Breaking News

Daily Archives: ಅಕ್ಟೋಬರ್ 29, 2024

ಗಾಂಜಾ, ಡ್ರಗ್ಸ್‌ ಮಾರಾಟ ಜಾಲಕ್ಕೆ ಅಂಕುಶ: ಪರಮೇಶ್ವರ

ಶಿವಮೊಗ್ಗ: ‘ರಾಜ್ಯದಲ್ಲಿ ಗಾಂಜಾ, ಡ್ರಗ್ಸ್‌ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಜಾಲಕ್ಕೆ ಸಂಪೂರ್ಣ ಅಂಕುಶ ಹಾಕಿ ಅದನ್ನು ಬುಡಸಮೇತ ಕಿತ್ತು ಹಾಕುತ್ತೇವೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು. ‘ಬೆಂಗಳೂರಿನಲ್ಲಿ ಶುಕ್ರವಾರ ₹1.50 ಕೋಟಿ ಮೌಲ್ಯದ ಗಾಂಜಾ ವಶ‍ಪಡಿಸಿಕೊಂಡು ನೈಜೀರಿಯಾ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. ವಾರದ ಹಿಂದೆ ₹ 5 ಕೋಟಿ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದರೆ ಆಯಾ ಠಾಣಾ ವ್ಯಾಪ್ತಿಯ ಅಧಿಕಾರಿಗಳು, …

Read More »

ಭಾಗ್ಯಲಕ್ಷ್ಮಿ ಬಾಂಡ್ ಹಣ ಕೊಡಿ: ಬಿಎಸ್‌ವೈ

ಶಿವಮೊಗ್ಗ: ಭಾಗ್ಯಲಕ್ಷ್ಮಿ ಯೋಜನೆಯಡಿ 18 ವರ್ಷದ ಫಲಾನುಭವಿಗಳಿಗೆ ನೆಪ ಹೇಳದೇ ಹಣ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ (ಬಿಎಸ್‌ವೈ) ಆಗ್ರಹಿಸಿದ್ದಾರೆ. ‘ರಾಜ್ಯದ ಬಡ ಹೆಣ್ಣುಮಕ್ಕಳ ಬಾಳಿಗೆ ಬೆಳಕಾಗುವ ಉದ್ದೇಶದಿಂದ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ವೇಳೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದ್ದೆ. ಈಗ ಅದರ ಅನುಷ್ಠಾನದ ವಿಚಾರದಲ್ಲಿ ಸರ್ಕಾರ ಮೀನ-ಮೇಷ ಎಣಿಸುತ್ತಿದೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಸರ್ಕಾರ ತಂದೆ-ತಾಯಿ ಇಬ್ಬರೂ ಮೃತಪಟ್ಟ ಕುಟುಂಬಗಳ …

Read More »

22 ಅವಿರೋಧ, 11 ಸ್ಥಾನಕ್ಕೆ ಚುನಾವಣೆ

ಸವದತ್ತಿ: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ನಡೆದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯಲ್ಲಿ 34 ಸ್ಥಾನಗಳ ಪೈಕಿ 22 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಐದು ವರ್ಷದಿಂದ ಸದಸ್ಯತ್ವ ಶುಲ್ಕ ಪಾವತಿಸದೇ ಇರುವ ನೀರಾವರಿ ಇಲಾಖೆಯಿಂದ ಅರ್ಹ ನೌಕರರಿಲ್ಲದ ಕಾರಣ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಭಾಗದ ಉಳಿದ 11 ಸ್ಥಾನಗಳಿಗೆ ಚುನಾವಣೆ ಜರುಗಿತು. 1,135 ಮತಗಳಿರುವ ಪ್ರಾಥಮಿಕ ಶಾಲಾ …

Read More »

ಪಹಣಿಯಲ್ಲಿ ವಕ್ಫ್‌ ಹೆಸರು: ನ.5ರಂದು ತಹಶೀಲ್ದಾರ್ ಬಳಿ ಹಾಜರಾಗಲು ರೈತರಿಗೆ ಸೂಚನೆ

ಧಾರವಾಡ: ತಾಲ್ಲೂಕಿನ ಉಪ್ಪಿನಬೆಟಗೇರಿಯ ಕೆಲವು ರೈತರ ಪಹಣಿಯಲ್ಲಿ ‘ಜಮೀನು ವಕ್ಫ್‌ ಆಸ್ತಿಗೆ ಒಳಪಟ್ಟಿರುತ್ತದೆ’ ಎಂದು ನಮೂದಾಗಿರುವ ಕುರಿತು ಚರ್ಚಿಸಲು ನವೆಂಬರ್‌ 5ರಂದು ತಹಶೀಲ್ದಾರ್‌ ಕಚೇರಿಗೆ ಹಾಜರಾಗುವಂತೆ ರೈತರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿ (ವಿಎ) ಚೈತ‌ನ್ಯ ಮಳಿಯೆ ಅವರು ಮಂಗಳವಾರ ರೈತರ ಮನೆಗಳಿಗೆ ತೆರಳಿ ಮಾಹಿತಿ ನೀಡಿದ್ದಾರೆ. ಜಮೀನಿನ ದಾಖಲೆಗಳೊಂದಿಗೆ ತಹಶೀಲ್ದಾರ್‌ ಕಚೇರಿಗೆ ಹಾಜರಾಗಲು ತಿಳಿಸಿದ್ಧಾರೆ. ‘ನಮ್ಮದು ಪಿತ್ರಾರ್ಜಿತ ಆಸ್ತಿ. ನಮ್ಮ ಜಮೀನಿನ ಪಹಣಿಯಲ್ಲಿ ‘ವಕ್ಫ್‌’ ಎಂದು ಯಾಕೆ ನಮೂದಾಗಿದೆ …

Read More »

ವಕ್ಫ್‌ ಆಸ್ತಿ ವಿವಾದ: ರೈತರಿಂದ ಅಹೋರಾತ್ರಿ ಧರಣಿ

ವಿಜಯಪುರ: ಜಿಲ್ಲೆಯ ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ರಾತ್ರಿ ದೀಪಗಳನ್ನು ಬೆಳಗಿಸಿ, ಪ್ರತಿಭಟನೆ ನಡೆಸುವ ಮೂಲಕ ಆಹೋರಾತ್ರಿ ಧರಣಿ ಕೈಗೊಂಡರು.   ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿಗಳ ಕಚೇರಿಗೆ ಸಂಜೆ ಆಗಮಿಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್‌ ಅಹಮ್ಮದ್ ಅವರ …

Read More »

ವಕ್ಫ್ ಕಾನೂನು ತೆಗೆದು ಹಾಕುವುದೇ ಸೂಕ್ತ: ಸಚಿವ ಜೋಶಿ

ಧಾರವಾಡ: ಭಾರತದಲ್ಲಿ ವಕ್ಫ್ ‌ಕಾನೂನು ಮಾಡಿದ್ದೇ ತಪ್ಪು. ಮೊದಲಿದನ್ನು ತೆಗೆದು ಹಾಕುವುದೇ ಸೂಕ್ತ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಹರು ಕಾಲದಲ್ಲಿ ಕಾಂಗ್ರೆಸ್ ಅದೇಕೆ ವಕ್ಪ್ ಕಾನೂನು ಮಾಡಿತೋ ಗೊತ್ತಿಲ್ಲ. ಆದರೆ, 2013ರಲ್ಲಿ ವಕ್ಫ್ ಗೆ ಮತ್ತೆ ಅಪರಿಮಿತ ಅಧಿಕಾರ ಕೊಟ್ಟಿದ್ದೇಕೆ? ದೇಶದಲ್ಲಿ ವಕ್ಫ್ ಕಾನೂನು ಮಾಡಿದ್ದೇ ಮೊದಲ ತಪ್ಪು. ಅಂತದ್ದರಲ್ಲಿ ಸುಪ್ರೀಂಕೋರ್ಟ್ ಸಹ ಪ್ರಶ್ನಿಸದಂತಹ …

Read More »

ಶಿಗ್ಗಾವಿ ಬೈ ಎಲೆಕ್ಷನ್ : ನಾಳೆ ಅಜ್ಜಂಪೀರ್ ಖಾದ್ರಿ ಸ್ವಇಚ್ಛೆಯಿಂದ ನಾಮಪತ್ರ ಹಿಂಪಡೆಯುತ್ತಾರೆ : ಸಚಿವ ಜಮೀರ್ ಅಹ್ಮದ್

ಹುಬ್ಬಳ್ಳಿ : ಕಾಂಗ್ರೆಸ್ ನಿಂದ ಟಿಕೆಟ್ ಸಿಗಲಿಲ್ಲವೆಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬಂಡಾಯ ಅಭ್ಯರ್ಥಿಯಾಗಿ ಶಿಗ್ಗಾವಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಅಜ್ಜಂಪೀರ್ ಖಾದ್ರಿ ಸಂಧಾನ ಯಶಸ್ವಿಯಾಗಿದ್ದು ಈ ಹಿನ್ನಲೆಯಲ್ಲಿ ನಾಳೆ ಅಜ್ಜಂಪೀರ್ ಖಾದ್ರಿ ನಾಮಪತ್ರ ಹಿಂಪಡೆಯುತ್ತಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.   ಕಳೆದ ಕೆಲವು ದಿನಗಳಿಂದ ಅಜ್ಜಂಪೀರ್ ಖಾದ್ರಿ ಬೆಂಗಳೂರಿನ ಸಚಿವ ಜಮೀರ್ …

Read More »

ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್ : ತಿಂಗಳಿಗೆ 1500 ರೂಪಾಯಿ ಠೇವಣಿ ಮಾಡಿದ್ರೆ, 31 ಲಕ್ಷ ಲಭ್ಯ

ನವದೆಹಲಿ : ಉಳಿತಾಯ ಯೋಜನೆಗಳು ಆರ್ಥಿಕ ಸ್ಥಿರತೆಯನ್ನ ಕಾಪಾಡಿಕೊಳ್ಳಲು ಮತ್ತು ಹಣಕಾಸಿನ ಕೊರತೆಯಿಂದ ಅವರನ್ನ ಸುರಕ್ಷಿತವಾಗಿರಿಸಲು ಜನರಿಗೆ ಸಹಾಯ ಮಾಡುತ್ತದೆ. ಅಂತಹ ಒಂದು ಆರ್ಥಿಕ ಭದ್ರತೆಯನ್ನ ಒದಗಿಸುವ ಯೋಜನೆ ಎಂದರೆ ಸರ್ಕಾರಿ ಅಂಚೆ ಕಛೇರಿ ಉಳಿತಾಯ ಯೋಜನೆ. ಈ ಯೋಜನೆಯಲ್ಲಿ 1,500 ರೂಪಾಯಿ ಹೂಡಿಕೆ ಮಾಡಿದರೆ 31 ಲಕ್ಷ ರೂಪಾಯಿ ಆದಾಯ ಪಡೆಯಬಹುದು. ನಿರ್ದಿಷ್ಟ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ದೀರ್ಘಾವಧಿಯ ಹೂಡಿಕೆಯಲ್ಲಿ ಉತ್ತಮ ಆದಾಯವನ್ನ ಪಡೆಯಬಹುದು. ಯೋಜನೆ …

Read More »

ಗಮನಸೆಳೆದ ಜಾನಪದ ಕಲಾಮೇಳ ಮೆರವಣಿಗೆ

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಬೆಳಗಾವಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬೈಲಹೊಂಗಲ ಉತ್ಸವದ ಜಾನಪದ ಕಲಾಮೇಳ, ರೂಪಕಗಳ ಮೆರವಣಿಗೆ ಗಮನ ಸೆಳೆಯಿತು.   ಕಿತ್ತೂರು ಚನ್ನಮ್ಮನ ವೃತ್ತದಿಂದ ಆರಂಭವಾದ ಕಲಾಮೇಳ ಮೆರವಣಿಗೆ ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್‌, ಬಸ್‌ ನಿಲ್ದಾಣ, ರಾಯಣ್ಣ ವೃತ್ತ ಮಾರ್ಗ ವಾಗಿ ಚನ್ನಮ್ಮನ ಸಮಾಧಿ  ಸ್ಥಳಕ್ಕೆ …

Read More »

ಹಿಂದುಳಿದ ವರ್ಗಗಳ ಮಠಾಧೀಶರು, ನಾಯಕರ ಸಭೆ ನ.3ರಂದು

ಹುಬ್ಬಳ್ಳಿ: ರಾಷ್ಟ್ರೀಯ ಕೋಲಿ ಬೆಸ್ತ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾ ವತಿಯಿಂದ ನ.3ರಂದು ಬೆಳಿಗ್ಗೆ 10 ಗಂಟೆಗೆ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಉಪ್ಪಾರ ಭಗೀರಥ ಗುರುಪೀಠದ ಭಗೀರಥಾನಂದಪುರಿ ಸ್ವಾಮೀಜಿ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕುಲ ರಸ್ತೆಯ ಆರ್.ಎಂ.ಲೋಹಿಯಾನಗರದ ಅಪ್ಪು ಪ್ಲಾಜಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಕೋಲಿ ಬೆಸ್ತ, ಉಪ್ಪಾರ, ಶಿಕ್ಕಲಗಾರ, ಲಂಬಾಣಿ, ಕುರುಬ, ಕಮ್ಮಾರ, ಕಿಂಚಿ ಕೊರವರ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ …

Read More »