Breaking News

Daily Archives: ನವೆಂಬರ್ 25, 2024

ಸಮುದ್ರಕ್ಕೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಕಾಲೇಜು ವಿದ್ಯಾರ್ಥಿನಿಯೊಬ್ಬಳು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಕಡಲ ತೀರದಲ್ಲಿ ನಡೆದಿದೆ. ಸೋಮೇಶ್ವರದ ಸಮುದ್ರ ತೀರದಲ್ಲಿ ರುದ್ರಬಂಡೆಯ ಮೇಲಿಂದ ಯುವತಿಯೊಬ್ಬಳು ಇಂದು ಬೆಳಿಗ್ಗೆ ಸಮುದ್ರಕ್ಕೆ ಜಿಗಿದಿದ್ದಾಳೆ. ಕಡ ಅಲೆಗಳ ನ್ಡುವೆಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವತಿಯನ್ನು ಮೀನುಗಾರರು ಕಂಡು ತಕ್ಷಣ ರಕ್ಷಣೆಗೆ ಧಾವಿಸಿದ್ದಾರೆ. ಸದ್ಯ ಮೀನುಗಾರರು ಯುವತಿಯನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ಮಂಗಳೂರಿನ ಕಾಲೇಜಿನ ಪದವಿ ವಿದ್ಯಾರ್ಥಿನಿ ಎಂದು ತಿಳಿದುಬಂದಿಲ್ಲ. …

Read More »

ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿ ಸಾವನ್ನತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಐನಾಪೂರ ರಸ್ತೆಯಲ್ಲಿ ಸಂಭವಿಸಿದೆ.

ಬೆಳಗಾವಿ: ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿ ಸಾವನ್ನತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಐನಾಪೂರ ರಸ್ತೆಯಲ್ಲಿ ಸಂಭವಿಸಿದೆ. ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕುಪಿರೆ ಗ್ರಾಮದ ಆದರ್ಶ ಯುವರಾಜ ಪಾಂಡವ (27) ಈತನು ಫೋರ್ಡ್ ಕಾರ ಅನ್ನು ತೆಗೆದುಕೊಂಡು, ಮಂಗಸೂಳಿ- ಐನಾಪೂರ ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ತಿರುವಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಪಕ್ಕದ …

Read More »

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲಗೆ ಬಿದ್ದ 3 ಅಧಿಕಾರಿಗಳು

ಲಂಚ ಪಡೆಯುತ್ತಿದ್ದ ವೇಳೆ ಮೈಸೂರಿನ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲಗೆ ಬಿದ್ದಿದ್ದು, ಮೂವರ ವಿರುದ್ಧ ದೂರು ದಾಖಲಾಗಿದೆ. ಹೆಚ್.ಡಿ.ಕೋಟೆ ತಹಶೀಲ್ದಾರ್ ಶ್ರೀನಿವಾಸ್, ಅಂತರಸಂತೆ ನಾಡಕಚೇರಿ ರೆವೆನ್ಯೂ ಇನ್ಸ್ ಪೆಕ್ಟರ್ ಗೋವಿಂದರಾಜು, ಎನ್.ಬೆಳ್ತೂರು ಗ್ರಾಮ ಲೆಕ್ಕಿಗ ನಾಗರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಬಿ.ವಿ.ಮಮತಾ ಕುಮಾರಿ ಎಂಬುವವರಿಗೆ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಭೂಮಿ ವಿಚಾರವಾಗಿ ಅಧಿಕಾರಿಗಳು ಕೋರ್ಟ್ ಆದೇಶ ಉಲ್ಲಂಘಿಸಿ ಆಸ್ತಿ ಪರಭಾರೆ ಮಾಡಿದ್ದರು. ಬಳಿಕ ಹಿಂದಿನಂತೆ ದಾಖಲೆ …

Read More »

ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದ ಪ್ರತಿಭಟನಾಕಾರರು!

ಮಂಡ್ಯ, ನವೆಂಬರ್ 25: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಕಾಡಅಂಕನಹಳ್ಳಿ ಗ್ರಾಮದಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಾಲು ಉತ್ಪಾದಕರು ಹತ್ತಾರು ಲೀಟರ್​​ ಹಾಲನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಟ್ಟೆ ಸೇರಬೇಕಿದ್ದ ನೂರಾರು ಲೀಟರ್ ಹಾಲು ಮಣ್ಣು ಪಾಲಾಗಿದೆ. ಗ್ರಾಮದ ಹಾಲು ಉತ್ಪಾದಕರ ಸಂಘವನ್ನು ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಕೊಟ್ಟಿರುವ ಸೂಚನೆ‌ಯಂತೆ ಸೂಪರ್ ಸೀಡ್ ಮಾಡಲಾಗಿದೆ ಎಂದು ಹಾಲು ಉತ್ಪಾದಕರು ಆರೋಪಿಸಿದ್ದಾರೆ. ಸಚಿವರು ದ್ವೇಷದಿಂದ ಹಾಲು ಖರೀದಿಸದಂತೆ ಮನ್ಮುಲ್​ಗೆ …

Read More »

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆ ಮೇಲೆ ಹೋಗಿ ಜೀವ ಕಳೆದುಕೊಂಡ ದುರ್ದೈವಿಗಳು

ಗೂಗಲ್​ ಮ್ಯಾಪ್ ನಂಬಿ ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಅಂದು ಕಾರಿನ ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸುತ್ತಿದ್ದ, ಜತೆ ಆತನ ಸ್ನೇಹಿತರು ಕೂಡ ಇದ್ದರು. ಗೂಗಲ್ ತೋರಿಸಿದ್ದನ್ನು ನಂಬಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯನ್ನು ಹತ್ತಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸೇತುವೆ ಕಾಮಗಾರಿ ಅಲ್ಲಿಗೇ ನಿಂತಿದೆ ಅವರಿಗೆ ಇದು ಕಂಡಿಲ್ಲ, ಅಲ್ಲಿಂದ ನೇರವಾಗಿ ಕಾರು ಕೆಳಗಿರುವ ನದಿಗೆ ಬಿದ್ದ ಪರಿಣಾಮ ಮೂವರು ಪ್ರಾಣ …

Read More »

ಕುಲಿ ಕಾರ್ಮಿಕರ ಜೊತೆಗೆ ಕಬ್ಬು ಕಟಾವು ಮಾಡಿ ಸರಳತೆ ಮೆರೆದ ಸಿಪಿಐ ಹಾರೂಗೇರಿ ಪೊಲೀಸ್ ಠಾಣೆ ಸಿಪಿಐ ರವಿಚಂದ್ರ ಬಿ ಸರಳತೆ

ಕುಲಿ ಕಾರ್ಮಿಕರ ಜೊತೆಗೆ ಕಬ್ಬು ಕಟಾವು ಮಾಡಿ ಸರಳತೆ ಮೆರೆದ ಸಿಪಿಐ ಹಾರೂಗೇರಿ ಪೊಲೀಸ್ ಠಾಣೆ ಸಿಪಿಐ ರವಿಚಂದ್ರ ಬಿ ಸರಳತೆ ಹಾರೂಗೇರಿ ರೈತರ ಗದ್ದೆಯಲ್ಲಿ ಅರ್ಧಗಂಟೆ ಕಬ್ಬು ಕಟಾವು ಕೆಲಸದ ಒತ್ತಡ ನಡುವೆ ಕಬ್ಬು ಕಟಾವು ಕಾರ್ಮಿಕರ ಜೊತೆಗೆ ಜನಸಂಪರ್ಕ ಮುಂಜಾನೆ ಜಾಗಿಂಗ್ ಸಮಯದಲ್ಲಿ ರೈತರ ಗದ್ದೆಯಲ್ಲಿ ಕೆಲಸ ಸಿಪಿಐ ರವಿಚಂದ್ರ ಬಿ ಸರಳತೆ ನೋಡಿ ರೈತರು ಸಂತಸ ಇದೇ ಸಂದರ್ಭದಲ್ಲಿ ರೈತರಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ …

Read More »

ಸರ್ಕಾರಕ್ಕೆ ಸಾರಿಗೆ ನೌಕರರ ಎಚ್ಚರಿಕೆ

ಬೆಂಗಳೂರು, ನವೆಂಬರ್ 25: ಡಿಸೆಂಬರ್ 31 ರಿಂದ ಸಾರಿಗೆ ಮುಷ್ಕರಕ್ಕೆ ಈಗಾಗಲೇ ಸಾರಿಗೆ ನೌಕರರ ಹಿರಿಯ ಮುಖಂಡ ಅನಂತ ಸುಬ್ಬರಾವ್ ಕರೆ ನೀಡಿದ್ದಾರೆ. ಡಿಸೆಂಬರ್-9 ರಂದು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಬೆಳಗಾವಿ ಚಲೋ’ ಮಾಡಿ ಅಂದು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಷ್ಕರದ ನೋಟಿಸ್ ನೀಡಲಾಗುತ್ತದೆ. ‘ಕೈಗಾರಿಕಾ ವಿವಾದ ಕಾಯಿದೆ’ ಸೆಕ್ಷನ್- 22 ರ ಪ್ರಕಾರ ಮುಷ್ಕರಕ್ಕೂ ಮುನ್ನ 21 ದಿನಗಳ ಮುಂಚಿತವಾಗಿ ನೋಟಿಸ್ ನೀಡಬೇಕು. ಈ ಹಿನ್ನೆಲೆಯಲ್ಲಿ ಡಿಸೆಂಬರ್- 9 …

Read More »

ಕಾಂಗ್ರೆಸ್​​ನಲ್ಲಿ ಮತ್ತೆ ಭುಗಿಲೆದ್ದ ಅನುದಾನ ವಾರ್:

ಕಾಂಗ್ರೆಸ್​ನಲ್ಲಿ ಮತ್ತೆ ಅನುದಾನ ಸಂಬಂಧಿತ ವಾಕ್ಸಮರ​ ಶುರುವಾಗಿದೆ. ‘ಕೈ’ ಶಾಸಕನ ವಿರುದ್ಧ ಸ್ವಪಕ್ಷದ ಮುಖಂಡರೇ ವಾಗ್ದಾಳಿ ನಡೆಸಿದ್ದಾರೆ. ಹೊಸಪೇಟೆಯಲ್ಲಿ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಮತ್ತು ಶಾಸಕ ಗವಿಯಪ್ಪ ಮಧ್ಯೆ ವಾಕ್ಸಮರ ಜೋರಾಗಿದೆ. ಜೊತೆಗೆ ಬಿಜೆಪಿ ಶಾಸಕರು ಕೂಡ ಸರ್ಕಾರ ತಾರತಮ್ಯ ಮಾಡ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣೆಗೂ ಮುನ್ನ ಕೆಲವು ದಿನಗಳ ಹಿಂದೆ ಕಾಂಗ್ರೆಸ್​ನಲ್ಲಿ ಸ್ಫೋಟಗೊಂಡಿದ್ದ ಅನುದಾನ ಅಸಮಾಧಾನದ ಬಾಂಬ್, ಇದೀಗ ಮತ್ತೆ ಸದ್ದು ಮಾಡುತ್ತಿದೆ. ವಿಜಯನಗರ ಜಿಲ್ಲೆಯಲ್ಲಿ ಅನುದಾನದ …

Read More »

ಲೋಕಾಯುಕ್ತ ಸರ್ಚ್ ವಾರಂಟ್ ಜಾರಿ ಮಾಡಿದ್ದನ್ನು ಮೊದಲು ಸಚಿವ ಭೈರತಿ ಸುರೇಶ್​ಗೆ ತಿಳಿಸಲಾಗಿದೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಹಾಗಾಗಿ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಮ್ಮೆ ಹೇಳಿದರು. ನಗರದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಕೃಷ್ಣ, ಜೂನ್ 28ರಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಲು ಸರ್ಚ್ ವಾರಂಟ್ ಜಾರಿಯಾಗಿದ್ದರೂ ಡಿವೈಎಸ್​ಪಿ ಮಾಲತೇಶ್ ಎಸ್ ಕೆ ಆದೇಶವನ್ನು ಪಾಲಿಸಿಲ್ಲ, ದಾಳಿಗೆ ಮೊದಲೇ ವಿಷಯವನ್ನು ನಗರಾಭಿವೃದ್ಧಿ ಸಚಿವರಿಗೆ ವಿಷಯವನ್ನು ತಿಳಿಸಲಾಗಿದೆ, ಭೈರತಿ ಸುರೇಶ್ ಚಾಪರ್​ನಲ್ಲಿ …

Read More »