Breaking News

Daily Archives: ಜೂನ್ 4, 2025

ಮಂಕಾಳ. ಎಸ್. ವೈದ್ಯ ಹುಟ್ಟುಹಬ್ಬ ಆಚರಣೆಯಿಲ್ಲ.!!

ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ನನ್ನದೊಂದು ವಿನಂತಿ. !! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಪಿಗೆದ್ದು ತವರಿಗೆ ಆಗಮಿಸಿದ ಸಂತೋಷದ ಕ್ಷಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನ ಕಣ್ತುಂಬಿಕೊಳ್ಳುವ ಸಲುವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ವಿಧಾನಸೌಧದ ಮುಂಬಾಗದ ರಸ್ತೆಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಸಂದರ್ಭದಲ್ಲಿ ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿ 10 ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ ಗೊಂಡು ಆಸ್ಪತ್ರೆಗೆ …

Read More »

ಭೂಕುಸಿತ ಭೀತಿ: ಜಿಲ್ಲೆಯ ಈ ನಾಲ್ಕು ಪ್ರದೇಶಗಳು ಅತಿ ಅಪಾಯಕಾರಿ: ಸಮಿಕ್ಷಾ ವರದಿಯಲ್ಲಿ ಬಹಿರಂಗ

ಕಳೆದ ವರ್ಷ ಮಳೆಗಾಲದಲ್ಲಿ ಶಿರೂರು ಕುಡ್ದ ಕುಸಿತ ದುರಂತದ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತದ ಭೀತಿ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಪ್ರದೇಶಗಳು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದ್ದು ಇಲ್ಲಿ ಜಿಎಸ್ ಐ ಸಮೀಕ್ಷೆ ನಡೆಸಿದ್ದು, ಆತಂಕಕಾರಿ ವರದಿ ಬಹಿರಂಗವಾಗಿದೆ. ನಾಲ್ಕು ಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಭೂಕುಸಿತ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿಯಲ್ಲಿ ಕುಮಟಾ ತಾಲೂಕಿನ ಬರ್ಗಿಯ …

Read More »

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ

ಆರ್‌ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಅಭಿಮಾನಿಗಳು ಎಷ್ಟೊಂದು ಪ್ರಮಾಣದಲ್ಲಿ ಬಂದರು ಎಂದರೆ, ಭೀಕರ ಕಾಲ್ತುಳಿತವೇ ಸಂಭವಿಸಿದೆ.ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಅಸ್ವಸ್ಥಗೊಂಡ ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರ್‌ಸಿಬಿ ಆಟಗಾಗರನ್ನು ನೋಡಲು ಬಂದಿದ್ದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಧಾನಸೌಧದ ಮುಂದೆ ಜಮಾಯಿಸಿದ್ದಾರೆ. ಇನ್ನೂ ಇದೇ ವೇಳೆ ಅಭಿಮಾನಿಗಳೆಲ್ಲಾ ಚಿನ್ನಸ್ವಾಮಿ ಸ್ಟೇಡಿಯಂ ಏಕಾಏಕಿ ಬಂದಿದ್ದಾರೆ. ಇದೇ ಕಾರಣಕ್ಕೆ ನೂಕು ನುಗ್ಗಲು …

Read More »

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಲಿವ್-ಲವ್‌-ಲಫ್ ಫೌಂಡೇಶನ್ನಿಂದ ) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ

ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ಕಾಪಾಡಲು ಲಿವ್-ಲವ್‌-ಲಫ್ ಫೌಂಡೇಶನ್ನಿಂದ ) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಉಪಕ್ರಮ ಜಾರಿ ಬೆಂಗಳೂರು: ವೃತ್ತಿಪರರದ ಮಾನಸಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಲಿವ್-ಲವ್‌-ಲಫ್ ಫೌಂಡೇಶನ್ (ಎಲ್ಎಲ್ಎಲ್) ಕಾರ್ಪೊರೇಟ್ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಎಂಬ ಕಾರ್ಯಕ್ರಮ ಪ್ರಾರಂಬಿಸುತ್ತಿದೆ. ಇದೊಂದು ಸಮಗ್ರ ಹಾಗೂ ಸಂಶೋಧನಾಧಾರಿತ ಉಪಕ್ರಮವಾಗಿದ್ದು, ದೇಶಾದ್ಯಂತ ಮಾನಸಿಕ ಆರೋಗ್ಯ ಕಾಪಾಡುವಂತಹ ವಾತಾವರಣ ನಿರ್ಮಿಸುವ ಗುರಿ ಹೊಂದಿದೆ. ಈ ಕುರಿತು ಮಾತನಾಡಿದ ಲಿವ್‌-ಲವ್‌-ಲಾಫ್ ಫೌಂಡೇಶನ್‌ನ …

Read More »

KSCA ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ: ಸಿಎಂ ಪರೋಕ್ಷ ಹೇಳಿಕೆ

ಬೆಂಗಳೂರು, ಜೂನ್​ 04: ಟಾಟಾ ಐಪಿಎಲ್​ ಚಾಂಪಿಯನ್ಸ್​ ಟ್ರೋಫಿ ಗೆದ್ದು, ಆರ್​ಸಿಬಿ (RCB) ತಂಡ ಬೆಂಗಳೂರಿಗೆ ಹಿಂದಿರುಗಿದೆ. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ, ಕೆಎಸ್​ಸಿಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಆಯೋಜಿಸಿದ ಕಾರ್ಯಕ್ರಮದಿಂದ ಕಾಲ್ತುಳಿತ ಸಂಭವಿಸಿ ಜನ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಈ ಘಟನೆಯಲ್ಲಿ ಸರ್ಕಾರದ ತಪ್ಪಿಲ್ಲ ಎಂದು ಹೇಳಿದರು. ಆದರೆ, ಸಿಎಂ …

Read More »

ತಿರುಪತಿ ಮಾದರಿಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳುರ

ತಿರುಪತಿ ಮಾದರಿಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳುರ ಬೆಳಗಾವಿ: ಶ್ರೀ ಬಾಲಾಜಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಾಮರಂಭ ಕಾರ್ಯಕ್ರಮ ಜೂನ್ 6 ರಂದು ನಡೆಯಲಿದೆ ಎಂದು ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳುರು ತಿಳಿಸಿದರು. ಬೆಳಗಾವಿಯ ರಡ್ಡಿ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡಿಗಲ್ಲು ಸಮಾರಂಭ ಕಾರ್ಯಕ್ರಮಕ್ಕೆ ಹರಿಹರದ ರಡ್ಡಿ ಗುರುಪೀಠದ …

Read More »

ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆ

ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆ ಸಭೆಗೆ ಅಧಿಕಾರಿಗಳು ಗೈರು; ಡಿಎಂಕೆಗೆ ದೂರು ನೀಡಲು ನಗರಸೇವಕರ ಒತ್ತಾಯ ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆಗೆ ವರಿಷ್ಠಾಧಿಕಾರಿಗಳು ಗೈರಾದ ಹಿನ್ನೆಲೆ ನಗರಸೇವಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ, ಡಿಎಂಕೆಗೆ ದೂರು ನೀಡಲು ಅಧ್ಯಕ್ಷರನ್ನು ಒತ್ತಾಯಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಷ್ಮಾ ಕಾಮಕರ ಅಧ್ಯಕ್ಷತೆಯಲ್ಲಿ ಅರ್ಥ ಮತ್ತು …

Read More »

4 ಜನ ರೌಡಿಶೀಟರ್ ಗಳ ಮೇಲೆ ಗೂಂಡಾ ಕಾಯ್ದೆ , 31ರೌಡಿಗಳ ಗಡಿಪಾರು : ಕಮಿಷನರ್ ಎನ್.ಶಶಿಕುಮಾರ್

4 ಜನ ರೌಡಿಶೀಟರ್ ಗಳ ಮೇಲೆ ಗೂಂಡಾ ಕಾಯ್ದೆ , 31ರೌಡಿಗಳ ಗಡಿಪಾರು : ಕಮಿಷನರ್ ಎನ್.ಶಶಿಕುಮಾರ್ ಹು-ಧಾ. ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಾಲ್ವರ ಮೇಲೆ ಗೂಂಡಾ ಕಾಯ್ದೆ ಹಾಗೂ 31 ಆರೋಪಿತರನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ ಲಕ್ಕುಂಡಿ, ಕೇಶ್ವಾಪುರ ಪೊಲೀಸ್ ಠಾಣೆ …

Read More »

ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ…

ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ… ಸುಳ್ಳು ಹಬ್ಬಿಸುತ್ತ ಕೆಟ್ಟ ವಾತಾವರಣ ನಿರ್ಮಿಸುವುದೇ ಅವರ ಕೆಲಸ; ಸಚಿವ ಆರ್.ಬಿ. ತಿಮ್ಮಾಪೂರ ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ, ಧರ್ಮದ ವಿಚಾರದಲ್ಲಾಗಲಿ ನಂಬಿಕೆಯಿಲ್ಲ. ಸುಳ್ಳುಗಳನ್ನೇ ಹಬ್ಬಿಸುತ್ತ ಹೋಗುತ್ತಾರೆ. ಕೆಟ್ಟ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆರ್.ಸಿ.ಬಿ ಟ್ರಾಫಿ ಗೆದ್ದ ವಿಚಾರವಾಗಿ 17 ವರ್ಷಗಳ ನಂತರ ಚಾಂಪಿಯನ್ ಆಗಿದ್ದು, ಹೆಮ್ಮೆಯ ವಿಷಯ. ಅಭಿಮಾನಿಗಳ …

Read More »

ನರೇಗಾ ಕಾರ್ಮಿಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದ ಸಚಿವ ಸತೀಶ್ ಜಾರಕಿಹೊಳಿ

ನರೇಗಾ ಕಾರ್ಮಿಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದ ಸಚಿವ ಸತೀಶ್ ಜಾರಕಿಹೊಳಿ ಯಮಕನಮರ್ಡಿ ವಿಧಾನಸಭಾ ‌ಕ್ಷೇತ್ರದ ದಡ್ಡಿ ಗ್ರಾಮ‌‌ದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನರೇಗಾ ಕಾರ್ಮಿಕರಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಥಮ ಚಿಕಿತ್ಸಾ ಕಿಟ್’ಗಳನ್ನು ವಿತರಿಸಿದರು. ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಯಮಕನಮರ್ಡಿ ವಿಧಾನಸಭಾ ‌ಕ್ಷೇತ್ರದ ದಡ್ಡಿ ಗ್ರಾಮ‌‌ ಪಂಚಾಯಿತಿ ಕಚೇರಿಗೆ ಇಂದು ಭೇಟಿ ನೀಡಿದರು. …

Read More »