ಕಲಬುರಗಿ: ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತರ ಕಾಂಪೌಂಡ್ ಬಳಿ ದರೋಡೆ ವೇಳೆ ಕಾಲು ಮುರಿದಿದೆ ಎಂದು ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದರೋಡೆಕೋರರಲ್ಲ.. ಕೈಹಿಡಿದ ಧರ್ಮಪತ್ನಿಯೇ ತನ್ನ ಗಂಡನ ಕಾಲು ಮುರಿಯಲು ಸುಪಾರಿ ನೀಡಿ ಕಾಲು ಮುರಿಸಿದ್ದಾಳೆ ಅನ್ನುವ ವಿಚಾರ ಪೊಲೀಸರು ಬಯಲಿಗೆಳೆದಿದ್ದಾಳೆ. ಪತ್ನಿ ನೀಡಿದ ಸುಪಾರಿಯಿಂದ ಎರಡು ಕಾಲು ಮುರಿದುಕೊಂಡು ಪತಿ ವೆಂಕಟೇಶ್ ಬೆಡ್ ರೆಸ್ಟ್ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಪಾರಿ ಕೊಟ್ಟ ಮಹಿಳೆ ಸೇರಿ ನಾಲ್ವರನ್ನು …
Read More »Yearly Archives: 2025
ಕಂದಾಯ ಇಲಾಖೆ ಕಾವೇರಿ 2.0 ಸಾಫ್ಟ್ವೇರ್ ಹ್ಯಾಕ್: ಅಪರಿಚಿತರ ವಿರುದ್ಧ ಎಫ್ಐಆರ್
ಬೆಂಗಳೂರು: ಆಸ್ತಿ ಖರೀದಿ, ಮಾರಾಟ ಸೇರಿ ನೋಂದಣಿ ಪ್ರಕ್ರಿಯೆಗೆ ಬಳಸುವ ಕಾವೇರಿ 2.0 ಸಾಫ್ಟ್ವೇರ್ ಅನ್ನು ಅಪರಿಚಿತರು ಹ್ಯಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆೆ ನೊಂದಣಿ ಮಹಾ ನಿರೀಕ್ಷಕ (ಐಜಿಆರ್) ಕೆ.ಎ.ದಯಾನಂದ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸರ್ವರ್ ಸಮಸ್ಯೆೆಯಿಂದ ಕಳೆದ ಕೆಲ ದಿನಗಳಿಂದ ರಾಜ್ಯದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಕಾರ್ಯ ಸ್ಥಗಿತಗೊಂಡಿತ್ತು. …
Read More »ಕುಂಭಮೇಳಕ್ಕೆ ತೆರಳುವಾಗ ಮೃತಪಟ್ಟವರ ಶವ ತರಲು ಲಕ್ಷ್ಮೀ ಹೆಬ್ಬಾಳ್ಕರ್ ಫೌಂಡೇಶನನಿಂದ ಸಹಾಯ; ಮೃಣಾಲ್ ಹೆಬ್ಬಾಳ್ಕರ್
ಕುಂಭಮೇಳಕ್ಕೆ ತೆರಳುವಾಗ ಮೃತಪಟ್ಟವರ ಶವ ತರಲು ಲಕ್ಷ್ಮೀ ಹೆಬ್ಬಾಳ್ಕರ್ ಫೌಂಡೇಶನನಿಂದ ಸಹಾಯ; ಮೃಣಾಲ್ ಹೆಬ್ಬಾಳ್ಕರ್ ಇನ್ನು ಕಾಂಗ್ರೆಸ್ ಯುವಮುಖಂಡ ಮೃಣಾಲ್ ಹೆಬ್ಬಾಳ್ಕರ್ ಅವರು ಸ್ಥಳೀಯ ಮುಖಂಡರಾದ ಮಾಹಿತಿಯನ್ನು ಪಡೆದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆದೇಶದ ಮೇರೆಗೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂದೋರಿನ ಆಸ್ಪತ್ರೆಯಲ್ಲಿರುವ ಮೃತರ ಪಾರ್ಥಿವ ಶರೀರಗಳನ್ನು ಬೆಳಗಾವಿಗೆ ತರಲು ವ್ಯವಸ್ಥೆಯನ್ನು ಮಾಡಲು ಸಚಿವರು ಆದೇಶವನ್ನು ನೀಡಿದ್ದಾರೆ. ಬೆಳಗಾವಿಯ ಜಿಲ್ಲಾಧಿಕಾರಿಗಳ ಮೂಲಕ …
Read More »ಮುಡಾ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ನೀಡುವಂತೆ ನಾವು ಅರ್ಜಿಯನ್ನು ಹಾಕಿಕೊಂಡಿದ್ವಿ.
ಮುಡಾ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಸಿಬಿಐಗೆ ನೀಡುವಂತೆ ನಾವು ಅರ್ಜಿಯನ್ನು ಹಾಕಿಕೊಂಡಿದ್ವಿ. ಅದರ ಅರ್ಜಿ ವಿಚಾರಣೆಯನ್ನು ಗೌರವಾನ್ವಿತ ಹೈಕೋರ್ಟ್ ನ್ಯಾಯಾಧೀಶರು ಆಲಿಸಿ ಇಂದು ತೀರ್ಪುಗೆ ಕಾಯ್ದಿರಿಸಿದ್ದರು. ಇಂದು ನಮ್ಮ ಅರ್ಜಿ ವಜಾ ಮಾಡಿ ಹೈ ಕೋರ್ಟ್ ನ್ಯಾಯಾಧೀಶರು ಆದೇಶ ನೀಡಿದ್ದು, ಅದೇಶ ಪ್ರತಿ ಪಡೆದು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಸ್ನೇಹಮಯಿ ಕೃಷ್ಣ ಪರ ನ್ಯಾಯವಾದಿಗಳಾದ ಲಕ್ಷ್ಮಣ ಕುಲಕರ್ಣಿ ಹೇಳಿದರು. ಧಾರವಾಡ ಹೈಕೋರ್ಟ್ ತೀರ್ಪಿನ ಬಳಿಕ ಧಾರವಾಡದಲ್ಲಿಮಾಧ್ಯಮಕ್ಕೆ ಪ್ರತಿಕ್ರೆಯಿಸಿದ …
Read More »ಮಹಿಳಾ ಕೇಂದ್ರಿತ ಗ್ಯಾರಂಟಿಗಳ ಅನುಷ್ಠಾನ ಲಿಂಗಸಮಾನತೆ ಉಪಕ್ರಮಕ್ಕೆ ವಿಶ್ವಸಂಸ್ಥೆ ಅಧ್ಯಕ್ಷ ಫಿಲೆಮನ್ ಯಾಂಗ್ ಶ್ಲಾಘನೆ
ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ಬೆಂಗಳೂರು: ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಇಂದು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು …
Read More »ಶಿಕ್ಚಣ, ಸಂಶೋಧನೆಗೆ ಒತ್ತು ಕರ್ನಾಟಕ- ಲಿವರ್ ಪೂಲ್ ವಿ.ವಿ. ಒಡಂಬಡಿಕೆಗೆ ಅಂಕಿತ
ಬೆಂಗಳೂರು: ಶಿಕ್ಷಣ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಹೆಚ್ಚಿನ ಸಹಭಾಗಿತ್ವ ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಲಿವರ್ ಪೂಲ್ ವಿಶ್ವವಿದ್ಯಾಲಯಗಳು ಮಹತ್ವದ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಒಡಂಬಡಿಕೆ ಏರ್ಪಟ್ಟಿತು. ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್ ನ ಬ್ರಿಟಿಷ್ ಕೌನ್ಸಿಲ್ ವಿಭಾಗದ ನಿರ್ದೇಶಕ ಜನಕ ಪುಷ್ಪನಾಥನ್, …
Read More »ಪ್ರಯಾಗ್ರಾಜ್ನಿಂದ ಹಿಂತಿರುಗುತ್ತಿದ್ದ ಬೆಳಗಾವಿಯ ನಾಲ್ವರ ಸಾವು
ಬೆಳಗಾವಿ: ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂದು ಬೆಳಗ್ಗಿನ ಜಾವ ಮಧ್ಯ ಪ್ರದೇಶದ ಇಂಧೋರ್ ಜಿಲ್ಲೆಯ ಮಾಣಪುರ ಬಳಿ ಟೆಂಪೋ ಟ್ರಾವೆಲರ್, ಟ್ರಕ್ ಹಾಗೂ ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ. ಬಸವನಗಲ್ಲಿಯ ಸಾಗರ್ ಶಾಪುರಕರ್ (ಟಿಟಿ ಚಾಲಕ), ಕ್ರಾಂತಿ ನಗರದ ನಿವಾಸಿ ನೀತಾ ಬಡಮಂಜಿ, ಶಿವಾಜಿನಗರದ ಸಂಗೀತಾ ಮೇತ್ರಿ, ವಡಗಾವಿಯ ಜ್ಯೋತಿ ಖಾಂಡೇಕರ್ ಮೃತರು. ಜನವರಿ 24ರಂದು …
Read More »ಭಿಕ್ಷಾಟನೆ ನಡೆಸಿದ ಸಿದ್ದಗಂಗಾ ಮಠದ ಸ್ವಾಮೀಜಿ
ತುಮಕೂರು: ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಂದು ನಗರದೆಲ್ಲೆಡೆ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶಿವಸಿದ್ದೇಶ್ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದರು. ಜಾತ್ರೆಯ ಪ್ರಯುಕ್ತ ವಾಡಿಕೆಯಂತೆ ಪ್ರತಿ ವರ್ಷ ತುಮಕೂರು ನಗರದ ಮಂಡಿಪೇಟೆ ಸೇರಿದಂತೆ ವಿವಿಧೆಡೆ ಭಿಕ್ಷಾಟನೆ ನಡೆಸಲಾಗುತ್ತದೆ. ಅದೇ ರೀತಿ, ಈ ಬಾರಿಯೂ ಭಿಕ್ಷಾಟನೆ ನಡೆಸಿದ ಸಿದ್ದಗಂಗಾ ಮಠದ ಶ್ರೀಗಳು, ಭಕ್ತರು, ವರ್ತಕರಿಂದ ದವಸ ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ಸ್ವೀಕರಿಸಿದರು. ಸ್ವಾಮೀಜಿಗಳು …
Read More »ಬಡಾಲ ಅಂಕಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಳಸಾರೋಹಣ ಕಾರ್ಯಕ್ರಮವ
ಬಡಾಲ ಅಂಕಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮದೇವತೆ ಶ್ರೀ ಲಕ್ಷ್ಮಿ ದೇವಸ್ಥಾನದ ವಾಸ್ತುಶಾಂತಿ, ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಮಾತೋಶ್ರೀ ಶ್ರೀಮತಿ ಗಿರಿಜಾತಾಯಿ ಹಟ್ಟಿಹೊಳಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಉದ್ಘಾಟಿಸಿದರು. ನನ್ನ ತಾಯಿಯ ತವರೂರಾದ ಬಡಾಲ ಅಂಕಲಗಿ ಗ್ರಾಮಕ್ಕೂ ನನಗೂ ಅವಿನಾಭಾವ ಸಂಬಂಧವಿದೆ, ನಾನು ಆಟ ಆಡಿ ಬೆಳೆದಂತ ಗ್ರಾಮ ನನ್ನ ಕ್ಷೇತ್ರದಲ್ಲಿರುವುದೂ ಜೊತೆಗೆ ಗ್ರಾಮದ ಅಭಿವೃದ್ಧಿ ಸೇರಿದಂತೆ …
Read More »ಗಡಿಭಾಗದಲ್ಲಿ ಕನ್ನಡ ಕೇಲಸ ಮಾಡುವವರಿಗೆ ಗೌರವಿಸಿ:ಚಂದ್ರಶೇಖರ ಶ್ರೀಗಳು
ಹುಕ್ಕೇರಿ : ಗಡಿಭಾಗದಲ್ಲಿ ಕನ್ನಡ ಕೇಲಸ ಮಾಡುವವರಿಗೆ ಗೌರವಿಸಿ – ಭಾವಿ ಸಮ್ಮೆಳನಾದ್ಯಕ್ಷ ಚಂದ್ರಶೇಖರ ಶ್ರೀಗಳು ಗಡಿಭಾಗದಲ್ಲಿ ಕನ್ನಡ ಕೇಲಸವಾಗಬೇಕು ಮತ್ತು ಗಡಿಭಾಗದಲ್ಲಿ ಕನ್ನಡ ಉಳಿಸಿದವರಿಗೆ ಗೌರವ ಲಭಿಸಬೇಕು ಎಂದು ಭಾವಿ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಅದ್ಯಕ್ಷರಾದ ಚಂದ್ರಶೇಖರ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು. ಹುಕ್ಕೇರಿ ತಾಲೂಕಿನ ಯಮಕನಮರ್ಡಿ ನಗರದಲ್ಲಿ ಫೆಬ್ರುವರಿ 23 ರಂದು ಜರಗಲಿರುವ ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ 12 ನೇ ಸಮ್ಮೇಳನದ …
Read More »