ಶಿವಮೊಗ್ಗ: ಕುಟುಂಬ ಕದನಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆದ್ದು ಬೀಗಿದ್ದು, ಎದುರಾಳಿ ಕಾಂಗ್ರೆಸ್ನ ಗೀತಾ ಶಿವರಾಜ್ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪಗೆ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಮಾಜಿ ಸಿಎಂ ದಿ. ಬಂಗಾರಪ್ಪ ಅವರ ಕುಟುಂಬದ ಕಲಹ ಚುನಾವಣೆ ಮುಗಿದರೂ ನಿಲ್ಲುವಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರು ಬರೆದಿರುವ ಸುದೀರ್ಘ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. …
Read More »Monthly Archives: ಜೂನ್ 2024
ಗ್ಯಾರಂಟಿ’ ಕೈ ಹಿಡಿಯುವ ನಿರೀಕ್ಷೆ ಹುಸಿಯಾಗಿದೆ, ಸೋಲಿನ ಕುರಿತು ವರಿಷ್ಠರಿಗೆ ವರದಿ: ಆಲಗೂರ
ವಿಜಯಪುರ : ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಕುರಿತು ಕಾರಣಗಳ ವರದಿ ನೀಡುವಂತೆ ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಉಸ್ತುವಾರಿ ರಂದೀಪ ಸುರ್ಜೇವಾಲಾ ಸೂಚಿಸಿದ್ದಾರೆ ಎಂದು ಲೋಕಸಭೆ ಚುನಾವಣೆಯಲ್ಲಿನ ಪರಾಜಿತ ಅಭ್ಯರ್ಥಿ ರಾಜು ಆಲಗೂರ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲ ಅವರು ಇಂದು ಬೆಳಿಗ್ಗೆ ಕರೆ ಮಾಡಿ ಮಾತನಾಡಿದರು. ಸೋಲಿನ ಕುರಿತು ಮಾಹಿತಿ ಪಡೆದ ಅವರು, ಈ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ. ಶೀಘ್ರವೇ ವಿಜಯಪುರ …
Read More »Gold Rate: ₹2200 ಕುಸಿದ ಚಿನ್ನದ ಬೆಲೆ, ಬೆಳ್ಳಿ ಬೆಲೆ ಕೂಡ ಕುಸಿತ
ಜೂನ್ 4 ರಂದು ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾದ ಕಾರಣ, ಚಿನ್ನ ಬೆಳ್ಳಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿತ್ತು. ಇಂದು (ಬುಧವಾರ) ಷೇರು ಮಾರುಕಟ್ಟೆಯಲ್ಲಿ ಸುಧಾರಣೆ ಕಂಡಿದ್ದು ಪರಿಣಾಮ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಮುಖವಾಗಿದೆ. ಜೂನ್ 4 ₹6,68,000 ಇದ್ದ100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 2000 ರೂಪಾಯಿ ಕುಸಿತ ಕಂಡಿದ್ದು ₹ 6,66,000 ಆಗಿದೆ. ಮಂಗಳವಾರ ₹ …
Read More »ರಾಜ್ಯದಲ್ಲಿ ಮುಂದಿನ 24 ಗಂಟೆ ಭಾರೀ ಮಳೆ : 17 ಜಿಲ್ಲೆಗಳಿಗೆ ʻಯೆಲ್ಲೋ ಅಲರ್ಟ್ʼ ಘೋಷಣೆ
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರುವಾಗಿದ್ದು, ಇಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ವಿವಿಧೆಡೆ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿದೆ. ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, …
Read More »ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್, ಬಿಜೆಪಿಯಿಂದ ಬಂದವರಿಂದ ಉಪಯೋಗ ಆಗ್ಲಿಲ್ಲ
ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣವಲ್ಲ ಎಂದು ಗೋಕಾಕ ನಗರದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಐದು ಲಕ್ಷ ಲಿಂಗಾಯತ ಮತದಾರರು ಬೆಳಗಾವಿಯಲ್ಲಿದ್ದಾರೆ, ಅವರೇನು ನನ್ನ ಮಾತು ಕೇಳ್ತಾರಾ? ಬೆಳಗಾವಿ ಕ್ಷೇತ್ರದ (Belagavi Election Results) ಮತದಾರರನ್ನು ಅಸೆಸ್ ಮಾಡುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಫಲರಾದರು. ಇದೇ ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಈ ಸಲ …
Read More »ಒಂದೇ ವಿಮಾಣದಲ್ಲಿ ಒಟ್ಟಿಗೆ ಪ್ರಯಾಣಿಸಿದ ನಿತೀಶ್ ಕುಮಾರ್-ತೇಜಸ್ವಿ ಯಾದವ್! ವಿಡಿಯೋ ವೈರಲ್
ನವದೆಹಲಿ : ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖಂಡ ತೇಜಸ್ವಿ ಯಾದವ್ ಪಾಟ್ನಾದಿಂದ ದೆಹಲಿಗೆ ಒಂದೇ ವಿಮಾನದಲ್ಲಿ ಪ್ರಯಾಣಿಸಿದರು. ಇಬ್ಬರೂ ಪ್ರಮುಖ ನಾಯಕರು ಎನ್ಡಿಎ ಮತ್ತು ಇಂಡಿಯಾ ಬ್ಲಾಕ್ನ ಪ್ರಮುಖ ಸಭೆಯಲ್ಲಿ ಭಾಗವಹಿಸಲಿದ್ದು, ಅಲ್ಲಿ ಹೊಸ ಸರ್ಕಾರದಲ್ಲಿ ಪ್ರತಿಯೊಬ್ಬರ ಪಾತ್ರಕ್ಕಾಗಿ ಚರ್ಚೆಗಳು ಮತ್ತು ಮಾತುಕತೆಗಳನ್ನು ಮಾಡುವ ಸಾಧ್ಯತೆಯಿದೆ. ನಿತೀಶ್ …
Read More »ಬಿಜೆಪಿಯನ್ನು ಸೋಲಿಸಬಹುದೆಂದು ಲೋಕಸಭೆ ಚುನಾವಣೆ ಫಲಿತಾಂಶ ತೋರಿಸಿದೆ: ಉದ್ಧವ್ ಠಾಕ್ರೆ
ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿಯನ್ನು ಸೋಲಿಸಬಹುದೆಂದು ತೋರಿಸಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದಿರುವ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬುಧವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಹೋಗಲಾಡಿಸಿದ್ದು, ಬಿಜೆಪಿಯನ್ನು ಸೋಲಿಸಬಹುದು ಎಂಬುದನ್ನು ಚುನಾವಣೆ ತೋರಿಸಿದೆ ಎಂದರು. ಚುನಾವಣೆಯಲ್ಲಿ ವಿಜೇತರಾದ ನಾಸಿಕ್ ಕ್ಷೇತ್ರದ ಶಿವಸೇನಾ ಯುಬಿಟಿ ಬಣದ ರಾಜಬಾಹು ಪ್ರಕಾಶ್ ವಾಜೆ, (ಮುಂಬೈ …
Read More »UGNEET ಫಲಿತಾಂಶ ಪ್ರಕಟ: ಕರ್ನಾಟಕಕ್ಕೆ 5ನೇ ಸ್ಥಾನ, ರಾಜ್ಯದ ಮೂವರಿಗೆ ಮೊದಲ ರ‍್ಯಾಂಕ್
ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮಂಗಳವಾರ(ಜೂನ್ 4) ಸಂಜೆ ತಡವಾಗಿ UGNEET-2024 ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಗಳಿಸಿದ 67 ಟಾಪರ್‌ಗಳಲ್ಲಿ ರಾಜ್ಯದ ಮೂವರು ಇದ್ದಾರೆ. ರಾಜ್ಯದ ಕಲ್ಯಾಣ್ ವಿ, ಸ್ಯಾಮ್ ಶ್ರೇಯಸ್ ಜೋಸೆಫ್ ಮತ್ತು ಅರ್ಜುನ್ ಕಿಶೋರ್ ಅವರು ಶೇ. 99.99 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 89,088 …
Read More »ರಾಜೀನಾಮೆ ನೀಡಲು ಮುಂದಾದ ಮಹಾರಾಷ್ಟ್ರ ಡಿಸಿಎಂ! ಫಡ್ನವೀಸ್
ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ (Maharashtra state politics) ಮತ್ತೆ ಹೈಡ್ರಾಮಾ ಶುರುವಾಗಿದೆ. ಒಂದೆಡೆ ಏಕನಾಥ್ ಶಿಂಧೆ (Eknath Shinde) ಬಣದ ಶಿವಸೇನೆ (Shiva Sena) ನೂತನ ಸಂಸದರನ್ನು ಸೆಳೆಯಲು ಉದ್ಧವ್ ಠಾಕ್ರೆ (Uddhav Thackeray) ಬಣ ಪ್ರಯತ್ನಿಸುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಅದರ ನಡುವೆ ಇದೀಗ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ (DCM) ಸ್ಥಾನಕ್ಕೆ ರಾಜೀನಾಮೆ ನೀಡಲು ದೇವೇಂದ್ರ ಫಡ್ನವೀಸ್ (Devendra Fadnavis) ಮುಂದಾಗಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ …
Read More »ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ
ನವದೆಹಲಿ: ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬುಧವಾರ ರಾಜೀನಾಮೆ ಸಲ್ಲಿಸಿದರು. ತಮ್ಮ ಸಂಪುಟ ಸಹದ್ಯೋಗಿಗಳ ಜೊತೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ಪತ್ರ ಸ್ವೀಕರಿಸಿದ ದ್ರೌಪದಿ ಮುರ್ಮು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೂ ಪ್ರಧಾನಿಯಾಗಿ ಮುಂದುವರಿಯುವಂತೆ ಅವರು ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ನಿನ್ನೆ ಕೇಂದ್ರ ಸಚಿವ ಸಂಪುಟವು 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿತ್ತು. ಪ್ರಸ್ತುತ …
Read More »