ಬೆಳಗಾವಿ: “ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಸರ್ಕಾರದ ದೌರ್ಜನ್ಯ ನೀತಿಯ ವಿರುದ್ಧ ಜನರನ್ನು ಜಾಗೃತಿಗೊಳಿಸಲು, ರಾಜ್ಯದ ಪ್ರತೀ ಗ್ರಾಮಗಳಿಗೂ ಭೇಟಿ ನೀಡುವ ಉದ್ದೇಶದಿಂದ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಜ.14ರಂದು ಕೂಡಲಸಂಗಮದಿಂದ ಆರಂಭಿಸಲಾಗುತ್ತದೆ” ಎಂದು ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಂವಾದ, ಸಂಧಾನ, ಸಂಘರ್ಷ …
Read More »Daily Archives: ಡಿಸೆಂಬರ್ 24, 2024
ಸಿ ಟಿ ರವಿ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ: ಹೆಚ್ಚು ವ್ಯಾಖ್ಯಾನ ಸರಿಯಲ್ಲ- ಡಾ. ಜಿ ಪರಮೇಶ್ವರ್
ಹುಬ್ಬಳ್ಳಿ: ಸಿ ಟಿ ರವಿ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಲ್ಲ. ತನಿಖೆ ನಡೆಯುವಾಗ ನಾವು ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ ಟಿ ರವಿ ಪ್ರಕರಣ ಮುಗಿದ ಅಧ್ಯಾಯ ಎಂಬ ಸ್ಪೀಕರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಸ್ಪೀಕರ್ ಅವರು ತಮ್ಮ ಕೆಲಸ ತಾವು …
Read More »ಮಾಜಿ ಸಂಸದರ ಸಹೋದರಿಯೆಂದು ನಂಬಿಸಿ ಚಿನ್ನದಂಗಡಿ ಮಾಲೀಕರಿಗೆ ವಂಚನೆ ಆರೋಪ: ನಟ ಸೇರಿ ಮೂವರ ವಿರುದ್ಧ ಪ್ರಕರಣ
ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ನಂಬಿಸಿ ಚಿನ್ನದ ವ್ಯಾಪಾರಿಯೊಬ್ಬರಿಗೆ 9.82 ಕೋಟಿ ರೂ. ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಾದ ವನಿತಾ ಎಸ್.ಐತಾಳ್ ಅವರು ನೀಡಿರುವ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ.ಎನ್ ಹಾಗೂ ನಟ ಧರ್ಮೇಂದ್ರ ಬಿ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪವೇನು?: ತಾನು ಮಾಜಿ ಸಂಸದರ ಸಹೋದರಿ, ಅನೇಕ ರಾಜಕೀಯ ನಾಯಕರ ಪರಿಚಯವಿದೆ …
Read More »ಮೊಪೆಡ್ನಲ್ಲಿ ಹೊರಟ್ಟಿದ್ದ ದಂಪತಿಗಳ ಮೇಲೆ ಕ್ಯಾಂಟರ್ ಹರಿದು, ವಯೋವೃದ್ಧ ದಂಪತಿ ಸ್ಥಳದಲ್ಲೇ ಸಾವ
ದೊಡ್ಡಬಳ್ಳಾಪುರ: ದೇವಸ್ಥಾನಕ್ಕೆಂದು ಟಿವಿಎಸ್ ಮೊಪೆಡ್ನಲ್ಲಿ ಹೊರಟ್ಟಿದ್ದ ದಂಪತಿಗಳ ಮೇಲೆ ಕ್ಯಾಂಟರ್ ಹರಿದು, ವಯೋವೃದ್ಧ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲಗೇಟ್ ಬಳಿ ಸೋಮವಾರ ರಾತ್ರಿ ನಡೆದಿದೆ. ರಾಮದೇನಹಳ್ಳಿಯ ಅಂದಾನಪ್ಪ (60), ನಾಗರತ್ನ(58) ಮೃತ ದುರ್ದೈವಿಗಳು. ದಂಪತಿ ಪ್ರಯಾಣಿಸುತ್ತಿದ್ದ ಮೊಪೆಡ್ಗೆ ಡಿಕ್ಕಿ ಹೊಡೆದ ಕ್ಯಾಂಟರ್, ಅಪಘಾತದ ಬಳಿಕ ಚಾಲಕ ಕ್ಯಾಂಟರ್ ಅನ್ನು ಸ್ಥಳದಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ನೆಲಮಂಗಲ ಸಾರ್ವಜನಿಕರ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ …
Read More »