Breaking News

Monthly Archives: ಆಗಷ್ಟ್ 2024

ಸಚಿವ ಸಂಪುಟ ಪುನಾರಚನೆಯ ಸ್ಪಷ್ಟ ಸುಳಿವು ನೀಡಿದ್ದಾರೆ.? ಕೆಲಸ ಮಾಡಿ, ಇಲ್ಲವೇ ಸ್ಥಾನ ಬಿಡಿ: ಸಚಿವರಿಗೆ ಹೈಕಮಾಂಡ್‌

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಾದ ಹಿನ್ನಡೆ, ಅನಂತರ ಡಿಸಿಎಂ ಹುದ್ದೆ ಸೃಷ್ಟಿ ಮತ್ತಿತರ ವಿಷಯಗಳಲ್ಲಿ ವ್ಯಕ್ತವಾದ ಬಣಗಳ ಬಡಿದಾಟದಿಂದ ತೀವ್ರ ಬೇಸರಗೊಂಡಿರುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಮುಂದಿನ 2 ತಿಂಗಳಲ್ಲಿ ಸಚಿವರ ಕಾರ್ಯವೈಖರಿ ಬದಲಾಗದಿದ್ದರೆ ಸ್ಥಾನ ತೊರೆಯಲು ಸಜ್ಜಾಗುವಂತೆ ಸೂಚಿಸಿದ್ದಾರೆ. ಈ ಮೂಲಕ ಸಚಿವ ಸಂಪುಟ ಪುನಾರಚನೆಯ ಸ್ಪಷ್ಟ ಸುಳಿವು ನೀಡಿದ್ದಾರೆ. ಮುಖ್ಯಮಂತ್ರಿಯವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ರವಿವಾರ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ …

Read More »

ಪರಶುರಾಮನ ಪ್ರತಿಮೆ ಬಿಡಿಭಾಗ ಬೆಂಗಳೂರಿನಲ್ಲಿ ಜಪ್ತಿ

ಕಾರ್ಕಳ: ಕಾರ್ಕಳದ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ನಕಲಿ ಪ್ರತಿಮೆ ಎನ್ನುವ ದೂರಿನ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಸಂಬಂಧ ಕಾರ್ಕಳ ನಗರ ಠಾಣೆ ಪೊಲೀಸರು ಆ.3ರಂದು ಪರಶುರಾಮ ಪ್ರತಿಮೆ ನಿರ್ಮಿಸಿದ ಕ್ರಿಷ್‌ ಆರ್ಟ್‌ ವರ್ಲ್ಡ್ ಮಾಲಕ ಕೃಷ್ಣ ನಾಯ್ಕ ಅವರಿಗೆ ಸೇರಿದ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳ ಮಹಜರು ನಡೆಸಿ ಮೂರ್ತಿಯ ಸೊಂಟದ ಮೇಲಿನ ಸುಮಾರು 9 ಟನ್‌ ತೂಕದ …

Read More »

ಸರಕಾರ ಪ್ರವಾಹ ಸಂತ್ರಸ್ತರ ಜೊತೆಗಿದೆ: ಹೆಬ್ಬಾಳಕರ್

ಬೆಳಗಾವಿ: ಸರಕಾರ ಪ್ರವಾಹ ಸಂತ್ರಸ್ತರ ಜೊತೆಗಿದೆ. ಅವರಿಗೆ ಎಲ್ಲ ರೀತಿಯಲ್ಲೂ ನೆರವು ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸುಳಗಾ (ಯು), ಅತವಾಡ, ಬಸುರ್ತೆ, ಬೆಕ್ಕಿನಕೇರಿ, ಬೆಳಗುಂದಿ, ಸೋನೋಲಿ, ಕೊನೆವಾಡಿ, ರಾಕಸಕೊಪ್ಪ, ಯಳೆಬೈಲ್, ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮನೆಗಳ ವೀಕ್ಷಣೆ ಮಾಡಿದರು. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಸಾಕಷ್ಟು …

Read More »

2 ವರ್ಷ ಕಳೆದರೂ ಪ್ರಾರಂಭಗೊಳದ ರಸ್ತೆ ಕಾಮಗಾರಿ

ರಾಯಬಾಗ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲಿಲ್ಲ ಎಂಬಂತೆ ಜಿ.ಎಲ್.ಬಿ.ಸಿ. ಅನುದಾನದಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ 33 ಚಿಕ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದ್ದು‌, ಗುತ್ತಿದಾರ ಸಹ ಕೆಲಸ ಪ್ರಾರಂಭಿಸಿದ್ದಾರೆ. ಆದರೆ ಕೆಲ ರೈತರು ಇದಕ್ಕೆ ತಕರಾರು ಮಾಡಿದ್ದರಿಂದ, ಸರ್ವೆ ಮಾಡಿ ನಿಮ್ಮ ರಸ್ತೆ ಎಲ್ಲಿ ಬರುತ್ತದೆ ಅಲ್ಲಿ ತೆಗೆದುಕೊಳ್ಳಿ ಎಂದಿದ್ದಾರೆ. ಅದರಂತೆ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ …

Read More »

ಕೃಷ್ಣಾ ನದಿಯಲ್ಲಿ ವ್ಯಕ್ತಿ ಶವ ಪತ್ತೆ

ಕೃಷ್ಣಾ ನದಿಯಲ್ಲಿ ವ್ಯಕ್ತಿ ಶವ ಪತ್ತೆ ಬೆಳಗಾವಿ: ತಾಲ್ಲೂಕಿನ ಬಾವನ ಸವದತ್ತಿ ಗ್ರಾಮದ ಬಾಬುರಾವ್‌ ಸಂಜೀವ ಬಾಪಕರ (40) ಎಂಬ ವ್ಯಕ್ತಿ ಶವ, ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಶನಿವಾರ ಪತ್ತೆಯಾಗಿದೆ. ಬಾಬುರಾವ್‌ ಅವರು ಕಾಗವಾಡ ಸಕ್ಕರೆ ಕಾರ್ಖಾನೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಿಗ್ಗೆ ಮನೆಯಿಂದ ಹೋದವರು ಮತ್ತೆ ಬಂದಿರಲಿಲ್ಲ. ಅಂಕಲಿ ಸೇತುವೆ ಬಳಿ ಅವರ ಶವ ಪತ್ತೆಯಾಗಿದೆ. ಸಾವಿಗೆ ನಿಖರ …

Read More »

ತಪ್ಪು ಕಲ್ಪನೆ ಬಿಟ್ಟು ಅಂಗಾಂಗ ದಾನ ಮಾಡಿ: ಸಚಿವ ದಿನೇಶ್‌ ಗುಂಡೂರಾವ್‌

ಬೆಳಗಾವಿ: ‘ಯಾವ ಧರ್ಮವೂ ಅಂಗಾಂಗ ದಾನ ನಿಷೇಧಿಸಿಲ್ಲ. ಈ ಪದ್ಧತಿ ಅನುಸರಿಸಿದರೆ ಬದುಕಿನಲ್ಲಿ ಮೋಕ್ಷ ಸಿಗದು, ನಿಧನದ ನಂತರ ಸ್ವರ್ಗಕ್ಕೆ ಹೋಗಲಾಗದು ಎಂಬೆಲ್ಲ ತಪ್ಪು ಕಲ್ಪನೆ ಜನರಲ್ಲಿವೆ. ಇದರಿಂದ ಎಲ್ಲರೂ ಹೊರಬಂದು ಅಂಗಾಂಗ ದಾನಕ್ಕೆ ಮುಂದಾಗಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆಯಂಡ್‌ ರಿಸರ್ಚ್‌ನ (ಕಾಹೇರ್‌) ಡಾ.ಬಿ.ಎಸ್‌.ಜೀರಗೆ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ …

Read More »

ಮುಳಬಾಗಿಲು | ಆಲಂಗೂರು ಪ್ರತಿಮೆ ನಿರ್ಮಾಣ ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ

ಮುಳಬಾಗಿಲು: ನಗರದ ತಾತಿಪಾಳ್ಯ ವೃತ್ತದಲ್ಲಿ ಆಲಂಗೂರು ಶ್ರೀನಿವಾಸ್ ಪ್ರತಿಮೆ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ರಾಜ್ಯ ಹೈಕೋರ್ಟ್‌ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಭೇಟಿ ನೀಡಿ ಪರಿಶೀಲಿಸಿದರು. ನಾಡಪ್ರಭು ಕೆಂಪೇಗೌಡರ ಅಶ್ವರೂಢ ಪ್ರತಿಮೆ ಹಾಗೂ ಹಿಂದೆ ತಾಲ್ಲೂಕು ಒಕ್ಕಲಿಗರ ಸಂಘದಿಂದ ಪ್ರತಿಷ್ಠಾಪನೆ ಮಾಡಲು ನಿಲ್ಲಿಸಿರುವ ಕ್ಷೇತ್ರದ ಮಾಜಿ ಶಾಸಕ, ಸಚಿವ ದಿವಂಗತ ಆಲಂಗೂರು ಶ್ರೀನಿವಾಸ್ ಅವರ ಪುತ್ಥಳಿ ಸ್ಥಳವನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಪಾದಚಾರಿ ಮಾರ್ಗದಲ್ಲಿ …

Read More »

ಆದಾಯಕ್ಕಿಂತ ಅಧಿಕ ಆಸ್ತಿ: ಯಾದಗಿರಿ ಡಿಎಚ್‌ಒ ಅಮಾನತು

ಯಾದಗಿರಿ: ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ. ಪ್ರಭುಲಿಂಗ ಅವರು ₹1.40 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದನ್ನು ಲೋಕಾಯುಕ್ತ ಪೊಲೀಸ್‌ ಪತ್ತೆ ಹಚ್ಚಿದ್ದರು. ಹೀಗಾಗಿ ನಿಷ್ಪಕ್ಷಪಾತ ತನಿಖೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಅಳಂದ ಸಾರ್ವಜನಿಕ ಆಸ್ಪತ್ರೆಗೆ ಲೀನ್ ವರ್ಗಾವಣೆ …

Read More »

ವಯನಾಡ್‌ ಭೂಕುಸಿತ: ಕೊಡಗು ಜಿಲ್ಲೆಯ ಯುವತಿ ಮೃತದೇಹ ಪತ್ತೆ

ಸಿದ್ದಾಪುರ: ವಯನಾಡು ಭೂಕುಸಿತ ದುರಂತದಲ್ಲಿ ನಾಪಯ್ತೆಯಾಗಿದ್ದ ಕೊಡಗಿನ ನೆಲ್ಯಹುದಿಕೇರಿ ಮೂಲದ ಯುವತಿ ಹಾಗೂ ಕುಟುಂಬದ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ (35) ಚೂರಲ್ ಮಲ ಗೆ ವಿವಾಹವಾಗಿದ್ದರು. ಭೂಕುಸಿತದಲ್ಲಿ ದಿವ್ಯಾ ಸೇರಿದಂತೆ ಕುಟುಂಬದ 9 ಮಂದಿ ನಾಪತ್ತೆಯಾಗಿದ್ದರು. ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಮನವಿ ಮಾಡಿದ್ದರು. ಶುಕ್ರವಾರ ಸಂಜೆ ಕುಟುಂಬದ 9 ಮಂದಿಯ ಪೈಕಿ 8 ಮಂದಿಯ …

Read More »

ಜೋಗಫಾಲ್ಸ್ ವೀಕ್ಷಣೆಗೆ KSRTC ವಿಶೇಷ ಪ್ಯಾಕೇಜ್

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರತಿ ವರ್ಷದಂತೆ ಪ್ರಸಕ್ತ ವರ್ಷದಲ್ಲಿಯೂ ಆಗಸ್ಟ್ 3 ರಿಂದ ಪ್ರತಿ ಶನಿವಾರ, ಭಾನುವಾರ ರಜಾದಿನಗಳಂದು ದಾವಣಗೆರೆ ಹಾಗೂ ಹರಿಹರದಿಂದ ವಿಶ್ವವಿಖ್ಯಾತ ಪ್ರೇಕ್ಷಣೀಯ ಸ್ಥಳವಾದ ಜೋಗಫಾಲ್ಸ್, ಶಿರಸಿ ವಿಕ್ಷಣೆಗೆ ವಿಶೇಷ ಪ್ಯಾಕೇಜ್‌ನೊಂದಿಗೆ ರಾಜಹಂಸ ಹಾಗೂ ವೇಗದೂತ(ಅಶ್ವಮೇದ) ಸಾರಿಗೆಯನ್ನು ಕಾರ್ಯಾಚರಣೆಗೆ ಬಿಡಲಾಗುತ್ತಿದೆ. ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಬುಕ್ಕಿಂಗ್ ಮಾಡಲು ಸೌಕರ್ಯ ಕಲ್ಪಿಸಲಾಗಿದೆ. ಅಥವಾ ಆನ್‌ಲೈನ್ ಬುಕ್ಕಿಂಗ್‌ಗಾಗಿ ನಿಗಮದ ವೆಬ್‌ಸೈಟ್ ksrtc.karnataka.gov.in ನಲ್ಲಿ ಸಾರಿಗೆ ಸೌಲಭ್ಯದ …

Read More »