಂಕುಬೂದಿ ಎರಚೋದೆ ಅವರ ಕಾಯಕ. ಅಸಲಿ ನೋಟು ಕೊಟ್ಟರೇ ಅದಕ್ಕಿಂತ ಹೆಚ್ಚಿನ ನಕಲಿ ನೋಟು (Fake Notes) ನೀಡಿ ಮಾರಿಸುವದು ಕರಗತವಾಗಿತ್ತು. ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದಿದ್ದ ಆ ಗ್ಯಾಂಗ್ ಬೆಂಗಳೂರಿನಲ್ಲಿ ಮೊದಲ ವಂಚನೆ ಪ್ರಯತ್ನದಲ್ಲೇ ಖಾಕಿ ಬಲೆಗೆ (Arrest) ಬಿದ್ದಿದೆ.ಬಂಧಿತ ಶೇಕ್‌ ಮೊಹಮ್ಮದ್, ಮಿರಾನ್ ಮೊಹಿದ್ದೀನ್, ರಾಜೇಶ್ವರನ್​​ ತಮಿಳುನಾಡಿನ ತಿರುನೆಲ್ವೇಲಿ ಮೂಲದವರು. ಇಷ್ಟು ದಿನ ತಮಿಳುನಾಡು, ಆಂಧ್ರ ಭಾಗದಲ್ಲಿ ಜನರಿಗೆ ಮಂಕುಬೂದಿ ಎರಚಿ ವಂಚನೆ …

Read More »

ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ನಾಳೆಯಿಂದಲೇ ಕಬ್ಬು ನುರಿಸಲು ಅನುಮತಿ ನೀಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್​ ಹೇಳಿದ್ದಾರೆ.

ಬೆಂಗಳೂರು : ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಅ. 20 ರಿಂದಲೇ ಕಬ್ಬು ಕ್ರಷಿಂಗ್‌ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ಆದೇಶ ಮಾಡಲಾಗಿದೆ. ಈ ಮೊದಲು ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಜೂನ್‌ 22ರಿಂದ ಹಾಗೂ ಬೆಳಗಾವಿ, ವಿಜಯಪುರ, ಬೀದರ್‌, ಕಲಬುರಗಿ, ಬಾಗಲಕೋಟೆ, ಗದಗ, ಯಾದಗಿರಿ, ದಾವಣಗೆರೆ, ಉತ್ತರ ಕನ್ನಡ, …

Read More »

ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಹಾವೇರಿ : ಆರ್​​ಟಿಸಿ ದುರಸ್ತಿ ಮಾಡಿಕೊಡಲು 12 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಶಿರಸ್ತೇದಾರ ಸೇರಿ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಶಿರಸ್ತೇದಾರ ತಮ್ಮಣ್ಣ ಕಾಂಬಳೆ, ದ್ವಿತೀಯ ದರ್ಜೆ ಸಹಾಯಕರುಗಳಾದ ಗೂಳಪ್ಪ ಮನಗೂಳಿ ಹಾಗೂ ಶಿವಾನಂದ ಬಡಿಗೇರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಬೊಮ್ಮನಹಳ್ಳಿ ಗ್ರಾಮದ ಶಂಕ್ರಪ್ಪ ಗುಮಗುಂಡಿ ಎಂಬುವರ ಆರ್​ಟಿಸಿ ದುರಸ್ತಿ ಮಾಡಿಕೊಡಲು ಆರೋಪಿಗಳು ಲಂಚ ಪಡೆಯುತ್ತಿದ್ದ ವೇಳೆ …

Read More »

ಪತ್ನಿಯನ್ನು ಹತ್ಯೆ ಮಾಡಿ ವಾಟರ್ ಹೀಟರ್​ನಿಂದ ಕರೆಂಟ್ ಹೊಡೆದು ಸಾವು ಎಂದು ಬಿಂಬಿಸಿದ್ದ ಪತಿ ಅರೆಸ್ಟ್

ಬೆಂಗಳೂರು: ಅಕ್ರಮ ಸಂಬಂಧ ಹೊಂದಿರುವುದಾಗಿ ಶಂಕಿಸಿ ಪತ್ನಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಬಳಿಕ ಕೃತ್ಯ ಮರೆ ಮಾಚಲು ವಾಟರ್ ಹೀಟರ್​ನಿಂದ ಕರೆಂಟ್ ಹೊಡೆದು ಮೃತಪಟ್ಟಿರುವುದಾಗಿ ಕಥೆ ಕಟ್ಟಿದ ಪತಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಹತ್ಯೆಗೊಳಗಾದ ರೇಷ್ಮಾ (32). ಹತ್ಯೆ ಮಾಡಿದ ಆರೋಪದಡಿ ಪತಿ ಪ್ರಶಾಂತ್ ಕಮ್ಮಾರ್ (25) ಎಂಬಾತನನ್ನು ಬಂಧಿಸಲಾಗಿದೆ. ರೇಷ್ಮಾ ಸಹೋದರಿ ರೇಣುಕಾ ಎಂಬುವರು ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ …

Read More »