Breaking News

Yearly Archives: 2025

ಸೋಮನಾಥ ಮಂದಿರ ಉತ್ತರ ಕರ್ನಾಟಕದ ವಿಶೇಷ ಮಂದಿರವಾಗಲಿದೆ…

ಸೋಮನಾಥ ಮಂದಿರ ಉತ್ತರ ಕರ್ನಾಟಕದ ವಿಶೇಷ ಮಂದಿರವಾಗಲಿದೆ… ಇಂದು ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ 50 ಲಕ್ಷ ರೂಪಾಯಿ ಮೊತ್ತದಲ್ಲಿ ನೂತನ ಸೋಮನಾಥ ಮಂದಿರವು ವಿಶೇಷ ಮಂದಿರವಾಗಿ,ನೆಲ ಮಹಡಿಯಲ್ಲಿ ಸ್ವಯಂಭು ಪಾದರಸದ ಶಿವಲಿಂಗ ಹಾಗೂ ಮೇಲಿನ ಅಂತಸ್ತಿನಲ್ಲಿ ಮಹಾದೇವ ಮಂದಿರವಾಗುತ್ತಿದ್ದು ಗರ್ಭಗುಡಿಯ ಕಟ್ಟಡದ ಪ್ರಾರಂಭ ನಿರ್ಮಾಣ ಕಾಮಗಾರಿಗೆ ಸವದತ್ತಿ ಓಂಕಾರ ಮಠದ ಪ.ಪೂ.ಶ್ರೀ ಶಿವಶಕ್ತಿ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗ …

Read More »

ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ, ಮನಸ್ಸಿಗೆ ಬಹಳ ನೋವಾಗಿದೆ’: ಧ್ರುವ ಸರ್ಜಾ

ಬೆಂಗಳೂರು ಹೊರವಲಯದ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಸ್ಯಾಂಡಲ್​ವುಡ್​ನ ಸಾಹಸಿಂಹ ಖ್ಯಾತಿಯ ವಿಷ್ಣುವರ್ಧನ್​​​ ಸ್ಮಾರಕವನ್ನು ತೆರವು ಮಾಡಿರುವ ಕ್ರಮಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಕನ್ನಡದ ಖ್ಯಾತ ನಟ ಧ್ರುವ ಸರ್ಜಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಭಿಮಾನಿಗಳು ಕಳೆದ ದಿನದಿಂದ ಅಭಿಮಾನ್​ ಸ್ಟುಡಿಯೋ ಬಳಿ ಸೇರಿ ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಮೆಚ್ಚಿನ ತಾರೆ ನೆನೆದು ಕಣ್ಣೀರಿಟ್ಟಿದ್ದಾರೆ. ಈ ನಡುವೆ ನಟ ಧ್ರುವ ಸರ್ಜಾ ಅವರು ಈ ಶ್ರೇಷ್ಠ ಸಾಧಕನಿಗೆ ಈ …

Read More »

ಮಹಾರಾಷ್ಟ್ರ ಚುನಾವಣೆಯಲ್ಲಿ ‘ಗೆಲುವಿನ ಗ್ಯಾರಂಟಿ’ ನೀಡಿದ್ದ ಅನಾಮಿಕರು: ಶರದ್​ ಪವಾರ್

ನಾಗ್ಪುರ (ಮಹಾರಾಷ್ಟ್ರ) : ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತಗಳ್ಳತನ ಆರೋಪ ಮಾಡುತ್ತಿರುವ ನಡುವೆ, I.N.D.I.A ಕೂಟದ ಭಾಗವಾದ ನ್ಯಾಷನಲ್​ ಕಾಂಗ್ರೆಸ್​ ಪಕ್ಷದ (ಎಸ್​ಪಿ) ಮುಖ್ಯಸ್ಥ ಶರದ್​ ಪವಾರ್​ ಅವರು ಮತ್ತೊಂದು ಅಚ್ಚರಿಯ ಅಂಶವನ್ನು ಬಹಿರಂಗಪಡಿಸಿದ್ದಾರೆ. 2024 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮೊದಲು ದೆಹಲಿಯಲ್ಲಿ ಇಬ್ಬರು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಿ, 288 ಕ್ಷೇತ್ರಗಳ ಪೈಕಿ 160 ಸ್ಥಾನ ಗೆಲ್ಲಿಸಿಕೊಡುವುದಾಗಿ ‘ಗ್ಯಾರಂಟಿ’ ನೀಡಿದ್ದರು ಎಂದು ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತೊಂದು …

Read More »

ಬಾಗಲಕೋಟೆ ಸಹಪಾಠಿಗಳಿಂದ ರ್ಯಾಗಿಂಗ್​ ಆರೋಪ: ಯುವತಿ ಆತ್ಮಹತ್ಯೆ

ಬಾಗಲಕೋಟೆ: ಸಹಪಾಠಿಗಳ ರ್ಯಾಗಿಂಗ್​​ಗೆ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ಅಂಜಲಿ ಮುಂಡಾಸ (21) ಮೃತ ವಿದ್ಯಾರ್ಥಿನಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ತಾನು ಸಹಪಾಠಿಗಳು ನೀಡುತ್ತಿದ್ದ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವತಿ ಡೆತ್​​ನೋಟ್​ನಲ್ಲಿ ಬರೆದಿದ್ದಾರೆ. ಜೊತೆಗೆ ತನಗೆ ರ್ಯಾಗಿಂಗ್​ ಮಾಡಿದ ತನ್ನಿಬ್ಬರು ಸಹಪಾಠಿಗಳ ಹೆಸರು, ಅವರ ವಿಳಾಸವನ್ನು ಅದರಲ್ಲಿ ನಮೂದಿಸಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಿ ಎಂದೂ …

Read More »

ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲಿಸಲು ಮತ ಖರೀದಿಸಲಾಗಿತ್ತು: ಸಿ.ಎಂ. ಇಬ್ರಾಹಿಂ

ಮೈಸೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್​ ಆರೋಪಿಸುತ್ತಿದ್ದರೆ, ಇತ್ತ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೇ ಮತ ಖರೀದಿ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂದು ತಿಳಿದು ನಾನೇ ಅವರನ್ನು ಬಾದಾಮಿಗೆ ಕರೆದುಕೊಂಡು ಬಂದು ಅಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಒಪ್ಪಿಸಿ ಚುನಾವಣೆಗೆ ನಿಲ್ಲಿಸಿದೆವು. ಅಲ್ಲಿ ಚಿಮ್ಮನಕಟ್ಟಿ ಅವರ ಸಹಾಯದಿಂದ ಸಾಲದ ಹಣದಲ್ಲಿ ಮತ …

Read More »

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ 5 ದಿನಗಳವರೆಗೆ ಭಾರಿ ಮಳೆ

ಬೆಂಗಳೂರು: ರಾಜ್ಯದಲ್ಲಿ ಮಳೆ ಮುಂದುವರೆದಿದ್ದು, ಇಂದಿನಿಂದ ಮತ್ತೆ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಾಗಲಕೋಟೆ, ಕೊಪ್ಪಳ, ಗದಗ, ವಿಜಯಪುರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ. ಹಾಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೀದರ್​​, ಬೆಳಗಾವಿ, ಧಾರವಾಡ, …

Read More »

ಅರಿಶಿನ – ಕುಂಕುಮ ಪಡೆಯಲು ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದುರ್ಮರಣ;

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಅರಿಶಿನ – ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 8 ರಂದು ಲಗ್ಗೆರೆ ಮೇಲ್ಸೇತುವೆ ಬಳಿ ಸಂಭವಿಸಿದ ಅಪಘಾತದಲ್ಲಿ ಗೀತಾ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ರಸ್ತೆಯಲ್ಲಿ ಆಕೆಯ ಪತಿ ಸುನೀಲ್ ಅವರ ರೋಧನೆ ಅಲ್ಲಿದ್ದವರ ಮನಕಲುಕುವಂತೆ ಮಾಡಿದೆ. ಅತ್ತ ಚೆನ್ನಪಟ್ಟಣದಲ್ಲಿರುವ ಗೀತಾ ಅವರ ಅಜ್ಜಿ ಸಹ ಮೊಮ್ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು …

Read More »

ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸಲ್ಲಿಕೆ: ಕನ್ನಡ, ಆಂಗ್ಲ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸು

ರಾಜ್ಯ ಶಿಕ್ಷಣ ನೀತಿ ಅಂತಿಮ ವರದಿ ಸಲ್ಲಿಕೆ: ಕನ್ನಡ, ಆಂಗ್ಲ ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಶಿಫಾರಸು ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗ ತನ್ನ ಅಂತಿಮ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದು, ಮಾತೃ ಭಾಷೆ ಕನ್ನಡ ಹಾಗೂ ಇಂಗ್ಲಿಷ್​ ದ್ವಿಭಾಷಾ ನೀತಿಯನ್ನು ಅನುಷ್ಠಾನಗೊಳಿಸುವ ಶಿಫಾರಸಿನೊಂದಿಗೆ ಒಟ್ಟು 97 ಶಿಫಾರಸುಗಳನ್ನು ಮಾಡಿದೆ. ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಅಕ್ಟೋಬರ್​ 11, 2023ರಂದು ಆದೇಶ ಹೊರಡಿಸಿ ಶಿಕ್ಷಣ ನೀತಿಯನ್ನು ರೂಪಿಸಲು …

Read More »

ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ…

ಬೆಳಗಾವಿಯಲ್ಲೇ ಮೊದಲಬಾರಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ… ಶಾಸಕ ಅಭಯ್ ಪಾಟೀಲ್ ಅವರಿಂದ ಲೋಕಾರ್ಪಣೆ ವಾರ್ಡ್ ಸಂಖ್ಯೆ 29ರಲ್ಲಿ ಬೆಳಗಾವಿಯಲ್ಲೇ ಮೊದಲಬಾರಿಗೆ ಡಿಜಿಟಲ್ ಸೈನ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮ ಭವ್ಯವಾಗಿ ನಡೆಯಿತು. ಶಾಸಕರಾದ ಅಭಯ ಪಾಟೀಲ ಹಾಗೂ ಶಾಸಕರಾದ ಬಡೆ ಅವರು ಡಿಜಿಟಲ್ ಸೈನ್ ಬೋರ್ಡ್’ನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ 15 ಡಿಜಿಟಲ್ ಬೋರ್ಡ್‌ಗಳನ್ನು ವಿವಿಧ ಕ್ರಾಸ್‌ಗಳಲ್ಲಿ ಅಳವಡಿಸಲಾಗಿದ್ದು, ಎರಡನೇ ಹಂತದಲ್ಲಿ ಉಳಿದಿರುವ ಕಾಲೋನಿಗಳಲ್ಲಿಯೂ ಇವುಗಳನ್ನು ಅಳವಡಿಸಲಾಗುವುದು ಎಂದು ನಗರಸೇವಕ …

Read More »

ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲಿ ವೈದ್ಯರ ನೇಮಕ – ಆರೋಗ್ಯ ಸಚಿವ ದಿನೇಶ ಗುಂಡೂರಾವ.

ಹುಕ್ಕೇರಿ : ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲಿ ವೈದ್ಯರ ನೇಮಕ – ಆರೋಗ್ಯ ಸಚಿವ ದಿನೇಶ ಗುಂಡೂರಾವ. ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲೇ ತಜ್ಞ ವೈದ್ಯರನ್ನು ನೇಮಕ ಮಾಡಿ ಜನರ ಸೇವೆಗೆ ಸಹಕರಿಸಲಾಗುವದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಹೇಳಿದರು.ಅವರು ಇಂದು ಹುಕ್ಕೇರಿ ತಾಲೂಕಿನ ಸಂಕೇಶ್ವರ ಅಮ್ಮಣಗಿ ಮತ್ತು ಹುಕ್ಕೇರಿ ನಗರಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜರುಗಿದ ವಿವಿಧ ಕಾರ್ಯಕ್ರಮಗಳಲ್ಲಿ ಹುಕ್ಕೇರಿ ಶಾಸಕ …

Read More »