Breaking News

Yearly Archives: 2025

ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭ

ಮೈಸೂರು, ಫೆಬ್ರವರಿ 09: ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ 144 ವರ್ಷಗಳ ಬಳಿಕ ಪವಿತ್ರ ಕುಂಭಮೇಳ (Kumbh Mela) ನಡೆಯುತ್ತಿದೆ. ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಇದೀಗ ಇತ್ತ ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ಅಂದರೆ ಫೆ. 10 ರಿಂದ 3 ದಿನಗಳ ಕಾಲ ಕುಂಭಮೇಳ ನಡೆಯಲಿದೆ. ಮೂರು ವರ್ಷಕ್ಕೊಮ್ಮೆ ಜಿಲ್ಲೆಯ ಟಿ.ನರಸೀಪುರದ ತಿರುಮಕೂಡಲಿನಲ್ಲಿ ಕುಂಭಮೇಳ ನಡೆಯಲಿದ್ದು, ನಾಳೆ ಸಚಿವ ಡಾ ಹೆಚ್. ಸಿ‌ ಮಹದೇವಪ್ಪ ಕುಂಭಮೇಳಕ್ಕೆ …

Read More »

ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದು ವಿವಾದಕ್ಕೆ ಕಾರಣ

ಮೈಸೂರು: ಟಿ ನರಸೀಪುರ ರಸ್ತೆಯಲ್ಲಿ ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಆಗಮಿಸಿ ಅದನ್ನು ತೆರವಿಗೊಳಿಸಬೇಕೆಂದು ಪೊಲೀಸರು ಹೇಳಿದಾಗ ಒಕ್ಕಲಿಗ ಸಂಘದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಪರವಾಗಿ ಮಾತಾಡಿದ ಒಕ್ಕಲಿಗ ಮುಖಂಡರೊಬ್ಬರು ಕಳೆದ ಮೂರು ವರ್ಷಗಳಿಂದ ಸ್ಥಳದಲ್ಲಿ ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪಿಸುವುದಕ್ಕೆ ಪ್ರಯತ್ನಗಳು ನಡೆದಿದ್ದವು. ಶಾಸಕರಾದ ಶ್ರೀವತ್ಸ ಮತ್ತು ಹರೀಶ್ ಸಮಯ ತೆಗೆದುಕೊಂಡಿದ್ದರೂ ಪ್ರತಿಮೆ ಪ್ರತಿಷ್ಠಾಪನೆಗೆ ಅನುಮತಿ ಪಡೆದುಕೊಳ್ಳಲಿಲ್ಲ. ಹಾಗಾಗಿ ಸ್ಥಳೀಯರೇ ನಿನ್ನೆ …

Read More »

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರತಿ ಕ್ವಿಂಟಲ್​ ತೊಗರಿಗೆ ರಾಜ್ಯ ಸರ್ಕಾರ 450 ಪ್ರೋತ್ಸಾಹಧನ ಘೋಷಣೆ ಮಾಡಿದೆ.

ಬೆಂಗಳೂರು, ಫೆಬ್ರವರಿ 08: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರತಿ ಕ್ವಿಂಟಲ್​ ತೊಗರಿಗೆ ರಾಜ್ಯ ಸರ್ಕಾರ 450 ಪ್ರೋತ್ಸಾಹಧನ ಘೋಷಣೆ ಮಾಡಿದೆ. ಆ ಮೂಲಕ ತೊಗರಿ ಬೆಳೆಗಾರರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದಿಂದ ಗುಡ್‌ನ್ಯೂಸ್‌ ನೀಡಲಾಗಿದೆ. ಪ್ರೋತ್ಸಾಹಧನ ನೀಡುವುದಕ್ಕೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ.2024-25ನೇ ಸಾಲಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಕ್ವಿಂಟಾಲ್‌ಗೆ 450 ರೂ ಪ್ರೋತ್ಸಾಹಧನ ನೀಡುವುದಾಗಿ …

Read More »

ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಪಂದ್ಯ ವೀಕ್ಷಿಸಿದ ಡಿ.ಕೆ. ಶಿ

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ನಡುವಣ ಟಿ20 ಪಂದ್ಯದ ಟಾಸ್ ಹಾಕಿ, ಪಂದ್ಯವನ್ನು ವೀಕ್ಷಿಸಿದರು. ಪಂದ್ಯಕ್ಕೂ ಮುನ್ನ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಅವರು ಶಿವಕುಮಾರ್ ಅವರಿಗೆ ತಂಡದ ಆಟಗಾರರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ನಟ ಹಾಗೂ ತಂಡದ ಆಟಗಾರ ಗೋಲ್ಡನ್ ಸ್ಟಾರ್ ಗಣೇಶ್, ತಂಡದ ಮಾಲೀಕರಾದ …

Read More »

ಧಾರವಾಡ ಶಹರ ಪೊಲೀಸ ಠಾಣೆ ವ್ಯಾಪ್ತಿಯ ಗೋಲ್ಡ್ ಶಾಫ್ ಓನರ್ಸ್ ಮೀಟಿಂಗ್….

ರಾಜ್ಯದಲ್ಲಿ ಇತ್ತೀಚೆಗೆ ನಡೆದ ದರೋಡೆ ಸೇರಿ ಕಳ್ಳತನ ಪ್ರಕರಣಗಳು ಹೆಚ್ಚಳವಾದ ಹಿನ್ನಲೆಯಲ್ಲಿ ಧಾರವಾಡ ಶಹರ ಪೊಲೀಸ ಠಾಣೆ ವ್ಯಾಪ್ತಿಯ ಗೋಲ್ಡ್ ಶಾಫ್ ಓನರ್ಸ್‌ಗಳ ಸಭೆಯನ್ನು ಪೊಲೀಸ ‌ಇಲಾಖೆ ನಡೆಸಿ ನಡೆಸಲಾಯಿತು. ಈ ವೇಳೆ ಶಾಪ್ ಓನರ್ಸಗಳಿಗೆ ಪೊಲೀಸ ಅಧಿಕಾರಿಗಳು ಹಲವು ಸೂಚನೆಗಳನ್ನು ನೀಡಿ, ಎಚ್ಚರಿಕೆಯಿಂದಿರಲು ತಿಳಿಸಿದರು. ನಗರದ ಗಾಂಧಿಚೌಕ್ ದತ್ತಾತ್ರೇಯ ಮಂದಿರದ ಸಭಾಭವನಲ್ಲಿ ಧಾರವಾಡ ಎಸಿಪಿ ಪ್ರಶಾಂತ. ಸಿದ್ಧನಗೌಡರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಈ ವೇಳೆ ಗೋಲ್ಡ್ ಶಾಫ್ ಓನರ್ಸ್ …

Read More »

ಬೆಳಗಾವಿಯಲ್ಲಿ ಐಸ್ ಕ್ರೀಂ ಉತ್ಸವ…

ಬೆಳಗಾವಿಯಲ್ಲಿ ಹೀಗೊಂದು ಐಸ್ ಕ್ರೀಂ ಉತ್ಸವ… ಬೆಳಗಾವಿಯಲ್ಲಿ ಹೀಗೊಂದು ಐಸ್ ಕ್ರೀಂ ಉತ್ಸವ… ದಕ್ಷಿಣ ಶಾಸಕ ಅಭಯ ಪಾಟೀಲರಿಂದ ಆಯೋಜನೆ ಸದುಪಯೋಗ ಬೆಳಗಾವಿಯ ವಿದ್ಯಾರ್ಥಿಗಳು 5ನೇ ವರ್ಷದ ಐಸ್ ಕ್ರೀಂ ಉತ್ಸವ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಐಸ್ ಕ್ರೀಂ ಉತ್ಸವವನ್ನು ಆಯೋಜಿಸಲಾಗಿತ್ತು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಐಸ್ ಕ್ರೀಂ ಉತ್ಸವವನ್ನು …

Read More »

ಗಣೇಶೋತ್ಸವ ಮಂಡಳದಿಂದ ಗಣೇಶನ ಮೂರ್ತಿ ತಯಾರಿಕೆಗೆ ಶುಭಾರಂಭ

ವಡಗಾಂವ ಯಳ್ಳೂರ ರಸ್ತೆಯ ಗಣೇಶೋತ್ಸವ ಮಂಡಳದಿಂದ ಗಣೇಶನ ಮೂರ್ತಿ ತಯಾರಿಕೆಗೆ ಶುಭಾರಂಭ…. ವಡಗಾಂವ ಯಳ್ಳೂರ ರಸ್ತೆಯ ಗಣೇಶೋತ್ಸವ ಮಂಡಳಗಣೇಶನ ಮೂರ್ತಿ ತಯಾರಿಕೆಗೆ ಶುಭಾರಂಭ…. ವಿಶೇಷ ಪೂಜಾ ಕಾರ್ಯದ ಆಯೋಜನೆ ನೂರಾರು ಭಕ್ತರು ಭಾಗಿಬೆಳಗಾವಿಯ ವಡಗಾಂವ ಯಳ್ಳೂರ ರಸ್ತೆಯ ಸಾರ್ವಜನಿಕ ಶ್ರೀ ಅಷ್ಟವಿನಾಯಕ ಗಣಪತಿ ಉತ್ಸವ ಮಂಡಳದ ವತಿಯಿಂದ 2025ನೇ ಸಾಲಿನ ಗಣೇಶ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಪೂಜೆ ಸಲ್ಲಿಸಿ ಶುಭಾರಂಭಗೊಳಿಸಲಾಯಿತು. ಬೆಳಗಾವಿಯ ವಡಗಾಂವ ಯಳ್ಳೂರ ರಸ್ತೆಯ ಸಾರ್ವಜನಿಕ ಶ್ರೀ ಅಷ್ಟವಿನಾಯಕ …

Read More »

1000 ಕೋಟಿ ರೂ. ಆರೋಪ: ಯತ್ನಾಳ್​ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಕೆಡವಲು 1,000 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಸಿದ್ಧವಾಗುತ್ತಿದೆ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶ ಹೊರಡಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ …

Read More »

ಬೆಳಗಾವಿ : ಹಲವೆಡೆ ಭಾನುವಾರ POWER CUT

ಬೆಳಗಾವಿ : ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಬೆಳಗಾವಿ ತಾಲೂಕಿನ ಮುತ್ನಾಳ, ವೀರಕನಕೊಪ್ಪ, ಅರಳಿಕಟ್ಟಿ, ಬಸಾಪೂರ, ಹಿರೇಬಾಗೇವಾಡಿ, ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ. ಕೆ. ಕೊಪ್ಪ, ಕಲಾರಕೊಪ್ಪ, ಸಿದ್ಧನಹಳ್ಳಿ, ಬಡೇಕೊಳ್ಳಮಠ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮಗಳಿಗೆ ಹಾಗೂ ಖಾನಾಪೂರ ತಾಲೂಕಿನ ಹಿರೇಹಟ್ಟಿಹೊಳಿ, ಗಾಡಿಕೊಪ್ಪ, ಹಾಗೂ ಪಾರಿಶ್ವಾಡ ಗ್ರಾಮಗಳಿಗೆ …

Read More »

ಪೊಲೀಸ್​ ಠಾಣೆ ಮುಂದೆ‌ ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ

ಬೆಳಗಾವಿ, ಫೆಬ್ರವರಿ 08: ಪೊಲೀಸ್​ ಠಾಣೆ (Police Station) ಎದರು ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ ನಡೆಸಿರುವ ಘಟನೆ ರಾಯಬಾಗ (Raibag) ತಾಲೂಕಿನ ಹಾರೂಗೇರಿಯಲ್ಲಿ (Harugeri) ನಡೆದಿದೆ. ವಿಜಯಪುರ ಜಿಲ್ಲೆಯ ದೇವದುರ್ಗ ಪೊಲೀಸ್​ ಠಾಣೆಯ ಇನ್​ಸ್ಪೆಕ್ಟರ್​​ ಅಶೋಕ ಸದಲಗಿಯವರು ಹಾರೂಗೇರಿ ಪೊಲೀಸ್​ ಠಾಣೆ ಪಿಎಸ್​ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಜನವರಿ10ರಂದು ಇನ್​ಸ್ಪೆಕ್ಟರ್​​ ಅಶೋಕ ಸದಲಗಿ ತಂದೆ ಅಣ್ಣಪ್ಪ ಅವರ ಜಮೀನಿಗೆ ಬಾಬು ನಡೋಣಿ …

Read More »