ಬೆಂಗಳೂರು: ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸುವ ಅರ್ಜಿಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಮಾತ್ರ ತಹಶೀಲ್ದಾರ್ ಹೊಂದಿದ್ದು, ಜಾತಿ ಪ್ರಮಾಣ ಪತ್ರ ರದ್ದುಪಡಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ಹಂಪಿ ನಗರದ ಬಿ. ಗುರುಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ. ಸ್ವತಂತ್ರ ವಿವೇಚನೆ ಬಳಸಿ ತಹಶಿಲ್ದಾರ್ ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ …
Read More »Monthly Archives: ಜೂನ್ 2024
ಮದುವೆಗೆ ಮುನ್ನ ಜನಿಸಿದ ಮಗು ಮಾರಾಟಕ್ಕೆ ಯತ್ನಿಸಿದ ಪ್ರೇಮಿಗಳು.!
ಬೆಳಗಾವಿ: ಮದುವೆಗೆ ಮುನ್ನ ಜನಿಸಿದ ಮಗುವನ್ನು ತಂದೆ ತಾಯಿಯೇ ಮಾರಾಟ ಮಾಡಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ. ರಹಸ್ಯ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ನೇಗಿನಹಾಳದ ಮಹಾದೇವಿ ಬಾಹುಬಲಿ ಜೈನರ, ಚನ್ನಮ್ಮನ ಕಿತ್ತೂರಿನ ಡಾ. ಅಬ್ದುಲ್ ಗಫಾರ್ ಲಾಡಖಾನ್, ಬೈಲಹೊಂಗಲ ತಾಲೂಕಿನ ತುರಕರ ಶೀಗಿಹಳ್ಳಿಯ ಚಂದನ ಸುಬೇದಾರ, ಸಂಪಗಾವಿಯ ಪವಿತ್ರಾ ಮಡಿವಾಳರ, ಧಾರವಾಡ ತಾಲೂಕಿನ ಹೊಸಟ್ಟಿಯ ಪ್ರವೀಣ ಮಡಿವಾಳರ ಬಂಧಿತ …
Read More »ವಾಹನ ಸವಾರರೇ ʻHSRPʼ ನಂಬರ್ ಪ್ಲೇಟ್ ಅಳವಡಿಕೆಗೆ ಎರಡೇ ದಿನ ಬಾಕಿ : ತಪ್ಪದೇ ಈ ಕೆಲಸ ಮಾಡಿಕೊಳ್ಳಿ!
ಬೆಂಗಳೂರು: 2019ರ ಏಪ್ರಿಲ್ 1ನೇ ತಾರೀಖಿಗೆ ಮೊದಲು ನೋಂದಾಯಿಸಲಾದ ವಾಹನಗಳಿಗೆ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ(ಎಚ್‌ಎಸ್‌ಆರ್‌ಪಿ) ಅಳವಡಿಸಲು ರಾಜ್ಯ ಸರ್ಕಾರ ಜೂನ್ 12ರವರೆಗೆ ಗಡುವು ನೀಡಿದ್ದು, ಇನ್ನು ಎರಡು ದಿನಗಳಲ್ಲಿ ಮುಕ್ತಾಯವಾಗಲಿದೆ. ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್ ಆದೇಶದ ಅನ್ವಯ ಜೂನ್ 12ರವರೆಗೆ ಇರಲಿದೆ. ಅದರ ಒಳಗೆ ಎಲ್ಲಾ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ …
Read More »ಅಯೋಧ್ಯೆ’ ಯಲ್ಲಿ ಬಿಜೆಪಿ ಸೋಲಿಗೆ ಆಕ್ರೋಶ; ಊರಿನ ಹೆಸರಿಗೆ ಬೆಂಕಿ ಹಚ್ಚಿದ ವಿಡಿಯೋ ವೈರಲ್.!
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲುಂಟಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭವ್ಯವಾದ ರಾಮ ಮಂದಿರ ಕಟ್ಟಿಸಿದರೂ ಕೂಡ ಇಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಲಲ್ಲೂ ಸಿಂಗ್ ಅವರಿಗೆ ಸೋಲಾಗಿರುವುದು ಬಿಜೆಪಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ತಮ್ಮ ಆಕ್ರೋಶವನ್ನು ವಿವಿಧ ರೀತಿಯಲ್ಲಿ ಈಗಾಗಲೇ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ಜನತೆಗೆ ನಿಂದಿಸಿ ಕೆಲವರು ಪೋಸ್ಟ್ ಹಾಕಿದ್ದರೆ ಮತ್ತೊಬ್ಬ ವ್ಯಕ್ತಿಯಂತೂ ಶ್ರೀರಾಮನನ್ನೇ ನಿಂದಿಸಿದ್ದ. …
Read More »3ನೇ ಬಾರಿಗೆ ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು, ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಇಂದು 3ನೇ ಬಾರಿಗೆ ಭಾರತದ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಾಗಾದ್ರೆ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ, 2014 ರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಮಯದಲ್ಲಿ ಹೇಗೆ ಕಾಣ್ತಾ ಇದ್ರು? ಇಂದು ಯಾವ ರೀತಿ ಕಂಡರು? ಬನ್ನಿ ನೋಡೋಣ. 2014ರ …
Read More »ಬೆಳಗಾವಿಯಲ್ಲಿ ತುಂಬಿ ಹರಿದ ಘಟಪ್ರಭಾ : ನದಿಗೆ ಟ್ರಾಕ್ಟರ್ ಬಿದ್ದು ಓರ್ವ ನೀರು ಪಾಲು, 12 ಜನ ಪಾರು
ಬೆಳಗಾವಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಗೆ ಟ್ರ್ಯಾಕ್ಟರ್ ಮುಗುಚಿ ಬಿದ್ದಿದೆ. ಘಟನೆಯಲ್ಲಿ ಓರ್ವ ನಾಪತ್ತೆಯಾಗಿದ್ದು, ಉಳಿದ 12 ಜನ ಪ್ರಾಣಪಾಯದಿಂದ ಪಾರಾಗಿದ್ದಾರೆ. ನಾಪತ್ತೆಯಾಗಿರುವ ಓರ್ವನಿಗೆ ಇದೀಗ ಶೋಧ ಕಾರ್ಯ ಮುಂದುವರಿದಿದೆ. ಕಾರ್ಮಿಕರು ಬಾಗಲಕೋಟೆ ಜಿಲ್ಲೆಯ ನಂದಗಾಂವ್ ಗ್ರಾಮದಿಂದ ಮೂಡಲಗಿ ತಾಲೂಕಿನ ಅವರಾದಿ ಗ್ರಾಮಕ್ಕೆ ತೆರಳುತ್ತಿದ್ದರು. ಅವರಾದಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಮ್ ಬ್ಯಾರೇಜ್ ಕಟ್ಟಲಾಗಿದೆ. ಘಟಪ್ರಭಾ ನದಿಗೆ ಅಪಾರ ಪ್ರಮಾಣದಲ್ಲಿ …
Read More »ಬೆಳಗಾವಿಯಲ್ಲಿ ಆರ್ಭಟಿಸಿದ ವರುಣ : ಬಿರುಗಾಳಿ ಸಹಿತ ಭಾರಿ ಮಳೆಗೆ ಮರ ಬಿದ್ದು ಓರ್ವ ಬಲಿ
ಬೆಳಗಾವಿ : ಬೆಳಗಾವಿಯಲ್ಲಿ ಸತತ ಎರಡು ದಿನಗಳಿಂದ ಭಾರಿ ಮಳೆ ಆಗುತ್ತಿದ್ದು ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಮೃಗಾಳಿ ಸಹಿತ ಭಾರಿ ಮಳೆಗೆ ಮರ ಒಂದು ಬಿದ್ದು ಊರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಸಂಭವಿಸಿದೆ. ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಗಾಳಿ ಮಳೆಗೆ ಮರ ಬಿದ್ದು ಓರ್ವ ಸಾವನಪ್ಪಿದ್ದು ಇಬ್ಬರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. …
Read More »ಬೆಟ್ಟದ ಮೇಲಿಂದ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ!
ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬೆಟ್ಟದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮಾದೇವ ನಾಯಕ ಎಂದು ಹೇಳಲಾಗುತ್ತಿದ್ದು, ಇವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕವಲಂದೆ ಕುಂಬಾರಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಮಹದೇವನಾಯಕ ಮೇ 5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೂ.6 ರಂದು ಬಿಳಿಗಿರಿರಂಗನಬೆಟ್ಟದ …
Read More »ಕೆಕೆಆರ್‌ಟಿಸಿ ಕಲಬುರಗಿ-ಬೆಳಗಾವಿ ಅಮೋಘವರ್ಷ ಬಸ್,
ಕಲಬುರಗಿ, ಜೂನ್ 09: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ‘ಅಮೋಘವರ್ಷ’ ಹೆಸರಿನ ಐಷಾರಾಮಿ ಹವಾನಿಯಂತ್ರಣ ರಹಿತ ಬಸ್ ಸೇವೆಗೆ ಚಾಲನೆ ನೀಡಿದೆ. ಈ ಬಸ್ ಕಲಬುರಗಿ, ಪಣಜಿ ನಡುವೆ ವಯಾ ಬೆಳಗಾವಿ ಸಂಚಾರ ನಡೆಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಕೆಆರ್‌ಟಿಸಿಯ ‘ಅಮೋಘವರ್ಷ’ ಹೆಸರಿನ ಐಷಾರಾಮಿ ಹವಾನಿಯಂತ್ರಣ ಸಹಿತ ಮತ್ತು ಹವಾನಿಯಂತ್ರಣ ರಹಿತ ಬಸ್‌ಗಳಿಗೆ 2023ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು. ವಿವಿಧ ಮಾರ್ಗದಲ್ಲಿ ಈ ಮಾದರಿಯ ಬಸ್‌ಗಳು ಸಂಚಾರ ನಡೆಸುತ್ತಿವೆ. …
Read More »ಅನಾರೋಗ್ಯದ ಕಾರಣ ನಾನು ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿಲ್ಲ: HDD
ಬೆಂಗಳೂರು: ಇಂದು 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಸಮಾರಂಭಕ್ಕೆ ಅನಾರೋಗ್ಯದ ಕಾರಣ ನಾನು ಭಾಗಿಯಾಗುತ್ತಿಲ್ಲ ಎಂಬುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಮೋದಿಗೆ ಪತ್ರ ಬರೆದಿರುವಂತ ಅವರು, ಮೊದಲನೆಯದಾಗಿ, ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸ್ವೀಕರಿಸಿ. ಇದು ನಿಜವಾಗಿಯೂ ಐತಿಹಾಸಿಕ ಸಂದರ್ಭ. ನಾನು ಈ ಹಿಂದೆ ಅನೇಕ ಬಾರಿ ಹೇಳಿದಂತೆ, …
Read More »