Breaking News

Monthly Archives: ಆಗಷ್ಟ್ 2024

ಪಾದಯಾತ್ರೆ ಯಾವ ಪುರುಷಾರ್ಥಕ್ಕೆ?: ಎಚ್ಕೆಪಿ

ಬಾಗಲಕೋಟೆ: ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳು ಪಾದಯಾತ್ರೆ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರವಾಸೋದ್ಯಮ ಹಾಗೂ ಕಾನೂನು ಸಚಿವ ಎಚ್‌.ಕೆ. ಪಾಟೀಲ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುಟುಂಬದ ಮೇಲೆ ಆಪಾದನೆ ಬಂದಾಗ ಇದೇ ಮೊದಲ ಬಾರಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು ಸಿಎಂ ಸಿದ್ದರಾಮಯ್ಯ. ಹಿಂದೆ ದೇವೇಗೌಡರು, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ವಿರುದ್ಧ ಆಪಾದನೆ ಬಂದಾಗ ತಮ್ಮ ಕುಟುಂಬದ ವಿರುದ್ಧವೇ ತನಿಖಾ ತಂಡ ರಚಿಸಿರಲಿಲ್ಲ ಎಂದರು.

Read More »

ಕ್ಲಾಸ್ ತಪ್ಪಿಸಲು ಇಮೇಲ್ ಮೂಲಕ ಶಾಲೆಗೆ ಬಾಂಬ್ ಬೆದರಿಕೆ: 14 ವರ್ಷದ ಬಾಲಕನ ಬಂಧನ

ನವದೆಹಲಿ: ತರಗತಿಗೆ ಹೋಗುವುದರಿಂದ ತಪ್ಪಿಸಿಕೊಳ್ಳಲು ತನ್ನ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ 14 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಬಾಂಬ್‌ ಬೆದರಿಕೆ ಇಮೇಲ್‌ ಬಂದಿದ್ದರಿಂದ ಖಾಸಗಿ ಶಾಲೆಯಲ್ಲಿ ಆತಂಕ ಮನೆ ಮಾಡಿತ್ತು. ಕೂಡಲೇ ಪೊಲೀಸರನ್ನು ಕರೆಸಿ ಬಾಂಬ್ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ದಕ್ಷಿಣ ದೆಹಲಿಯ ಇನ್ನೂ ಎರಡು ಖಾಸಗಿ ಶಾಲೆಗಳಲ್ಲಿ ಬಾಂಬ್ …

Read More »

ಹಾಸನದಲ್ಲಿ ಆಶ್ಲೀಲ ಪೆನ್‍ಡ್ರೈವ್ ಹಂಚಿಸಿದ್ದೇ ವಿಜಯೇಂದ್ರ‌; ಯತ್ನಾಳ ಗಂಭೀರ ಆರೋಪ

 ಹಾಸನದಲ್ಲಿ ಆಶ್ಲೀಲ ಪೆನ್‍ಡ್ರೈವ್ ಹಂಚಿಸಿದ್ದೇ ವಿಜಯೇಂದ್ರ‌; ಯತ್ನಾಳ ಗಂಭೀರ ಆರೋಪ ವಿಜಯಪುರ: ಭ್ರಷ್ಟ ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷನೆಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ವಿಜಯೇಂದ್ರನ ನಾಲ್ಕಾರು ಚೇಲಾ ಶಾಸಕರ ಹೊರತಾಗಿ 55ಕ್ಕೂ ಹೆಚ್ಚು ಶಾಸಕರ ವಿರೋಧವಿದ್ದು, ಈ ಬಗ್ಗೆ ಹೈಕಮಾಂಡ್ ನಾಯಕರನ್ನು ನಾವು ಪ್ರಶ್ನಿಸುತ್ತೇವೆ. ಪಕ್ಷದಲ್ಲಿ ಹೈಕಮಾಂಡ್ ಭ್ರಷ್ಟ ವಿಜಯೇಂದ್ರನನ್ನು ವಿರುದ್ಧ ಕ್ರಮ ಕೈಗೊಳ್ಳಲಿ, ತಪಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು …

Read More »

ವೃಕ್ಷದಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ : ವಚನಾನಂದ ಸ್ವಾಮೀಜಿ

ದಾವಣಗೆರೆ: ವೀರಶೈವ – ಲಿಂಗಾಯತರು ಹಿಂದುಗಳು ಎನ್ನುವುದು ಚರ್ಚೆ ಮಾಡುವ ವಿಚಾರ. ನಾವು ಎಲ್ಲಿ ಇದ್ದೇವೆ? ನಾವು ಯಾವ ರಾಷ್ಟ್ರದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾವು ಈ ರಾಷ್ಟ್ರವನ್ನು ಯಾವ ರೀತಿ ಬೆಳೆಸಬೇಕು ಎಂದು ಯೋಚಿಸಬೇಕು ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠ ವಾದ ಸತ್ಯ ಸನಾತನವಾದದ್ದು ಹಿಂದುತ್ವದ ವೃಕ್ಷದಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ. ಅಲ್ಲಿ ಅಲ್ಲಮಪ್ರಭು ಬಸವಾದಿ ಶರಣರು, ಗೌತಮ …

Read More »

ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಲು ಗಡುವು. ಇಲ್ಲದಿದ್ದಲ್ಲಿ ಉಗ್ರ ಹೋರಾಟ

ಮುಧೋಳ: ಪ್ರತಿ ವರ್ಷ ಘಟಪ್ರಭಾ ನದಿಯ ಪ್ರವಾಹದಿಂದ ವರ್ಷದ ಗಂಜಿಯನ್ನು ಕಳೆದುಕೊಳ್ಳುತ್ತಿದ್ದೇವೆ. ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕು. ಸರ್ಕಾರ ದಿ.6 ಒಳಗೆ ರೈತರ ಪರವಾದ ನಿರ್ಧಾರವನ್ನು ಪ್ರಕಟಿಸದಿದ್ದರೆ ದಿ.7 ರಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಘಟಪ್ರಭಾ ನದಿ ಸಂತ್ರಸ್ಥರು ಶನಿವಾರ ಜಿಎಲ್ ಬಿಸಿ ಆವರಣದಲ್ಲಿ ಸಭೆಯಲ್ಲಿ ನಿರ್ಧರಿಸಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರಿಗೆ ಮನವಿ ಸಲ್ಲಿಸಿದರು. ಕಬ್ಬು ಬೆಳೆಗಾರರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಸೋರಗಾಂವಿ, ಜಿಲ್ಲಾ ಪಂಚಾಯ್ತಿ …

Read More »

ರಸ್ತೆ ನಿರ್ಮಾಣಕ್ಕೆ ಗುಡ್ಡಗಳ 90 ಡಿಗ್ರಿಯಲ್ಲಿ ಸೀಳಿದ್ದರಿಂದ ಭೂ ಕುಸಿತ”

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿನಲ್ಲಿ ಪದೇ ಪದೇ ಭೂ‌ ಕುಸಿತ ಹಿನ್ನೆಲೆ ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಶಿರಾಡಿ ಘಾಟಿಯ ಹಲವೆಡೆ ಗುಡ್ಡ ಕುಸಿತ‌ ಪ್ರದೇಶಗಳ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಬಳಿಕ ದೊಡ್ಡತಪ್ಲುವಿನಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇ ಪದೇ ಕುಸಿಯುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ …

Read More »

ಕೃಷ್ಣಾ ನದಿಗೆ ಟ್ರ್ಯಾಕ್ಟರ್ ಪಲ್ಟಿ: ಕೊಚ್ಚಿ ಹೋದ 8 ಜನರಲ್ಲಿ ಇಬ್ಬರು ನಾಪತ್ತೆ

ಕೃಷ್ಣಾ ನದಿಗೆ ಟ್ರ್ಯಾಕ್ಟರ್ ಪಲ್ಟಿ: ಕೊಚ್ಚಿ ಹೋದ 8 ಜನರಲ್ಲಿ ಇಬ್ಬರು ನಾಪತ್ತೆ ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಕ್ಕಿವಾಟ್ -ಬಸ್ತವಾಡ್ ರಸ್ತೆಯಲ್ಲಿ ಸಾಗುತ್ತಿದ್ದ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಕೃಷ್ಣಾ ನದಿಯ ಪ್ರವಾಹದಲ್ಲಿ ಪಲ್ಟಿಯಾಗಿ ಇಬ್ಬರು ನಾಪತ್ತೆಯಾಗಿರುವ ಘಟನೆ ಆ.2 ರಂದು(ಶುಕ್ರವಾರ ) ನಡೆದಿದೆ. ಅಕ್ಕಿವಾಟ್ , ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಸಲುವಾಗಿ ಮೋಟಾರ್ ಸ್ಟಾರ್ಟ್ ಮಾಡಲೆಂದು ಅಕ್ಕಿವಾಟ್ – ಬಸ್ತವಾಡ್ ರಸ್ತೆಯಿಂದ ತೆರಳುತ್ತಿದ್ದ ಟ್ರ್ಯಾಕ್ಟರ್‌ ನಲ್ಲಿ …

Read More »

ಯಾವುದೇ ಸಂದರ್ಭದಲ್ಲಿ ಸಿಎಂ ರಾಜೀನಾಮೆ ಕೊಡಬೇಕಾಗುತ್ತದೆ: ಶೆಟ್ಟರ್

ಬೆಳಗಾವಿ: ಸಿದ್ದರಾಮಯ್ಯರನ್ನು ಕೆಳಗಿಳಿಸಲು‌ ಬಿಜೆಪಿಯಿಂದ ಹುನ್ನಾರ ನಡೆಸುತ್ತಿಲ್ಲ. ಯಾರು ತಪ್ಪು ‌ಮಾಡಿದ್ದಾರೋ ಅವರ ರಾಜೀನಾಮೆ ಕೇಳುತ್ತಿದ್ದೇವೆ. ತಪ್ಪು ಮಾಡದಿದ್ದರೆ ಹೆದರುವ ಕಾರಣವಿಲ್ಲ, ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ. ಇವತ್ತಿನ ಪರಿಸ್ಥಿತಿ ಬಹಳ ಸೂಕ್ಷ್ಮವಿದೆ, ಸಿಎಂ ಯಾವುದೇ ಸಂದರ್ಭದಲ್ಲಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ‌ಬೆಳವಣಿಗೆಗಳನ್ನು ನಾವು ಕಾದು ನೋಡುತ್ತೇವೆ. ಬಿಎಸ್‌ವೈ ಅವತ್ತಿನ ಪ್ರಕರಣ, ಸಿದ್ದರಾಮಯ್ಯನವರ ಪ್ರಕರಣಕ್ಕೆ ಹೋಲಿಕೆ‌ …

Read More »

ಕೇಂದ್ರದ ಅಣತಿಯಂತೆ ರಾಜ್ಯಪಾಲರ ಕುಣಿತ: ಸಚಿವ ತಂಗಡಗಿ

ಕೊಪ್ಪಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಕುಣಿಸಿದಂತೆ ಕುಣಿಯುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು. ಕೊಪ್ಪಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿ.ಜೆ.ಅಬ್ರಹಾಂ ಓರ್ವ ಬ್ಲಾಕ್ ಮೇಲರ್. ಆತನ ವಿರುದ್ಧ ಸುಪ್ರೀಂ ಕೋರ್ಟ್ 20 ಲಕ್ಷ ದಂಡ ಹಾಕುವ ಮೂಲಕ ಛೀಮಾರಿ ಹಾಕಿ ಕಳುಹಿಸಿದೆ. ಅಂತಹ ವ್ಯಕ್ತಿ ರಾಜ್ಯಪಾಲರಿಗೆ …

Read More »

ಭ್ರಷ್ಟಾಚಾರ’ವೇ ನಿಮ್ಮ ತಾಯಿ-ತಂದೆ, ನಿಮ್ಮ ಬಂಧು ಬಳಗ: ‘BJP-JDS ನಾಯಕ’ರಿಗೆ ‘DKಕುಟುಕು

ರಾಮನಗರ : “ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಹರಿತ ಮಾತುಗಳಿಂದ ಕುಟುಕಿದರು. ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ …

Read More »