Breaking News

Monthly Archives: ನವೆಂಬರ್ 2024

ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಿ: ಸಿಇಒ ಸ್ವರೂಪಾ

ಕಲಘಟಗಿ: ಗ್ರಾಮೀಣ ಭಾಗದ ಮೂಲ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ.ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ದೇವಲಿಂಗಕೊಪ್ಪ, ಮುಕ್ಕಲ, ದುಮ್ಮವಾಡ, ಹಿರೇಹೊನ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳ ಆಲಿಸಿ ನರೇಗಾ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.   ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ಆರೋಗ್ಯ ಕೇಂದ್ರ, ಶಾಲೆಗಳ ಶೌಚಾಲಯ, ಕುಡಿಯುವ ನೀರಿನ ಮೂಲಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಇಒ ಪರಶುರಾಮ …

Read More »

ಕಲಘಟಗಿ: ಬಾಕಿ ₹73 ನೀಡಲು ಕಬ್ಬು ಬೆಳೆಗಾರರ ಮನವಿ

ಕಲಘಟಗಿ: ಕಬ್ಬು ಬೆಳೆಗಾರರ ಸಂಘಟನೆ ಹೋರಾಟದಿಂದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚದಲ್ಲಿ ಕಡಿತಗೊಳಿಸಿ ಪ್ರತಿ ಟನ್‌ ಕಬ್ಬಿಗೆ ₹183 ಹಳಿಯಾಳದ ಈಐಡಿ ಶುಗರ್ ಕಾರ್ಖಾನೆಯವರು ನೀಡಲು ಒಪ್ಪಿಕೊಂಡಿದ್ದು ಬಾಕಿ ಉಳಿದ ₹73 ಕೊಡಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಜಿಲ್ಲಾ ಕಬ್ಬು ಬೆಳೆಗಾರರ ಸಂಘಟನೆಯಿಂದ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.   ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ ಮಾತನಾಡಿ, ‘ಕಳೆದ ವರ್ಷ …

Read More »

ನ. 22ಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಮರು ಬಿಡುಗಡೆ

ಹುಬ್ಬಳ್ಳಿ: ‘ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಿದ್ಧಪಡಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರ ನವೆಂಬರ್‌ 22ರಂದು ರಾಜ್ಯದಾದ್ಯಂತ ಮರು ಬಿಡುಗಡೆಯಾಗಲಿದೆ’ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ ಹೇಳಿದರು.   ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಒತ್ತಾಯದ ಮೇರೆಗೆ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ. ರಾಯಣ್ಣನ ಸಾಹಸ ಹಾಗೂ ದೇಶಪ್ರೇಮವನ್ನು ಜನತೆಗೆ ತಿಳಿಸಬೇಕು ಎನ್ನುವುದು ಇದರ ಉದ್ದೇಶ’ ಎಂದರು. ಸಿನಿಮಾದ ಹಂಚಿಕೆದಾರ …

Read More »

ಸಮೃದ್ಧ ಕೃಷಿ: ಭರಪೂರ ಆದಾಯ

ಬೆಳಗಾವಿ: ಕೃಷಿ ರಂಗದಲ್ಲಿ ಸದಾ ಪ್ರಯೋಗಶೀಲರಾದ ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ ಗ್ರಾಮದ ರೈತ ಸಂಜಯ ಶಿಂತ್ರೆ ಅವರ ಹೊಲಕ್ಕೆ ಕಾಲಿಟ್ಟರೆ ಸಾಕು; ಹತ್ತಾರು ಬಗೆಯ ಬೆಳೆಗಳ ದರ್ಶನವಾಗುತ್ತದೆ. ಕಬ್ಬು, ಹೂವು, ಹಣ್ಣು, ಎಲೆಗಳು, ಈರುಳ್ಳಿ ಹೀಗೆ… ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತ, ಸಮಗ್ರ ಕೃಷಿಯಲ್ಲಿ ಅವರು ಖುಷಿ ಕಾಣುತ್ತಿದ್ದಾರೆ. ಜತೆಗೆ, ತಾಳೆ ಕೃಷಿಯೂ ಉತ್ತಮ ಆದಾಯ ನೀಡುತ್ತಿದೆ. ‘ನಾನು 18 ಎಕರೆ ಜಮೀನು ಹೊಂದಿದ್ದೇನೆ. ಯಾವುದೇ …

Read More »

ಬೆಂಬಿಡದ ಬಿಡಾಡಿ ದನಗಳ ಹಾವಳಿ

ಚಿಕ್ಕೋಡಿ: ಪಟ್ಟಣದ ಬಹುತೇಕ ರಸ್ತೆ, ಗಲ್ಲಿ, ಹೆದ್ದಾರಿ, ಮಾರುಕಟ್ಟೆಗಳಲ್ಲಿ ಬಿಡಾಡಿ ದನಗಳ ಹಾವಳಿ ವಿಪರೀತವಾಗಿದೆ. ಸಂಕೇಶ್ವರ- ಜೇವರ್ಗಿ, ನಿಪ್ಪಾಣಿ- ಮುಧೋಳ ಎರಡು ರಾಜ್ಯ ಹೆದ್ದಾರಿಗಳು ಪಟ್ಟಣದಲ್ಲಿ ಹಾದು ಹೋಗುವುದರಿಂದ ವಾಹನ ದಟ್ಟನೆ ಹೆಚ್ಚಾಗಿದೆ. ನಿತ್ಯ ಓಡಾಡುವ ವಾಹನ ಸವಾರರು ಬಿಡಾಡಿ ದನಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ.   ಶೈಕ್ಷಣಿಕ ಜಿಲ್ಲಾ ಕೇಂದ್ರವೂ, ಉಪ ವಿಭಾಗ ಕೇಂದ್ರವನ್ನು ಹೊಂದಿರುವ ಚಿಕ್ಕೋಡಿ ಪಟ್ಟಣಕ್ಕೆ ಪ್ರತಿದಿನ ಸಹಸ್ರಾರು ಜನರು ತಮ್ಮ ಕೆಲಸಕ್ಕೆ ಆಗಮಿಸುತ್ತಾರೆ. ಹಗಲಿರುಳು 50- …

Read More »

CM ಸಿದ್ದರಾಮಯ್ಯರನ್ನು ಯಾರಾದರೂ ಮುಟ್ಟಲು ಆಗುವುದೇ?: ಸಚಿವ ವಿ.ಸೋಮಣ್ಣ‌ ವ್ಯಂಗ್ಯ

ಬೆಳಗಾವಿ: ‘ನನ್ನನ್ನು ಮುಟ್ಟಿದರೆ ಜನ ಸುಮ್ಮನೇ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸಿ.ಎಂ ಅವರನ್ನು ಯಾರಾದರೂ ಮುಟ್ಟಲು ಆಗುತ್ತದೆಯೇ? ಅವರ ಮಾತಿನ ಮರ್ಮವನ್ನು ಅವರೇ ಅರ್ಥ ಮಾಡಿಕೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವ್ಯಂಗ್ಯ ಮಾಡಿದರು.   ನಗರದಲ್ಲಿ ಗುರುವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ಸಿ.ಎಂ ಆದವರನ್ನು ಯಾರಾದರೂ ಮುಟ್ಟಿದರೆ ಪೊಲೀಸರು ಕೇಸ್ ಮಾಡಿ ಒಳಗೆ ಹಾಕುತ್ತಾರೆ. ಮುಟ್ಟಲು ಆಗುವುದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ …

Read More »

ಡಿ.12ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಚಲೋಗೆ ನಿರ್ಧಾರ

ಹೊಸಪೇಟೆ (ವಿಜಯನಗರ): ಕಬ್ಬು ಬೆಳೆಗಾರರಿಗೆ ಶೇ 9.50 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬಿಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು, ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು ಮೊದಲಾದ ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿ.12ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಚಲೋ ನಡೆಸಲು ಕರ್ನಾಟಕ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿದೆ.   ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್‌.ಎನ್.ಭರತ್‌ರಾಜ್‌ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹500 ಎಸ್‌ಎಪಿ ನಿಗದಿಪಡಿಸಬೇಕು, …

Read More »

ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪನಾ ದಿನಾಚರಣೆ

ಬೆಳಗಾವಿ: ‘ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ನಾಲ್ಕು ದಶಕಗಳಾಗಿವೆ. ಅವರ ನಿಷ್ಕಲ್ಮಶ ಸೇವೆ ದಕ್ಷಿಣ ಕರ್ನಾಟಕ ಭಾಗಕ್ಕೂ ಗೊತ್ತಾಗಬೇಕು. ಎಲ್ಲ ಶಾಸಕರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಸಮಾರಂಭ ಮಾಡಲಾಗುವುದು’ ಎಂದು ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.   ನಗರದಲ್ಲಿ ಗುರುವಾರ ಕೆಎಲ್‌ಇ ಸಂಸ್ಥೆಯ 109ನೇ ಸಂಸ್ಥಾಪಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಬಡವರಿಗಾಗಿ ಸರ್ಕಾರಗಳು ಎಷ್ಟು ಕಾಳಜಿ ತೋರುತ್ತವೆಯೋ, ಅಷ್ಟೇ ಕಾಳಜಿ ಕೆಎಲ್‌ಇ …

Read More »

ಎಸ್‌ಡಿಎ ಆತ್ಮಹತ್ಯೆ; ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಬೆಳಗಾವಿ: ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಎಸ್‌ಡಿಎ ರುದ್ರಣ್ಣ ಯಡವನ್ಣವರ ಆತ್ಮಹತ್ಯೆ ಪ್ರಕರಣದಲ್ಲಿ, ತಹಶೀಲ್ದಾರ್‌ ಸೇರಿದಂತೆ ಮೂವರೂ ಆರೋಪಿಗಳಿಗೆ ಗುರುವಾರ ನಿರೀಕ್ಷಣಾ ಜಾಮೀನು ಸಿಕ್ಕಿದೆ. ತಹಶೀಲ್ದಾರ್‌ ಬಸವರಾಜ ನಾಗರಾಳ, ಎಫ್‌ಡಿಎ ಅಶೋಕ ಕಬ್ಬಲಿಗೇರ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ಆಪ್ತ ಸಹಾಯಕ ಸೋಮು ದೊಡವಾಡಿ ಅವರಿಗೆ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರುದ್ರಣ್ಣ ನವೆಂಬರ್‌ 5ರಂದು ತಹಶೀಲ್ದಾರ್‌ ಕೋಠಡಿಯಲ್ಲೇ ನೇಣಿಗೆ ಶರಣಾಗಿದ್ದರು. ತಮ್ಮ …

Read More »

ರಾಜ್ಯದ 10 ಗಣಿ ಗುತ್ತಿಗೆ ಕಂಪನಿಗಳ‌ ವಿರುದ್ಧ ತನಿಖೆಗೆ ಸರ್ಕಾರ ಮುಂದಾಗಿದೆ.

ಬೆಂಗಳೂರು: ರಾಜ್ಯದ 10 ಗಣಿ ಗುತ್ತಿಗೆ ಕಂಪನಿಗಳ‌ ವಿರುದ್ಧ ತನಿಖೆಗೆ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಲೋಕಾಯುಕ್ತ ಎಸ್‌ಐಟಿ ತಂಡದಿಂದ ತನಿಖೆ ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಂತ ಸಚಿವ ಹೆಚ್.ಕೆ ಪಾಟೀಲ್ ಅವರು, 10 ಗಣಿ ಕಂಪನಿಗಳ‌ವಿರುದ್ಧ ತನಿಖೆಗೆ ನಿರ್ಣಯ ಕೈಗೊಳ್ಳಲಾಗಿದೆ. ಲೋಕಾಯುಕ್ತ ಎಸ್ ಐಟಿ ತನಿಖೆಗೆ ವಹಿಸಲು ನಿರ್ಧಾರ …

Read More »