Breaking News

Yearly Archives: 2024

ಸಿದ್ದರಾಮಯ್ಯಗೆ ಮುಡಾ ಸಂಕಷ್ಟ! ಮಾಜಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಾಗಿನಿಂದ ಮುಡಾ ಹಗರಣ (MUDA Scam) ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದು ರಾಜ್ಯದ ಮುಖ್ಯಮಂತ್ರಿಗಳ ಸುತ್ತ ಗಿರಕಿಹೊಡೆಯುತ್ತಿದ್ದು, ಇದೀಗ ಮತ್ತೆ ಸಿದ್ದರಾಮಯ್ಯ (Siddaramaiah) ಅವರಿಗೆ ಸಂಕಷ್ಟು ಎದುರಾಗುವ ಸಾಧ್ಯತೆ ಇದೆ. ಏಕೆಂದರೆ ಮುಡಾ 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ಲೋಕಯುಕ್ತ ನೋಟಿಸ್ …

Read More »

ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

ಬೆಂಗಳೂರು: ವಕ್ಫ್ ವಿಷಯ‌ದ ಜತೆಗೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡುತ್ತಿರುವ ವಿಷಯವನ್ನೂ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ನಡೆಸುವ ಹೋರಾಟಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದ್ದು, ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲೂ ಈ ವಿಚಾರವನ್ನು ಮುನ್ನೆಲೆಗೆ ತರಲಿದೆ.   ವಕ್ಫ್ ವಿಷಯಕ್ಕೆ ಸಂಬಂಧಪಟ್ಟಂತೆ ನ. 21, 22ರಂದು ಎಲ್ಲ ಜಿಲ್ಲೆಗಳಲ್ಲಿ ಹೋರಾಟ ನಡೆಸುವ ಸಂದರ್ಭದಲ್ಲೇ ಬಿಪಿಎಲ್‌ ಕಾರ್ಡ್‌ ವಿಷಯವೂ ಪ್ರಸ್ತಾವವಾಗಲಿದೆ. ಆದರೆ ಅಧಿವೇಶನದಲ್ಲಿ ಈ ಅಂಶವನ್ನು ಪ್ರಬಲವಾಗಿ ಪ್ರಯೋಗಿಸುವುದಕ್ಕೆ ಬಿಜೆಪಿ ನಿರ್ಧರಿಸಿದೆ. ಈ …

Read More »

ಬೆಳಗಾವಿ: ತಾಲ್ಲೂಕಿನ ಹೊನ್ನಿಹಾಳ ಬಳಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ

ಬೆಳಗಾವಿ: ತಾಲ್ಲೂಕಿನ ಹೊನ್ನಿಹಾಳ ಬಳಿ ಕಲ್ಲಿನಿಂದ ಜಜ್ಜಿ ಯುವಕನ ಕೊಲೆ ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಸಾಂಬ್ರಾ ವಿಮಾನ ನಿಲ್ದಾಣ ಹತ್ತಿರದ ಹೊಲದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಆದರೆ, ಗುರುತು ಪತ್ತೆಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ.   ‘ಕಲ್ಲಿನಿಂದ ತಲೆಗೆ ಜಜ್ಜಿ ಯುವಕನ ಹತ್ಯೆ ಮಾಡಲಾಗಿದೆ. ಮೃತದೇಹ ನೋಡಿದ ಸ್ಥಳೀಯ ರೈತರು ನಮಗೆ ಮಾಹಿತಿ ಕೊಟ್ಟಿದ್ದು, ಘಟನಾ ಸ್ಥಳಕ್ಕೆ ಬಂದಿದ್ದೇವೆ. ಕೊಲೆಗೆ ಇನ್ನೂ ಕಾರಣ ಗೊತ್ತಾಗಿಲ್ಲ. ಎಲ್ಲ ಆಯಾಮಗಳಲ್ಲಿ ತನಿಖೆ …

Read More »

ಕೊಪ್ಪಳದಲ್ಲಿ ಜಿಲ್ಲಾಸ್ಪತ್ರೆಯ ಬಳಿಯೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನರ್ಸಿಂಗ್ ಆಫೀಸರ್!

ಕೊಪ್ಪಳ : ಇತ್ತೀಚಿಗೆ ಸರ್ಕಾರಿ ನೌಕರಸ್ಥರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಕೊಪ್ಪಳದಲ್ಲಿ ಜಿಲ್ಲಾ ಆಸ್ಪತ್ರೆಯ ಮುಂಭಾಗವೇ ನರ್ಸಿಂಗ್ ಆಫೀಸರ್ ಒಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.   ಹೌದು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಈ ಒಂದು ಘಟನೆ ನಡೆದಿದ್ದು, ಸಹೋದ್ಯೋಗಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಂದ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದ್ದು, ಇದರಿಂದ ಮನನೊಂದು ನರ್ಸಿಂಗ್ ಆಫೀಸರ್ ಶಶಿ …

Read More »

ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ರುದ್ರೇಶ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ಅನಾಮಧೇಯ ಪತ್ರ ಪತ್ತೆ

ಬೆಳಗಾವಿ: ಜಿಲ್ಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರೇಶ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪ್ರಕರಣ ಸಂಬಂಧ ಅನಾಮಧೇಯ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಇದು ಆತ್ಮಹತ್ಯೆ ಅಲ್ಲ. ಇದು ಕೊಲೆ. ಈ ಕೇಸ್ ಮುಚ್ಚಿಹಾಕಬಾರದು. ಸತ್ತವರಿಗೆ ನ್ಯಾಯ ಸಿಗಬೇಕು ಎಂಬುದಾಗಿ ಆಗ್ರಹಿಸಲಾಗಿದೆ. ಈ ಸಂಬಂಧ ಬೆಳಗಾವಿಯ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೆ, ರಾಜ್ಯಪಾಲರಿಗೂ ಪತ್ರವನ್ನು ಅಡ್ರೆಸ್ ಮಾಡಲಾಗಿದೆ. ಅದರಲ್ಲಿ ಬೆಳಗಾವಿ ತಹಶೀಲ್ದಾರ ಕಚೇರಿಯ …

Read More »

ಸಚಿವ ಮುನಿಯಪ್ಪಗು ‘ಸಿಎಂ’ ಸ್ಥಾನ ಸಿಗಲಿ : ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಆಗ್ರಹ

ಬೆಂಗಳೂರು : ಯಾವಾಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುರಿತು ಆರೋಪ ಕೇಳಿ ಬಂದಿತೊ, ಆಗಲೇ ಕಾಂಗ್ರೆಸ್ಸಿನ ಹಲವು ನಾಯಕರು ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೆ, ಗೃಹ ಸಚಿವ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತು. ಇದೀಗ ಸಚಿವ ಕೆ ಹೆಚ್ ಮುನಿಯಪ್ಪ ಅವರಿಗೂ ಸಿಎಂ ಸ್ಥಾನ ಸಿಗಲಿ ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ …

Read More »

ಬಿಜೆಪಿಗೆ ಕಾಂಗ್ರೆಸ್ ಶಾಸಕರನ್ನು ಕಳುಹಿಸಿದ್ದೆ ಸಿಎಂ ಸಿದ್ದರಾಮಯ್ಯ : ಪ್ರಹ್ಲಾದ್ ಜೋಶಿ ಹೊಸ ಬಾಂಬ್!

ಧಾರವಾಡ : ಬಿಜೆಪಿ ಆಪರೇಷನ್ ಕಮಲ ಮಾಡಲು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿದೆ ಎಂದು ಶಾಸಕ ಗಣಿಗ ರವಿ ಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದೀಗ ಹೊಸ ಬಾಂಬ್ ಸಿಡಿಸಿದ್ದು, ಈ ಹಿಂದೆ ಬಿಜೆಪಿ ಸರ್ಕಾರ ರಚನೆಗೆ ಕಾಂಗ್ರೆಸ್ಸಿನ ಶಾಸಕರನ್ನು ಕಳುಹಿಸಿದ್ದೇ ಸಿಎಂ ಸಿದ್ದರಾಮಯ್ಯನವರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.   ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ …

Read More »

ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಮೀಪದ ಬೆನಕನಹೊಳಿ ಬಳಿ ಘಟಪ್ರಭಾ ನದಿ ಹಿನ್ನೀರಿನ ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರುಪಾಲಾಗಿದ್ದು, ಸೋಮವಾರ (ನ.18) ಬೆಳಿಗ್ಗೆಯಿಂದ ಅವರ ಮೃತದೇಹದ ಹುಡುಕಾಟ ನಡೆದಿದೆ.   ಬೆನಕನಹೊಳಿಯ ಲಕ್ಷ್ಮಣ ರಾಮ ಅಂಬಲಿ (49) ಅವರ ಮಕ್ಕಳಾದ ರಮೇಶ (14), ಯಲ್ಲಪ್ಪ(12) ಮೃತರು. ಲಕ್ಷ್ಮಣ ಹಾಗೂ ಅವರ ಮಕ್ಕಳು ಘಟಪ್ರಭಾ ನದಿ ಸೇತುವೆ ಮೇಲೆ ಭಾನುವಾರ ಸಂಜೆ ಬೈಕ್ …

Read More »

ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

ಬೆಳಗಾವಿ: ಆರಂಭದಲ್ಲಿ ಬಿಜೆಪಿಯಿಂದ ನನಗೆ ಪಕ್ಷ ಸೇರುವಂತೆ ಆಫರ್ ಬಂದಿತ್ತು. ಈಗ ಹಣದ ಆಫರ್ ಬಂದಿಲ್ಲ. ಒಂದು ವರ್ಷದ ಹಿಂದೆ ಆಫರ್ ಬಂದಿತ್ತು. ಇದನ್ನು ಮುಖಂಡರ ಗಮನಕ್ಕೆ ತಂದಿದ್ದೇನೆ. ಒಂದು ವರ್ಷದ ಹಿಂದೆ ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದರು. ಈಗ ಹಣದ ಡಿಮ್ಯಾಂಡ್ ಯಾರೂ ಮಾಡಿರಲಿಲ್ಲ. ಸ್ನೇಹ, ವಿಶ್ವಾಸದ ಮೇಲೆ ಬಿಜೆಪಿಯಲ್ಲಿರುವ ಸ್ನೇಹತರು ಆಹ್ವಾನ ಮಾಡಿದ್ದರು. ಆಗ ನಿಮ್ಮ ಪಕ್ಷದಲ್ಲಿ ನೀವು ಇರಿ, ನಮ್ಮ ಪಕ್ಷದಲ್ಲಿ ನಾವು ಇರುತ್ತೇನೆಂದು …

Read More »

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ ಬೆನ್ನಲ್ಲೇ ಈಗ ಎಐ ಚಾಟ್‌ಬಾಟ್‌ ಒಂದು ಮನುಷ್ಯನಿಗೇ “ನೀನು ಸತ್ತು ಹೋಗು’ ಎಂದಿದೆ! ಹೌದು, ಅಮೆರಿಕದ ಮಿಚಿಗನ್‌ನಲ್ಲಿನ ಭಾರತೀಯ ವಿದ್ಯಾರ್ಥಿ ವಿಧಯ್‌ ರೆಡ್ಡಿ ತಮ್ಮ ಪಠ್ಯದ ಒಂದು ಸಮಸ್ಯೆಗೆ ಚಾಟ್‌ಬಾಟ್‌ ಗೂಗಲ್‌ ಜೆಮಿನಿ ಬಳಿ ಪರಿಹಾರ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿದ ಜೆಮಿನಿ, “ಮನುಷ್ಯ, ನೀನು ಮುಖ್ಯವೂ ಅಲ್ಲ, ವಿಶೇಷವೂ ಅಲ್ಲ. ನಿನ್ನಿಂದ ಸಮಯ, …

Read More »