Breaking News

Monthly Archives: ನವೆಂಬರ್ 2024

ಜನವೇರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶ ನಡೆಯಲಿದೆ.

ಬೆಳಗಾವಿ : ಜನವೇರಿ 17 ಮತ್ತು 18 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶ ನಡೆಯಲಿದೆ. ಬೆಳಗಾವಿ ಜಿಲ್ಲೆಯ ಬ್ರಾಹ್ಮಣ ಸಮಾಜ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ, ಉಪಾಧ್ಯಕ್ಷ ಭರತ ದೇಶಪಾಂಡೆ ಮತ್ತು  ಗುತ್ತಿಗೆದಾರ ರಾಜೇಂದ್ರ ದೇಸಾಯಿ ಅವರನ್ನು ಸಮಾವೇಶ ಸಮಿತಿಯ ರಾಜ್ಯಮಟ್ಟದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾಜಿ ನಗರಸೇವಕಿ ಅನುಶ್ರೀ ದೇಶಪಾಂಡೆ ಅವರನ್ನು ಜಿಲ್ಲಾ ಮಟ್ಟದ ಸಂಘಟಕರನ್ನಾಗಿ ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ಈಗಾಗಲೇ …

Read More »

ಉಪ‌ ಚುನಾವಣಾ ಫಲಿತಾಂಶ ವಿಪಕ್ಷಗಳ ಆರೋಪಕ್ಕೆ ಜನರಿಂದಲೇ ಚಾಟಿ ಏಟು:ಹೆಬ್ಬಾಳಕರ್

ಜನರ ಆಶೀರ್ವಾದದಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ವಿರೋಧಿಗಳ ಟೀಕೆಗೆ ಜನ ಉತ್ತರ ಕೊಟ್ಟಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿಗಳನ್ನು ನೀಡಿದೆ. ಮಹಿಳೆಯರು ಕೂಡ ಗ್ಯಾರಂಟಿಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅನುಕೂಲ ಆಗಿದೆ. ಗ್ಯಾರಂಟಿಗಳ ಬಗ್ಗೆ ವಿರೋಧಿಗಳು ಪದೇ ಪದೇ ಟೀಕೆ ಮಾಡುತ್ತಿದ್ದರು. ಈ ಎಲ್ಲಾ …

Read More »

ಮನ್ ಕೀ ಬಾತ್’ನಲ್ಲಿ ಗುಬ್ಬಚ್ಚಿ ರಕ್ಷಣೆ ಪ್ರಸ್ತಾಪ

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ “ಗುಬ್ಬಚ್ಚಿ” ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ಮನ್ ಕೀ ಬಾತ್’ನಲ್ಲಿ ಕರೆ ನೀಡಿದ್ದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಬಾಗಲಕೋಟೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಇಂದು ಮನ್ ಕೀ ಬಾತ್ ವೀಕ್ಷಿಸಿದ ಸಚಿವರು, ಮಕ್ಕಳು ಗುಬ್ಬಚ್ಚಿಯನ್ನು ಫೋಟೋ – ವಿಡಿಯೋದಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ಅವರು ದೇಶದಾದ್ಯಂತ …

Read More »

ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ

ಬೆಳಗಾವಿ: ಉದಯವಾಗಲಿ ಚಲುವ ಕನ್ನಡ ನಾಡು ಕರ್ನಾಟಕದ ಏಕೀಕರಣಕ್ಕೆ ಮುನ್ನುಡಿ ಬರೆದರೆ ಡಾ ಡಿ ಎಸ್ ಕರ್ಕಿಯವರ ಹಚ್ಚೇವು ಕನ್ನಡದ ದೀಪ ಕವಿತೆ ಅದಕ್ಕೆ ಶಕ್ತಿ ತುಂಬಿ ಏಕೀಕರಣದ ಕೂಗು ಬಲಗೊಳ್ಳಲು ಕಾರಣವಾಯಿತು ಎಂದು ಗದುಗಿನ ಡಾ ತೋಂಟದ ಸಿದ್ದರಾಮ ಶ್ರೀಗಳು ನುಡಿದರು ಅವರು ಬೆಳಗಾವಿ ಯ ಡಾ ಡಿ ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನದ  2024ನೇ ಸಾಲಿನ ಕರ್ಕಿ ಕಾವ್ಯಶ್ರೀ  ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೇಳಿದರು ಬೆಳಗಾವಿಯಂತಹ ಮರಾಠಿಮಯ …

Read More »

ಗುರುಪರಂಪರೆಗೆ ಮಹತ್ವ ಭಾರತದಲ್ಲಿದೆ

ಭಾರತದಲ್ಲಿ ಗುರುಪರಂಪರೆಗೆ ಮಹತ್ವ ಇದೆ ನಮ್ಮ ಭಾರತ ದೇಶದಲ್ಲಿ ಗುರುವಿನ ಮೇಲಿನ ಭಕ್ತಿ ಎಂದಿಗೂ ಕಡಿಮೆಯಾಗುವುದಿಲ್ಲ ನಮ್ಮ ಭಾರತದಲ್ಲಿ ಮಾತ್ರ ಗುರುಪರಂಪರೆಯನ್ನು ಗುರುತಿಸಿ, ಗೌರವಿಸುತ್ತಾರೆ ಎಂದು ಜ್ಞಾನಪೀಠ ಪುರಸ್ಕೃತ, ನಾಡೋಜ ಡಾ ಚಂದ್ರಶೇಖರ ಕಂಬಾರ ತಿಳಿಸಿದರು. ಘಟಪ್ರಭಾ ಎಸ್ ಡಿ ಟಿ ಹೈಸ್ಕೂಲ್ ನ 95ರ ಹಳೇಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ದೀಪ ಬೆಳಗಿಸಿವುದರ ಮೂಲಕ ಚಾಲನೆ …

Read More »

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ತ್ರೀಯರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಬಹಳ ದೊಡ್ಡದಿದೆ.

ಕನಕಪುರ:* ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ತ್ರೀಯರ ಹಾಗೂ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಬಹಳ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  ಭಾನುವಾರ ನಡೆದ ಮಹಿಳಾ‌ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳಾ ಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಎಸ್. ಎಂ.ಕೃಷ್ಣ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ …

Read More »

4ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ- ವಿಶ್ವಜೀತ್ ಹಸಬೆ

4ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ- ವಿಶ್ವಜೀತ್ ಹಸಬೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಡನಾಟ ಚೆನ್ನಾಗಿದ್ದರೆ ಮಾತ್ರ ಜ್ಞಾನದ ವರ್ಧನೆ ಸಾಧ್ಯ. ಇಂದಿನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ ಎಂದು ವಿಶ್ವಜೀತ ಹಸಬೆ ಹೇಳಿದರು. ಗುರುವರ್ಯ ವಿ.ಗೋ. ಸಾಠೇ ಮರಾಠಿ ಪ್ರಭೋದಿನಿಯ ವತಿಯಿಂದ ಆಯೋಜಿಸಿದ್ದ 24ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. …

Read More »

ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು.

ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು. ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ ಶ್ರೀ ಕಾಳ ಭೈರವ ಜಯಂತಿಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರದಿಂದಲೇ ಅಭಿಷೇಕ್, ಪೂಜೆ, ಮಹಾಆರತಿ, ಮಹಾಪ್ರಸಾದ ವಿತರಣೆ ಇನ್ನುಳಿದ ಕಾರ್ಯಕ್ರಮಗಳು ನಡೆದವು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂದಿರ ವ್ಯವಸ್ಥಾಪನೆ ಸಮಿತಿಯ ಸಲಹೆಗಾರ ಶ್ರೀಕಾಂತ್ ಕಾಕತಿಕರ್ ಅವರು ನಾಥ್ …

Read More »

ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿಗೆ ಡಾಕ್ಟರೇಟ್ ಪದವಿ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ಪೀಠಕ್ಕೆ ಸಲ್ಲಿಸಿದ ದಶೋಪನಿಶತ್ತ ಮತ್ತು ದಶ ಶರಣರ ದೃಷ್ಟಿಯಲ್ಲಿ ಈಶ್ವರ ಸ್ವರೂಪ ಎಂಬ ಪ್ರಬಂಧವನ್ನು ಮಂಡಿಸಿದ ಕುಂದರಗಿ ಅಂಕಲಗಿ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಡಾ. ಅಮರ ಸಿದ್ದೇಶ್ವರ ಸ್ವಾಮೀಜಿಗೆ ಹುಕ್ಕೇರಿ ಹಿರೇಮಠದ ಗೌರವವನ್ನು ನೀಡಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ …

Read More »

ಭಾರತೀಯ ಬ್ಯಾಟರ್​ಗಳ ಅಬ್ಬರ: 3ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತತ್ತರ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (161) ಹಾಗೂ ವಿರಾಟ್ ಕೊಹ್ಲಿ (100) ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕಗಳ ನೆರವಿನಿಂದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾಗೆ 534 ರನ್​ಗಳ ಗುರಿ ನೀಡಿದೆ. ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಈ ಪಂದ್ಯದ ಮೂರನೇ ದಿನದಾಟದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಭಾರತೀಯ …

Read More »