ವಿಜಯಪುರ: ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನ ಪ್ರಕರಣ ವರದಿಯಾಗಿದೆ. ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಈ ದರೋಡೆ ನಡೆದಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆ: ಮುಖಕ್ಕೆ ಮುಸುಕು ಹಾಕಿಕೊಂಡು ಹಾಗೂ ಮಿಲಿಟರಿ ಮಾದರಿ ಬಟ್ಟೆ ಹಾಕಿಕೊಂಡು ಬಂದ ದರೋಡೆಕೋರರು ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ಮ್ಯಾನೇಜರ್, ಕ್ಯಾಶಿಯರ್ …
Read More »Daily Archives: ಸೆಪ್ಟೆಂಬರ್ 17, 2025
ಜಾತಿ ಪಟ್ಟಿಯಲ್ಲಿ ಕ್ರಿಶ್ಚಿಯನ್ ಧರ್ಮದ ಜೊತೆ ಹಿಂದೂ ಜಾತಿ ಕಾಲಂ ಗೊಂದಲ
ಬೆಂಗಳೂರು: ಜಾತಿ ಗಣತಿ ಇದೇ ಸೆ. 22ರಿಂದ ಆರಂಭವಾಗಲಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ಸಕಲ ಸಿದ್ಧತೆ ನಡೆಸಿದೆ. ಈ ಮಧ್ಯೆ ಜಾತಿ ಪಟ್ಟಿಯಲ್ಲಿ ಮತಾಂತರಿತ ಕ್ರಿಶ್ಚಿಯನ್ ಧರ್ಮದೊಂದಿಗೆ ಮೂಲ ಜಾತಿಯನ್ನು ಪ್ರತ್ಯೇಕವಾಗಿ ತೋರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಏನಿದು ಜಾತಿ ಪಟ್ಟಿಯಲ್ಲಿನ ಮತಾಂತರ ಜಾತಿ ಕಾಲಂ ವಿವಾದ ಎಂಬ ವರದಿ ಇಲ್ಲಿದೆ. ಸೆ.22 ರಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿ ಮತ್ತೊಂದು ಸಾಮಾಜಿಕ …
Read More »ಮಲಮಗಳನ್ನು ಕಟ್ಟಡದ ಮೇಲಿಂದ ತಳ್ಳಿ ಕೊಲೆಗೈದ ಮಲತಾಯಿ; ಆಸ್ತಿಗಾಗಿ ಕೃತ್ಯ!
ಬೀದರ್: ಮಲ ಮಗಳಿಗೂ ಆಸ್ತಿ ಹಂಚಿಕೆ ಆಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮೂರು ಮಹಡಿ ಕಟ್ಟಡದ ಮೇಲಿಂದ ಬಾಲಕಿಯನ್ನು ತಳ್ಳಿ ಕೊಲೆ ಮಾಡಿದ ಘಟನೆ ಇಲ್ಲಿನ ನ್ಯೂ ಆದರ್ಶ ಕಾಲನಿಯಲ್ಲಿ ಇತ್ತೀಚೆಗೆ ನಡೆದಿದೆ. ಈ ಸಂಬಂಧ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಾನ್ವಿ (6) ಮೃತ ಬಾಲಕಿ. ಪ್ರಕರಣದಲ್ಲಿ ಆರೋಪಿಯನ್ನು ರಾಧಾ ಎಂದು ಗುರುತಿಸಲಾಗಿದೆ. ಆಗಸ್ಟ್ 27ರಂದು ಮಲತಾಯಿ ರಾಧಾ ಬಾಲಕಿಗೆ ಆಟವಾಡಿಸುವ ನೆಪದಲ್ಲಿ ಮೂರನೇ ಮಹಡಿಗೆ ಕರೆದೊಯ್ದಿದ್ದು, ಯಾರಿಗೂ ಕಾಣದಂತೆ …
Read More »