ಬೆಂಗಳೂರು, ನವೆಂಬರ್ 02: ರಾಜ್ಯ ರಾಜಕಾರಣದಲ್ಲಿ ಆರೋಪ ಪ್ರತ್ಯಾರೋಪಗಳು ಮುಂದುವರಿದ ಭಾಗವಾಗಿ ಉಭಯ ಪಕ್ಷಗಳ ನಾಯಕರ ಚರ್ಚೆಗೆ ಆಹ್ವಾನ ನೀಡುತ್ತಿದ್ದಾರೆ. ಭ್ರಷ್ಟಾಚಾರ, ಹೇಳಿಕೆಗಳು, ಸುಳ್ಳು ಆರೋಪ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ನಮ್ಮ ಚಿಂತೆ ಬಿಡಿ, ಬಿಜೆಪಿ ನಾಯಕರ ಬಹಿರಂಗ ಹೇಳಿಕೆಗಳಿಗೆ ಮೊದಲು ಪ್ರತಿಕ್ರಿಯಿಸಿ ಎಂದಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿವೈ …
Read More »Monthly Archives: ನವೆಂಬರ್ 2024
ಬಿಜೆಪಿ ಅಧೋಗತಿಗೆ ತಳ್ಳಿದ್ದ ಸಾರಿಗೆ ನಿಗಮಗಳಿಗೆ ‘ಶಕ್ತಿ ಯೋಜನೆ’ ಶಕ್ತಿ ತುಂಬಿದೆ
ಬೆಂಗಳೂರು, ನವೆಂಬರ್ 02: ಶಕ್ತಿ ಯೋಜನೆ ಮರು ಪರಿಶೀಲಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಿದ್ದಂತೆ ರಾಜ್ಯಾದ್ಯಂತೆ ಶಕ್ತಿ ಯೋಜನೆ ಕಿಡಿ ಹೊತ್ತಿಕೊಂಡಿದೆ. ಆರೋಪ, ಪ್ರತ್ಯಾರೋಪಗಳ ಮಧ್ಯೆ ಸವಾಲೆಸೆಯುವುದು, ಬಹಿರಂಗ ಚರ್ಚೆಗೆ ಆಹ್ವಾನ ನಡೆದಿದೆ. ಈ ಮಧ್ಯೆ ಶಕ್ತಿ ಯೋಜನೆಗಳ ಬಗ್ಗೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ. ಟ್ವೀಟ್ ಮೂಲಕ ಕಿರಿ ಕಾರಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ಆರ್.ಅಶೋಕ್ ಅವರೆ …
Read More »ಶಬರಿಮಲೆ ಯಾತ್ರಾರ್ಥಿಗಳಿಗೆ ಉಚಿತ ವಿಮಾ ರಕ್ಷಣೆ
ಕೊಟ್ಟಾಯಂ: ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ಶಬರಿಮಲೆ (ಮಂಡಲಂ-ಮಕರವಿಳಕ್ಕು) ಯಾತ್ರೆಯ ಅವಧಿಯಲ್ಲಿ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಐದು ಲಕ್ಷ ರೂಪಾಯಿಗಳ ಉಚಿತ ವಿಮಾ ರಕ್ಷಣೆಯನ್ನು ಪಡೆಯಲಿದ್ದಾರೆ. ಈ ವರ್ಷ ಶಬರಿಮಲೆಗೆ ಬರುವ ಎಲ್ಲಾ ಯಾತ್ರಾರ್ಥಿಗಳಿಗೆ ದೇಗುಲವನ್ನು ನಿರ್ವಹಿಸುವ ಅಪೆಕ್ಸ್ ದೇವಸ್ಥಾನದ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ವಿಮಾ ಸೌಲಭ್ಯವನ್ನು ಒದಗಿಸಲಿದೆ ಎಂದು ರಾಜ್ಯ ದೇವಸ್ವಂ ಸಚಿವ ವಿ.ಎನ್. ವಾಸವನ್ ಹೇಳಿದ್ದಾರೆ. ಎಲ್ಲಾ ಯಾತ್ರಾರ್ಥಿಗಳಿಗೆ ಸುಗಮ ದರ್ಶನವಾಗಲು ಬೆಟ್ಟದ ದೇಗುಲದಲ್ಲಿ …
Read More »ಹಾಸನಾಂಬೆ ದೇಗುಲಕ್ಕೆ ಹರಿದು ಬಂತು ದಾಖಲೆಯ 9 ಕೋಟಿಗೂ ಅಧಿಕ ಆದಾಯ
ಹಾಸನ : ಹಾಸನದ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನ ಇಂದು ಅಂತ್ಯವಾಗಲಿದೆ. ಈ ವೇಳೆ ಕಳೆದ 11 ದಿನಗಳಲ್ಲಿ ದಾಖಲೆ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಹಾಸನಾಂಬೆ ದೇಗುಲಕ್ಕೆ 9 ಕೋಟಿಗೂ ಅಧಿಕ ಆದಾಯ ಬಂದಿದೆ. ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲು, ಕ್ಷಣಗಣನೆ ಶುರುವಾಗಿದೆ.ಈಗಾಗಲೇ ಭಕ್ತರಿಂದ ದೇವಾಲಯ ಆವರಣ ತುಂಬಿ ತುಳುಕುತ್ತಿದೆ.ಬೆಳಿಗ್ಗೆ 11.50ರ ನಂತರ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ವಿಶ್ವರೂಪದ ದರ್ಶನ ಬಳಿಕ …
Read More »ಲೋಕಾಯುಕ್ತದಲ್ಲಿ ಕೆಲಸ ಖಾಲಿ ಇದೆ, ವಿದ್ಯಾರ್ಹರೆ, ವೇತನ ವಿವರ
ಬೆಂಗಳೂರು, ನವೆಂಬರ್ 02: ಕರ್ನಾಟಕ ಲೋಕಾಯುಕ್ತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್-ಸಿ ವೃಂದದ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 30/10/2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/11/2024. ಗ್ರೂಪ್-ಸಿ ವೃಂದದ ಉಳಿಕೆ ಮೂಲ ವೃಂದದಲ್ಲಿ ಖಾಲಿಯಿರುವ 16 ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು …
Read More »ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಿಸುವಲ್ಲಿ ದೇಶದಲ್ಲೇ ದೆಹಲಿ-ಗೋವಾ ಫಸ್ಟ್ : ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಿಸುವಲ್ಲಿ ದೇಶದಲ್ಲೇ ದೆಹಲಿ-ಗೋವಾ ಫಸ್ಟ್ : ಕರ್ನಾಟಕಕ್ಕೆ ಎಷ್ಟನೇ ಸ್ಥಾನ ಗೊತ್ತಾ? ನವದೆಹಲಿ : ದೇಶದಾದ್ಯಂತ ಇರುವ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ 12 ವರ್ಷಗಳು ಕಳೆದಿವೆ. ಇದರ ಹೊರತಾಗಿಯೂ ಗೋವಾ, ದೆಹಲಿ, ಚಂಡೀಗಢ ಮತ್ತು ಪುದುಚೇರಿ ಮಾತ್ರ ಈ ಆದೇಶವನ್ನು ಸಂಪೂರ್ಣವಾಗಿ ಅನುಸರಿಸುತ್ತಿವೆ. ಈಶಾನ್ಯ ರಾಜ್ಯಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಈ ಆದೇಶವನ್ನು ಜಾರಿಗೊಳಿಸುವ …
Read More »ಸಾಲಿಗ್ರಾಮ | ಸಾರಿಗೆ ಬಸ್‌ನಲ್ಲಿ ‘ಕನ್ನಡ ತೇರಿನ’ ಕಂಪು
ಸಾಲಿಗ್ರಾಮ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೆ.ಆರ್. ನಗರ ಬಸ್ ಡಿಪೊ ಚಾಲಕ ನಾಗೇಶ್ ಮತ್ತು ನಿರ್ವಾಹಕ ಶಿವನಂಜು ಅವರು ಕೆಎಸ್‌ಆರ್‌ಟಿಸಿ ಬಸ್‌ಗೆ ‘ಕನ್ನಡ ತೇರು’ ಎಂದು ನಾಮಕರಣ ಮಾಡಿ 9 ವರ್ಷಗಳಿಂದ ಭಾಷಾಭಿಮಾನ ಮೆರೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರ ಭಾವಚಿತ್ರವನ್ನು ಬಸ್ ಕಿಟಕಿ ಗಾಜುಗಳ ಮೇಲೆ ಅಂಟಿಸಿದ್ದಾರೆ. ರಾಷ್ಟ್ರಕವಿಗಳ ಭಾವಚಿತ್ರಗಳ ಜೊತೆಯಲ್ಲಿ ಯಾವ ಕೃತಿಗೆ ಪ್ರಶಸ್ತಿ ಬಂದಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ‘ಕನ್ನಡದ ತೇರು’ ಇಲ್ಲಿನ ಬಸ್ ನಿಲ್ದಾಣಕ್ಕೆ ಶುಕ್ರವಾರ …
Read More »Waqf Board ಆಸ್ತಿ ವಿಚಾರ ಸದ್ಯ ಮುಗಿದು ಹೋದ ಅಧ್ಯಾಯ: ಗೃಹಸಚಿವ
ಬೆಂಗಳೂರು: ವಕ್ಫ್ ಮಂಡಳಿ (Waqf Board) ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ಕೊಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸ್ ವಾಪಸ್ ಪಡೆಯಲು ಸೂಚಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ (DR. G. Parameshwar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹಸಚಿವ ಪರಮೇಶ್ವರ (DR. G. Parameshwar), ವಕ್ಫ್ ಮಂಡಳಿ (waqf Board) ಆಸ್ತಿ ವಿಚಾರ ಸದ್ಯ ಮುಗಿದು ಹೋದ …
Read More »ಆರ್ಥಿಕ ಮುಗ್ಗಟ್ಟು ಮಧ್ಯೆಯೇ ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
ಬೆಳಗಾವಿ: ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿ ಒದ್ದಾಡುತ್ತಿರುವ ಮಹಾನಗರ ಪಾಲಿಕೆ ದುಂದು ವೆಚ್ಚ ಮಾಡುತ್ತಿದೆ. ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವ ವೇಳೆ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿರುವ ಬಿಲ್ 37 ಸಾವಿರ ರೂ. ಪಾವತಿಸಿರುವುದು ಎಲ್ಲರೂ ಹೌಹಾರುವಂತೆ ಮಾಡಿದೆ. ನಗರದಲ್ಲಿ ಹಮ್ಮಿಕೊಳ್ಳುವ ಉತ್ಸವ, ಕಾರ್ಯಕ್ರಮ, ಜಯಂತಿಗಳಿಗೆ ಹಣ ಪೋಲು ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದುಂದುವೆಚ್ಚ ಆಗಿರುವುದು ಕಂಡು ಬಂದಿದ್ದು, ಪಾಲಿಕೆ ಉತ್ತರಿಸಬೇಕಿದೆ. 2023ರ ಕರ್ನಾಟಕ ರಾಜ್ಯೋತ್ಸವದಲ್ಲಿ ಹೂವಿನ ಹಾರಕ್ಕೆ …
Read More »2024-29ನೇ ಸಾಲಿನ ಪ್ರವಾಸೋದ್ಯಮ ನೀತಿಗೆ ರಾಜ್ಯ ಸರ್ಕಾರ ಅನುಮೋದನೆ
ಉಡುಪಿ: ಪ್ರವಾಸೋದ್ಯಮ ನೀತಿ 2024-29ಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು 1,349 ಕೋಟಿ ರೂ ಬಿಡುಗಡೆ ಮಾಡಿದೆ ಉಡುಪಿ ಜಿಲ್ಲಾ ಉಸ್ತುವಾರಿಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ವರ್ಧಿತ ಸೇವೆಗಳು ಮತ್ತು ಸೌಲಭ್ಯಗಳ ಮೂಲಕ ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. ಕರ್ನಾಟಕದ ಹೂಡಿಕೆ …
Read More »