Breaking News

Daily Archives: ಜನವರಿ 18, 2025

ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ

ಮೈಸೂರು, (ಜನವರಿ 17): ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಅಂದ್ಹಾಗೆ ಈತನ ಹೆಸರು ವಿನಯ್. ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್‌ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು …

Read More »

ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ವಿಪಕ್ಷ ನಾಯಕ ಆರ್ ಅಶೋಕ

ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ವಿಪಕ್ಷ ನಾಯಕ ಆರ್ ಅಶೋಕ 1 ಬೆಳಗಾವಿಯಿಂದಲೇ ಕಾಂಗ್ರೆಸ್ ಸರ್ಕಾರ ಪತನ. 2 ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ. 3 ಕುರ್ಚಿ ಬಿಡಲು ಮನಸ್ಸಿಲ್ಲದ ಸಿದ್ದರಾಮಯ್ಯ 4 ಅಧಿಕಾರದಲ್ಲಿ ಮುಂದುವರೆಯಲು ಬೆಂಬಲಿಗರನ್ನು ಛೂ ಬಿಟ್ಟಿರುವ ಸಿಎಂ.  ಕಾಂಗ್ರೆಸ್ ಸರ್ಕಾರ ಬೆಳಗಾವಿಯಿಂದಲೇ ಬೀಳುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ.  ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಒಂದು ಕಡೆಗೆ ಸತೀಶ್ ಜಾರಕಿಹೊಳಿ …

Read More »

ಸೈಫ್​ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ

ರಾಯಚೂರು: ಬಾಲಿವುಡ್ ನಟ ಸೈಫ್​ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ರಾಯಚೂರಿನಲ್ಲಿ ಖಾಸಗಿ ಜ್ಯುವೆಲ್ಲರಿ ಶಾಪ್‌ ಉದ್ಘಾಟಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ಶಾಕ್​​​​​​ ಆಗಿದ್ದೇನೆ. ಅವರು ಚೇತರಿಸಿಕೊಂಡು ಬೇಗ ಗುಣಮುಖವಾಗಲಿದ್ದಾರೆ. ಮುಂಬೈ ಪೊಲೀಸರು ಈ ಘಟನೆಗೆ ಕಾರಣನಾದವರನ್ನು ಪತ್ತೆ ಹಚ್ಚಿ ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡದ ಸಿನಿಮಾಗಳಲ್ಲಿ ನಟಿಸಲು ಅತ್ಯಂತ ಉತ್ಸುಕಳಾಗಿದ್ದೇನೆ. …

Read More »

ರಾಜ್ಯ ಕಾಂಗ್ರೆಸ್​ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ವಾರ್ನಿಂಗ್​

ಬೆಂಗಳೂರು: ಬಹಿರಂಗ ಹೇಳಿಕೆ ಯಾರು ಕೊಡಬಾರದು. ಇದು ನನ್ನ ಸೂಚನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಸದಾಶಿ‌ವನಗರ ನಿವಾಸದ ಬಳಿ ಮಾತನಾಡಿದ ಅವರು, ಇಂತಹ ಹೇಳಿಕೆ ಯಾರು ಕೊಡಬಾರದು ಇದು ನನ್ನ ಮೊದಲ ಸೂಚನೆ. ಏನೇ ತೀರ್ಮಾನ‌ ಮಾಡುವುದಿದ್ದರೂ ನಾನು, ರಾಹುಲ್‌ಗಾಂಧಿ, ಸೋನಿಯಾಗಾಂಧಿ ಇದ್ದೇವೆ. ನಾವೆಲ್ಲಾ ಕುಳಿತು ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಬದಲಾವಣೆ, ಬದಲಾವಣೆ ಅಂತೀರಿ. ಎಲ್ಲಿದೆ ಬದಲಾವಣೆ?. ಸೂಕ್ತ ಕಾಲದಲ್ಲಿ ಅಂದ್ರೆ ನಾಳೆ ನಾಡಿದ್ದೇ ಅಲ್ಲ …

Read More »

ಕರ ವಸೂಲಾತಿಯಲ್ಲಿ ರಾಜ್ಯಕ್ಕೆ ಪ್ರಥಮಮುಂಡಗೋಡ ತಾಲೂಕು!

ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು 2024-25ನೇ ಸಾಲಿನ ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿ ಇರುವಾಗಲೇ ಗ್ರಾಮ ಪಂಚಾಯತ್ ಮಟ್ಟದ ಕರ ಸಂಗ್ರಹಣೆಯಲ್ಲಿ ಒಟ್ಟು ಬೇಡಿಕೆಯ ಶೇ.100 ರಷ್ಟು ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಳಿಸಿ ಕರ ಸಂಗ್ರಹಣೆಯಲ್ಲಿ ವಿನೂತನ ದಾಖಲೆ ಬರೆದಿದೆ.  ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮುಂಡಗೋಡ ತಾಲೂಕಿನಲ್ಲಿ 1.52 ಕೋಟಿ ರೂ. ತೆರಿಗೆ ಸಂಗ್ರಹ ಗುರಿಗೆ ಪ್ರತಿಯಾಗಿ 1.53 ಕೋಟಿ …

Read More »