ಬೆಂಗಳೂರು: “ಮುಡಾ ಹಗರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ. ರಾಜೀನಾಮೆ ಕೊಡುವ ಪ್ರಶ್ನೆಯೂ ಇಲ್ಲ. ನಾನು ರಾಜೀನಾಮೆ ಕೊಡುವುದೂ ಇಲ್ಲ’. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಡಕ್ ನುಡಿ. ದಿನೇ ದಿನೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಮುಡಾ ಪ್ರಕರಣ ಲೋಕಾಯುಕ್ತ ತನಿಖೆಗೆ ನ್ಯಾಯಾಲಯದಿಂದ ಶಿಫಾರಸುಗೊಂಡಿದ್ದು, ಎಫ್‌ಐಆರ್ ದಾಖಲಾದರೂ ರಾಜೀನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಪಟ್ಟುಹಿಡಿದ್ದಾರೆ. ಬುಧವಾರ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ಆದೇಶ ಪ್ರತಿಯನ್ನು ಅವಲೋಕಿಸಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದರು. ಅನಂತರ ಕೇರಳಕ್ಕೆ …
Read More »Daily Archives: ಸೆಪ್ಟೆಂಬರ್ 27, 2024
ತಾಲೂಕಿನಾದ್ಯಂತ ನಕಲಿ ಯುಟ್ಯೂಬ್, ನಕಲಿ ಪತ್ರಕರ್ತರ ಹಾವಳಿ: ಮಹಾಂತೇಶ ತುರಮರಿ
ಬೈಲಹೊಂಗಲ: ತಾಲೂಕಿನಾದ್ಯಂತ ನಕಲಿ ಪತ್ರಕರ್ತರು ಸೇರಿದಂತೆ ನಕಲಿ ಯುಟ್ಯೂಬ್ ಗಳ ಹಾವಳಿ ಹೆಚ್ಚಾಗಿದ್ದು ಅಧಿಕಾರಿ, ಸಿಬ್ಬಂದಿಗಳು ಬೆಚ್ಚಿ ಬೀಳುವಂತಾಗಿದೆ. ಬೈಲಹೊಂಗಲ ಪಟ್ಟಣದ ತಾಲೂಕು ಮಟ್ಟದ ಕಚೇರಿಗಳು, ಮಿನಿ ವಿಧಾನಸೌಧ, ಎಆರ್ ಟಿಓ ಕಚೇರಿ, ಪುರಸಭೆ, ತಾ.ಪಂ ಕಚೇರಿ, ತಹಶೀಲ್ದಾರ ಕಛೇರಿ ಸೇರಿದಂತೆ ತಾಲೂಕಿನ ಸರಕಾರಿಯ ಹಲವಾರು ಕಛೇರಿ, ಗ್ರಾಮ ಪಂಚಾಯತಿ, ಪ್ರಾಥಮಿಕ ಸರಕಾರಿ ಆಸ್ಪತ್ರೆಗಳು, ಸಹಕಾರಿ ಸಂಘ, ನ್ಯಾಯಬೆಲೆ ಅಂಗಡಿ, ಅಂಗನವಾಡಿ ಮತ್ತು ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗಳಿಗೆ …
Read More »ಸಾಲಬಾಧೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ನೇಕಾರ
ಬೆಳಗಾವಿ: ಸಾಲಬಾಧೆಯಿಂದ ನೇಕಾರನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಗುರುವಾರ ನಡೆದಿದ್ದು, ಕೇವಲ 20 ದಿನಗಳ ಅವಧಿಯಲ್ಲಿ ಈ ಗ್ರಾಮದಲ್ಲಿ ಇಬ್ಬರು ನೇಕಾರರು ಆತ್ಮ*ಹತ್ಯೆ ಮಾಡಿಕೊಂಡಂತಾಗಿದೆ. ಸುಳೇಭಾವಿ ಗ್ರಾಮದ ಕಿರಣ ಬಾಳಣ್ಣ ಗೋಕಾವಿ (32) ಎಂಬ ಯುವ ನೇಕಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ವಿವಿಧ ಕಡೆಗೆ ಕೈಗಡ ಸಾಲ ಪಡೆದಿದ್ದನು. ಜತೆಗೆ ಸೊಸೈಟಿಯಲ್ಲಿಯೂ ಸಾಲ ಪಡೆದಿದ್ದನು. ಸಾಲಗಾರರ ಕಿರುಕುಳ ತಾಳಲಾರದೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು …
Read More »ಮಹಾಲಕ್ಷ್ಮಿ ನನ್ನ ಮಗನ ವಿರುದ್ಧ ‘ಹನಿಟ್ರ್ಯಾಪ್’ ಮಾಡಿದ್ದಳು : ಆರೋಪಿಯ ತಾಯಿ ಸ್ಪೋಟಕ ಹೇಳಿಕೆ!
ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ವೈಯಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿ ಆಗಿದ್ದ ಮುಕ್ತಿ ರಂಜನ್ ರಾಯ್ ಅವರ ತಾಯಿ ಮಹಾಲಕ್ಷ್ಮಿ ವಿರುದ್ಧ ಸ್ಪೋಟಕ ವಾದಂತಹ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿಯ ತಾಯಿ ಕುಂಜಲತಾ ರಾಯ್, ನನ್ನ ಮಗನ ವಿರುದ್ಧ ಕೊಲೆಯಾದ ಮಹಿಳೆ ಟ್ರ್ಯಾಪ್ ಮಾಡಿದ್ದಳು. ಅವಳು ಅವನಿಂದ ನಿರಂತರವಾಗಿ ಹಣ ಕೇಳುತ್ತಲೇ ಇದ್ದಳು. ಈ …
Read More »ಕಿತ್ತೂರು ಉತ್ಸವ: ಐತಿಹಾಸಿಕ ತಾಣಗಳಲ್ಲಿ ಸ್ವಚ್ಛತಾ ಕಾರ್ಯ
ಚನ್ನಮ್ಮನ ಕಿತ್ತೂರು: ಅ.23 ರಿಂದ 25 ರವರೆಗೆ ನಡೆಯುವ 200 ನೇ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ ನೇತೃತ್ವದಲ್ಲಿ ಐತಿಹಾಸಿಕ ಸ್ಥಳಗಳನ್ನು ಗುರುವಾರ ಸ್ವಚ್ಛಗೊಳಿಸಲಾಯಿತು. ನಂತರ ಮಾತನಾಡಿದ ಕಿರಣ, ‘ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಿತ್ತೂರು ಸಂಸ್ಥಾನದ ಸ್ಮಾರಕಗಳು ಹಾಗೂ ಐತಿಹಾಸಿಕ ತಾಣಗಳನ್ನು ಉತ್ಸವದ ಅಂಗವಾಗಿ ಸ್ವಚ್ಛಗೊಳಿಸಲಾಗುತ್ತಿದೆ. ತಾಲೂಕು ಪಂಚಾಯಿತಿ ಕಿತ್ತೂರು ಹಾಗೂ ಗ್ರಾಮ ಪಂಚಾಯಿತಿ ದೇವರಶೀಗಿಹಳ್ಳಿ ಸಹಯೋಗದಲ್ಲಿ ‘ಸ್ವಚ್ಛತೆಯೆಡೆಗೆ ದಿಟ್ಟ …
Read More »ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ವೇತನ ಶ್ರೇಣಿ ನಿಗದಿಪಡಿಸಲು ಆಗ್ರಹ
ಬೆಳಗಾವಿ: ವಿವಿಧ ಇಲಾಖೆಗಳ ತಾಂತ್ರಿಕ ಸಿಬ್ಬಂದಿ ಮಾದರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೂ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಪದಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಯಾವ ಘೋಷಣೆ ಕೂಗದ ಪ್ರತಿಭಟನಕಾರರು, ಮೌನವಾಗಿ ಕುಳಿತುಕೊಂಡೇ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ.ಶಿಂಧೆ, …
Read More »ಪರಿಶಿಷ್ಟರ ಮೇಲೆ ದೌರ್ಜನ್ಯ: ತ್ವರಿತ ಕ್ರಮವಾಗಲಿ
ಬೆಳಗಾವಿ: ‘ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದ ಕುರಿತು ದೂರು ದಾಖಲಾದರೆ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಎಚ್ಚರಿಕೆ ಕೊಟ್ಟರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಈ ಸಭೆಗೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಸಭೆಗೆ ಹಾಜರಾದವರು ಅನುಪಾಲನಾ …
Read More »ವಿಪತ್ತು ಬಂದಾಗ ಸೇವೆ ಮಾಡಿ’
ಹುಕ್ಕೇರಿ: ಹುಕ್ಕೇರಿ ಮತ್ತು ಸಂಕೇಶ್ವರ ವಲಯಗಳ ವಿಪತ್ತು ನಿರ್ವಹಣೆ ಘಟಕದ ಸ್ವಯಂ ಸೇವಕರಿಗೆ ತಾಲ್ಲೂಕಿನ ನಿಡಸೋಶಿಯ ದುರದುಂಡೇಶ್ವರ ಮಠದಲ್ಲಿ ಗುರುವಾರ ನಡೆದ ‘ಶೌರ್ಯ ವಿಪತ್ತು ಸ್ವಯಂ ಸೇವಕರ ತರಬೇತಿ’ ಕಾರ್ಯಕ್ರಮವನ್ನು ಸುಬೇದಾರ್ ಎಸ್.ಕೆ.ದೇಸಾಯಿ ಹಾಗೂ ನಿಡಸೋಸಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮದೀನಾ ಶಾನೂರ್ ಮಕಾಂದಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಸುಬೇದಾರ್ ಎಸ್.ಕೆ.ದೇಸಾಯಿ, ‘ಯುವಕರು ಸೈನ್ಯದಲ್ಲಿ ಸೇರಿ ದೇಶ ಮಾಡಬೇಕಂತಿಲ್ಲ. ದೇಶದ ಒಳಗೆ ಜನರಿಗೆ ವಿಪತ್ತು ಬಂದಾಗ ಸೇವೆ ಸಲ್ಲಿಸಿದರೆ, …
Read More »ಬಾವಿಗೆ ಬಿದ್ದು ಶಿಂಧೊಳ್ಳಿ ಗ್ರಾಮದ ಮಹಿಳೆ ಸಾವು
ಬೆಳಗಾವಿ: ತಾಲ್ಲೂಕಿನ ಶಿಂಧೊಳ್ಳಿ ಗ್ರಾಮದ ತೆರೆದ ಬಾವಿಯಲ್ಲಿ ಗುರುವಾರ ಬೆಳಿಗ್ಗೆ ಮಹಿಳೆಯೊಬ್ಬರು ಬಿದ್ದು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಭಾರತಿ ಪೂಜಾರಿ(48) ಮೃತರು. ‘ಶಿಂಧೊಳ್ಳಿಯ ಮಸಣವ್ವ ದೇವಸ್ಥಾನಕ್ಕೆ ಗುರುವಾರ ಕಳ್ಳರು ನುಗ್ಗಿದ್ದರು. ಇದೇ ವೇಳೆ, ಭಾರತಿ ತಮ್ಮ ಮನೆಯ ದನ-ಕರುಗಳ ಸಗಣಿ ಎತ್ತಿ, ತಿಪ್ಪೆಗೆ ಎಸೆಯಲು ಹೋಗಿದ್ದರು. ಆಗ ದೇವಾಲಯದಲ್ಲಿ ಕಳ್ಳತನ ನಡೆಯುತ್ತಿರುವುದನ್ನು ನೋಡಿದ್ದರು. ಈ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿ, ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಕಳ್ಳರು ಭಾರತಿ ಅವರನ್ನೇ ಬಾವಿಯಲ್ಲಿ …
Read More »