ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಯವಾದ ಮಹಿಳೆಯನ್ನು ನಂಬಿದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಹಿಳೆಯೊಬ್ಬರು 11 ಲಕ್ಷಕ್ಕೂ ಹೆಚ್ಚು ಮೊತ್ತ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ಮಿಯಾರಿನ ಕುಂಟಿಬೈಲಿನ 38 ವರ್ಷದ ನಿವಾಸಿಯೊಬ್ಬರಿಗೆ ಫೇಸ್ ಬುಕ್ ಮೂಲಕ ಮಾರ್ಕ್ ಸೀಮಾ ಎಂಬವರು ಪರಿಚಯವಾಗಿದ್ದರು. ಗೆಳೆತನದಲ್ಲಿ ಅವರು ತಮ್ಮ ವಿಳಾಸವನ್ನು ನೀಡಿದ್ದರು. ಅವರ ನಂಬರಿನಿಂದ ಸುನಿತಾ ಕುಮಾರಿ ಎಂಬವರು ಮಹಿಳೆಗೆ ಲಂಡನ್ ನಿಂದ ಚಿನ್ನದ …
Read More »Yearly Archives: 2024
ಬೆಳಗಾವಿಯಲ್ಲಿ ನಡೆದಿದ್ದು ಬಿಜೆಪಿಯ ಗೌಪ್ಯ ಸಭೆಯಲ್ಲ: ಅರವಿಂದ್ ಬೆಲ್ಲದ್
ಧಾರವಾಡ: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ ಹಾಗೂ ಸಿದ್ದೇಶ್ವರ ಅವರು ಗೌಪ್ಯವಾಗಿ ಸಭೆ ಮಾಡಿಲ್ಲ. ಬದಲಾಗಿ ಬಹಿರಂಗವಾಗಿಯೇ ಮಾಡಿದ್ದಾರೆ. ಅದೇನು ಗೌಪ್ಯ ಸಭೆಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ವಿಚಾರದಲ್ಲಿ ಕೆಲವೊಂದಿಷ್ಟು ವಿಚಾರಗಳನ್ನು ಪಕ್ಷದೊಳಗೆ ಚರ್ಚೆ ಮಾಡಬೇಕಿದೆ. ಪಕ್ಷದೊಳಗೆ ಕುಳಿತು ಎಲ್ಲರೂ ಮಾತನಾಡುವ ಅವಶ್ಯಕತೆಯಿದೆ. ಅದನ್ನು ಮಾಧ್ಯಮಗಳ ಮುಂದೆ ಮಾತನಾಡುವುದು ಸರಿಯಲ್ಲ …
Read More »‘ಚಿಲ್ಲರೆ’ ವಿಚಾರಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಕಂಡಕ್ಟರ್
ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. 5 ರೂ ಚಿಲ್ಲರೆ ಕೊಡುವ ವಿಚಾರಕ್ಕೆ ಕಂಡಕ್ಟರ್ ಅಭಿನವ್ ರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗಸ್ಟ್ 6 ರಂದು ಅಭಿನವ್ ರಾಜ್ ಮೇಲೆ ಹಲ್ಲೆ ನಡೆದಿತ್ತು, ನಂತರ ಅಭಿನವ್ ಬಿಎಂಟಿಸಿಗೆ …
Read More »ತುಂಗಭದ್ರಾ ಜಲಾಶಯ ಅವಘಡ | ಹೆಕ್ಟರ್‌ಗೆ ₹ 50 ಸಾವಿರ ಪರಿಹಾರ ನೀಡಿ: ವಿಜಯೇಂದ್ರ
(ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಇದರಿಂದ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಇದಕ್ಕೆ ಪರಿಹಾರವಾಗಿ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು. ಸೋಮವಾರ ಕೊಚ್ಚಿ ಹೋದ ಗೇಟ್ ಸ್ಥಳ ಪರಿಶೀಲಿಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಜಲಾಶಯದಲ್ಲಿ ಆದ ಲೋಪದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರವೇ ಹೊತ್ತುಕೊಳ್ಳಬೇಕು. ರೈತರಿಗೆ …
Read More »ಸ್ಥಾನಕ್ಕೆ ಕುತ್ತು ಬಂದಿದ್ದರಿಂದ ಜಾತಿಯ ಲೇಪನ: ಜೋಶಿ ಟೀಕೆ
ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಹೋಗುತ್ತದೆ ಎಂಬುದು ಗೊತ್ತಾದ ನಂತರ ಅದಕ್ಕೆ ಜಾತಿಯ ಲೇಪನ ಮಾಡುತ್ತಿದ್ಧಾರೆ’ ಎಂದು ಕೇಂದ್ರ ನಾಗರಿಕ ಸರಬರಾಜು ಮತ್ತು ಆಹಾರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ನಾಯಕನನ್ನು ತೆಗೆದು ಬೇರೆಯವರನ್ನು ಸಿ.ಎಂ ಮಾಡುವಂತೆ ನಾವು ಹೇಳಿಲ್ಲ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾಜೀನಾಮೆ ಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ. ಹಿಂದುಳಿದ ವರ್ಗದ ಎಸ್.ಬಂಗಾರಪ್ಪ ಅವರನ್ನು …
Read More »ಸತತ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿ
ನವಲಗುಂದ: ಈರುಳ್ಳಿ ಬಿತ್ತಿದ ರೈತರ ಮೊಗದಲ್ಲಿ ಈ ವರ್ಷ ಮಂದಹಾಸ ಮೂಡಿತ್ತು. ಬೆಳೆ ಚನ್ನಾಗಿ ಬರುತ್ತಿದೆ ಎಂದು ಯೋಜಿಸುತ್ತಿದ್ದರು. ಆ ವೇಳೆಗೆ ಮಳೆ ಸುರಿದ ಪರಿಣಾಮ ಈರುಳ್ಳಿ ಸಂಪೂರ್ಣವಾಗಿ ನೀರುಪಾಲಾಗಿದೆ. ಈರುಳ್ಳಿ ಬೆಳಿದಿದ್ದ ರೈತರು ಕಂಗಾಲಾಗಿದ್ದಾರೆ. ಕಳೆದ ಗುರುವಾರ ಸುರಿದ ಮಳೆಗೆ ತಾಲ್ಲೂಕಿನ ಯಮನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಾರಗೊಪ್ಪ ಹದ್ದಿನಲ್ಲಿರುವ ರೈತನ ಹೊಲದ ಈರುಳ್ಳಿ ಬೆಳೆ ಹೊಲದಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಬೆಳೆಹಾನಿಗಿದೆ ಬಿತ್ತಿದ ದುಬಾರಿ ಬೀಜ, …
Read More »ಜಿಲ್ಲೆಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಮಾಣ ಏರಿಕೆ
ಹುಬ್ಬಳ್ಳಿ: ರಾಜ್ಯದಲ್ಲಿ ಕಳೆದ ವರ್ಷ ದಾಖಲಾದ ಒಟ್ಟೂ ಕ್ಯಾನ್ಸರ್ ಪ್ರಕರಣಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಪ್ರಕರಣ ಶೇ 5.9 ರಷ್ಟಿದೆ ಎಂಬುದು ಕಿದ್ವಾಯಿ ಸ್ವಾರಕ ಗಂಥಿ ಸಂಸ್ಥೆಯ ಮಾಹಿತಿ. ಅಂತೆಯೇ ಧಾರವಾಡ ಜಿಲ್ಲೆಯಲ್ಲೂ ಶ್ವಾಸಕೋಶ ಕ್ಯಾನ್ಸರ್ ಪ್ರಕರಣಗಳು ಏರುಗತಿಯಲ್ಲಿ ಸಾಗಿದೆ ಎಂಬುದನ್ನು ಕಿಮ್ಸ್‌ನ ಕ್ಯಾನ್ಸರ್ ಚಿಕಿತ್ಸಾ ವಿಭಾಗ ದೃಢೀಕರಿಸಿದೆ. 10 ವರ್ಷಗಳಲ್ಲಿ ಕಿಮ್ಸ್‌ನಲ್ಲಿ ದಾಖಲಾದ ಶ್ವಾಸಕೋಶ ಕ್ಯಾನ್ಸರ್ ರೋಗಿಗಳ ಅಂಕಿ-ಅಂಶ ಗಮನಿಸಿದರೆ, ಕೋವಿಡ್ ಅವಧಿಯಲ್ಲಿ ಹೆಚ್ಚು ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಾವಿನ …
Read More »ವಿದ್ಯಾರ್ಥಿಗಳ ಬದುಕಿಗೆ ‘ನಿರ್ಮಾಣ’ ಆಸರೆ
ಚಿಕ್ಕೋಡಿ: ತಾಲ್ಲೂಕಿನ ಕೇರೂರು ಗ್ರಾಮದಲ್ಲಿ 15-20 ಜನ ಯುವಕ-ಯುವತಿಯರ ಗುಂಪು ಸೇರಿ ಸ್ಥಾಪಿಸಿದ ಉಚಿತ ಗ್ರಂಥಾಲಯ ಹಲವು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಗೊಳ್ಳಲು ಸಹಕಾರಿಯಾಗಿದೆ. ಕಳೆದ 6 ವರ್ಷಗಳ ಹಿಂದೆ ಸ್ಥಾಪಿಸಿದ ಉಚಿತ ಗ್ರಂಥಾಲಯ ಸೇವೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗುತ್ತಿದೆ. ಪ್ರತಿ ದಿನವೂ ಗ್ರಂಥಾಲಯದಲ್ಲಿ ಓದಬಹುದು. ಮನೆಗೆ ಪುಸ್ತಕಗಳನ್ನು ಎರವಲು ಪಡೆದು ಓದಬಹುದಾಗಿದೆ. ಆದರೆ ಎಲ್ಲವೂ ಇಲ್ಲಿ ಉಚಿತ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಬೇಕೆಂಬ ಕಾರಣದಿಂದ ಸ್ಪರ್ಧಾತ್ಮಕ …
Read More »160ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾಳಜಿ ಕೇಂದ್ರಗಳಲ್ಲಿ ಆಶ್ರಯ
ಗೋಕಾಕ: ಇಲ್ಲಿನ ಹಳೆ ದನಗಳ ಪೇಟೆ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಡೋರ ಗಲ್ಲಿ ಮುಂತಾದ ಪ್ರದೇಶಗಳ ಪ್ರತಿ ವರ್ಷ ಘಟಪ್ರಭೆ ಪ್ರವಾಹದಲ್ಲಿ ಮುಳುಗುತ್ತವೆ. ಮಹರ್ಷಿ ಭಗಿರಥ ಸರ್ಕಲ್ ಅಂತೂ ಮೊದಲ ಮಳೆಗೇ ಜಲಾವೃತವಾಗುತ್ತದೆ. ಮೂರು ತಲೆಮಾರುಗಳಿಂದಲೂ ಜನ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ನೆರೆ ಬಂದಾಗ ಜನಜೀವನ ಮಾತ್ರ ಅಸ್ತವ್ಯಸ್ತ ಆಗುವುದಿಲ್ಲ. ಇಲ್ಲಿನ ಶಾಲೆ- ಕಾಲೇಜು ಮಕ್ಕಳ ಶಿಕ್ಷಣದ ಮೇಲೂ …
Read More »ತೋರಣಹಳ್ಳಿ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ
ಚಿಕ್ಕೋಡಿ: ಜನರ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅವಶ್ಯಕತೆ ಇದೆ. ಸಹಕಾರಿ ಧುರೀಣ, ಯುವ ಮುಖಂಡ ಅಮಿತ್ ಕೋರೆ ನೇತೃತ್ವದ ಜನಶಕ್ತಿ ಫೌಂಡೇಶನ್ ವತಿಯಿಂದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರನಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಶುದ್ಧ ಕುಡಿಯುವ ನೀರು ಘಟಕವನ್ನು ನಿರ್ಮಾಣಿಸಲಾಗಿದೆ ಎಂದು ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು ತಾಲೂಕಿನ ತೋರಣಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಜನಶಕ್ತಿ ಫೌಂಡೇಶನ್ ವತಿಯಿಂದ …
Read More »