ಕಲಬುರಗಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ. ಅತಿವೃಷ್ಠಿ ಮತ್ತು ಭೀಮಾ ನದಿ ಪ್ರವಾಹದಿಂದ ಬೆಳೆ ಹಾನಿಯಾಗಿದ್ದರೆ, ಇನ್ನೊಂದೆಡೆ ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದಡೆ ರಾಶಿ ಮಾಡಿ ಒಣಗಲು ಹಾಕಿದ್ದ ಅಪಾರ ಪ್ರಮಾಣದ ಹೆಸರು ನೀರು ಪಾಲಾಗಿದ್ದು, ರೈತರು ಕಂಗಾಲಾಗಿದ್ದಾರೆ. ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನೂರಾರು ರೈತರು ಹೆಸರು ಫಸಲು ರಾಶಿ ಮಾಡಿ ದರ್ಗಾ ಆವರಣದಲ್ಲಿ ಒಣಗಲು ಹಾಕಿದ್ದರು. …
Read More »Yearly Archives: 2025
ಜುಲೈ ಅಂತ್ಯದವರೆಗೆ 8,69,284 ರೈತರಿಗೆ 8362 ಕೋಟಿ ರೂ ಸಾಲ ವಿತರಣೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ 8362.68 ಕೋಟಿ ರೂ ಸಾಲ ವಿತರಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ಪದಚ್ಯುತಿಗೊಳಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ, ರೈತರಿಗೆ ಸಕಾಲದಲ್ಲಿ ಕೃಷಿ ಸಾಲವನ್ನು ಸಿಗುವುದನ್ನು ಖಾತ್ರಿಪಡಿಸಬೇಕು. …
Read More »BA, BScಗೂ ಕೌಶಲ್ಯಾಧಾರಿತ ಅಪ್ರೆಂಟಿಶಿಪ್ ಎಂಬೆಡೆಡ್ ಪ್ರೊಗ್ರಾಂ ಪರಿಚಯಿಸಲು ಚಿಂತನೆ: ಸಚಿವ ಎಂ.ಸಿ.ಸುಧಾಕರ್
ಬೆಂಗಳೂರು: ಕೌಶಲ್ಯಾಧಾರಿತ ಎಇಡಿಪಿ (ಅಪ್ರೆಂಟಿಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್)ಯನ್ನು ಮುಂಬರುವ ದಿನಗಳಲ್ಲಿ ಡಿಪ್ಲೊಮಾ ಜತೆಗೆ ವಿಜ್ಞಾನ ಮತ್ತು ಕಲಾ ಪದವಿ ವಿಭಾಗಕ್ಕೂ ಪರಿಚಯಿಸುವ ಚಿಂತನೆ ಇದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಕಾಂ ಓದುತ್ತಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ 2024-25ನೇ ಸಾಲಿನಲ್ಲಿ ಕೌಶಲ್ಯಾಧಾರಿತ ಎಇಡಿಪಿ ಶೈಕ್ಷಣಿಕ ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ಇದರಡಿ ರಾಜ್ಯದ 44 ಪ್ರಥಮದರ್ಜೆ ಕಾಲೇಜುಗಳ …
Read More »ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಕಣದಿಂದ ಹಿಂದೆ ಸರಿದ ಸಚಿವೆ ಹೆಬ್ಬಾಳ್ಕರ್ ಸಹೋದರ
ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ 52 ದಿನ ಬಾಕಿ ಇದೆ. ಆದರೆ, ಚುನಾವಣಾ ಕಣ ಈಗಲೇ ರಂಗೇರಿದೆ. ಜಾರಕಿಹೊಳಿ ಸಹೋದರರು ಶತಾಯಗತಾಯ ಈ ಬಾರಿ ಡಿಸಿಸಿ ಬ್ಯಾಂಕ್ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಇನ್ನು ವಿರೋಧಿ ಬಣ ಸೈಲೆಂಟ್ ಆಗಿಯೇ ರಣತಂತ್ರ ರೂಪಿಸುತ್ತಿದೆ. ಈ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ, ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚುನಾವಣಾ ಕಣದಿಂದ ಹಿಂದೆ ಸರಿದಿರುವುದು …
Read More »ಗಂಗಾಧರ ಶಿವಪ್ಪ ಟೋಪಣ್ಣನವರ ನಿಧನ
ಗಂಗಾಧರ ಶಿವಪ್ಪ ಟೋಪಣ್ಣನವರ ನಿಧನ ಬೆಳಗಾವಿಯ ನಾನಾವಾಡಿ ಕೆ.ಎಚ್.ಬಿ ಕಾಲನಿಯ ರಹಿವಾಸಿ ಗಂಗಾಧರ ಶಿವಪ್ಪ ಟೋಪಣ್ಣನವರ (83) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. ಮೃತರು ಪತ್ನಿ, ಸುಪುತ್ರ, ಸೊಸೆ, ಮೂವರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯೂ ಗುರುವಾರಬೆಳಗಾವಿಯ ಸದಾಶಿವನಗರದ ಕಲ್ಮಠ ಸ್ಮಶಾನಭೂಮಿಯಲ್ಲಿ ನಡೆಯಲಿದೆ.
Read More »ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ
ಸಕಾರಣ ಇಲ್ಲದೆ ಕಾಂಗ್ರೆಸ್ ಅಧಿವೇಶನ ನಡೆಯಲು ಬಿಡಲಿಲ್ಲ. ಅತ್ಯಂತ ಮಹತ್ವದ ಬಿಲ್ ಗಳಿದ್ದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ ಮಾಡಿದರು. ನಗರದಲ್ಲಿ ಮಾತನಾಡಿದ ಅವರು. ಕೆಲ ಬಿಲ್ ಗಳನ್ನು ಸಾರ್ವಜನಿಕವಾಗಿ. ಸುದೀರ್ಘವಾದ ಚರ್ಚಗೆ ಬಿಟ್ಟಿದ್ದೆವು ಆದಾಯ ತೆರಿಗೆ ಇಲಾಖೆಯ ಹೊಸ ಬಿಲ್ ಸೇರಿ ವಿವಿಧ ಪಾಸ್ ಆದವು ಸುಳ್ಳು ಸಬೂಬು ಹೇಳಿ ಕಾಂಗ್ರೆಸ್ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದರು. ಪ್ರಜಾಪ್ರಭುತ್ವದಲ್ಲಿ ಕಾಂಗ್ರೆಸ್ ಗೆ ವಿಶ್ವಾಸವಿಲ್ಲ ಆಪರೇಷನ್ …
Read More »:ಅಗಸ್ಟ್ 29 ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮ ಮತ್ತು ಬೃಹತ್ ಪ್ರತಿಭಟನೆ: ಸಂಸದ ರಮೇಶ ಜಿಗಜಿಣಗಿ*
ವಿಜಯಪುರ :ಅಗಸ್ಟ್ 29 ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮ ಮತ್ತು ಬೃಹತ್ ಪ್ರತಿಭಟನೆ: ಸಂಸದ ರಮೇಶ ಜಿಗಜಿಣಗಿ ; ಧರ್ಮ ರಕ್ಷಣೆಗಾಗಿ ಧರ್ಮಸ್ಥಳ ಚಲೋ ! ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಜಿಗಜಿಣಗಿ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಬುರುಡೆ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಅಗಸ್ಟ್ 29 ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮ ಮತ್ತು ಬೃಹತ್ ಪ್ರತಿಭಟನೆ …
Read More »ಜಾಗತೀಕ ಟ್ರೈಅಥ್ಲಾನ್’ ಸ್ಪರ್ಧೆಯಲ್ಲಿ ಐಜಿಪಿ ಸಂದೀಪ್ ಪಾಟೀಲ್ ಸಾಧನೆ
ಜಾಗತೀಕ ಟ್ರೈಅಥ್ಲಾನ್’ ಸ್ಪರ್ಧೆಯಲ್ಲಿ ಐಜಿಪಿ ಸಂದೀಪ್ ಪಾಟೀಲ್ ಸಾಧನೆ ರಾಜ್ಯದ ಕೀರ್ತಿ ಹೆಚ್ಚಿಸಿದ ಐಜಿಪಿ ಸಂದೀಪ್ ಪಾಟೀಲ್… ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಐಜಿಪಿ ಸಂದೀಪ್ ಪಾಟೀಲ್ ಅವರು ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ ಒಂದಾದ ಟ್ರೈಅಥ್ಲಾನ್ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ರಾಜ್ಯದ ಹೆಮ್ಮೆ ಹೆಚ್ಚಿಸಿದ್ದಾರೆ. ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಐಜಿಪಿ ಸಂದೀಪ್ ಪಾಟೀಲ್ ಅವರು ಡೆನ್ಮಾರ್ಕ್ನ ರಾಜಧಾನಿ ಕೋಪನಹೆಗನ್ನಲ್ಲಿ ನಡೆದ ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ …
Read More »ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು
ಸನ್ಮಾನ್ಯ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ನಿಮಿತ್ಯ ಹುಕ್ಕೇರಿ ಮತಕ್ಷೇತ್ರದ ಹುಲ್ಲೋಳಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು 1. ಸಿದ್ದಪ್ಪ ಅನಿಲ್ ವಡ್ಡರ್ 2. ವೀರೇಶ್ ಶಂಕರ್ ಜೋಗಿ ರಾಮ್ ಗೋಳ 3. ವಾಶಪ್ಪಾ ಸಿದ್ದಪ್ಪಾ ಮಾಯಪ್ಪಗೋಳ 4. ಆಕಾಶ್ ಬಸಪ್ಪಾ ಜೋಗಿರಾಮ್ ಗೋಳ 5. ರವೀಂದ್ರ ವಿಠ್ಠಲ್ ಜೋಗಿರಾಮಗೋಳ 6. ಪ್ರದೀಪ್ ಹಾಲಪ್ಪಾ …
Read More »ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮಕ್ಕೆ ಭೇಟಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ
ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮಕ್ಕೆ ಭೇಟಿ ನೀಡಿದಾಗ, ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ, ಶ್ರೀ ಬಸವೇಶ್ವರ ದೇವಾಲಯದ ದರ್ಶನ ಪಡೆದ ನಂತರ, ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಮುಂಬರುವ ಚುನಾವಣೆಯಲ್ಲಿ ಶ್ರೀ ಅಪ್ಪಣಗೌಡ ಪಾಟೀಲ ಸಹಕಾರಿ ಪೆನಲ್ ಗೆ ನಿಮ್ಮೆಲ್ಲರ ಬೆಂಬಲ ನೀಡಿ ಸಂಘವನ್ನು ಶಕ್ತಿಶಾಲಿಯಾಗಿ ಬೆಳೆಸುವಂತೆ …
Read More »