ಚಿಕ್ಕೋಡಿ: ಕಲಾಪಕ್ಕೆ ಬಂದಿದ್ದ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಕೋರ್ಟ್ ಕಲಾಪದ ವೇಳೆಯೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಅಥಣಿ ನ್ಯಾಯಾಲಯದಲ್ಲಿ ಜರುಗಿದೆ. ಮಂಗಳವಾರ ಈ ಘಟನೆ ನಡೆದಿದ್ದು ಇಂದು ಬೆಳಕಿಗೆ ಬಂದಿದೆ. ಮೀನಾಕ್ಷಿ ರಾಮಚಂದ್ರ ಶಿಂಧೆ (50) ಹಲ್ಲೆಗೊಳಗಾದ ಮಹಿಳೆ. ಬಾಬಾಸಾಹೇಬ್ ಚೌಹಾಣ್ ಹಲ್ಲೆ ಮಾಡಿದ ಆರೋಪಿ. ಘಟನೆಯಲ್ಲಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಆಕೆಯನ್ನು ಅಥಣಿ ಸಮುದಾಯದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ …
Read More »Daily Archives: ನವೆಂಬರ್ 19, 2025
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಉಡುಪಿ: “ಯಕ್ಷಗಾನದೊಳಗಡೆ ಹೋಮೊಸೆಕ್ಸ್ ಬೆಳೆಯುತ್ತದೆ ಮತ್ತು ಯಕ್ಷಗಾನದಲ್ಲಿ ಅದು ಅನಿವಾರ್ಯ. ಸ್ತ್ರೀ ವೇಷಧಾರಿಗಳಿಗೆ ಅಲ್ಲಿ ಹೆಚ್ಚು ಒತ್ತಡ ಇರುತ್ತದೆ. ಸ್ತ್ರೀ ವೇಷ ಕಲಾವಿದ ಅದನ್ನು ನಿರಾಕರಿಸಿದರೆ ಮರುದಿವಸ ಭಾಗವತರು ಅವನಿಗೆ ಹೆಚ್ಚು ಪದ್ಯ ಕೊಡುವುದಿಲ್ಲ” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ್ ಬಿಳಿಮಲೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಉಡುಪಿಯಲ್ಲಿಂದು ಯಕ್ಷಗಾನ ಅಕಾಡೆಮಿ ರಾಜ್ಯಾದ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ …
Read More »ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ಮಾದರಿ ಕಲಾಪ ವೀಕ್ಷಣೆ: ಸ್ಪೀಕರ್ ಯು.ಟಿ. ಖಾದರ್
ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಮಂಡಳದ ಚಳಿಗಾಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ 30 ವಿದ್ಯಾರ್ಥಿಗಳಿಗೆ 10 ದಿನ ಪೂರ್ತಿ ಕಾರ್ಯ ಕಲಾಪ ವೀಕ್ಷಣೆಗೆ ಅವಕಾಶ ನೀಡಲಾಗುವುದು. ಇದು ಇಂಟರ್ನಶಿಪ್ ರೀತಿ ಇರಲಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಡಿ.8ರಿಂದ 19ರ ವರೆಗೆ ಬೆಳಗಾವಿಯಲ್ಲಿ 10 ದಿನ ಅಧಿವೇಶನ ಹಿನ್ನೆಲೆಯಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸಲು …
Read More »ಹೊಸ ಇತಿಹಾಸ ಸೃಷ್ಟಿಸಲಿದೆ ನವೆಂಬರ್ 28ರ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಹೊಸ ಇತಿಹಾಸ ಸೃಷ್ಟಿಸಲಿದೆ ನವೆಂಬರ್ 28ರ ಕಾರ್ಯಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಪೂರ್ವ ಭಾವಿ ಸಭೆ ಕಾಂಗ್ರೆಸ್ ಸರ್ಕಾರ ಅಂದರೆ ಗ್ಯಾರಂಟಿ ಸರ್ಕಾರ ರಾಮನಗರ : ಕರ್ನಾಟಕದಲ್ಲಿ ಅಂಗನವಾಡಿ ಆರಂಭಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖ ಮೂರು ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಇದೊಂದು …
Read More »ಏಕತಾ ನಡಿಗೆ ಅಭಿಯಾನಕ್ಕೆ ಜಗದೀಶ್ ಶೆಟ್ಟರ್ ಚಾಲನೆ
ಏಕತಾ ನಡಿಗೆ ಅಭಿಯಾನಕ್ಕೆ ಜಗದೀಶ್ ಶೆಟ್ಟರ್ ಚಾಲನೆ ಉಕ್ಕಿನ ಮನುಷ್ಯ ಪಟೇಲ್‌ಗೆ ಗೌರವ ಸಮರ್ಪಣೆ ಬೆಳಗಾವಿಗರಿಂದ ಉತ್ತಮ ಪ್ರತಿಕ್ರಿಯೆ ಹಲವರು ಏಕತಾ ನಡಿಗೆಯಲ್ಲಿ ಭಾಗಿ ಬೆಳಗಾವಿ: ಭಾರತದ ಉಕ್ಕಿನ ಮನುಷ್ಯ, ಸರದಾರ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಬೆಳಗಾವಿಯಲ್ಲಿ ಇಂದು ‘ಏಕತಾ ನಡಿಗೆ ಅಭಿಯಾನ’**ವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಈ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಅಭಿಯಾನಕ್ಕೆ ಮಾಜಿ …
Read More »ಬೆಳಗಾವಿಯ ಸಾಯಿರಾಜ್ ಟ್ರೋಫಿಗೆ ಶಾಸಕ ಅಭಯ್ ಪಾಟೀಲ್ ಚಾಲನೆ
ಬೆಳಗಾವಿಯ ಸಾಯಿರಾಜ್ ಟ್ರೋಫಿಗೆ ಶಾಸಕ ಅಭಯ್ ಪಾಟೀಲ್ ಚಾಲನೆ ಸಾಯಿರಾಜ್ ಟ್ರೋಫಿಗೆ ಇಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಇಂದು ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಪ್ರತಿಷ್ಠಿತ ಕ್ರಿಕೆಟ್ ಸಾಯಿರಾಜ್ ಟ್ರೋಫಿಗೆ ಇಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ ಸೇರಿದಂತೆ ಇನ್ನುಳಿದ ಗಣ್ಯರು …
Read More »ಖಾನಾಪೂರ ತಹಶೀಲ್ದಾರರಾಗಿ ಮಂಜುಳಾ ಕೆ. ನಾಯಕ್ ನೇಮಕ ; ದುಂಡಪ್ಪ ಕೋಮಾರ್ ವರ್ಗಾವಣೆ
ಖಾನಾಪೂರ :- ಖಾನಾಪೂರ ತಾಲೂಕಿನಲ್ಲಿ ಆಡಳಿತಾತ್ಮಕ ಬದಲಾವಣೆ ಸಂಭವಿಸಿದ್ದು, ತಾಲೂಕಿನ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ವರ್ಗಾಯಿಸಲಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಮಯ್ಯ ಅವರು ಈ ಸಂಬಂಧ ಆದೇಶಗಳನ್ನು ಹೊರಡಿಸಿದ್ದು, ಅವರ ಸ್ಥಾನಕ್ಕೆ ಶ್ರೀಮತಿ ಮಂಜುಳಾ ಕೆ. ನಾಯಕ್ ಅವರನ್ನು ಖಾನಾಪೂರದ ಹೊಸ ತಹಶೀಲ್ದಾರರಾಗಿ ನೇಮಕ ಮಾಡಲಾಗಿದೆ. ಈ ಕ್ರಮಕ್ಕೆ ಕಾರಣವಾದದ್ದು ಒಂದು ಕೃಷಿ ಸಂಬಂಧಿತ ಪ್ರಕರಣ. ಆ ಸಂಬಂಧಿತ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಸರ್ವೇ ಕಾರ್ಯವನ್ನು ನಡೆಸುವಂತೆ ಸ್ಪಷ್ಟ ಆದೇಶ …
Read More »ರೈತನಿಗೆ ಭೂ ಪರಿಹಾರ ಕೊಡದೇ ನಿರ್ಲಕ್ಷ್ಯ: ಕಾರ್ಯಪಾಲಕ ಇಂಜಿನಿಯರ್ ಕಚೇರಿ ಜಪ್ತಿ
ಮಂಡ್ಯ: ರೈತನಿಗೆ ಭೂ ಪರಿಹಾರ ಕೊಡದೇ ಸತಾಯಿಸಿದ ವಿಸಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದ ರೈತ ಜವರೇಗೌಡ ಅವರಿಗೆ ಭೂ ಪರಿಹಾರ ಕೊಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ನೀರಾವರಿ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯ ಧೋರಣೆಗೆ ಜಪ್ತಿ ಆದೇಶ ನೀಡಿ ಕೋರ್ಟ್ ಚಾಟಿ ಬೀಸಿತ್ತು. ಆದೇಶದಂತೆ ಮಂಗಳವಾರ (ನ.18) ಸರ್ಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ …
Read More »ಪುಟ್ಟ ಗಾತ್ರದ ‘ಕಿಯೊ’ ಪಿಸಿ ಬೆಂಗಳೂರು ಟೆಕ್ ಸಮ್ಮಿಟ್ ಆಕರ್ಷಣೆ: ಇದರ ಬೆಲೆ ಕೇವಲ 18,999 ರೂ.!
ಬೆಂಗಳೂರು: ಅಗ್ಗದ, ಪುಟ್ಟ ಗಾತ್ರದ ಕೃತಕ ಬುದ್ಧಿಮತ್ತೆಯ ಪರ್ಸನಲ್ ಕಂಪ್ಯೂಟರ್ ‘ಕಿಯೊ’ವನ್ನು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಟೆಕ್ ಸಮ್ಮಿಟ್ನ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮುತ್ತಿದೆ. ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಕಿಯೊನಿಕ್ಸ್ ಅಭಿವೃದ್ಧಿಪಡಿಸಿರುವ ಕಿಯೊ ಪಿಸಿಯನ್ನು ಅನಾವರಣಗೊಳಿಸಲಾಯಿತು. ಈ ಪುಟ್ಟ ಗಾತ್ರದ ಪಿಸಿ ಬೆಲೆ 18,999 ರೂ. ಇರಲಿದೆ. www.koonestinರಲ್ಲಿ ಕೆಇಒ ಖರೀದಿಯ ಮುಂಗಡ ಆರ್ಡರ್ ಮಾಡಬಹುದಾಗಿದೆ. ‘ಕಿಯೊ’ ಕಂಪ್ಯೂಟರನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಕಾಂಪ್ಯಾಕ್ಟ್ ಕೈಗೆಟುಕುವ, ಕೃತಕ …
Read More »ಕೇಂದ್ರ ಕಬ್ಬು ನಿರ್ದೇಶನಾಲಯದ ನಿರ್ದೇಶಕರ ಜೊತೆ ಚರ್ಚೆ ನಡೆಸಿದ ಸಚಿವ ತಿಮ್ಮಾಪುರ
ಬಾಗಲಕೋಟೆ: ರಾಜ್ಯದಲ್ಲಿ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಅದರಲ್ಲೂ ಜಿಲ್ಲೆಯ ಮುಧೋಳ ತಾಲೂಕಿನ ರೈತರಿಗೆ ಎದುರಾಗುತ್ತಿರುವ ತೀವ್ರ ಸಮಸ್ಯೆಗಳ ಕುರಿತು ಅಬಕಾರಿ ಸಚಿವ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರ್.ಬಿ.ತಿಮ್ಮಾಪುರ ಅವರು ಕೇಂದ್ರ ಕಬ್ಬು ಮತ್ತು ತೈಲ ಬೀಜಗಳ ನಿರ್ದೇಶನಾಲಯದ ನಿರ್ದೇಶಕ ಅರವಿಂದ ಕುಮಾರ್ ರಾವತ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ …
Read More »
Laxmi News 24×7