Breaking News

Monthly Archives: ನವೆಂಬರ್ 2024

ಚಾಲಕರಿಗೆ ತಲೆನೋವಾದ ‘ಪ್ಯಾನಿಕ್ ಬಟನ್’

ಕಲಬುರಗಿ: ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ಜಿಲ್ಲೆಯ ಸಾರ್ವಜನಿಕ ಸೇವಾ ವಾಹನಗಳ ಪೈಕಿ 197 ವಾಹನಗಳಿಗೆ ಮಾತ್ರವೇ ವೆಹಿಕಲ್ ಲೋಕೇಶನ್ ಟ್ರ್ಯಾಕಿಂಗ್ (ವಿಎಲ್‌ಟಿ) ಮತ್ತು ತುರ್ತು ಸಂದರ್ಭದ ಬಟನ್ (ಪ್ಯಾನಿಕ್ ಬಟನ್) ಉಪಕರಣ ಅಳವಡಿಕೆಯಾಗಿದೆ.   ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಿಗೆ ವಿಎಲ್‌ಟಿ ಡಿವೈಸ್ ಅಳವಡಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸೂಚಿಸಿದ್ದಾರೆ. ಅದರಂತೆ ಶಾಲಾ ವಾಹನ, …

Read More »

ಕರ್ನಾಟಕ ವಿಧಾನಸಭೆ ಉಪಚುನಾವಣೆ : ಬೆಳಗ್ಗೆ11.30 ರವರೆಗೆ 3 ಕ್ಷೇತ್ರಗಳ `ಮತದಾನ’ದ ಶೇಕಡವಾರು ವಿವರ ಹೀಗಿದೆ!

ಕರ್ನಾಟಕ ವಿಧಾನಸಭೆ ಉಪಚುನಾವಣೆ : ಬೆಳಗ್ಗೆ11.30 ರವರೆಗೆ 3 ಕ್ಷೇತ್ರಗಳ `ಮತದಾನ’ದ ಶೇಕಡವಾರು ವಿವರ ಹೀಗಿದೆ! ಬೆಂಗಳೂರು : ಇಂದು ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮೂರು ಕ್ಷೇತ್ರಗಳಲ್ಲಿ ಈವರೆಗೆ 26.33 ರಷ್ಟು ಮತದಾನವಾಗಿದ್ದು, ಶಿಗ್ಗಾಂವಿ, ಶೇ.27.02ರಷ್ಟು ಮತದಾನ, ಸಂಡೂರು: ಬೆಳಿಗ್ಗೆ 11.30 ಗಂಟೆಯವರೆಗೆ ಶೇ.26.01ರಷ್ಟು ಮತದಾನ, ಚೆನ್ನಪಟ್ಟಣ: ಬೆಳಿಗ್ಗೆ 11.30 ಗಂಟೆವರೆಗೆ ಶೇ.25.96ರಷ್ಟು ಮತದಾನವಾಗಿದೆ.   …

Read More »

ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು “ಕರಿಯ’ ಎಂದು ಕರೆದಿದ್ದ ವಸತಿ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರು ರಾಜ್ಯದ ಹಲವೆಡೆ ಮಂಗಳವಾರ ಪ್ರತಿಭಟನೆ ನಡೆಸಿದರು.   ಮೈಸೂರಿನಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್‌ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್‌ ಸರಕಾರ, ಮುಖ್ಯಮಂತ್ರಿ, ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. …

Read More »

3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

ಬೆಂಗಳೂರು: ರಾಜ್ಯದ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಒಂದಡೆಯಾಗಿದ್ದರೆ, ಈ 3 ಕ್ಷೇತ್ರಗಳಲ್ಲಿ ಚುನಾವಣೆ ಅಕ್ರಮಗಳ ಭರಾಟೆಯೂ ಜೋರಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿವರೆಗೆ 3 ಕ್ಷೇತ್ರಗಳಲ್ಲಿ ನಗದು ಹಣ, ಅಕ್ರಮ ಮದ್ಯ, ಉಚಿತ ಉಡುಗೊರೆ ಸೇರಿದಂತೆ 33.33 ಕೋಟಿ ರೂ. ಮೊತ್ತದ ಚುನಾವಣೆ ಅಕ್ರಮಗಳನ್ನು ಜಪ್ತಿ ಮಾಡಲಾಗಿದ್ದು, ಈ ಅಕ್ರಮಗಳಲ್ಲಿ ಚನ್ನಪಟ್ಟಣದ್ದೇ ಸಿಂಹಪಾಲು ಇದ್ದು, 30 ಕೋಟಿ ರೂ.ಗೂ ಅಧಿಕ ಅಕ್ರಮಗಳನ್ನು ಜಪ್ತಿ …

Read More »

ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ

ಮುಂಬಯಿ: ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಬಿಜೆಪಿಯನ್ನು “ನಾಯಿ’ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. ಅಕೋಲಾ ಪಶ್ಚಿಮ ಕ್ಷೇತ್ರದಲ್ಲಿ ಮಾತನಾಡಿ, “ಹಿಂದುಳಿದ ವರ್ಗದವರನ್ನು ಬಿಜೆಪಿಯವರು ನಾಯಿಯೆಂದು ಕರೆಯುತ್ತಾರೆ. ಅವರಿಗೆ ನೀವು ಮತ ನೀಡಬೇಕೇ? ನಾಯಿಗೆ ಯಾವ ಸ್ಥಳ ತೋರಿಸಲಾಗುತ್ತದೆಯೋ, ಈ ಬಾರಿಯ ಎಲೆಕ್ಷನ್‌ನಲ್ಲಿ ಬಿಜೆಪಿಯನ್ನು ಸೋಲಿಸಿ ಅದೇ ಸ್ಥಿತಿ ತರಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ಕಿರೀಟ್‌ ಸೋಮಿಯಾ, ಕಾಂಗ್ರೆಸ್‌ ಸೋಲುತ್ತಿದೆ. ಹಾಗಾಗಿ ಇಂಥ ಹೇಳಿಕೆ …

Read More »

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ದೀಪಾವಳಿ ಹಬ್ಬದ ಅನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸೀ ವಿವಾಹ. ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ಉತ್ಥಾನ ದ್ವಾದಶಿಯನ್ನು ತುಳಸೀಯ ವಿವಾಹ ದಿನವನ್ನಾಗಿ ಆಚರಿಸಲಾಗುತ್ತದೆ. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಈ ದಿನದಂದು ಭಗವಾನ್‌ ವಿಷ್ಣುವು ತುಳಸೀ ದೇವಿಯನ್ನು ಸಾಲಿಗ್ರಾಮದ ರೂಪದಲ್ಲಿ ಅಥವಾ ಪ್ರಬೋಧಿನಿ ಏಕಾದಶಿಯಂದು ಶ್ರೀ ಕೃಷ್ಣನ ಅವತಾರದಲ್ಲಿ ವಿವಾಹವಾದರು ಎನ್ನಲಾಗಿದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ, …

Read More »

ಕಾಂಗ್ರೆಸ್‌ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!

ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮುಂಬೈನ ಅಂಧೇರಿ ಸಮೀಪದ ಚಾಂದೀವಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಸೀಂಖಾನ್‌ ಕಚೇರಿಗೆ ತೆರಳಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ತಡರಾತ್ರಿ ಸಿಎಂ ಏಕನಾಥ ಶಿಂಧೆ ಖಾನ್‌ ಅವರ ಕಚೇರಿ ಮುಂದೆ ತೆರಳುತ್ತಿದ್ದರು. ಈ ವೇಳೆ ಆ ಪಕ್ಷದ ಕಾರ್ಯಕರ್ತರು “ವಿಶ್ವಾಸಘಾತಕ’ ಎಂದು ಘೋಷಣೆ ಹಾಕಿದ್ದರು. ಜತೆಗೆ ಶಿಂಧೆ ಕಾರನ್ನು ತಡೆಯಲು ಯತ್ನಿಸಿದರು ಎಂದು ಆರೋಪಿಸಲಾಗಿದೆ. ಇದರಿಂದ ಕೋಪಗೊಂಡ ಅವರು ಕಾರಿನಿಂದ ಇಳಿದು ಅಭ್ಯರ್ಥಿಯ ಕಚೇರಿಗೆ …

Read More »

ರಾಹುಲ್‌ ತೊರೆದ ವಯನಾಡಲ್ಲಿ ಗೆಲ್ಲುತ್ತಾರಾ ಪ್ರಿಯಾಂಕಾ ಗಾಂಧಿ ?

ವಯನಾಡ್‌: ರಾಹುಲ್‌ ಗಾಂಧಿ ರಾಜೀನಾಮೆಯಿಂದ ತೆರವಾದ ಕೇರಳದ ವಯನಾಡ್‌ ಲೋಕಸಭೆ ಕ್ಷೇತ್ರದ ಉಪಚುನಾವಣೆ ಬುಧವಾರ(ನ.13) ನಡೆಯಲಿದೆ. ಕಾಂಗ್ರೆಸ್‌ನ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆಯಿಂದಾಗಿ ಈ ಉಪಚುನಾವಣೆಯು ದೇಶದ ಗಮನ ಸೆಳೆದಿದೆ. ಇಲ್ಲಿಂದ ಗೆದ್ದರೆ ಪ್ರಿಯಾಂಕಾ ಅವರು ಅಧಿಕೃತವಾಗಿ ಚುನಾವಣ ರಾಜಕಾರಣಕ್ಕೆ ಪ್ರವೇಶ ಪಡೆಯಲಿದ್ದಾರೆ. ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ತತ್ತರಿಸಿರುವ ವಯನಾಡು ಜನರು ಆರೇಳು ತಿಂಗಳಲ್ಲೇ ಮತ್ತೂಮ್ಮೆ ತಮ್ಮ ಬೆರಳಿಗೆ ಶಾಯಿ ಹಚ್ಚಿಸಿಕೊಳ್ಳಲು ಸಿದ್ಧರಾಗಿದ್ದಾರೆ. …

Read More »

ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

ಬೆಂಗಳೂರು: ರಾಜಕೀಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಬುಧವಾರ ಮತದಾನ ನಡೆಯಲಿದ್ದು, ಚುನಾವಣ ಆಯೋಗ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 45 ಅಭ್ಯರ್ಥಿ ಗಳ ಭವಿಷ್ಯವನ್ನು ಮತದಾರ ಬರೆಯ ಲಿದ್ದಾನೆ. ಶಿಗ್ಗಾಂವಿ, ಸಂಡೂರು, ಚನ್ನ ಪಟ್ಟಣ ಸೇರಿ 3 ವಿಧಾನಸಭಾ ಕ್ಷೇತ್ರ ಗಳಲ್ಲಿ 7 ಲಕ್ಷಕ್ಕೂ ಅಧಿಕ ಮತ ದಾರ  ರಿದ್ದು, ಮತದಾನಕ್ಕಾಗಿ 770 ಮತಗಟ್ಟೆ …

Read More »

ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

ಬೆಂಗಳೂರು: ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು ಭ್ರಷ್ಟರ ಬೇಟೆ ಮುಂದುವರಿಸಿದ್ದು, ಮಂಗಳವಾರ ರಾಜ್ಯಾದ್ಯಂತ ಏಕಕಾಲಕ್ಕೆ 8 ಅಧಿಕಾರಿಗಳಿಗೆ ಸೇರಿದ 37 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ದಾಳಿಗೆ ಒಳಗಾದ ಅಧಿಕಾರಿಗಳ ಬಳಿ 22.50 ಕೋಟಿ ರೂ. ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ.   ಕರ್ನಾಟಕ ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಳಗಾವಿಯಲ್ಲಿ 2, ಹಾವೇರಿ, ದಾವಣಗೆರೆ, ಬೀದರ್‌, ಮೈಸೂರು, ರಾಮನಗರ ಮತ್ತು ಧಾರವಾಡದಲ್ಲಿ ತಲಾ ಒಂದರಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ …

Read More »