ಬೆಂಗಳೂರು: ಕರ್ನಾಟಕ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮನಾಗಿ ನಿಭಾಯಿಸುತ್ತಾ ದೇಶದಲ್ಲೇ ಅತ್ಯುತ್ತಮ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳ ಪೈಕಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿ ಬಳಿಕ ವಿವಿಧ ತುಕಡಿಗಳಿಂದ ಗೌರವ ರಕ್ಷೆ ಸ್ವೀಕರಿಸಿ, ತೆರೆದ ವಾಹನದಲ್ಲಿ ಕವಾಯತು ವೀಕ್ಷಿಸಿದರು. ನಂತರ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು. …
Read More »Daily Archives: ಜನವರಿ 26, 2025
ಸುತ್ತೂರು ಶ್ರೀಗಳಿಂದ ಸುತ್ತೂರು ಶ್ರೀ ಕ್ಷೇತ್ರದ ಮಹಾ ದಾಸೋಹಕ್ಕೆ ಚಾಲನೆ
ಮೈಸೂರು: ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಹಾ ದಾಸೋಹಕ್ಕೆ ಸುತ್ತೂರು ಶ್ರೀಗಳು ಶನಿವಾರ ಚಾಲನೆ ನೀಡಿದರು. ಬೃಹತ್ ಅಡುಗೆ ಮನೆಯಲ್ಲಿ ಅಡುಗೆ ಒಲೆಗಳಿಗೆ ಪೂಜೆ ಸಲ್ಲಿಸಿ, ದೊಡ್ಡ ದೊಡ್ಡ ಪಾತ್ರೆಗಳಿಗೆ ಅಡುಗೆ ಪದಾರ್ಥ ಹಾಕುವ ಮೂಲಕ ಚಾಲನೆ ನೀಡಲಾಯಿತು. ವಿಶೇಷವೆಂದ್ರೆ ದೊಡ್ಡ ದೊಡ್ಡ ಅಡುಗೆ ಒಲೆಗಳಿಗೆ ಹಚ್ಚುವ ಬೆಂಕಿ ಒಂದು ವಾರಗಳ ಕಾಲ ಆರದೇ ಇರುವುದು ತ್ರಿಕಾಲ ಮಹಾ ದಾಸೋಹದ ವಿಶೇಷ. ಸುತ್ತೂರು ಜಾತ್ರೆ ಮಹಾ ದಾಸೋಹಕ್ಕೆ 1 ಸಾವಿರ …
Read More »ಇನ್ಸ್ಟಾಗ್ರಾಮ್ನಲ್ಲಿ ಯುವತಿಯ ಫೋಟೋಗೆ ಲೈಕ್, ಪ್ರೇಯಸಿಯಿಂದ ತರಾಟೆ: ಪ್ರಿಯಕರ ಆತ್ಮಹತ್ಯೆಗೆ ಶರಣು
ಮಂಗಳೂರು, ಜನವರಿ 25: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸಾಮಾಜಿಕ ಜಾಲತಾಣದ ಗೀಳು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದ ಫೋಸ್ಟ್ ಮಾಡುವ ಫೋಟೋಗಳಿಗೆ ಹೆಚ್ಚಿನ ಲೈಕ್ ಮತ್ತು ಕಾಮೆಂಟ್ ಬರಲಿ ಎಂಬ ಉದ್ವಿಗ್ನತೆಯಲ್ಲಿರುತ್ತಾರೆ. ಆದರೆ, ಇದೇ ಉದ್ವಿಗ್ನತೆ ಎಷ್ಟೋ ಜನರ ಪ್ರಾಣ ಕಸಿದುಕೊಂಡಿದೆ. ಹೌದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಪೂಂಜಾಲಕಟ್ಟೆ ಕುಕ್ಕಿಪ್ಪಾಡಿಯ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.ಮೃತ ಚೇತನ್ಗೆ ಕುಂದಾಪುರದ ಚೈತನ್ಯ …
Read More »ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ 96 ವರ್ಷದ ಭೀಮವ್ವ ಶಿಳ್ಳೇಕ್ಯಾತಗೆ ಒಲಿದ ಪದ್ಮಶ್ರೀ
ಕೊಪ್ಪಳ, : ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಗೆ (Padma Shri) ತೊಗಲುಗೊಂಬೆ ಆಟದ ಹಿರಿಯ ಕಲಾವಿದೆಯಾಗಿರುವ ಜಿಲ್ಲೆಯ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಳ್ಳಪ್ಪ ಶಿಳ್ಳೇಕ್ಯಾತ ಅವರಿಗೆ ಒಲಿದು ಬಂದಿದೆ. ಭೀಮವ್ವ ಅನಕ್ಷರಸ್ಥೆಯಾಗಿದ್ದರು ಬಾಲ್ಯದಿಂದಲೇ ತೊಗಲುಗೊಂಬೆಯಾಟ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಅನೇಕ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಆಧುನಿಕ ಗಾಜೆಟ್ಗಳಲ್ಲಿ ಬ್ಯೂಸಿಯಾಗಿರುವ ಇಂದಿನ ಯುಗದ ಯುವಜನತೆಗೆ ಗ್ರಾಮೀಣ ಕ್ರೀಡೆಗಳ ಮಹತ್ವದ ಅರಿವು ಕಡಿಮೆ. ಆದರೆ ಕೊಪ್ಪಳ ತಾಲೂಕಿನ ಮೋರನಾಳ …
Read More »ಇದು ಈ ಬಾರಿಯ ಗೂಗಲ್-ಡೂಡಲ್
ಇಡೀ ದೇಶ ಇಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಗೂಗಲ್ ಕೂಡ ಈ ವಿಶೇಷ ದಿನವನ್ನು ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಆಚರಿಸುತ್ತಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಮಾಡಿದೆ. ಈ ಡೂಡಲ್ ಭಾರತೀಯ ವನ್ಯಜೀವಿ ಥೀಮ್ ಅನ್ನು ಆಧರಿಸಿದೆ. ಭಾರತದ ಶ್ರೀಮಂತ ಜೀವವೈವಿಧ್ಯವನ್ನು ಡೂಡಲ್‌ನಲ್ಲಿ ತೋರಿಸಲಾಗಿದೆ. ಭಾರತದ ವೈವಿಧ್ಯಮಯ ವನ್ಯಜೀವಿಗಳಿಂದ ಸ್ಫೂರ್ತಿ ಪಡೆದ ಇಂದಿನ ಗೂಗಲ್ ಡೂಡಲ್ ದೇಶದ ವಿವಿಧ ಪ್ರದೇಶಗಳನ್ನು ಪ್ರತಿನಿಧಿಸುವ ಪ್ರಾಣಿಗಳನ್ನು ಪ್ರದರ್ಶಿಸುತ್ತದೆ. ಇದು ಉತ್ತರದಲ್ಲಿ …
Read More »ವೃದ್ಧರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದ್ರೇ… ಮೈಕ್ರೋ ಫೈನಾನ್ಸಗಳ ವಿರುದ್ಧ ಕ್ರಮ; ಸಿಎಂ ಸಿದ್ಧರಾಮಯ್ಯ
ಮೈಕ್ರೋ ಫೈನಾನ್ಸ ಮತ್ತು ಆರ್.ಬಿ.ಐ ಅಧಿಕಾರಿಗಳೊಂದಿಗೆ ಸಭೆ ವೃದ್ಧರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದ್ರೇ… ಮೈಕ್ರೋ ಫೈನಾನ್ಸಗಳ ವಿರುದ್ಧ ಕ್ರಮ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಪರವಾನಿಗೆ ಪಡೆದ ಮೈಕ್ರೋ ಫೈನಾನ್ಸಗಳಿಂದಲೇ, ಸಾಲಗಾರ ವೃದ್ಧರು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದರೇ, ಜನರ ರಕ್ಷಣೆಗಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿ.ಎಂ. ಸಿದ್ಧರಾಮಯ್ಯ …
Read More »ಮುಡಾ ನಿವೇಶನ ಹಂಚಿಕೆ ಹಗರಣದ ಮಧ್ಯಂತರ ತನಿಖಾ ವರದಿ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ಧಾರವಾಡ ಹೈಕೋರ್ಟ್ ಪೀಠಕ್ಕೆ ಸಲ್ಲಿಕೆ ಮಾಡಲಿದ್ದಾರೆ.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ನಿವೇಶನ ಹಂಚಿಕೆ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಮಧ್ಯಂತರ ತನಿಖಾ ವರದಿಯನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ಸೋಮವಾರ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಪ್ರಭಾವದಿಂದ ಪತ್ನಿ ಪಾರ್ವತಿ ಮುಡಾದಲ್ಲಿ 14 ಬದಲಿ ನಿವೇಶನ ಪಡೆದುಕೊಂಡಿರುವ ಆರೋಪ ಸಂಬಂಧ ತನಿಖೆ ನಡಸುತ್ತಿರುವ ಮೈಸೂರು ಲೋಕಾಯುಕ್ತ ಎಸ್ಪಿ ಹಾಗೂ ತನಿಖಾಧಿಕಾರಿ ಟಿ.ಜೆ.ಉದೇಶ್ ಅವರು ಸೋಮವಾರ ಧಾರವಾಡ ಹೈಕೋರ್ಟ್ಗೆ ವರದಿ ಸಲ್ಲಿಸಲಿದ್ದಾರೆ. …
Read More »ಕೇಂದ್ರ ಸರ್ಕಾರ 2025 ನೇ ಸಾಲಿನ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ನವದೆಹಲಿ: ಕೇಂದ್ರ ಸರ್ಕಾರವು 2025 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಕರ್ನಾಟಕದ ಸಾಧಕರಿಗೆ 1 ಪದ್ಮವಿಭೂಷಣ, 2 ಪದ್ಮಭೂಷಣ, 65 ಪದ್ಮಶ್ರೀ ಗೌರವ ದಕ್ಕಿದೆ. ಶನಿವಾರ ಈ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಒಟ್ಟಾರೆ 7 ಪದ್ಮವಿಭೂಷಣ, 19 ಪದ್ಮಭೂಷಣ, 113 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕರ್ನಾಟಕದ ಸಾಧಕರ ಪಟ್ಟಿ: ಕಲೆ ವಿಭಾಗದಲ್ಲಿ ಲಕ್ಷ್ಮೀ ನಾರಾಯಣ ಸುಬ್ರಮಣ್ಯಂ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ …
Read More »ಡಾ. ಅಂಬಾಜಿ ವೆಂಕಪ್ಪ ಸುಗುತೇಕರ ಅವರಿಗೆ 2025ರ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.
ಬಾಗಲಕೋಟೆ : “ತಾಯಿ ನಿನ್ನ ಭಜನೆ ನಾನು ಮರೆಯಲಾರೆನು” ಎಂದು ಮನೆ, ಮನೆಗೂ ತೆರಳಿ ಹಾಡುತ್ತಿದ್ದ ಗೋಂಧಳಿ ವೆಂಕಪ್ಪನನ್ನು ದೇವರೂ ಮರೆತಿಲ್ಲ. ಶಾಲೆಯ ಮೆಟ್ಟಿಲನ್ನೇ ಹತ್ತದ ವೆಂಕಪ್ಪ ಗೌರವ ಡಾಕ್ಟರೇಟ್ ಪಡೆದಿದ್ದರಲ್ಲದೇ ಈಗ ಪದ್ಮಶ್ರೀ ಪ್ರಶಸ್ತಿ ಪಡೆಯುವುದರ ಮೂಲಕ ದೇಶವೇ ಬಾಗಲಕೋಟೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಂಬಾಜಿ ನಡೆದು ಬಂದ ಹಾದಿಯೇ ರೋಚಕ: ಹೌದು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಡಾ. ಅಂಬಾಜಿ ವೆಂಕಪ್ಪ ಸುಗುತೇಕರ ನಡೆದು ಬಂದ ಹಾದಿಯೇ ರೋಚಕ. …
Read More »ಲಾಠಿಯಿಂದ ಹಲ್ಲೆೆ ನಡೆಸಿದಲ್ಲದೆ, ಗನ್‌ಮ್ಯಾನ್‌ನಿಂದ ಕೊಲೆಗೈಯಲು ಗುಂಡು ಹಾರಿಸಿದ ಆರೋಪದ ಮೇಲೆ ವಕೀಲ ಕೆ.ಎನ್.ಜಗದೀಶ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಬೇಕರಿಯಲ್ಲಿ ಟೀ ಕುಡಿಯುತ್ತಿದ್ದ ಯುವಕರ ಮೇಲೆ ಲಾಠಿಯಿಂದ ಹಲ್ಲೆೆ ನಡೆಸಿದಲ್ಲದೆ, ತನ್ನ ಗನ್‌ಮ್ಯಾನ್‌ನಿಂದ ವ್ಯಕ್ತಿಯೊಬ್ಬನ ಕೊಲೆಗೈಯಲು ಗುಂಡು ಹಾರಿಸಿದ ಆರೋಪದ ಮೇಲೆ ವಕೀಲ ಕೆ.ಎನ್.ಜಗದೀಶ್, ಆವರ ಪುತ್ರ ಸೇರಿ ನಾಲ್ವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿ ತೇಜಸ್ವಿ ಎಂಬುವರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕೊಲೆಗೆ ಯತ್ನ, ಹಲ್ಲೆೆ, ಶಸ್ತ್ರಾಸ್ತ್ರ ಬಳಕೆ ಹಾಗೂ ಇತರೆ ಆರೋಪಗಳ ಅಡಿಯಲ್ಲಿ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿರೂಪಾಕ್ಷಪುರ ನಿವಾಸಿ …
Read More »