ಕನ್ನಡ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಭಾಷೆ. ನಮ್ಮ ಈ ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಕನ್ನಡ ಭಾಷೆಯ ಕಂಪು, ಅದರ ಮಹತ್ವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿಯಲುವಲ್ಲಿ ಶ್ರಮಿಸಿದ್ದಾರೆ. ಅಂಥವರ ಸಾಲಿನಲ್ಲಿ ಬರುವ ಮಹಾನ್ ಸಾಹಿತಿಗಳಲ್ಲಿ ಒಬ್ಬರು ಕೋಟ ಶಿವರಾಮ ಕಾತಂತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಥೆ, ಸಣ್ಣಕಥೆ, ಹರಟೆ, ವ್ಯಂಗ್ಯ, ಕವನ, ಕಾದಂಬರಿ, ನಾಟಕ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಪರಿಸರ ವಿಜ್ಞಾನ, ಜೀವನಚರಿತ್ರೆ, ಕಲೆ, ಯಕ್ಷಗಾನ …
Read More »Daily Archives: ಸೆಪ್ಟೆಂಬರ್ 25, 2024
ದೇವಾಲಯದ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಮೃ*ತ್ಯು
ಬೈಂದೂರು: ಇಲ್ಲಿನ ಪೇಟೆಯಲ್ಲಿನ ದೇವಸ್ಥಾನದ ಕೆರೆಯಲ್ಲಿ ಈಜಾಡಲೆಂದು ತೆರಳಿದ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಮಂಗಳವಾರ(ಸೆ24 )ಸಂಜೆ ನಡೆದಿದೆ. ಮೃತ ಬಾಲಕರು ನಾಗೇಂದ್ರ (13) ಮತ್ತು ಮೊಹಮದ್ ಶಫಾನ್ (13) ಎನ್ನುವವರಾಗಿದ್ದಾರೆ. ನಾಗೇಂದ್ರ ಯೋಜನಾ ನಗರದ ನಿವಾಸಿ ಕೃಷ್ಣ ಅವರ ಪುತ್ರ ನಾಗಿದ್ದು, ಮೊಹಮದ್ ಶಫಾನ್ ರೈಲ್ವೆ ನಿಲ್ದಾಣದ ಬಳಿಯ ಶಾನು ಶಾಲಿಯಾನ್ ಅವರ ಪುತ್ರ. ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಪರೀಕ್ಷೆ ಬರೆದು …
Read More »ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್ ಆದೇಶ
ಬೆಂಗಳೂರು: ಮುಡಾ ಹಗರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ (ಸೆ.25) ಮೈಸೂರು ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ತನಿಖೆ ನಡೆಸಬೇಕೆಂದು ಆದೇಶ ನೀಡಿದೆ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್, CrPC 156(3) ಅಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ …
Read More »ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಆಶ್ರಯದಲ್ಲಿ ಕಲಬುರಗಿಯಲ್ಲಿ ಇದೇ ದಿ.29 ಹಾಗೂ 30 ರಂದು ಬೃಹತ್ ಸಮ್ಮೇಳನ
ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ತರಲು ಅಖಿಲ ಭಾರತ ಕಬ್ಬು ಬೆಳೆಗಾರರ ಸಂಘದ ರಾಷ್ಟ್ರ ಸಮಿತಿ ಆಶ್ರಯದಲ್ಲಿ ಕಲಬುರಗಿಯಲ್ಲಿ ಇದೇ ದಿ.29 ಹಾಗೂ 30 ರಂದು ಬೃಹತ್ ಸಮ್ಮೇಳನವನ್ನು ಆಯೋಜನೆ ಮಾಡಿದೆ. ಈ ಕುರಿತು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್.ಎಲ್.ಭರತರಾಜ್ ಹೇಳಿಕೆ ನೀಡಿದ್ದು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದು ಟನ್ ಕಬ್ಬಿಗೆ ಐದು ಸಾವಿರ …
Read More »ಸಿದ್ದರಾಮಯ್ಯ ಬೆಂಬಲಿಸಿ ರಾಷ್ಟ್ರೀಯ ಅಹಿಂದ ಒಕ್ಕೂಟದಿಂದ ಅಕ್ಟೋಬರ್ 3 ರಂದು ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ಜಾಗೃತಿ ಜಾಥಾ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ರಾಷ್ಟ್ರೀಯ ಅಹಿಂದ ಒಕ್ಕೂಟದಿಂದ ಅಕ್ಟೋಬರ್ 3 ರಂದು ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ರಾಜ್ಯಾದ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು. ಬುಧವಾರ(ಸೆ 25) ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಹಿಂದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟವರು, ಅಂತಹ ನಾಯಕರ ಮೇಲೆ ಸಂಕಷ್ಟ ತರುವಂತಹ ಕಾರ್ಯವನ್ನು ಬಿಜೆಪಿ ಮಾಡಿದ್ದು, ಎಲ್ಲೆಲ್ಲಿ ಬಿಜೆಪಿ ಆಡಳಿತವಿಲ್ಲವೋ ಅಲ್ಲಿ …
Read More »ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು
ದಾಂಡೇಲಿ: ನಾಪತ್ತೆಯಾಗಿದ್ದ ಮಹಿಳೆಯೋರ್ವರ ಬಗ್ಗೆ ದೂರು ನೀಡಿದ ಕೇವಲ ಎರಡುವರೆ ಗಂಟೆಯೊಳಗಡೆ ಪೊಲೀಸರು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ ಶ್ಲಾಘನಾರ್ಹ ಘಟನೆ ಅಂಬಿಕಾನಗರದ ಜಮಗಾದಲ್ಲಿ ನಡೆದಿದೆ. ಅಂಬಿಕಾನಗರದ ಜಮಗಾ ನಿವಾಸಿ 50 ವರ್ಷ ವಯಸ್ಸಿನ ಫಾತಿಮಾ ಮುಂಡಗೋಡ ಇವರು ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಣಬೆ ತರಲೆಂದು ಕಾಡಿಗೆ ಹೋಗಿದ್ದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಸುತ್ತಮುತ್ತಲೂ ಹುಡುಕಿ, ಕೊನೆಗೆ ಸಂಜೆ 7.45 ನಿಮಿಷಕ್ಕೆ ಅಂಬಿಕಾನಗರ …
Read More »ಕೊನೆಗೂ 71 ದಿನಗಳ ಬಳಿಕ ಅರ್ಜುನ್ ಲಾರಿ ಹಾಗೂ ಮೃತದೇಹ ಪತ್ತೆ
ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಕಳೆದಿದ್ದು, ಕೊನೆಗೂ ನಾಪತ್ತೆಯಾಗಿದ್ದ ಕೇರಳದ ಲಾರಿ ಹಾಗೂ ಚಾಲಕ ಅರ್ಜುನ್ ಅವರ ಮೃತದೇಹ ಬುಧವಾರ(ಸೆ.25ರಂದು) ಪತ್ತೆ ಆಗಿದೆ ಎಂದು ವರದಿಯಾಗಿದೆ. ಕಳೆದ 6 ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯ ಮೂಲಕ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಅರ್ಜುನ್ ಅವರ ಬೆಂಜ್ ಲಾರಿ ಪತ್ತೆಯಾಗಿದ್ದು, ಲಾರಿಯೊಳಗೆ ಅರ್ಜುನ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಕಾರ್ಯಾಚರಣೆಯ ತಂಡದ ಮೂಲಗಳು ತಿಳಿಸಿವೆ. ಲಾರಿಯ ಮಾಲೀಕ ಮನಾಫ್ …
Read More »ಸಾರಿಗೆ ಬಸ್ ಅಪಘಾತ; ನಿರ್ವಾಹಕ ಸೇರಿ 6 ಪ್ರಯಾಣಿಕರಿಗೆ ಗಾಯ
ಬೈಲಹೊಂಗಲ: ಸಾರಿಗೆ ಸಂಸ್ಥೆ ಬಸ್ ಮತ್ತು ಸೋಯಾಬೀನ್ ರಾಶಿ ಯಂತ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು ಸುಮಾರು 6 ಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಮಲಪ್ರಭಾ ನದಿ ಸಮೀಪ ಬುಧವಾರ (ಸೆ.25) ಮಧ್ಯಾಹ್ನ ಸಂಭವಿಸಿದೆ. ಸಾರಿಗೆ ಬಸ್ ಧಾರವಾಡದಿಂದ ಬೈಲಹೊಂಗಲ ಮಾರ್ಗ ಮಧ್ಯೆ ಬರುವಾಗ ಮಲಪ್ರಭಾ ನದಿ ಪಕ್ಕದಲ್ಲಿ ಸೋಯಾಬೀನ್ ರಾಶಿ ಯಂತ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭೀಕರ ಅಪಘಾತ ತಪ್ಪಿಸಲು …
Read More »ಕೋರ್ಟ್ ಕಲಾಪ ವೀಡಿಯೋ ಬಳಕೆಗೆ ನಿಷೇಧ
ಬೆಂಗಳೂರು: ಕೋರ್ಟ್ ಕಲಾಪಗಳ ನೇರಪ್ರಸಾರದ (ಲೈವ್ ಸ್ಟ್ರೀಮಿಂಗ್) ದೃಶ್ಯಾವಳಿಗಳನ್ನು ಯಾವುದೇ ಖಾಸಗಿ ವೇದಿಕೆಗಳು ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿರುವ ಹೈಕೋರ್ಟ್, ಖಾಸಗಿ ಡಿಜಿಟಲ್ ವೇದಿಕೆಗಳಾದ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್‌ನಲ್ಲಿ ಬಳಸಲಾಗಿರುವ ವೀಡಿಯೋಗಳನ್ನು ತತ್‌ಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಎಕ್ಸ್ ಕಾರ್ಪ್ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಕೋರ್ಟ್ ಕಲಾಪದ ದೃಶ್ಯಾವಳಿಗಳ ದುರ್ಬಳಕೆ ತಡೆಗೆ ಕ್ರಮ ಜರಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ …
Read More »ಆರೋಪದಿಂದ ಹೊರಬರುವವರೆಗೂ ಸಿ.ಎಂ. ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ವಿ.ಸೋಮಣ್ಣ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ತಲೆ ಬಾಗುತ್ತಾರೆ ಎನ್ನುವ ವಿಶ್ವಾಸವಿದೆ. ರಾಜೀನಾಮೆ ನೀಡುವುದಿಲ್ಲ ಎಂದು ಅವರು ಹೇಳಿಲ್ಲ. ಬೇರೆಯವರು ರಾಜೀನಾಮೆ ನೀಡುವುದಿಲ್ಲ ಎಂದಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ರೈಲ್ವೆ ಖಾತೆ ರಾಜ್ಯ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಜೀವನ ತೆರೆದ ಪುಸ್ತಕ ಎಂದು ಹೇಳಿಕೊಳ್ಳುತ್ತಾರೆ. ಆ ಪುಸ್ತಕದಲ್ಲಿ ಕೆಲವು ತಪ್ಪುಗಳಾಗಿವೆ …
Read More »