Breaking News

Daily Archives: ಡಿಸೆಂಬರ್ 19, 2024

ಅಂಬೇಡ್ಕರ್​ ಕುರಿತು ಶಾ ಹೇಳಿಕೆ; ಸಂಸತ್​ ಭವನದಲ್ಲಿ ಕಾಂಗ್ರೆಸ್​ – ಬಿಜೆಪಿ ಪರಸ್ಪರ ಪ್ರತಿಭಟನೆ

ನವದೆಹಲಿ: ಅಂಬೇಡ್ಕರ್​ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಂಬೇಡ್ಕರ್​ ಹೇಳಿಕೆ ವಿರೋಧಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಇಂಡಿಯಾ ಒಕ್ಕೂಟದ ಸದಸ್ಯರು, ನೀಲಿ ಬಟ್ಟೆ ಧರಿಸಿ ಸಂಸತ್​ ಭವನದ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಸಂಸತ್ತಿನ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯಿಂದ ಸಂಸತ್ ಭವನದವರೆಗೆ ಅಂಬೇಡ್ಕರ್​ ಭಾವಚಿತ್ರ ಹಿಡಿದು ‘ಜೈ ಭೀಮ್’ ಘೋಷಣೆ ಕೂಗುತ್ತಾ ಮೆರವಣಿಗೆ ಕೈಗೊಂಡರು. …

Read More »

ಎಲ್ಲರನ್ನೂ ಮಿಸ್​ ಮಾಡಿಕೊಳ್ಳುತ್ತೇನೆ, ಜ.26ರಂದು ಸಿಗೋಣ’;ಶಿವಣ್ಣ

ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಚಿಕಿತ್ಸೆ ಹಿನ್ನೆಲೆ, ಕಳೆದ ರಾತ್ರಿ ಅಮೆರಿಕ ಫ್ಲೈಟ್​ ಹತ್ತಿದರು. ವೈದ್ಯಕೀಯ ಪ್ರಕ್ರಿಯೆ ನಿಟ್ಟಿನಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನ ಗಳಿಸಿರುವ ಶಿವಣ್ಣ ಫ್ಲೋರಿಡಾದ ಮಿಯಾಮಿಯಲ್ಲಿ ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೊರಡುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಜನಪ್ರಿಯ ನಟ, ”ಇಂಥ ಸಂದರ್ಭ ನಾವೇ ಕೊಂಚ ಭಾವುಕರಾಗುತ್ತೇವೆ. ಆದ್ರೆ ಹೆದರಬೇಡಿ. ಪ್ಯಾರಾಮೀಟರ್ಸ್​ ಎಲ್ಲವೂ ಚೆನ್ನಾಗಿದೆ. ಚೆಕ್​ …

Read More »

ಬೋಳು ತಲೆಯಲ್ಲಿ ಕೂದಲು ತರಿಸುವ ‘ವಿಶೇಷ ತೈಲ’ಕ್ಕಾಗಿ ಮುಗಿಬಿದ್ದ ಜನರು: ಮುಂದೇನಾಯ್ತು ಗೊತ್ತಾ?

2024ನೇ ವರ್ಷಕ್ಕೆ ವಿದಾಯ ಹೇಳುವುದರೊಂದಿಗೆ 2025ರ ಹೊಸ ವರ್ಷಕ್ಕೆ ಇಡೀ ವಿಶ್ವವೇ ಸ್ವಾಗತಿಸಲು ಸಜ್ಜಾಗಿದೆ. 2024ರ ಕೊನೆಯ ದಿನಗಳು ಸಮೀಪಿಸುತ್ತಿರುವ ಈ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಘಟನೆಗಳು ನಡೆದವು ಎಂಬುದನ್ನು ನೋಡೋಣ. 2024ರಲ್ಲಿ ಜಗತ್ತು ಹಲವು ಗಂಭೀರ ಕಾಯಿಲೆಗಳನ್ನು ಎದುರಿಸಿದೆ. ಈ ರೋಗಗಳು ಲಕ್ಷಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ಜಾಗತಿಕ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಒತ್ತಡವನ್ನು ಉಂಟುಮಾಡಿದ್ದವು. 2024 ವರ್ಷದಲ್ಲಿ ಹೆಚ್ಚು ಭಯದ …

Read More »

15 ತಾಸು ಕಲಾಪ ನಡೆಸಿದ ಸ್ಪೀಕರ್ ಖಾದರ್

ಬೆಳಗಾವಿ: ಸ್ಪೀಕರ್ ಯು.ಟಿ.ಖಾದರ್ ಬುಧವಾರವೂ ಎರಡನೇ ಬಾರಿಗೆ ಮಧ್ಯರಾತ್ರಿವರೆಗೆ ಕಲಾಪ ನಡೆಸಿದರು. ಆ ಮೂಲಕ 15 ತಾಸು ಕಲಾಪ ನಡೆಸಿದ್ದಾರೆ. ಬುಧವಾರ ಬೆಳಗ್ಗೆ 9.40 ರಿಂದ ಮಧ್ಯರಾತ್ರಿ 12.40ರ ವರೆಗೆ ಕಲಾಪ ನಡೆಯಿತು. ಸತತ 15 ಗಂಟೆಗಳ ಕಾಲ ನಿರಂತರವಾಗಿ ಸದನ ನಡೆಸಿದ ಸ್ಪೀಕರ್ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಮೊನ್ನೆ ಸೋಮವಾರ 14 ಗಂಟೆ ಕಾಲ ಕಲಾಪ ನಡೆಸಿದ್ದರು. ಇದೀಗ 15 ಗಂಟೆ ಕಾಲ ಸದನ ನಡೆಸಿ ದಾಖಲೆ ಮಾಡಿದ್ದಾರೆ.‌ …

Read More »

ಅಂಬೇಡ್ಕರ್​ ಬಗ್ಗೆ ಅಮಿತ್ ಶಾ ಹೇಳಿಕೆ: ರಾಜ್ಯ ಕಾಂಗ್ರೆಸ್​ ನಾಯಕರ ಆಕ್ರೋಶ

ಬೆಳಗಾವಿ: “ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ನೀಡಿದ ಹೇಳಿಕೆ ಖಂಡನೀಯ. ಇಡೀ ವಿಶ್ವ ಅಂಬೇಡ್ಕರ್ ಬಗ್ಗೆ ಪ್ರಶಂಸೆಯಿಂದ ಮಾತನಾಡುತ್ತದೆ. ಪ್ರಜಾಪ್ರಭುತ್ವಕ್ಕೆ ಸಂವಿಧಾನ ಕೊಡುವ ಮೂಲಕ ದೇಶವನ್ನು ಒಗ್ಗೂಡಿಸಿದವರು ಅಂಬೇಡ್ಕರ್​. ಅವರ ಬಗ್ಗೆ ಲಘುವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಕೇಳಬೇಕು. ಹಾಗೂ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾದ್ಯಮಗಳ ಜೊತೆ …

Read More »

ಹೆಬ್ಬಾಳ್ಕರ್ ಬಗ್ಗೆ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಆರೋಪ: ಪರಿಷತ್​ನಲ್ಲಿ‌ ಗದ್ದಲ, ಸಭಾಪತಿಗೆ ದೂರು ಕೊಡಲು ಮುಂದಾದ ಕೈ ಸದಸ್ಯರು

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಅವಹೇನಕಾರಿ ಹೇಳಿಕೆ ಖಂಡಿಸಿ ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಮಾತಿನ ಭರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಸದಸ್ಯ ಸಿ.ಟಿ. ರವಿ ಅವರ ಆಕ್ಷೇಪಾರ್ಹ ಪದ ಬಳಕೆ ಕೈ ಸದಸ್ಯರ ಸಿಟ್ಟಿಗೆ ಕಾರಣವಾಯಿತು. ಗದ್ದಲ ತೀವ್ರವಾಗುತ್ತಿದ್ದಂತೆ ಸದನವನ್ನು ಸಭಾಪತಿ ಕೆಲಕಾಲ ಮುಂದೂಡಿದರು. ಬಳಿಕ ಆಡಳಿತ ಸದಸ್ಯರು ದೂರು ನೀಡಲು ಸಭಾಪತಿ …

Read More »

ಲೈವ್ ಬಂದು ಅಸಲಿ ವಿಚಾರ ಹೇಳಿದ ಗೋಲ್ಡ್ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಎಕ್ಸಿಟ್ ಆಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚೆ ನಡೆಯಿತು. ಆರಂಭದಲ್ಲಿ ಅವರ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅದು ಸುಳ್ಳು ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬಂದಿದ್ದೇ ಸಾಲಬಾಧೆ ವಿಚಾರ. ಅವರು ಸಾಲ ಮಾಡಿಕೊಂಡಿದ್ದಕ್ಕೆ ಹೊರ ಬಂದರು ಎಂದು ಹೇಳಲಾಯಿತು. ಈಗ ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​​ನಲ್ಲಿ ಬಂದ ಸುರೇಶ್ ಈ …

Read More »

ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌

ಡಿಸೆಂಬರ್ 19: ತುಮಕೂರಿನ ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ. ವಿದ್ಯುತ್‌ ಬಿಲ್‌ ಪಾವತಿಸುವಂತೆ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ) ನೋಟಿಸ್ ನೀಡಿದ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಕೆಐಎಡಿಬಿ ಮಂಡಳಿಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲವೇ? ಸಿದ್ದಗಂಗಾ ಮಠಕ್ಕೆ ವಿದ್ಯುತ್‌ ಬಿಲ್‌ ನೋಟಿಸ್‌ ಏಕೆ? ‘ತ್ರಿವಿಧ ದಾಸೋಹ’ದ ಮಠಕ್ಕೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರತಿಪಕ್ಷಗಳು ಕೂಡ ಈ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿವೆ. ಕೆಐಎಡಿಬಿಗೆ ಸಿದ್ದಲಿಂಗ …

Read More »

ಬಿಜೆಪಿ ಸಂಸದರು ತಳ್ಳಿದ್ದರಿಂದ ಮೊಣಕಾಲುಗಳಿಗೆ ಗಾಯವಾಗಿದೆ: ಖರ್ಗೆ

ಸಂಸತ್ತಿನ ಹೊರಗೆ ಕಾಂಗ್ರೆಸ್​ ಪ್ರತಿಭಟನೆ ವೇಳೆ ತನ್ನನ್ನು ಬಿಜೆಪಿ ಸಂಸದರು ತಳ್ಳಿ ಬೀಳಿಸಿದ್ದಾರೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಬಿಜೆಪಿ ಸಂಸದರು ನನ್ನನ್ನು ತಳ್ಳಿ ಗಾಯಗೊಳಿಸಿದ್ದಾರೆ, ಸಂಸದರೊಂದಿಗೆ ಸಂಸತ್​ನ ಮಕರ ದ್ವಾರವನ್ನು ತಲುಪಿದಾಗ ನನ್ನನ್ನು ಬಿಜೆಪಿ ಸಂಸದರು ತಳ್ಳಿದ್ದಾರೆ ನಾನು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದಿದ್ದೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೊಣಕಾಲುಗಳಿಗೆ ಗಾಯವಾಗಿದೆ , ಕಾಂಗ್ರೆಸ್ ಸಂಸದರು ಕುರ್ಚಿ ತಂದು ನನ್ನನ್ನು ಕೂರಿಸಿದರು. ಬಹಳ ಕಷ್ಟದಿಂದ ಮತ್ತು …

Read More »

ಚಿರತೆ ದಾಳಿಗೆ 22 ವರ್ಷದ ಯುವತಿ ಬಲಿ

ವೆಲ್ಲೂರು,ತಮಿಳುನಾಡು: ವೆಲ್ಲೂರು ಜಿಲ್ಲೆಯ ಗುಡಿಯಾತಂನ ದುರ್ಗಮ್ ಗ್ರಾಮದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ 22 ವರ್ಷದ ಯುವತಿಯೊಬ್ಬರು ಬುಧವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ವೆಲ್ಲೂರು ಜಿಲ್ಲಾಧಿಕಾರಿ ಸುಬ್ಬುಲಕ್ಷ್ಮಿ, ಚಿರತೆ ದಾಳಿಯಿಂದ ಅಂಜಲಿ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ, ಚಿರತೆ ಹಿಡಿಯಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು, ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನಸಾಮಾನ್ಯರು ಭಯಮುಕ್ತರಾಗಿ ಬದುಕಲು ವ್ಯವಸ್ಥೆ ಮಾಡಲಾಗುವುದು ಎಂದು ಅಭಯ ನೀಡಿದ್ದಾರೆ. ಘಟನೆಯ ಹಿನ್ನೆಲೆ: ವೆಲ್ಲೂರಿನ ಮೆಲ್ಮಾಯಿಲ್ ಪಂಚಾಯತ್ ವ್ಯಾಪ್ತಿಯ ದುರ್ಗಂ …

Read More »