Breaking News

Monthly Archives: ಆಗಷ್ಟ್ 2024

160ಕ್ಕೂ ಹೆಚ್ಚು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಕಾಳಜಿ ಕೇಂದ್ರಗಳಲ್ಲಿ ಆಶ್ರಯ

ಗೋಕಾಕ: ಇಲ್ಲಿನ ಹಳೆ ದನಗಳ ಪೇಟೆ, ದಾಳಂಬ್ರಿ ತೋಟ, ಮಟನ್ ಮಾರ್ಕೆಟ್, ಉಪ್ಪಾರ ಓಣಿ, ಬೋಜಗರ ಓಣಿ, ಕುಂಬಾರ ಓಣಿ, ಡೋರ ಗಲ್ಲಿ ಮುಂತಾದ ಪ್ರದೇಶಗಳ ಪ್ರತಿ ವರ್ಷ ಘಟಪ್ರಭೆ ಪ್ರವಾಹದಲ್ಲಿ ಮುಳುಗುತ್ತವೆ. ಮಹರ್ಷಿ ಭಗಿರಥ ಸರ್ಕಲ್‌ ಅಂತೂ ಮೊದಲ ಮಳೆಗೇ ಜಲಾವೃತವಾಗುತ್ತದೆ. ಮೂರು ತಲೆಮಾರುಗಳಿಂದಲೂ ಜನ ಒಂದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ನೆರೆ ಬಂದಾಗ ಜನಜೀವನ ಮಾತ್ರ ಅಸ್ತವ್ಯಸ್ತ ಆಗುವುದಿಲ್ಲ. ಇಲ್ಲಿನ ಶಾಲೆ- ಕಾಲೇಜು ಮಕ್ಕಳ ಶಿಕ್ಷಣದ ಮೇಲೂ …

Read More »

ತೋರಣಹಳ್ಳಿ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಚಿಕ್ಕೋಡಿ: ಜನರ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅವಶ್ಯಕತೆ ಇದೆ. ಸಹಕಾರಿ ಧುರೀಣ, ಯುವ ಮುಖಂಡ ಅಮಿತ್ ಕೋರೆ ನೇತೃತ್ವದ ಜನಶಕ್ತಿ ಫೌಂಡೇಶನ್ ವತಿಯಿಂದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರನಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಶುದ್ಧ ಕುಡಿಯುವ ನೀರು ಘಟಕವನ್ನು ನಿರ್ಮಾಣಿಸಲಾಗಿದೆ ಎಂದು ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು ತಾಲೂಕಿನ ತೋರಣಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಜನಶಕ್ತಿ ಫೌಂಡೇಶನ್ ವತಿಯಿಂದ …

Read More »

ರೈತರಿಗಾಗಿ ಹೋರಾಟಕ್ಕೆ ಸಿದ್ದ: ಶಾಸಕ ರಾಜು ಕಾಗೆ

ಕಾಗವಾಡ: ಸರ್ಕಾರ ಈ ಭಾಗ ಬಹು ನಿರೀಕ್ಷಿತ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ವಿಳಂಬ ಮಾಡಿದಲ್ಲಿ ನಾನು ಸಹ ಸ್ಥಳೀಯ ರೈತರ ಜೊತೆ ಹೋರಾಟಕ್ಕೆ ಸಿದ್ದ ಇದ್ದೆನೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು.   ಉಗಾರದಲ್ಲಿ ಸುದ್ದಿಗಾರರೊಂದಿಗೆಮಾತನಾಡಿದ ಅವರು, ‘ಬಸವೇಶ್ವರ ಏತ ನೀರಾವರಿ ಕುರಿತು ಸಿಎಂ ಜೊತೆ ಸಮಗ್ರ ಚರ್ಚೆ ಮಾಡಿದ್ದು, ಪೂರ್ಣಪ್ರಮಾಣದ ಕಾಮಗಾರಿಯಲ್ಲಿ …

Read More »

ಸರ್ಕಾರಿ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ಉಪನ್ಯಾಸಕಿ ಅನುಸೂಯಾ ಹಿರೇಮಠ ಆಯ್ಕೆ

ಬೆಳಗಾವಿ: ದೆಹಲಿಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅತಿಥಿಯಾಗಿ ಭಾಗವಹಿಸಲು ಇಲ್ಲಿನ ಸರ್ಕಾರಿ ಸರಸ್ವತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ಉಪನ್ಯಾಸಕಿ ಅನುಸೂಯಾ ಹಿರೇಮಠ ಆಯ್ಕೆಯಾಗಿದ್ದಾರೆ.   ‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನನ್ನ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕಿ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವುದು ಅಭಿಮಾನದ ಸಂಗತಿ’ ಎಂದು ಶಾಸಕ ಅಭಯ ಪಾಟೀಲ …

Read More »

ತುಂಗಭದ್ರಾ ಕ್ರಸ್ಟ್‌ಗೇಟ್‌ ಕೊಚ್ಚಿ ಹೋದ ಪ್ರಕರಣ: ಕಲ್ಲಿನ ಮಂಟಪ ಭಾಗಶಃ ಮುಳುಗಡೆ

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿರುವುದರಿಂದ ನದಿಗೆ ನೀರು ಬಿಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಮುಳುಗುವ ಹಂತ ತಲುಪಿದೆ. ಕೆಲವು ದಿನಗಳ ಹಿಂದೆ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದು ನದಿಗೆ ನೀರು ಹರಿಸಿದ್ದಾಗ ಇದು ಮುಳುಗಡೆಯಾಗಿತ್ತು. ಕ್ರಸ್ಟ್‌ಗೇಟ್‌ ಈಗ ಮರಳಿ ಅಳವಡಿಸಬೇಕಾಗಿರುವ ಕಾರಣ ಜಲಾಶಯದ 61 ಟಿಎಂಸಿ ಅಡಿ ನೀರು ಖಾಲಿ ಮಾಡಬೇಕಾಗಿದೆ. ಆದ್ದರಿಂದ …

Read More »

ನಿತ್ಯಭವಿಷ್ಯ

ಮೇಷ: ಜೇನು ಕೃಷಿಯಲ್ಲಿ ಪ್ರಗತಿ. ಸ್ನೇಹಿತರಿಂದ ಸಹಾಯ. ಕೋರ್ಟ್ ವ್ಯಾಜ್ಯಗಳಲ್ಲಿ ಜಯ. ಸ್ಥಿರಾಸ್ತಿ ಲಾಭ. ಆಧ್ಯಾತ್ಮದ ಒಲವು. ಶುಭಸಂಖ್ಯೆ: 5 ವೃಷಭ: ಉದ್ಯೋಗದಲ್ಲಿ ಒತ್ತಡ. ಕಲಾವಿದರಿಗೆ ಅಪಕೀರ್ತಿ. ಅನಗತ್ಯ ಪ್ರಯಾಣ. ದಾಂಪತ್ಯದಲ್ಲಿ ಕಲಹ. ಪಾಲುದಾರಿಕೆಯಲ್ಲಿ ಕಿರಿಕಿರಿ. ಶುಭಸಂಖ್ಯೆ: 9 ಮಿಥುನ: ಆರ್ಥಿಕ ಲಾಭ. ಶತ್ರು ದಮನ. ಸಂಗಾತಿಯಿಂದ ಸಹಾಯ. ಉದ್ಯೋಗದಲ್ಲಿ ಅನುಕೂಲ. ದಾಂಪತ್ಯದಲ್ಲಿ ಅಂತರ. ಅನಾರೋಗ್ಯ. ಶುಭಸಂಖ್ಯೆ:1 ಕಟಕ: ಸಾಲಬಾಧೆ. ಶತ್ರು ಕಾಟ. ಮಕ್ಕಳಿಂದ ಬೇಸರ. ಉದ್ಯೋಗದಲ್ಲಿ ತೊಂದರೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಜೂಜಿನಿಂದ ತೊಂದರೆ. ಶುಭಸಂಖ್ಯೆ: 8 ಸಿಂಹ: ವಾಹನ ಯೋಗ. …

Read More »

ಬೆಂಗಳೂರಿನಲ್ಲಿ ಮುಂಜಾನೆವರೆಗೂ ಅಬ್ಬರಿಸಿದ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆವರೆಗೂ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ. ನಿನ್ನೆ ಮಧ್ಯರಾತ್ರಿಯವರೆಗೂ ಮಳೆ ಬರುವ ಯಾವುದೇ ವಾತಾವರಣ ಇರಲಿಲ್ಲ. ಆದರೆ, ನಸುಕಿನ ಜಾವ ಮಳೆರಾಯ ಅಬ್ಬರಿಸಿದ್ದಾನೆ. ನಿದ್ರೆಯಿಂದ ಎಚ್ಚರಗೊಂಡ ಎಷ್ಟೋ ಮಂದಿ ವರುಣ ಅಬ್ಬರ ಕಂಡು ದಂಗಾಗಿದ್ದಾರೆ. ಸುಮಾರು ಮೂರ್ನಾಲ್ಕು ಗಂಟೆ ಮಳೆ ಎಡಬಿಡದೆ ಸುರಿದಿದೆ. ಇದರ ಪರಿಣಾಮ ರಾಜಧಾನಿಯಲ್ಲಿ ಜನ-ಜೀವನ ಅಸ್ತವ್ಯಸ್ತಗೊಂಡಿದೆ. ನಾಗಾವಾರ ಜಂಕ್ಷನ್​ ಮತ್ತು …

Read More »

ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆ

ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ರವಿವಾರ ಸಂಜೆ ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 14.38 ಲಕ್ಷ ರೂಪಾಯಿಗಳ …

Read More »

ಕೋಚಿಂಗ್​ ಇಲ್ಲದೆ ಒಂದೇ ವರ್ಷದಲ್ಲಿ 6 ಸರ್ಕಾರಿ ನೌಕರಿ ಗಿಟ್ಟಿಸಿದ ಯುವತಿ

ಸರ್ಕಾರಿ ಕೆಲಸಕ್ಕಾಗಿ ಹಗಲಿರುಳು ತಪಸ್ಸು ಮಾಡುವ ಎಷ್ಟೋ ಮಂದಿ ನಮ್ಮ ನಡುವೆ ಇದಾರೆ. ಅದೇನೆ ಆಗಲಿ ಸರ್ಕಾರಿ ನೌಕರಿ ಪಡೆಯಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಓದಿನಲ್ಲಿ ಮಗ್ನರಾಗಿರುತ್ತಾರೆ. ಕೆಲವರಂತೂ ಕೋಚಿಂಗ್​​ ಕ್ಲಾಸ್​ಗಳಿಗೆ ಸೇರಿ ಕಠಿಣ ತರಬೇತಿ ನಡೆಸುತ್ತಾರೆ. ಆದರೆ, ಕೆಲವರು ಯಾವುದೇ ಕೋಚಿಂಗ್​ ಪಡೆಯದೇ ಸರ್ಕಾರಿ ಕೆಲಸ ಗಿಟ್ಟಿಸಿದ ಎಷ್ಟೋ ಉದಾಹರಣೆಗಳು ಸಹ ನಮ್ಮ ನಡುವೆ ಇದೆ. ನೀವು ಮೇಲಿನ ಫೋಟೋದಲ್ಲಿ ನೋಡುತ್ತಿರುವ ಯುವತಿ ಈ ಸಾಧನೆಗೆ ತಾಜಾ ಉದಾಹರಣೆಯಾಗಿದ್ದಾರೆ. ಸದ್ಯ …

Read More »

ಹೊನ್ನಾವರ: ಬಾವಿಗೆ ಬಿದ್ದು ಮಹಿಳೆ ಸಾವು

ಹೊನ್ನಾವರ: ತಾಲ್ಲೂಕಿನ ನಗರಬಸ್ತಿಕೇರಿ ಗ್ರಾಮದ ಕುಂಟೋಡಿಯಲ್ಲಿ ಶನಿವಾರ ಮಹಿಳೆಯೊಬ್ಬಳು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಕುದ್ರಗಿಯ ಅಕ್ಷತಾ ಮಂಜುನಾಥ ನಾಯ್ಕ(26) ಮೃತರು. ‘ಅನಾರೋಗ್ಯಕ್ಕೊಳಗಾಗಿದ್ದ ಸಹೋದರನ್ನು ನೋಡಿಕೊಳ್ಳಲು 15 ದಿನದ ಹಿಂದೆ ಅಕ್ಷತಾ ತವರು ಮನೆ ಕುದ್ರಿಗೆ ಬಂದಿದ್ದಳು.ಮನೆಯ ಸಮೀಪ ಬಾವಿಯಲ್ಲಿ ಕಂಡುಬಂದ ಹಾವೊಂದನ್ನು ನೋಡಲು ಬಾವಿಯ ಕಟ್ಟೆಯ ಮೇಲೆ ಕೈಯೂರಿ ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಜಾರಿ ತಲೆಕೆಳಗಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದಾಳೆ’ ಎಂದು ಅವರ ಅಕ್ಷತಾ ತಾಯಿ ಎಂದು ದೂರಿನಲ್ಲಿ ತಿಳಿಸಿದ್ದಾರೆ. …

Read More »