Breaking News

Yearly Archives: 2024

ತುತ್ತು ನೀಡುತ್ತಿದ್ದ ದೊಡ್ಡಮ್ಮನನ್ನೇ ಕೊಂದ ಮಗ

ಸಂಜಯ ಸಂಜೆಯಾದ್ರೇ ಕುಡಿದು ಬಂದು ಗಲಾಟೆ ಮಾಡ್ತಿದ್ದ, ಇದರಿಂದ ಆಕ್ರೋಶಗೊಂಡು ಈ ರೀತಿ ಕುಡಿಯುವುದು ಸರಿಯಲ್ಲ, ನೀನು ಮದುವೆ ಮಾಡಿಕೊಂಡು ನಿನ್ನ ಜೀವನ ನಡೆಸು ಅಂತಾ ದೊಡ್ಡಮ್ಮ ಮಂಗಲಾ ಬುದ್ದಿವಾದ ಹೇಳಿದ್ದರು. ಇದಾದ ಬಳಿಕ ಜನವರಿ 8ರಂದು ರಾತ್ರಿ…ಆತನಿಗೆ ಇನ್ನೂ ಮದುವೆ ಆಗಿರಲಿಲ್ಲ. ಡ್ರೈವರ್ ಕೆಲಸ ಮಾಡಿಕೊಂಡಿದ್ದವನ ತಾಯಿ ತೀರಿ ಹೋಗಿ ದೊಡ್ಡಮ್ಮನ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಕುಡಿತದ ಚಟಕ್ಕೆ ದಾಸನಾಗಿದ್ದ ಆತನಿಗೆ ಆಗಾಗ ದೊಡ್ಡಮ್ಮ ಬೈದು ಬುದ್ದಿವಾದ ಹೇಳುತ್ತಿದ್ದಳು. …

Read More »

ನವಿಲುಗಳನ್ನು ಕೊಂದು ಮಾರಾಟ ಮಾಡ್ತಿದ್ದ ಆರೋಪಿ ಅರೆಸ್ಟ್

ನವಿಲುಗಳನ್ನು ಕೊಂದು ಮಾರಾಟ ಮಾಡ್ತಿದ್ದ ಆರೋಪಿ ಅರೆಸ್ಟ್   ಸದ್ದಿಲ್ಲದೇ ರಾಷ್ಟ್ರ ಪಕ್ಷಿ ನವಿಲುಗಳನ್ನ (Peacock) ಬೇಟೆಯಾಡುವ ಗ್ಯಾಂಗ್ ಹುಟ್ಟುಕೊಂಡಿದೆ. ನವಿಲಿನ ಮಾಂಸಕ್ಕಾಗಿ ರಾಷ್ಟ್ರ ಪಕ್ಷಿಗೆ ವಿಷ ಉಣಿಸುವ ಕೆಲಸಕ್ಕೆ ಪಾಪಿಗಳು ಮುಂದಾಗಿದ್ದ ಗ್ಯಾಂಗ್​​ನ್ನು ಬಂಧಿಸುವಲ್ಲಿ ಪೊಲೀಸರು (Police) ಯಶಸ್ವಿಯಾಗಿದ್ದಾರೆ. ರೈತರ ಜಮೀನಿಗೆ ಕಾಳು ತಿನ್ನಲು ಬರುತ್ತಿದ್ದ ನವಿಲುಗಳು ಮೃತಪಟ್ಟಿದ್ದನ್ನು ಕಂಡು ಗ್ರಾಮಸ್ಥರು, ಅರಣ್ಯ ಇಲಾಖೆ ಬೆಚ್ಚಿ ಬಿದ್ದಿತ್ತು. ಅಷ್ಟಕ್ಕೂ ಯಾವುದದೂ ಗ್ಯಾಂಗ್, ಅದ್ಯಾವ ರೀತಿ ನವಿಲುಗಳ ಬೇಟೆ ಆಡುತ್ತಿದ್ದರು …

Read More »

ಲೋಕಸಭೆ ಚುನಾವಣೆ: ಮತ್ತೆ ಬೆಳಗಾವಿಯಿಂದಲೇ ಶುರುವಾದ ಗಿಫ್ಟ್​​ ಪಾಲಿಟಿಕ್ಸ್

ಬೆಳಗಾವಿ, ಜನವರಿ : ಕಳೆದ ವರ್ಷ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಗಿಪ್ಟ್ ಪಾಲಿಟಿಕ್ಸ್(Gift Politics) ಜೋರಾಗಿಯೇ ಸದ್ದು ಮಾಡಿತ್ತು. 2023 ವರ್ಷದ ಆರಂಭದಲ್ಲೇ ಬೆಳಗಾವಿ (Belagavi) ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತದಾರರಿಗೆ ಗಿಫ್ಟ್​​ಗಳನ್ನು ನೀಡಿ ಮತಗಳನ್ನು ಗಟ್ಟಿ ಮಾಡಿಕೊಳ್ಳಲು ಆರಂಭಿಸಿದ್ದರು. ಇದೀಗ ಲೋಕಸಭೆ ಚುನಾವಣೆ ಹತ್ತಿರದಲ್ಲಿದ್ದು, ಈ ಬಾರಿಯೂ ಗಿಪ್ಟ್ ಪಾಲಿಟಿಕ್ಸ್ ಬೆಳಗಾವಿಯಿಂದಲೇ ಆರಂಭವಾಗಿದೆ. ಹೌದು ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನವೇ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ‌ ಶಾಸಕ ಸಂಜಯ …

Read More »

ಅನಂತಕುಮಾರ ಹೆಗಡೆ ಎಲ್ಲಿ ಸಿಗ್ತಾನೋ ಅಲ್ಲೇ ಹಿಡಿದು ಹೊಡೆಯುತ್ತೇವೆ: ಮಾಜಿ ಶಾಸಕ ಎಸ್.ರಾಮಪ್ಪ

ದಾವಣಗೆರೆ,: ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನೊಮ್ಮೆ ಈ ರೀತಿ ಏಕವಚನದಲ್ಲಿ ಮಾತಾಡಿದರೆ ಸಂಸದ ಅನಂತಕುಮಾರ ಹೆಗಡೆ ಎಲ್ಲಿ ಸಿಗುತ್ತಾರೆ ಅಲ್ಲಿ ಹಿಡಿದು ಹೊಡೆಯಲಾಗುವುದು ಎಂದು ಕಾಂಗ್ರೆಸ್‌ ಮಾಜಿ ಶಾಸಕ ಎಸ್.ರಾಮಪ್ಪವಾರ್ನಿಂಗ್‌ ‌ಮಾಡಿದ್ದಾರೆ. ಜಿಲ್ಲೆಯ ಹರಿಹರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಆರೋಗ್ಯ ಸರಿಯಿಲ್ಲ ಅಂತಾ ಹೆಗಡೆ ಮನೆಯಲ್ಲಿ‌ ಮಲಗಿದ್ದರು. ಚುನಾವಣೆ ಹಿನ್ನೆಲೆ ಕೋಮು‌ಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಬಿಜೆಪಿಯ ಹಲವರು ಜೈಲಿಗೆ ಹೋಗಿದ್ದಾರೆ, ಅವರ ಬಗ್ಗೆ …

Read More »

ಲೋಕಸಮರಕ್ಕೆ ʻಕೈʼ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕು

ಬೆಂಗಳೂರು: ಲೋಕಸಭಾ(Loka Saba) ಚುನಾವಣೆಗೆ ಕಾಂಗ್ರೆಸ್‌ನಲ್ಲಿ(INC Karnataka) ತಯಾರಿ ಆರಂಭಗೊಂಡಿದ್ದು, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಕೆಪಿಸಿಸಿ(KPCC) ಚುನಾವಣಾ ಸಮಿತಿ ಸಭೆ ನಡೆಸಲು ಕೈ ನಾಯಕರು ತಯಾರಿ ಮಾಡಿಕೊಂಡಿದ್ದಾರೆ.   ಜ. 19ರಂದು ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ಆಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಹರೀಶ್ ಚೌಧರಿ, ಸಿಎಂ ಸಿದ್ದರಾಮಯ್ಯ , ಡಿಸಿಎಂ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲೂಕಿನ ಗುಜನಟ್ಟಿ ಗ್ರಾಮದಲ್ಲಿ ಶ್ರೀ ನಿಂಗಮ್ಮಾ ದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …

Read More »

ಬೆಳಗಾವಿಯಲ್ಲಿ ಮಹಾರಾಷ್ಟ್ರ ಆರೋಗ್ಯ ವಿಮೆ‌ ಜಾರಿ: ಕೆಎಲ್‌ಇ, ಅರಿಹಂತ ಆಸ್ಪತ್ರೆಗೆ ನೋಟಿಸ್

ಬೆಳಗಾವಿ, ಜನವರಿ 12: ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆ‌ ಜಾರಿ‌ (Health Insurance) ವಿಚಾರವಾಗಿ ಬೆಳಗಾವಿಯ ಕೆಎಲ್‌ಇ ಹಾಗೂ ಅರಿಹಂತ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ. ಮಹಾರಾಷ್ಟ್ರ (Maharashtra) ಆರೋಗ್ಯ ‌ವಿಮೆಯನ್ನು ಆರೋಗ್ಯ ಇಲಾಖೆ ಗಮನಕ್ಕೆ ತರದೇ ಅನುಷ್ಠಾನಗೊಳಿಸಿದ್ದಕ್ಕಾಗಿ ಡಿಎಚ್‌ಓ‌ ಡಾ.‌ ಮಹೇಶ್ ಕೋಣಿ ನೋಟಿಸ್ ಜಾರಿ ಮಾಡಿದ್ದಾರೆ. ಯಾವ ಕಾನೂನಿಡಿ ಮಹಾರಾಷ್ಟ್ರ ಆರೋಗ್ಯ ವಿಮೆಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಂಡಿದ್ದೀರಿ? ಅದರಡಿ ಇಲ್ಲಿಯ ವರೆಗೆ ‌ಚಿಕಿತ್ಸೆ ಪಡೆದವರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿ ರೋಗಿಗಳ ವಿವಿರ …

Read More »

ಮಗನನ್ನು ಹತ್ಯೆಗೈದ ತಾಯಿ ಸುಚನಾ ಸೇಠ್​ಳ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಟ್ಯಾಕ್ಸಿ ಡ್ರೈವರ್

ಬೆಳಗಾವಿ, ಜನವರಿ 12: ಬೆಂಗಳೂರಿನಲ್ಲಿ ಖಾಸಗಿ ಕಂಪನಿಯ ಸಿಇಒ ಆಗಿದ್ದ ಸುಚನಾ(Suchana Seth)ತನ್ನ ನಾಲ್ಕು ವರ್ಷದ ಮಗನನ್ನೇ ಕೊಂದ ಆರೋಪದಲ್ಲಿ ಗೋವಾ ಪೊಲೀಸರ ವಶವಾಗಿದ್ದಾಳೆ. ಸದ್ಯ ಈ ಕೇಸ್​ಗೆ ಸಂಬಂಧಪಟ್ಟಂತೆ ಟ್ಯಾಕ್ಸಿ ಡ್ರೈವರ್ ರಾಯ್ ಜೋಹಾನ್ ಡಿಸೋಜ​ ಇಂಚಿಂಚೂ ಮಾಹಿತಿ ಬಿಚ್ಚಿಟ್ಟಾರೆ. ಮಗನ ಶವದ ಜತೆಗೆ ಟ್ಯಾಕ್ಸಿಯಲ್ಲಿ ಸುಚನಾ ಸೇಠ್ ಬೆಂಗಳೂರಿಗೆ ಹೊರಟ್ಟಿದ್ದಳು. ವಾಹನ ಚಾಲನೆ ವೇಳೆ ಪೊಲೀಸರು ನನಗೆ ಕರೆ ಮಾಡಿ ಮಾಹಿತಿ ಹೇಳಿದ್ದರು. ಪೊಲೀಸರ ಪೋನ್ ಬಂದ ಬಳಿಕ …

Read More »

ಕರ್ನಾಟಕದಿಂದ ಲೋಕಸಭಾ ಅಖಾಡಕ್ಕೆ ನಿರ್ಮಲಾ ಸೀತಾರಾಮನ್‌, ಜೈ ಶಂಕರ್‌?

ಬೆಂಗಳೂರು : ಲೋಕಸಭೆ(loka sabha eleaction) ಚುನಾವಣೆಗೆ ಸಿದ್ದತೆ ಜೋರಾಗಿ ನಡೆಯುತ್ತಿದ್ದು ಕ್ಷೇತ್ರ ಹುಡುಕಾಟ ಕೂಡ ಆರಂಭವಾಗಿದೆ. ಕರ್ನಾಟಕದಿಂದ ರಾಹುಲ್‌ ಗಾಂಧಿ(Rahul gandhi) ಲೋಕಸಭೆ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಬಿಜೆಪಿಯಿಂದ ಇಬ್ಬರು ಕೇಂದ್ರ ನಾಯಕರು ಕರ್ನಾಟಕದಲ್ಲಿ ಕ್ಷೇತ್ರ ಹುಡುಕುತ್ತಿದ್ದಾರೆ ಎನ್ನಲಾಗಿದೆ.   ಈಗಾಗಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಸಚಿವರನ್ನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚನೆ ನೀಡಲಿದೆ ಎಂಬ ಮಾತು ಕೇಳಿ ಬಂದಿದ್ದು ಕರ್ನಾಟಕದ ಬೆಂಗಳೂರು ದಕ್ಷಿಣ, ದಕ್ಷಿಣ …

Read More »

ಯುವನಿಧಿ ಹಣದಿಂದ ಯುವಕರಿಗೆ ಪೆಟ್ರೋಲ್‌ಗೆ 100, ಕಾಫಿಗೆ 50 ರೂ. ಸಹಾಯವಾಗುತ್ತೆ: ನಲಪಾಡ್‌

ಉದ್ಯೋಗ (Job) ಹುಡುಕಲು ಬೈಕ್‌ನಲ್ಲಿ ಹೋಗುವ ಯುವಕರಿಗೆ ಪೆಟ್ರೋಲ್‌ಗೆ 100 ರೂ, ಕಾಫಿಗೆ 50 ರೂ. ಬೇಕಾಗುತ್ತದೆ. ಇದಕ್ಕೆಲ್ಲಾ ಯುವ ನಿಧಿ ಹಣ ಉಪಯೋಗಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ (Mohammed Nalapad) ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗ ಡಿಪ್ಲೋಮಾ ಹಾಗೂ ಪದವೀಧರರಿಗೆ ಉದ್ಯೋಗಭತ್ಯೆ ನೀಡುವ ಯುವ ನಿಧಿ ಯೋಜನೆಗೆ (Yuva Nidhi Scheme) ಇಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಗಿದೆ. ಡಿಪ್ಲೋಮಾ ಆದ ನಿರುದ್ಯೋಗಿ ಯುವಕರಿಗೆ …

Read More »