Breaking News

Daily Archives: ನವೆಂಬರ್ 6, 2025

ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ್‌ ನಲ್ಲಿ ಮಾಜಿ ಸಚಿವರು, ಶಾಸಕರು ಆದ ಹೆಚ್.ವೈ.ಮೇಟಿ ಅಂತಿಮ ನಮನ

ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ್‌ ನಲ್ಲಿ ಮಾಜಿ ಸಚಿವರು, ಶಾಸಕರು ಆದ ಹೆಚ್.ವೈ.ಮೇಟಿ ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದು, ಬಳಿಕ‌ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಮೇಟಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅಗಲಿದ ಆತ್ಮೀಯನಿಗೆ ಅಂತಿಮ ನಮನ ಸಲ್ಲಿಸಿದೆ. ಮೇಟಿಯವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬ ಸದಸ್ಯರು ಮತ್ತು ಬಂಧು ಬಳಗದವರಿಗೆ ಈ ದುಃಖ ಭರಿಸುವ ಶಕ್ತಿ ದೊರಕಲಿ.

Read More »

ಧಾನಿ ನರೇಂದ್ರ ಮೋದಿ ನವೆಂಬರ್ 28ಕ್ಕೆ ಉಡುಪಿಗೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28ಕ್ಕೆ ಉಡುಪಿಗೆ ಬರಲಿದ್ದಾರೆ. ಕೃಷ್ಣಮಠಕ್ಕೆ ಭೇಟಿ ನೀಡುವ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಿ ಭೇಟಿಯ ಜೊತೆಗೆ ಉಡುಪಿಯ “ಕೃಷ್ಣ ಕಾರಿಡಾರ್” ಯೋಜನೆಯ ಕನಸು ಚಿಗುರಿದೆ. ನವೆಂಬರ್​ 28ಕ್ಕೆ ಮೋದಿ ಉಡುಪಿ ಭೇಟಿ, ಭಕ್ತರನ್ನುದ್ದೇಶಿಸಿ ಮಾತು: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಉಡುಪಿ ಅವರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ. ಪರ್ಯಾಯ ಶ್ರೀ ಪುತ್ತಿಗೆ ಮಠದವರು ಆಯೋಜಿಸಿರುವ ಲಕ್ಷ ಕಂಠ …

Read More »

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ ಭಾಲ್ಕಿ ತಾಲೂಕಿನ ನೀಲಂನಹಳ್ಳಿ ತಾಂಡಾ ಹತ್ತಿರದ ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ. ನೆರೆಯ ತೆಲಂಗಾಣದ ನಾರಾಯಣಖೇಡ್ ತಾಲೂಕಿನ ಜಗನ್ನಾಥಪುರದ ರಾಚಪ್ಪ ರಾಮಚಂದ್ರಪ್ಪ ಬಿರಾದಾರ್ (51), ಚಾಲಕ ನವನಾಥ ಶರಣಪ್ಪ (25), ಯಲ್ಲವಾಯಿ ಗ್ರಾಮದ ನಾಗರಾಜು ಇಸ್ಟಯ್ಯಾ (38) ಸ್ಥಳದಲ್ಲಿಯೇ ಮೃತಪಟ್ಟರೆ, ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಜಗನ್ನಾಥಪುರಿಯ ಕಾಶಿನಾಥ ರಾಮಶೆಟ್ಟಿ (62) …

Read More »

ಖಾಸಗಿ ಜಮೀನಿನಲ್ಲಿ ಮಾಲೀಕರ ಅನುಮತಿ ಇಲ್ಲದೆ ಶವ ಸಂಸ್ಕಾರ ಮಾಡಬಹುದೇ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್

ಬೆಂಗಳೂರು: ಖಾಸಗಿ ಜಮೀನಿನಲ್ಲಿ ಮಾಲೀಕರ ಪರವಾನಿಗೆಯಿಲ್ಲದೆ ಶವ ಸಂಸ್ಕಾರ ಮಾಡಬಹುದೇ ಎಂಬುದರ ಕುರಿತು ತನ್ನ ನಿಲುವನ್ನು ತಿಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್​ ನಿರ್ದೇಶನ ನೀಡಿದೆ. ತಮ್ಮ ಒಪ್ಪಿಗೆಯಿಲ್ಲದೇ ಸೊಸೆಯ ಶವವನ್ನು ಮನೆಯ ಬಳಿ ಹೂಳಲಾಗಿದೆ. ಹಾಗಾಗಿ ಸಮಾಧಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ನಿರ್ದೇಶನ ನೀಡುವಂತೆ ಕೋರಿ ಬಂಗಾರಪೇಟೆಯ ತುರಾಂಡಹಳ್ಳಿಯ ಹೆಚ್‌. ಗೋಪಾಲಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕ ಸದಸ್ಯಪೀಠ ಈ ನಿರ್ದೇಶನ …

Read More »

ಗೃಹಲಕ್ಷ್ಮಿಯರಿಗಾಗಿ ಸೊಸೈಟಿ; ಕಡಿಮೆ ಬಡ್ಡಿದರದಲ್ಲಿ ಸಿಗಲಿದೆ 3 ಲಕ್ಷ ರೂ. ಸಾಲ:

ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುತ್ತಿದೆ. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಹೇಳಿದ್ದಾರೆ. ನಗರದ ಕಂಠೀರವ ಸ್ಟೇಡಿಯಂನಲ್ಲಿ ನ.19ರಂದು ನಡೆಯಲಿರುವ ಐಸಿಡಿಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ಡಾ.ಬಾಬು ಜಗಜೀವನರಾಮ್ ಆಡಿಟೋರಿಯಂ ಮತ್ತು ತರಬೇತಿ ಕೇಂದ್ರದಲ್ಲಿ …

Read More »