ಮುನವಳ್ಳಿ: ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಸಮಿತಿ, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳ, ಶ್ರೀ ವಿಶ್ವಕರ್ಮ ಯುವಕ ಮಂಡಳ ಹಾಗೂ ವಿಶ್ವಕರ್ಮ ಸಮಾಜ ಬಾಂಧವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಅರ್ಹ ವಟುಗಳ ಉಚಿತ ಸಾಮೂಹಿಕ ಉಪನಯನ, ಗುರು ಉಪದೇಶ ಕಾರ್ಯಕ್ರಮ ಹಾಗೂ ಶ್ರೀ ಕಾಳಿಕಾದೇವಿ ಯಾತ್ರಿ ನಿವಾಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದೆ.
Read More »Yearly Archives: 2025
ATM ವಾಹನ ದರೋಡೆ ಪ್ರಕರಣದಲ್ಲಿ ಮಹತ್ವದ ಲೀಡ್ ಸಿಕ್ಕಿದೆ: ಸಚಿವ ಪರಮೇಶ್ವರ್
ಬೆಂಗಳೂರು: ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಬಹಳ ಮುಖ್ಯ ಲೀಡ್ ಸಿಕ್ಕಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, “ಬಹಳ ಮುಖ್ಯವಾದ ಲೀಡ್ ಸಿಕ್ಕಿದೆ. ಅದರ ಬಗ್ಗೆ ನಾನು ಇಲ್ಲಿ ಹೇಳೋದಿಲ್ಲ. ಅವರಿಗೆ ಗೊತ್ತಾದ್ರೆ ಎಚ್ಚರವಾಗ್ತಾರೆ. ಅವರನ್ನು ಆದಷ್ಟು ಬೇಗ ಬಂಧಿಸುತ್ತೇವೆ. ಇಷ್ಟೇ ಸಮಯದಲ್ಲಿ ಆಗಬೇಕು ಅಂದ್ರೆ ಆಗುತ್ತಾ?. ನಾವು ಬಿಡಲ್ಲ, ಹಿಡಿದು ಹಾಕ್ತೇವೆ. ಬಿಜೆಪಿಯವರು ಸುಮ್ಮನೆ ಮಾತನಾಡ್ತಾರೆ” ಎಂದರು. …
Read More »ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ ಆರೋಪದಲ್ಲಿ ಉತ್ತರಪ್ರದೇಶ ಮೂಲದ ಇಬ್ಬರನ್ನು ಬಂಧಿಸಲಾಗಿದೆ.
ಮಲ್ಪೆ(ಉಡುಪಿ): ಮಲ್ಪೆಯ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಇಬ್ಬರು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನಿಸಿದ ಆರೋಪ ಎದುರಿಸುತ್ತಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶ ಮೂಲದ ರೋಹಿತ್ (29) ಮತ್ತು ಸಂತ್ರಿ (37) ಬಂಧಿತರಾಗಿದ್ದಾರೆ. ಮಲ್ಪೆಯ ಕೊಚ್ಚಿನ್ ಶಿಪ್ಯಾರ್ಡ್ ಕಂಪನಿ ಕೇಂದ್ರ ಸರ್ಕಾರ ಸ್ವಾಮ್ಯದ ಬಂದರು ಹಡಗು ಮತ್ತು ಜಲಸಾರಿಗೆ ಇಲಾಖೆಯ ಅಧೀನದಲ್ಲಿದೆ. ಈ ಸಂಸ್ಥೆಯಿಂದ M/S Shushma Marine Private Limited ಎಂಬ ಸಂಸ್ಥೆಯ ಸಬ್‌ಕಂಟ್ರಾಕ್ಟ್ ಹೊಂದಿದ್ದು, ಈ ಸಂಸ್ಥೆಯಲ್ಲಿ ಉತ್ತರಪ್ರದೇಶ ರಾಜ್ಯದ …
Read More »ಪ್ರತಿ ಟನ್ ಕಬ್ಬಿಗೆ ರೂ. 2,950 ದರ ನೀಡಲು ಒಪ್ಪಿಗೆ: ಹೋರಾಟ ಹಿಂಪಡೆದ ಬೀದರ್ ರೈತರು
ಪ್ರತಿ ಟನ್ ಕಬ್ಬಿಗೆ ರೂ. 2,950 ದರ ನೀಡಲು ಒಪ್ಪಿಗೆ: ಹೋರಾಟ ಹಿಂಪಡೆದ ಬೀದರ್ ರೈತರು ಬೀದರ್: ಕಬ್ಬು ದರ ನಿಗದಿ ಮಾಡುವಂತೆ ಒತ್ತಾಯಿಸಿ ಕಳೆದೊಂದು ವಾರದಿಂದ ಹೋರಾಟ ನಡೆಸುತ್ತಿದ್ದ ರೈತ ಮುಖಂಡರು ಶಾಂತಿಯುತವಾಗಿ ಇಂದು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಜಿಲ್ಲಾಧಿಕಾರಿಚ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ರೈತ ಮುಖಂಡರ ಸಭೆಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ …
Read More »ಕಾರಾಗೃಹದ ಆವರಣದಲ್ಲಿ ಒಟ್ಟೂ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್ಗಳು ಪತ್ತೆ
ಕಾರಾಗೃಹದ ಆವರಣದಲ್ಲಿ ಒಟ್ಟೂ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್ಗಳು ಪತ್ತೆಯಾಗಿವೆ. ಶಿವಮೊಗ್ಗ: ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಗುರುವಾರ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಜೈಲಿನ ಆವರಣದಲ್ಲಿ 293 ಗ್ರಾಂ ಒಣ ಗಾಂಜಾ ಹಾಗೂ 40 ಸಿಗರೇಟ್ಗಳು ಪತ್ತೆಯಾಗಿವೆ. ಬಾಳೆಗೊನೆ ಹಾಗೂ ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಪ್ರಕರಣ – 1: ಕೇಂದ್ರ ಕಾರಾಗೃಹಕ್ಕೆ ಗುರುವಾರ ಮಧ್ಯಾಹ್ನ 2:30ರ ಸುಮಾರಿಗೆ ಆಟೋವೊಂದು ಆಗಮಿಸಿತ್ತು. ಆಟೋ ಚಾಲಕ ಕಾರಾಗೃಹದ …
Read More »ಇಂದಿನಿಂದ ಸಾರಿಗೆ, ಪೊಲೀಸ್ ಇಲಾಖೆಗಳಲ್ಲಿ ಬಾಕಿ ಇರುವ ಉಲ್ಲಂಘನಾ ಕೇಸ್ಗಳ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ: ಡಿ.12ರವರೆಗೆ ಮಾತ್ರ ಅವಕಾಶ
ಬೆಂಗಳೂರು: ಸಂಚಾರಿ ಇ-ಚಲನ್ನಲ್ಲಿ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ದಂಡ ಪಾವತಿಸಲು ಶೇಕಡಾ 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕಳೆದ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಇ-ಚಲನ್ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ದಂಡಪಾವತಿಗೆ ವಿನಾಯಿತಿ ನೀಡಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹೀಗಾಗಿ, ಟ್ರಾಫಿಕ್ ವೈಯಲೇಷನ್ ಕೇಸ್ಗಳಿಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ …
Read More »ಧೂಳಿನಿಂದ ಹೈರಾಣಾದ ಹುಬ್ಬಳ್ಳಿ ಮಂದಿ!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ ಭಾಗಶಃ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಮತ್ತೊಂದೆಡೆ ನಿರ್ಮಾಣ ಹಂತದಲ್ಲಿರುವ ಬೃಹತ್ ಕಾಮಗಾರಿಗಳಿಂದ ರಸ್ತೆ ಸಂಚಾರ ಅಯೋಮಯವಾಗಿದ್ದು, ಅದರಿಂದ ಏಳುವ ಧೂಳು ಅವಳಿ ನಗರದ ಜನತೆಯನ್ನು ಹೈರಾಣು ಮಾಡಿದೆ. ತಗ್ಗು-ಗುಂಡಿ ಹಾಗೂ ಧೂಳಿನ ಕಿರಿಕಿರಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಓಡಾಡುವುದಕ್ಕೆ ಸಾಧ್ಯವೇ ಇಲ್ಲದಷ್ಟು ಅವಳಿ ನಗರದ ಭಾಗಶಃ ರಸ್ತೆಗಳು ಹದಗೆಟ್ಟಿದ್ದು, ಹೇಗೆ ಮತ್ತು ಎಲ್ಲಿಂದ ರಸ್ತೆಯನ್ನು ಸರಿಪಡಿಸುವುದೆಂದು ಗೊತ್ತಾಗದಂತಹ ಸ್ಥಿತಿ ನಿರ್ಮಾಣವಾಗಿದೆ. …
Read More »ಶೇಡಬಾಳದ ಶ್ರೀ ಲಕ್ಷ್ಮಿ ಗುಡಿ ಮಂದಿರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ.
ಶೇಡಬಾಳದ ಶ್ರೀ ಲಕ್ಷ್ಮಿ ಗುಡಿ ಮಂದಿರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಆಶೀರ್ವಚನ. ಕಳೆದ ನೂರು ವರ್ಷಗಳಿಂದ ಶ್ರೀ ಲಕ್ಷ್ಮಿ ದೇವಿಯ ಭಕ್ತಿ ಆರಾಧನೆ ಮಾಡುತ್ತಿದ್ದೀರಿ, ನಿಮಗೆ ಒಳ್ಳೆಯದು ಆಗಿದೆ ಇದೇ ರೀತಿ ಭಯ ಭಕ್ತಿ ಇರಲಿ, ಆದರೆ ನಿಮಗೆ ಜನಮ ನೀಡಿದ ತಂದೆ ತಾಯಿ ಮಾತೃದೇವ ಭವ, ಪಿತೃ ದೇವೋ ಭವ ಇದನ್ನು ಮರ್ಯಾದೆ ಅವರ ಮನ ನೋಯಿಸದೆ ಅವರ ಸೇವೆ ಮಾಡಿರಿ ಅಂದರೆ …
Read More »ಜೀವಕ್ಕಿಲ್ಲವೇ ಕಿಮ್ಮತ್ತು??? ಹೆದ್ದಾರಿ ಮೇಲೆ ಅಪಾಯಕಾರಿ ಪ್ರವಾಸ… ಸರ್ಕಾರಿ ಸಾರಿಗೆ ಬಸ್ಸಿನ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣ
ಜೀವಕ್ಕಿಲ್ಲವೇ ಕಿಮ್ಮತ್ತು??? ಹೆದ್ದಾರಿ ಮೇಲೆ ಅಪಾಯಕಾರಿ ಪ್ರವಾಸ… ಸರ್ಕಾರಿ ಸಾರಿಗೆ ಬಸ್ಸಿನ ಬಾಗಿಲಲ್ಲಿ ಜೋತು ಬಿದ್ದು ಪ್ರಯಾಣ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಕರು ಬಾಗಿಲಿಗೆ ಜೋತು ಬಿದ್ದು, ಪ್ರಯಾಣಿಸುತ್ತಿದ್ದರೂ, ಚಾಲಕ ಮತ್ತು ನಿರ್ವಾಹಕ ಜಾಣ ಕುರುಡುತನ ತೋರಿದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಹೌದು, ಈ ದೃಶ್ಯಗಳನ್ನು ಒಂದು ಬಾರಿ ನೀವು ನೋಡಿ ಬಿಡಿ. ಇದು ಬೆಳಗಾವಿ ಸುವರ್ಣಸೌಧದ ಬಳಿಕ ರಾಷ್ಟ್ರೀಯ ಹೆದ್ದಾರಿ ಮೇಲೆ ಪ್ರಯಾಣಿಸುತ್ತಿರುವ ಬಸ್ಸಿನ ವಿಡ್ಹಿಯೋವಾಗಿದೆ. ಕರ್ನಾಟಕ ರಸ್ತೆ …
Read More »ಅಧಿಕಾರ ಎಂಬುದು ಶಾಶ್ವತ ಅಲ್ಲ, ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಅಧಿಕಾರ ಎಂಬುದು ಶಾಶ್ವತ ಅಲ್ಲ, ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಯಾವುದೇ ಕ್ಷೇತ್ರದಲ್ಲೂ ನಂಬರ್ 1 ಸ್ಥಾನಕ್ಕೇರಲು ಪ್ರಯತ್ನಿಸಬೇಕು ಮಕ್ಕಳೊಂದಿಗೆ ಸಂವಾದ ನಡೆಸಿದ ಸಚಿವರು ಬೆಂಗಳೂರು: ಅಧಿಕಾರ ಎಂಬುದು ಶಾಶ್ವತ ಅಲ್ಲ, ಅದು ಸಿಗುವ ಅವಕಾಶ. ಅದನ್ನು ಸೂಕ್ತವಾಗಿ ಬಳಸಿಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಸಂಸತ್ -25 …
Read More »
Laxmi News 24×7