Breaking News

Monthly Archives: ಜೂನ್ 2024

ಸ್ನೇಹಿತನ ಕೊಂದು ತುಂಡರಿಸಿ ಮೋರಿಗೆ ಎಸೆದ!

ಬೆಂಗಳೂರು: ಪತ್ನಿ ಜತೆ ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನು ಹತ್ಯೆಗೈದು, ಬಳಿಕ ಮೃತದೇಹವನ್ನು ಐದಾರು ತುಂಡುಗಳನ್ನಾಗಿ ಮಾಡಿ ಬಿಸಾಡಿದ್ದ ಆರೋಪಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಿನಾಪುರ ನಿವಾಸಿ ಮಾಧವ ರಾವ್‌ (41) ಬಂಧಿತ ಆರೋಪಿ. ಈತ ಮೇ 28ರಂದು ಸ್ನೇಹಿತ ಶ್ರೀನಾಥ್‌ನನ್ನು ಹತ್ಯೆಗೈದು, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಬೆಳತ್ತೂರು ಬಳಿಯ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೂಂದೆಡೆ ಸಂಪಿಗೆಹಳ್ಳಿ …

Read More »

ಎಚ್‌ಎಸ್‌ಆರ್‌ಪಿ ನೋಂದಣಿ: ಸಮೀಪಿಸುತ್ತಿದೆ ಗಡುವು

ಶಿವಮೊಗ್ಗ: ಜಿಲ್ಲೆಯಲ್ಲಿ ಇಲ್ಲಿಯವರೆಗೆ 55,733 ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್‌ ನಂಬರ್ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಮಾಡಲಾಗಿದೆ. 2019ರ ಏಪ್ರಿಲ್‌ 1ಕ್ಕಿಂತ ಮುಂಚೆ ಖರೀದಿಸಲಾದ ವಾಹನಗಳು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಬೇಕಿದೆ. ಬೈಕ್‌, ಕಾರು, ಆಟೋ ಮತ್ತು ಲಾರಿ ಸೇರಿದಂತೆ ಎಲ್ಲ ವಾಹನಗಳಿಗೆ ಅಳವಡಿಸುವುದು ಕಡ್ಡಾಯವಾಗಿದೆ. ಹೀಗಾಗಿಯೇ ವಾಹನ ಸವಾರರು ನಂಬರ್ ಪ್ಲೇಟ್‌ ಬದಲಿ ಮಾಡಿಸುವಲ್ಲಿ ನಿರತರಾಗಿದ್ದಾರೆ. ಆನ್‌ಲೈನ್‌ ಮೂಲಕ ಎಚ್‌ಎಸ್‌ಆರ್‌ಪಿ ನೋಂದಣಿ ಮಾಡಿಸಿ ಶುಲ್ಕ ಕಟ್ಟಿ ವಾಹನ ಉತ್ಪಾದಕ …

Read More »

ನಾಪೋಕ್ಲು: ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ

ನಾಪೋಕ್ಲು: ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ ನಾಪೋಕ್ಲು: ಖಾಸಗಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಶಾಲೆಯಿಂದ ವಿದ್ಯಾರ್ಥಿಗಳನ್ನು ನೆಲಜಿ ಗ್ರಾಮಕ್ಕೆ ಕರೆದೊಯ್ದು ಬಸ್ ನೆಲಜಿ ಗ್ರಾಮದಿಂದ ಹಿಂತಿರುಗುವಾಗ ಕುಲ್ಲೇಟಿರ ರಾಜಾ ಎಂಬುವರ ಮನೆ ಸಮೀಪ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ತುಂಡಾಗಿದ್ದು ಆಧಾರವಾಗಿ ನಿಲ್ಲಿಸಿದ ಕಂಬದ ಸಹಾಯದಿಂದ ಭಾರಿ ಅನಾಹುತ …

Read More »

ಮುಂದುವರೆದ ಮಳೆಯ ಆರ್ಭಟ ಸಿಡಿಲಿಗೆ ಎಮ್ಮೆ-ಕುರಿ ಸಾವು; ಹತ್ತಾರು ಮನೆಗಳು ಕುಸಿತ

ವಿಜಯಪುರ: ಭಾರಿ ಆರ್ಭಟದೊಂದಿಗೆ ಜಿಲ್ಲೆಯನ್ನು ಪ್ರವೇಶಿಸಿರುವ ಮೃಗಶಿರ ಮಳೆ ಶನಿವಾರವೂ ಮುಂದುವರೆದಿದೆ. ನಿನ್ನೆ 32.7 ಮಿ.ಮೀ. ಮಳೆಯಾಗಿದ್ದರೆ, ಇಂದು 12.16 ಮಿ.ಮೀ. ಮಳೆಯಾಗಿದೆ. ಸಿಡಿಲಿಗೆ ಎಮ್ಮೆಗಳು ಬಲಿಯಾಗಿದ್ದರೆ, ಭಾರಿ ಮಳೆಗೆ ಹತ್ತಾರು ಮನೆಗಳು ನೆಲಕ್ಕೆ ಉರುಳಿವೆ. ಡೋಣಿ ನದಿ ಸೇರಿದಂತೆ ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಅಬ್ಬರದ ಮಳೆಗೆ ಚಡಚಣದಲ್ಲಿ ಶನಿವಾರ ಸಂಜೆ ಬಡಿದ ಸಿಡಿಲಿಗೆ ದುಂಡಪ್ಪ ನಿರಾಳೆ ಎಂಬವರಿಗೆ ಸೇರಿದ ಎಮ್ಮೆ ಸಾವಿಗೀಡಾಗಿದ್ದು, ಪಕ್ಕದಲ್ಲಿದ್ದ ಮೇವಿನ ಬಣವೆಗೂ ಬಂಎಕಿ ಹೊತ್ತಿಕೊಂಡಿದೆ. ಚಡಚಣ …

Read More »

ವಾಲ್ಮೀಕಿ ಅಭಿವೃದ್ಧಿ ನಿಗಮ’ ಹಗರಣ: ‘ಮೂವರು ಸಚಿವ’ರು ಶಾಮೀಲು?!

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅವ್ಯವಹಾರ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಈ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ಸಂಪುಟದ ಮೊದಲ ವಿಕೆಟ್ ಪತನವಾಗಿತ್ತು. ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರು. ಈ ಬೆನ್ನಲ್ಲೇ ಮೂವರು ಸಚಿವರು ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ.   ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಣ ಅವ್ಯವಹಾರ ಪ್ರಕರಣದಲ್ಲಿ ರಾಜ್ಯ ಸಚಿವ ಸಂಪುಟದ ಹಲವರ ತಲೆದಂಡದ ಮುನ್ಸೂಚನೆ ದೊರೆತಿದೆ. ಈ ಹಗರಣವು ಸರ್ಕಾರದ ಬುಡವನ್ನೇ …

Read More »

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಹಾಲಹಂಡೆ ಜಲಪಾತ

ಗುಳೇದಗುಡ್ಡ : ಕಾನನ ಮಧ್ಯದೊಳಗೊಂದು ನೀರಿನ ಆರ್ಭಟ. ಎತ್ತ ನೋಡಿದರು ಹಚ್ಚಹಸಿರಿನ ಸಿರಿ, ನಿಶಬ್ದ ವಾತಾವಾರಣ. ಇದು ಕಂಡು ಬರುವುದು ತಾಲೂಕಿನ ಹಾನಾಪುರ ಎಸ್‌ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತದಲ್ಲಿ. ಹಾನಾಪುರ ಎಸ್.ಪಿ. ಗ್ರಾಮದಿಂದ 1ಕಿಮೀ ದೂರದಲ್ಲಿರುವ ಈ ಹಾಲಹಂಡೆ ಜಲಪಾತ ನಿಜಕ್ಕೂ ಅಧ್ಭುತವಾಗಿದ್ದು, ಈ ಜಾಗಕ್ಕೆ ಭೇಟಿಕೊಟ್ಟರೇ ಸಾಕು ರಮಣೀಯ ದೃಶ್ಯವನ್ನು ಕಾಣಸಿಗಬಹುದು. ಇಲ್ಲಿ ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲಹಂಡೆ ಜಲಪಾತ ಈಗ ಪ್ರವಾಸಿಗರ ಗಮನ ಸೆಳೆದಿದೆ. …

Read More »

ಲೋಕಸಭೆಯಲ್ಲಿ ‘ಕಾಂಗ್ರೆಸ್’ಗೆ ವೋಟ್ ಹಾಕಿಲ್ಲ: ‘ಗ್ಯಾರಂಟಿ ಯೋಜನೆ’ ನಿಲ್ಲಿಸಿ: ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಆಗ್ರಹ

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರಿಗೆ ಇಷ್ಟವಾಗಿಲ್ಲ. ಅದರ ವಿರುದ್ಧ ಮಾತನಾಡುತ್ತಿರೋ ಬಿಜೆಪಿಗರಿಗೆ ಜನರು ಮತ ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸೋದು ಒಳ್ಳೇದು. ಸಿಎಂ ಸಿದ್ಧರಾಮಯ್ಯ ಈ ಬಗ್ಗೆ ಮರು ಪರಿಶೀಲನೆ ಮಾಡಬೇಕು ಅಂತ ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಹೇಳಿದ್ದಾರೆ.   ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ನಿಲ್ಲಿಸುವುದು ಒಳ್ಳೇದು, ಜನರಿಗೆ ಕಾಂಗ್ರೆಸ್ ಗ್ಯಾರಂಟಿಗಳು …

Read More »

ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು:

ವಿಜಯಪುರ, ಜೂನ್‌ 08: ರಾಜ್ಯದಲ್ಲಿ ಮುಂಗಾರು ಆರಂಭಕ್ಕೂ ಮೊದಲೇ ಉತ್ತಮ ಮಳೆಯಾಗುತ್ತಿದ್ದು, ನದಿ ಹಳ್ಳ ಕೊಳ್ಳಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಂತೆ ಕೃಷ್ಣಾನದಿ ಉಗಮಸ್ಥಾನ ಮಹಾಬಲೇಶ್ವರದಲ್ಲೂ ಭಾರೀ ಮಳೆಯಾಗಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಹಲವೆಡೆ ಶುಕ್ರವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ …

Read More »

ಸಂಸದೆ ‘ಕಂಗನಾ ರಣಾವತ್’ ಕೆನ್ನೆ ಮೇಲೆ ಕಪಾಳಮೋಕ್ಷದ ಗುರುತು? ಇಲ್ಲಿದೆ ವೈರಲ್ ಫೋಟೋದ ಅಸಲಿಯತ್ತು..!

ನವದೆಹಲಿ: ನೂತನವಾಗಿ ಆಯ್ಕೆಯಾದ ಸಂಸದೆ ಮತ್ತು ನಟಿ ಕಂಗನಾ ರನೌತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಕಾನ್ಸ್ಟೇಬಲ್ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ. ಈ ಘಟನೆ ಬಳಿಕ ಕಂಗನಾ ರನೌತ್ ಫೋಟೋವೊಂದು ಭಾರಿ ವೈರಲ್ ಆಗಿದೆ. ಕಂಗನಾ ರನೌತ್ ಮೇಲೆ ಕೆನ್ನೆ ಮೇಲೆ ಮಾರ್ಕ್ ಇದ್ದು, ಕಪಾಳ ಮೋಕ್ಷ ಮಾಡಿದ್ದರಿಂದ ಕೆನ್ನೆ ಮೇಲೆ ಗುರುತು ಮೂಡಿದೆ ಎಂದು ಹೇಳಲಾಗಿದ್ದು, ಫೋಟೋ ವೈರಲ್ …

Read More »

ಹೊಳೆನರಸೀಪುರದ ಪ್ರಜ್ವಲ್ ನಿವಾಸದಲ್ಲಿ ಎಸ್‍ಐಟಿಯಿಂದ ಸ್ಥಳ ಮಹಜರು

ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಎಸ್‍ಐಟಿ (SIT) ಅಧಿಕಾರಿಗಳು ಅವರ ಹೊಳೆನರಸೀಪುರದ (Holenarasipur) ಚೆನ್ನಾಂಬಿಕಾ ನಿವಾಸಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಈ ಮೂಲಕ 43 ದಿನಗಳ ಬಳಿಕ ಹೊಳೆನರಸೀಪುರಕ್ಕೆ ಪ್ರಜ್ವಲ್ ಆಗಮನವಾಗಿದೆ.. ಡಿವೈಎಸ್‍ಪಿ ಸತ್ಯನಾರಾಯಣ ನೇತೃತ್ವದಲ್ಲಿ ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಮಾಧ್ಯಮಗಳ ಕ್ಯಾಮೆರಾಗಳಿಗೆ ಕಾಣದಂತೆ ಅವರ ನಿವಾಸಕ್ಕೆ ಕರೆದೊಯ್ಯಲಾಯಿತು. ಎಸ್‍ಐಟಿ ಅಧಿಕಾರಿಗಳೊಂದಿಗೆ …

Read More »