Breaking News

Monthly Archives: ಸೆಪ್ಟೆಂಬರ್ 2024

ಗಣೇಶ ವಿಸರ್ಜನೆಯ ಅದ್ದೂರಿ ಮೆರವಣಿಗೆ: ಈದ್‌ ರ‍್ಯಾಲಿ ಮುಂದಕ್ಕೆ

ಬೆಳಗಾವಿ: ಗಣೇಶ ಮೂರ್ತಿಗಳ ವಿಸರ್ಜನೆಯ ಅದ್ದೂರಿ ಮೆರವಣಿಗೆಗೆ ತೊಡಕಾಗದಿರಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯು ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದ ಸೋಮವಾರದ ಈದ್ ಮಿಲಾದ್ ಮೆರವಣಿಗೆಯನ್ನು ಮುಸ್ಲಿಮರು ಸೆಪ್ಟೆಂಬರ್ 22ಕ್ಕೆ ಮುಂದೂಡಿದರು. ಉಳಿದಂತೆ ಇತರ ಧಾರ್ಮಿಕ ಕಾರ್ಯಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ‘ಬೆಳಗಾವಿಯ ಗಣೇಶೋತ್ಸವ ದೇಶದಲ್ಲೇ ಪ್ರಸಿದ್ಧ. ಮೊದಲು ಅದು ಸಂಭ್ರಮದಿಂದ ನೆರವೇರಲಿ. ಸೆಪ್ಟೆಂಬರ್ 22ರಂದು ನಾವು ಈದ್‌-ಮಿಲಾದ್‌ ಮೆರವಣಿಗೆ ಮಾಡಲು ಇಸ್ಲಾಂ ಧರ್ಮಗುರುಗಳು ಮತ್ತು ಮುಸ್ಲಿಮರೆಲ್ಲ ಸೇರಿ ನಿರ್ಧರಿಸಿದೆವು. ಗಣೇಶ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ.

ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ದೇವಶಿಲ್ಪಿ ಭಗವಾನ್ ವಿಶ್ವಕರ್ಮ ಜಯಂತಿಯ ಅಂಗವಾಗಿ ಕಾರ್ಖಾನೆಯಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಆಚರಣೆ ಮಾಡಿದರು. ಸೃಷ್ಟಿಕರ್ತ ಬ್ರಹ್ಮನ ಅಂಶವಾಗಿರುವ ದೇವಶಿಲ್ಪಿ ವಿಶ್ವಕರ್ಮನು ಎಲ್ಲಾ ಕುಶಲಕರ್ಮಿಗಳಿಗೆ ಒಳಿತನ್ನು ತರಲಿ ಎಂದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಹಿರಿಯರು ಯುವಕರು ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Read More »

ಜೋಕುಮಾರನ ಹಬ್ಬ: ಸಾಂಪ್ರದಾಯಿಕ ಆಚರಣೆ

ಉಪ್ಪಿನಬೆಟಗೇರಿ: ಗಣೇಶ ವಿಸರ್ಜನೆಯ ಮರುದಿನ ಜೋಕುಮಾರಸ್ವಾಮಿ ಅಷ್ಟಮಿಯ ಗಡಗಿಯೊಳಗೆ ಹುಟ್ಟುತ್ತಾನೆ. ಆತನ ಆಯುಷ್ಯ ಏಳು ದಿನ. ಆ ಏಳು ದಿನಗಳಲ್ಲಿ ಬಾಲ್ಯ, ಯೌವ್ವನ, ಸಾವು ಎಲ್ಲವೂ ಸಂಭವಿಸುತ್ತದೆ. ಉತ್ತರ ಕರ್ನಾಟಕ ಸೇರಿ ನಾಡಿನ ಹಲವು ಹಳ್ಳಿಗಳಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಇಂದಿಗೂ ಆಚರಿಸಲಾಗುತ್ತದೆ.   ಬಡಿಗೇರ ಮನೆಯವರು ತಯಾರಿಸುವ ಜೋಕುಮಾರನ ಮಣ್ಣಿನ ಮೂರ್ತಿಯನ್ನು ಅಂಬಿಗೇರ ಮನೆತನದ ಮಹಿಳೆಯರು ಬಿದಿರಿನ ಬುಟ್ಟಿಯಲ್ಲಿ ಇಟ್ಟು ಬೇವಿನ ತಪ್ಪಲಿನಿಂದ ಸಿಂಗರಿಸುತ್ತಾರೆ. ಸುಣಗಾರ ಮನೆ ಮಹಿಳೆಯರು …

Read More »

ಅಕ್ರಮ ಆಸ್ತಿ ಗಳಿಕೆ ಪ್ರಕರಣ : `DCM ಡಿ.ಕೆ.ಶಿವಕುಮಾರ್’ ಗೆ ಸುಪ್ರೀಂಕೋರ್ಟ್ ನಿಂದ ನೋಟಿಸ್!

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇದಿಗ ಸುಪ್ರೀಂ ಕೋರ್ಟಿಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.   ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ …

Read More »

ಮಗನ 83 ಕೆಜಿ ತೂಕದಷ್ಟೇ ಹಣವಿಟ್ಟು ತುಲಾಭಾರ ನೇರವೇರಿಸಿದ ರೈತ!

ಭೋಪಾಲ್​: ತಮ್ಮ ಆಸೆ ಈಡೇರಿದಕ್ಕೆ ಮಗನ ತೂಕಕ್ಕೆ ಸಮನಾದ ಹಣವನ್ನು ತುಲಾಭಾರದ ಮೂಲಕ ದೇವಸ್ಥಾನಕ್ಕೆ ಅರ್ಪಿಸುವುದರೊಂದಿಗೆ ರೈತರೊಬ್ಬರು ಹರಕೆ ತೀರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬದ್‌ನಗರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.   ಬದ್‌ನಗರದ ರೈತರಾಗಿರುವ ಚತುರ್ಭುಜ್ ಜಾಟ್ ಅವರು ತಮ್ಮ ಆಸೆ ಈಡೇರಿದ ಬಳಿಕ ಶ್ರೀ ಸತ್ಯವಾದಿ ವೀರ ತೇಜಾಜಿ ಮಹಾರಾಜ್ ದೇವಸ್ಥಾನದಲ್ಲಿ ತುಲಾಭಾರ ನಡೆಸಿ ದೇಣಿಗೆಯನ್ನು ನೀಡಿದರು. ರೈತರೊಬ್ಬರ …

Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶೇ.40ರಷ್ಟು ಬಡ್ಡಿ ವಸೂಲಿ ಮೂಲಕ ಮಹಿಳೆಯರ ಶೋಷಣೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ

ಮಳವಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳಾ ಸಂಘಗಳಿಗೆ ಸಾಲ ನೀಡಿ ಶೇ.40ರಷ್ಟು ಬಡ್ಡಿ ವಸೂಲಿ ಮಾಡುತ್ತಾ ಗ್ರಾಮೀಣ ಮಹಿಳೆಯರ ಶೋಷಣೆ ಮಾಡಲಾಗುತ್ತಿದೆ ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಆರೋಪ ಮಾಡಿದ್ದಾರೆ. ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬಡವರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೊರಟಿದೆ. ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವನ್ನು ಬಿಟ್ಟು, ಸರಕಾರದ ಸಂಜೀವಿನಿ …

Read More »

ಮತ್ತೊಂದು ಜೀವ ಉಳಿಸಿ ವಿಧಿಯ ಲೀಲೆಗೆ ಬಲಿಯಾದ ಉಪನ್ಯಾಸಕಿ..!

ಮಂಗಳೂರು : ತಮ್ಮ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್‌ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್(33) ಅವರು ತಾನೇ ವಿಧಿಲೀಲೆಗೆ ಬಲಿಯಾಗಿದ್ದಾರೆ. ಅರ್ಚನಾ ಕಾಮತ್ ಪತಿ ಸಿಎ ಆಗಿರು ಚೇತನ್ ಕಾಮತ್ ಅವರ ಪತಿಯ ಸಂಬಂಧಿ ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಲಿವರ್‌ನ ಅಗತ್ಯವಿತ್ತು. ಹಲವರನ್ನು ತಪಾಸಣೆ ಮಾಡಿದ್ದರೂ ರಕ್ತದ ಗುಂಪು ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಆದ್ದರಿಂದ ಅರ್ಚನಾ …

Read More »

ಪಿತೃ ಪಕ್ಷ 2024 ಯಾವಾಗ ಆರಂಭ? ಈ ಸಮಯದಲ್ಲಿ ಏನು ಮಾಡಬಾರದು? ದಿನಾಂಕ ಮರೆತು ಹೋದ್ರೆ ಏನು ಮಾಡಬೇಕು?

ಪಿತೃ ಪಕ್ಷ 2024 ಯಾವಾಗ ಆರಂಭ? ಈ ಸಮಯದಲ್ಲಿ ಏನು ಮಾಡಬಾರದು? ದಿನಾಂಕ ಮರೆತು ಹೋದ್ರೆ ಏನು ಮಾಡಬೇಕು? ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ತಿಥಿ ಕಾರ್ಯವನ್ನು ಮಾಡುತ್ತಾರೆ. ವಾಸ್ತವವಾಗಿ, ಶ್ರಾದ್ಧ ಪಕ್ಷದ 16 ದಿನಗಳ ಅವಧಿಯಲ್ಲಿ, ಸತ್ತವರು ಭೂಮಿಗೆ ಬರುತ್ತಾರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಶ್ರಾದ್ಧವನ್ನು ಮಾಡಿದರೆ ಅದು ಅವರ ಆತ್ಮಕ್ಕೆ ಶಾಂತಿಯನ್ನು …

Read More »

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ. ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಖಾಸಗಿಯಾಗಿ ಪ್ರವಾಸಕ್ಕೆ ಹೋಗಿ ಬರಲಾಗಿದೆ. ಪ್ರಮುಖವಾಗಿ ಅಲ್ಲಿನ ಚುನಾವಣೆ ರೀತಿ, ನಿಯಮಗಳನ್ನು ಅರಿಯಲಾಗಿದೆ ಎಂದು ವಿವರಣೆ ನೀಡಿದರು. ನಾಗಮಂಗಲ ದಲ್ಲಿನ ಅಹಿತಕರ ಘಟನೆಗೆ ಸಂಬಂಧ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ. ಮುನಿರತ್ನ ಪ್ರಕರಣ ಕುರಿತಾಗು ಹೆಚ್ಚಿನ ಮಾಹಿತಿ ಪಡೆದು …

Read More »

ಪೋಕ್ಸೊ ಪ್ರಕರಣ: ಶಿಕ್ಷಕ ಅಮಾನತು

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಪೋಕ್ಸೊ ಪ್ರಕರಣದಡಿ ಬಂಧಿತನಾಗಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮೊಹಮ್ಮದ್ ಸಾದಿಕ್ ಮೀಯಾಬೇಗ್ (39) ಎಂಬುವನನ್ನು ಅಮಾನತು ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಬಿ. ಎ. ಮೇಕನಮರಡಿ ತಿಳಿಸಿದ್ದಾರೆ.   10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷಕನನ್ನು ಚಿಕ್ಕೋಡಿ ಠಾಣೆ ಪೊಲೀಸರು ಬಂಧಿಸಿದ್ದರು.

Read More »