Breaking News

Monthly Archives: ಜೂನ್ 2024

ಸುಮಲತಾ ಅಂಬರೀಷ್​ಗೆ ಬಿಜೆಪಿಯಿಂದ ಮತ್ತೆ ನಿರಾಶೆ!

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದ ಸುಮಲತಾ (Sumalatha) ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ (BJP-JDS Alliance) ಮಾಡಿಕೊಂಡಿದ್ದರಿಂದ ಆ ಕ್ಷೇತ್ರ ಜೆಡಿಎಸ್​ ಪಾಲಾಗಿತ್ತು. ಸುಮಲತಾ ಬಿಜೆಪಿ ಸೇರಿದ್ದರಿಂದ ಮಂಡ್ಯ ಟಿಕೆಟ್ ಕೈತಪ್ಪಿತ್ತು. ಆದರೆ ಅವರಿಗೆ ವಿಧಾನ ಪರಿಷತ್​ (Legislative Council) ಟಿಕೆಟ್ ಸಿಗಬಹುದು ಎಂದು ನಂಬಲಾಗಿತ್ತು. ಆದರೆ ಭಾನುವಾರ ಘೋಷಣೆ ಮಾಡಿದ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುಮಲತಾ ಅಂಬರೀಶ್‌ ಹೆಸರಿಲ್ಲ. ಸುಮಲತಾ …

Read More »

ಕರ್ನಾಟಕ ಮಾತ್ರ ಅಲ್ಲ, ಇಡೀ ದೇಶದಲ್ಲೇ FDI ಕುಸಿದಿದೆ;

ಬೆಂಗಳೂರು: ‘ಕರ್ನಾಟಕ ಬಿಡಿ, ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು – ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್‌ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ …

Read More »

ಮಳೆಕರ್ಣಿ: ಪ್ರಾಣಿ ಬಲಿ ಸಂ‍ಪೂರ್ಣ ನಿಷೇಧ

ಬೆಳಗಾವಿ: ತಾಲ್ಲೂಕಿನ ಉಚಗಾಂವ ಗ್ರಾಮದಲ್ಲಿನ ಮಳೆಕರ್ಣಿ ದೇವಿಗೆ ಪ್ರಾಣಿ ಬಲಿ ನೀಡುವುದನ್ನು ಶುಕ್ರವಾರದಿಂದ ಸಂಪೂರ್ಣ ನಿಲ್ಲಿಸಲಾಯಿತು. ನಿಷೇಧದ ನಡುವೆಯೂ ಹಲವು ವರ್ಷಗಳಿಂದ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಇಲ್ಲಿ ಕುರಿ ಬಲಿ ನಡೆಯುತ್ತಲೇ ಇತ್ತು. ಗ್ರಾಮ ಪಂಚಾಯಿತಿಯಲ್ಲಿ ಈಚೆಗೆ ನಿರ್ಣಯ ಅಂಗೀಕರಿಸುವ ಮೂಲಕ ಬಲಿ ನೀಡುವುದಕ್ಕೆ ತಡೆ ಒಡ್ಡಲಾಯಿತು. ಉಚಗಾಂವ ಗ್ರಾಮದೇವತೆ ಮಳೆಕರ್ಣಿಯ ದೇವಸ್ಥಾನ ಪುರಾತನವಾದದ್ದು. ಬಹುಪಾಲು ಮರಾಠಿಗರು ಈ ದೇವಿಗೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಮಳೆಕರ್ಣಿದೇವಿ ಬೇಡಿದ ವರವನ್ನು ನೀಡುತ್ತಾಳೆ …

Read More »

ಅತಿವೃಷ್ಠಿ: ಮುನ್ನೆಚ್ಚರಿಕೆ ವಹಿಸಲು ಪಿಡಿಒಗಳಿಗೆ ಸೂಚನೆ

ಚಿಕ್ಕೋಡಿ: ಮಳೆಗಾಲ ಪ್ರಾರಂಭಕ್ಕೂ ಮುಂಚೆ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ತಂಡ ರಚಿಸಿ, ಅತಿವೃಷ್ಠಿ ಮುನ್ನೆಚ್ಚರಿಕೆ ಕ್ರಮವಾಗಿ ಕಡ್ಡಾಯವಾಗಿ ವಿಪತ್ತು ನಿರ್ವಹಣಾ ತಂಡ ರಚನೆ ಮಾಡಬೇಕೆಂದು ಚಿಕ್ಕೋಡಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ವಿವಿಧ ಯೋಜನೆಯ ಪ್ರಗತಿ ಪರಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ ನಿರ್ವಹಣೆಗೆ ಸೂಕ್ತ ಸಿದ್ದತೆ ಮಾಡಿಕೊಳ್ಳಬೇಕು. ಪ್ರವಾಹ ಸಂದರ್ಭದಲ್ಲಿ …

Read More »

ಪಶು ಆಸ್ಪತ್ರೆ ಕ‌ಟ್ಟಡ ಕಳಪೆ ಕಾಮಗಾರಿ, ಮರು ನಿರ್ಮಾಣಕ್ಕೆ ಕಡಾಡಿ ಒತ್ತಾಯ

ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ಮಂಜೂರಾದ 4 ಪಶು ಆಸ್ಪತ್ರೆ ಕಟ್ಟಡಗಳ ಕಾಮಗಾರಿ ಗುಣಮಟ್ಟ ಕಳಪೆಯಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಪಶು ಆಯುಕ್ತರನ್ನು ಒತ್ತಾಯಿಸಿದ್ದಾರೆ. ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಪಶು ಚಿಕಿತ್ಸಾಲಯ ಮತ್ತು ಪಶು ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಕಳಪೆ ಮಟ್ಟದಲ್ಲಿ ಕೈಗೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ …

Read More »

ಮತದಾರರ ಸಮಸ್ಯೆ ಆಲಿಸುವುದೇ ಪ್ರತಿನಿಧಿ ಕರ್ತವ್ಯ: ಸತೀಶ ಜಾರಕಿಹೊಳಿ

ರಾಯಬಾಗ: ಚುನಾವಣೆಯಲ್ಲಿ ಗೆದ್ದು, ಶಾಸಕರಾಗುವುದು ಮುಖ್ಯವಲ್ಲ, ಕ್ಷೇತ್ರದ ಜನರೊಂದಿಗೆ ಸ್ಪಂದಿಸಿ, ಅವರ ಸಮಸ್ಯೆಗಳಿಗೆ ಸಹಕರಿಸುವುದು, ಚುನಾಯಿತ ಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಪಟ್ಟಣದ ಹೊರಭಾಗದಲ್ಲಿರುವ ಹುಲ್ಯಾಳ ಕೆರೆಯನ್ನು ಶನಿವಾರ ವೀಕ್ಷಣೆ ಮಾಡಿ ಮಾತನಾಡಿದರು. ನೀರಾವರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಅಲ್ಲಲ್ಲಿ ನೀರು ಪೋಲಾಗದಂತೆ ಕಾಳಜಿವಹಿಸಬೇಕು ಎಂದರು.

Read More »

ಜಲಮೂಲಗಳ ಅತಿಕ್ರಮಣ: ಅಂಬೇಡ್ಕರ್‌ ಕೆರೆಯೊಡಲು ಬರಿದು…

ಬೆಳಗಾವಿ: ಒಂದು ಕಾಲಕ್ಕೆ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ನೆರವಾಗಿದ್ದ, ಅಕ್ಕಪಕ್ಕದ ಜಮೀನುಗಳ ಕೊಳವೆಬಾವಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿದ ಇಲ್ಲಿನ ಅನಗೋಳದ ಅಂಬೇಡ್ಕರ್‌ ಕೆರೆ ಈಗ ಬರಿದಾಗಿದ್ದು, ಆಟದ ಮೈದಾನವಾಗಿ ಮಾರ್ಪಟ್ಟಿದೆ. ಇದನ್ನು ಮಾದರಿಯಾಗಿ ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ನನೆಗುದಿಗೆ ಬಿದ್ದಿದೆ. 9 ಎಕರೆ ಪರಿಸರದಲ್ಲಿ ಹರಡಿಕೊಂಡಿರುವ ಕೆರೆಯಲ್ಲಿ ಈ ಹಿಂದೆ ಬೇಸಿಗೆಯವರೆಗೂ ನೀರು ಸಂಗ್ರಹವಿರುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಚಳಿಗಾಲದ ಹೊತ್ತಿಗೆ ಕೆರೆಯೊಡಲು ಖಾಲಿಯಾಗುತ್ತಿದೆ. ಹಾಗಾಗಿ ನಿತ್ಯ ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಲಗ್ಗೆ …

Read More »

ಸ್ಪ್ರೈಟ್ ತುಂಬಿದ್ದ ಲಾರಿ ರಸ್ತೆ ಮಧ್ಯೆಯೇ ಪಲ್ಟಿ

ವಿಜಯಪುರ: ಸ್ಪ್ರೈಟ್ ಕಂಪನಿಯ ಪಾನೀಯ ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಸಂಚಾರ ಅಸ್ತವ್ಯಸ್ತವಾದ ಘಟನೆ ಬಬಲೇಶ್ವರ ತಾಲೂಕಿನಲ್ಲಿ ಜರುಗಿದೆ. ಭಾನುವಾರ ನಸುಕಿನಲ್ಲಿ ಜಮಖಂಡಿ-ವಿಜಯಪುರ ಮಾರ್ಗವಾಗಿ ಸ್ಪ್ರೈಟ್ ಕಂಪನಿಯ ಪೇಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಮಹಾರಾಷ್ಟ್ರ ನೋಂದಣಿ ಹೊಂದಿದ್ದ ಲಾರಿ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ. ಇದರಿಂದಾಗಿ ಲಾರಿ ರಸ್ತೆ ಮಧ್ಯೆಯೇ ಮಗುಚಿ ಬಿದ್ದಿದ್ದು, ಪೇಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಲ್ಲಿ ಚಾಲಕ …

Read More »

ಜಿಂಕೆ ಕೊಂದು‌ ಮಾಂಸ ಸಾಗಾಟ ಮಾಡುತ್ತಿದ್ದ ಹಲವರ ಬಂಧನ

ಯಲ್ಲಾಪುರ: ಜಿಂಕೆ ಕೊಂದು‌ ಮಾಂಸ ಸಾಗಾಟ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಹಲವರನ್ನು ಶನಿವಾರ ದಸ್ತಗಿರಿ ಮಾಡಿದೆ. ಯಲ್ಲಾಪುರ ತಾಲೂಕಿನ ಚಂದ್ಗುಳಿ ಪಂಚಾಯತ್ ವ್ಯಾಪ್ತಿಯ ದನಕಲಜಡ್ಡಿಯ ಸತೀಶ ಪರಮೆಶ್ವರ ನಾಯ್ಕ್ ಎಂಬಾತನ‌ ಮನೆಯಲ್ಲಿ ತಪಾಸಣೆ ಮಾಡಿದಾಗ ಜಿಂಕೆ ಮಾಂಸ ಮತ್ತು ಅನಧಿಕೃತ ಬಂದೂಕು ಪತ್ತೆಯಾಗಿದೆ. ವಿಚಾರಣೆಗೊಳಪಡಿಸಿದಾಗ ಯಲ್ಲಾಪುರ ಪಟ್ಡಣದ ರುಸ್ತುಂ ಪಟೇಲ್ ಸಾಬ್ ಭೇಫಾರಿ ಈತ ಇನ್ನಿತರರನ್ನೊಳಗೊಂಡು ಪ್ರಾಣಿಯನ್ನು ಭೇಟೆಯಾಡಿ ವೃತ್ತಿಯಾಗಿಸಿಕೊಂಡಿರುವುದು ತನಿಖೆ ವೇಳೆ ವ್ಯಕ್ತವಾಗಿದೆ. ಈತನೊಂದಿಗೆ ಸತೀಶ ಪರಮೇಶ್ವರ …

Read More »

ನೈಟ್ ಕ್ಲಬ್ ವಿರುದ್ಧ ಗ್ರಾಮಸ್ಥರ ಬೃಹತ್ ಪ್ರತಿಭಟನೆ

ಪಣಜಿ: ಗೋವಾದ ಮಾಪ್ಸಾದ ಮುನಂಗವಾಡ-ಅಸ್ಗಾಂವ್‍ನಲ್ಲಿ ಯೋಜಿತ ನೈಟ್ ಕ್ಲಬ್ ವಿರುದ್ಧ ಗ್ರಾಮಸ್ಥರು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ನಿವಾಸಿಗಳು ನೈಟ್ ಕ್ಲಬ್ ಎದುರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯಲು ಯತ್ನಿಸಿದರು. ಶುಕ್ರವಾರ ತಡರಾತ್ರಿ ಶ್ರೀ ಬರಸಖಲೇಶ್ವರ ದೇವಸ್ಥಾನದಲ್ಲಿ ಅಸ್ಗಾಂವ್-ಬಡೆ ನಾಗರಿಕ ಕ್ರಿಯಾ ಸಮಿತಿಯ ಧ್ವಜದ ಅಡಿಯಲ್ಲಿ ಎಲ್ಲಾ ಗ್ರಾಮಸ್ಥರು ಜಮಾಯಿಸಿದರು. ದೇವಸ್ಥಾನದಿಂದ ಆರಂಭವಾದ ಮೇಣದ ಬತ್ತಿ ಮೆರವಣಿಗೆಯು ಯೋಜಿತ ನೈಟ್ ಕ್ಲಬ್ ಸ್ಥಳದಲ್ಲಿ ಸಮಾರೋಪಗೊಂಡಿತು. …

Read More »