Breaking News

Monthly Archives: ಜೂನ್ 2024

ನಟ ವಿನೋದ್ ರಾಜ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿನೋದ್ ರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆ ಹಿನ್ನೆಲೆಯಲ್ಲಿ ವಿನೋದ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ವಿನೋದ್ ರಾಜ್ ಕೆಲ ವರ್ಷಗಳ ಹಿಂದೆ ಹಾರ್ಟ್ ಆಪರೆಷನ್ ಗೆ ಒಳಗಾಗಿದ್ದರು. ಈ ವೇಳೆ ಹಾರ್ಟ್ ಗೆ ಸ್ಟಂತ್ ಅಳವಡಿಸಲಾಗಿತ್ತು. ಈಗ ಅದೇ ಸ್ಟಂಟ್ ನಿಂದಾಗಿ ಕರುಳಿನ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ. ವಿನೋದ್ ರಾಜ್ ಶಸ್ತ್ರಚಿಕಿತ್ಸೆಗೆ …

Read More »

ಚನ್ನಪಟ್ಟಣದಿಂದ ನನ್ನ ಸ್ಪರ್ಧೆ ಇಲ್ಲ: ಡಿ.ಕೆ. ಸುರೇಶ್‌

ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದರಿಂದ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಹೀಗಾಗಿ ಇಲ್ಲಿ ತೆರವಾಗುವ ಜಾಗಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಚಿಂತಿಸಿದೆ. ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರೇ ಸ್ಪರ್ಧೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಾಗ, ಸುರೇಶ್‌ ಈ ಹೇಳಿಕೆಯನ್ನು ನೀಡಿದರು. ತಾಲೂಕಿನ ಕೆಂಗಲ್‌ ಬಳಿಯ ತಿಮ್ಮಮ್ಮ ದಾಸೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು …

Read More »

ಗ್ಯಾರಂಟಿಗಳು ನಿಲ್ಲಲ್ಲ: ಅಶೋಕ್‌ಗೆ ಸಿಎಂ ತಿರುಗೇಟು

ಬೆಂಗಳೂರು: ವಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಮತ್ತೆ ವ್ಯಂಗ್ಯಾಸ್ತ್ರ ಪ್ರಯೋಗ ಮಾಡಿರುವ ಸಿಎಂ ಸಿದ್ದರಾಮಯ್ಯ, ಅಶೋಕ್‌ ಆಗಾಗ ತಮ್ಮ ಅಜ್ಞಾನ ಪ್ರದರ್ಶನ ಮಾಡುತ್ತ ರಾಜ್ಯದ ಜನರಿಗೆ ಮನೋರಂಜನೆ ನೀಡುತ್ತಿರುತ್ತಾರೆ. ಗ್ಯಾರಂಟಿಗಳು ಕಾಂಗ್ರೆಸ್‌ಗೆ ಮತ ತಂದು ಕೊಟ್ಟಿಲ್ಲ ಎನ್ನುವುದು ಅವರ ಇತ್ತೀಚಿನ ಸಂಶೋಧನೆ ಎಂದು ಟೀಕಿಸಿದ್ದಾರೆ.   ಜತೆಗೆ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದು ದೃಢವಾಗಿ ಹೇಳುವ ಮೂಲಕ ಎಲ್ಲ ಗೊಂದಲಗಳಿಗೆ ಅವರು ತೆರೆ ಎಳೆದಿದ್ದಾರೆ. ಸಾಲ ಮಾಡಿ ಸಂಬಳ ಕೊಡುವ …

Read More »

ಡಿ. ಕೆ. ಶಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಆಶೀರ್ವಾದ ಪಡೆದ ಪ್ರಿಯಂಕಾ ಜಾರಕಿಹೊಳಿ

ಬೆಂಗಳೂರು : ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಪ್ರಿಯಂಕಾ ಜಾರಕಿಹೊಳಿ ಅವರು ಇಂದು ಡಿಸಿಎಂ ಡಿ. ಕೆ. ಶಿವಕುಮಾರ್‌ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿ, ಆಶೀರ್ವಾದ ಪಡೆದರು. ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ತಮ್ಮನ್ನು ಭೇಟಿಯಾಗಿದ್ದ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಆಶೀರ್ವಾದ ಮಾಡಿದ ಡಿ.ಕೆ. ಶಿವಕುಮಾರ್‌ ಅವರು, ಅತಿ ಕಿರಿಯ ಸಂಸದರರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಕಂಡ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಡಿಸಿಎಂ …

Read More »

ನಿಸರ್ಗದ ಮಡಿಲಲ್ಲಿ ಕಂಗೊಳಿಸುತ್ತಿರುವ ವರವಿಕೊಳ್ಳ ಜಲಪಾತ

ಮುನವಳ್ಳಿ : ನಿಸರ್ಗದ ಮಡಿಲಲ್ಲಿರುವ ವರವಿಕೊಳ್ಳ ಜಲಪಾತ ಮಳೆಗಾಲದಲ್ಲಿ ಮೈತುಂಬಿ ಸುಮಾರು 200 ಅಡಿ ಎತ್ತರದಿಂದ ಎತ್ತರದಿಂದ ಧುಮ್ಮಿಕ್ಕುವ ನಯನ ಮನೋಹರ ದೃಶ್ಯ ಅದ್ಭುತವಾಗಿದೆ. ಜಲಪಾತದ ಅಡಿಯ ಗವಿಯಲ್ಲಿ ಶ್ರೀ ಸಿದ್ದೇಶ್ವರ ದೇವಸ್ಥಾನವಿದೆ. ತಿಂಡಿ, ಊಟ, ವಸತಿಗಾಗಿ ಮುನವಳ್ಳಿಯಲ್ಲಿ ಉತ್ತಮವಾದ ಹೊಟೇಲ್, ಲಾಡ್ಜ್ ಗಳ ಅನುಕೂಲತೆ ಇದೆ. ಜಲಪಾತಕ್ಕೆ ಹೋಗುವ ದಾರಿ : ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿಯಿಂದ ನರಗುಂದ ಮಾರ್ಗವಾಗಿ 4 ಕಿಮೀ ಕ್ರಮಿಸಬೇಕು, ನಂತರ ವರವಿಕೊಳ್ಳ ಜಲಪಾತದ ಮಾರ್ಗಸೂಚಿ …

Read More »

ಸಿದ್ದರಾಮಯ್ಯನವರೇ 5 ವರ್ಷ ಸಿಎಂ: ಸಚಿವ ಕೆ.ಎನ್‌.ರಾಜಣ್ಣ

ತುಮಕೂರು (ಗ್ರಾಮಾಂತರ): “ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಖಾಲಿ ಆಗಲ್ಲ’ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ನುಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಏಕೆ ಬದಲಾಗುತ್ತಾರೆ? ಒಂದು ವರ್ಷ ಕೆಲಸ ಮಾಡೋದ್ರಲ್ಲಿ ಸಿದ್ದರಾಮಯ್ಯ ಹಿಂದೆ ಬಿದ್ದಿದ್ದಾರಾ? ಅಥವಾ ಯಾವುದಾದರೂ ಹಗರಣ ಇದೆಯಾ? ಇಲ್ಲ ಅಂದ ಮೇಲೆ ಯಾವ ಆಧಾರದ ಮೇಲೆ ಅವರನ್ನು ಬದಲಾಯಿಸಲು ಹೋಗುತ್ತಾರೆ ಎಂದರು. ಗ್ಯಾರಂಟಿ …

Read More »

ಮತ್ತೆ ಮೂವರು ಡಿಸಿಎಂ ಬೇಡಿಕೆ ಮುಂದಿಟ್ಟ ಸಚಿವ ಕೆ.ಎನ್‌.ರಾಜಣ್ಣ

ತುಮಕೂರು (ಗ್ರಾಮಾಂತರ): ಮೂವರು ಉಪಮುಖ್ಯಮಂತ್ರಿ ಆಗಬೇಕು ಎಂಬ ನನ್ನ ನಿರಂತರ ವಾದ ಇದ್ದೇ ಇದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಇದೆ. ಹೀಗಾಗಿ 3 ಡಿಸಿಎಂ ಬೇಕು. ಲೋಕಸಭಾ ಚುನಾವಣೆ ಇದ್ದಿದ್ದರಿಂದ ಮಲ್ಲಿಕಾರ್ಜುನ ಖರ್ಗೆ ಅವರು ಸುಮ್ಮನಿರಲು ಹೇಳಿದ್ದರು. ಹೀಗಾಗಿ ಇಷ್ಟು ದಿನ ಸುಮ್ಮನಿದ್ದೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಈ ಬಗ್ಗೆ ಸದ್ಯದಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮತ್ತೆ ಖುದ್ದಾಗಿ ಭೇಟಿ ಮಾಡಿ ಈ …

Read More »

ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

ಮೈಸೂರು: ವಿಶ್ವ ಮನ್ನಣೆ ಗಳಿಸಿರುವ ಸಂಗೀತ ಧ್ರುವತಾರೆ, ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಇಂದು ನಿಧನ ಹೊಂದಿದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರಾಜೀವ್ ತಾರಾನಾಥ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.   ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮೇರು ಕಲಾವಿದ ರಾಜೀವ್ ತಾರಾನಾಥ್ ಅವರು ಸರೋದ್ ವಾದನದಲ್ಲಿ ಅಪ್ರತಿಮ ವಿದ್ವಾಂಸರು. ಅವರ ಸಂಗೀತ ಸೇವೆಗಾಗಿ ಪದ್ಮಶ್ರೀ, …

Read More »

ಜೇವರ್ಗಿ: ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

ಜೇವರ್ಗಿ: ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ ಹೊಲಕ್ಕೆ ಸೋಮವಾರ ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯೊಬ್ಬರು ವಿದ್ಯುತ್‌ ತಂತಿ ತಗುಲು ಮೃತಪಟ್ಟಿದ್ದಾರೆ, ಮೃತಳನ್ನು ರೇಣುಕಾಬಾಯಿ ಭಾಗಣ್ಣ ನಾಟೀಕಾರ (37) ಬಳ್ಳುಂಡಗಿ ಎಂದು ಗುರುತಿಸಲಾಗಿದೆ. ರೇಣುಕಾಬಾಯಿ ಅವರು ಗ್ರಾಮದ ಹೊಲಕ್ಕೆ ಕೂಲಿ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಮಳೆ-ಗಾಳಿಯಿಂದ ಹರಿದು ನೆಲಕ್ಕೆ ಬಿದ್ದ ವಿದ್ಯುತ್ ಎಲ್‌ಟಿ ಲೈನ್‌ ತುಳಿದು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪರಿಹಾರಕ್ಕೆ ಆಗ್ರಹ: ಮೃತ ರೇಣುಕಾಬಾಯಿ ನಾಟೀಕಾರ ಅವರ ನಿಧನದಿಂದ ಕುಟುಂಬಸ್ಥರು …

Read More »

ಇಳಕಲ್ | ಶೌಚಾಲಯ ನಿರ್ಮಾಣಕ್ಕೆ ಆಗ್ರಹ: ಚೊಂಬು ಹಿಡಿದು ಪ್ರತಿಭಟನೆ

ಇಳಕಲ್: ಇಲ್ಲಿಯ ಗೌಳೇರಗುಡಿ (ನವನಗರ ) ಯಲ್ಲಿ ವೈಯಕ್ತಿಕ ಶೌಚಾಲಯ ಹಾಗೂ ಸಾರ್ವಜನಿಕ ಶೌಚಾಲಯಗಳಿಲ್ಲ. ಹೀಗಾಗಿ ಬಹಿರ್ದೆಸೆಗೆ ತೊಂದರೆಯಾಗಿದೆ ಎಂದು ಪ್ಲಾಸ್ಟಿಕ್‌ ಚೊಂಬು (ತಂಬಿಗೆ) ಹಿಡಿದು ಮಹಿಳೆಯರು ಮಂಗಳವಾರ ಪ್ರತಿಭಟನೆ ಮಾಡಿದರು. ಈವರೆಗೆ ನವನಗರದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗುತ್ತಿದ್ದರು. ಈಗ ಆ ಸ್ಥಳದ ಮಾಲೀಕ ಅಲ್ಲಿ ನಿವೇಶನಗಳನ್ನು ಮಾಡಿ, ಬೇಲಿ ಹಾಕಿದ್ದರಿಂದ ಬಹಿರ್ದೆಸೆಗೆ ಹೋಗಲು ತೊಂದರೆಯಾಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಲು …

Read More »