ರಾಯಬಾಗ : ಎರಡು ಬೈಕ್‌ಗಳ ಡಿಕ್ಕಿಯಲ್ಲಿ ಮೂವರು ಮತಪಟ್ಟು, ಮಗುವೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಕಂಕಣವಾಡಿ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಕಂಕಣವಾಡಿ ಗ್ರಾಮದ ಸುಕದೇವ ರಾಯಪ್ಪ ಪೂಜಾರಿ (60), ಚಿಮ್ಮಡ ಗ್ರಾಮದ ನಿವಾಸಿಗಳಾದ ಸದಾಶಿವ ಹಣಮಂತ ದೊಡಮನಿ (45), ಕಿರಣ ಸದಾಶಿವ ದೊಡಮನಿ(20) ಮೃತಪಟ್ಟಿದ್ದಾರೆ.
Read More »Monthly Archives: ಜೂನ್ 2024
ವಾರಿಮಾಸ್ತಿಹೊಳ್ಳಿಯ ಲಕ್ಷ್ಮೀದೇವಿಯ ಗುಡಿಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು 1.40 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣವನ್ನು ದೋಚಿ ಪರಾರಿ
ಯಮಕನಮರಡಿ: ಭಾನುವಾರ ತಡರಾತ್ರಿ ವಾರಿಮಾಸ್ತಿಹೊಳ್ಳಿಯ ಲಕ್ಷ್ಮೀದೇವಿಯ ಗುಡಿಯ ಕೀಲಿ ಮುರಿದು ಒಳನುಗ್ಗಿದ ಕಳ್ಳರು 1.40 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣವನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆ ಸೋಮವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ದೇವಿಯ ಕೊರಳಿನಲ್ಲಿರುವ ಬಂಗಾರ ಬೋರಮಾಳ, ಎಕ್ಸರಾ ಸರ ಎರಡು, ಬೆಳ್ಳಿಯ ಕುದುರೆ ಒಂದು, ಒಂದೂವರೆ ಕೆಜಿ ಬೆಳ್ಳಿಯ ದೇವಿಯ ಮುಖವಾಡ, 500 ಗ್ರಾಂ ದೇವಿಯ ಕಿರೀಟ ಕಳವಾಗಿದೆ. ಈ ಘಟನಾ ಸ್ಥಳಕ್ಕೆ ಯಮಕನಮರಡಿ ಪಿಎಸ್‌ಐ …
Read More »ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭ
ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂನ್ 26ರಂದು 30ನೇ ಆಷಾಡಿವಾರಿ ಪಾದಯಾತ್ರೆ ಪ್ರಾರಂಭವಾಗಲಿದೆ. ಸುಕ್ಷೇತ್ರ ಆಳಂದಿಯವರೆಗೆ ವಾಹನಗಳ ಮೂಲಕ ಹೊರಟು ಜೂನ್ 30ಕ್ಕೆ ಆಳಂದಿಯಿಂದ ಪಾದಯಾತ್ರೆ ಮೂಲಕ ಪಂಢರಪುರವನ್ನು ಜುಲೈ 17 ರಂದು ತಲುಪಲಿದೆ. ಜುಲೈ 17 ರಂದು ಆಷಾಡ ಏಕಾದಶಿ ಮುಗಿಸಿ ಜುಲೈ 18 ರಂದು ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ವಾಹನ ಮೂಲಕ ಬೆಲಾಗುವುದು. ಸಂಪ್ರದಾಯದಂತೆ ಪ್ರತಿವರ್ಷದಂತೆ ಈ ವರ್ಷವೂ ಜ್ಞಾನೇಶ್ವರ ಮಹಾರಾಜರ ಆಷಾಡಿವಾರಿ ಪಾಲಕಿ ಮಹೋತ್ಸವ …
Read More »ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮನವಿ
ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ವಿವಿಧ ರೈಲ್ವೆ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಪಟ್ಟಣದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು. 2010-11ರಲ್ಲಿಯೇ ಕರಾಡ-ಕೊಲ್ಹಾಪುರ-ಬೆಳಗಾವಿ ರೈಲ್ವೆ ಮಾರ್ಗ ಹಾಗೂ ಶೇಡಬಾಳ-ಅಥಣಿ-ವಿಜಯಪೂರ ನೂತನ ರೈಲ್ವೆ ಮಾರ್ಗಗಳನ್ನು ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಶೀಘ್ರ ಪೂರ್ಣಗೊಳಿಸಬೇಕು. ಅಲ್ಲದೇ ಕಳೆದ ಒಂದೂವರೆ ದಶಕದಿಂದ ಕುಂಟುತ್ತಾ ಸಾಗಿರುವ ಕುಡಚಿ-ಬಾಗಲಕೋಟೆ ನೂತನ ರೈಲ್ವೆ ಮಾರ್ಗ ನಿರ್ಮಾಣ …
Read More »ಬೆಳಗಾವಿ ಜಿಲ್ಲೆಯಗುತ್ತಿ ಬಸವಣ್ಣ ಏತ ನೀರಾವರಿ
ನವದೆಹಲಿ: ಬೆಳಗಾವಿ ಜಿಲ್ಲೆಯಗುತ್ತಿ ಬಸವಣ್ಣ ಏತ ನೀರಾವರಿ ಕುಡಿಯುವನೀರಿನ ಯೋಜನೆಗೆ ಬಳಕೆಯಾಗುವ ಅರಣ್ಯಕ್ಕೆ ಪರ್ಯಾಯವಾಗಿ ಪರಿಹಾರಾತ್ಮಕ ಅರಣ್ಯೀಕರಣ ಮಾಡಲು ಒತ್ತುವರಿಯಾಗಿರುವ 100 ಹೆಕ್ಟೇರ್ ಜಾಗ ಗುರುತಿಸಿ ಶಿಫಾರಸು ಮಾಡಿರುವುದಕ್ಕೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್ ಅವರಿಗೆ ಜೂನ್ 10ರಂದು ಪತ್ರ ಬರೆದಿರುವ ಸಚಿವಾಲಯದ ಸಹಾಯಕ ಮಹಾನಿರ್ದೇಶಕ ಧೀರಜ್ ಮಿತ್ತಲ್, …
Read More »ಇವಿಎಂ ಬೇಡ, ಮತಪತ್ರಗಳ ಬಳಕೆ ಆಗಬೇಕು: ಮಾಜಿ ಸಿಎಂ ಜಗನ್
ಅಮರಾವತಿ: ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬದಲು ಮತಪತ್ರಗಳ ಬಳಕೆ ಆರಂಭಿಸಬೇಕು ಎಂದು ವೈಎಸ್‌ಆರ್‌ಸಿಪಿ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ. ಈಚೆಗೆ ನಡೆದ ಲೋಕಸಭಾ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಹೀನಾಯ ಸೋಲು ಕಂಡಿದೆ. ಮುಂದುವರಿದ ಪ್ರಜಾತಂತ್ರ ರಾಷ್ಟ್ರಗಳು ಮತಪತ್ರಗಳನ್ನು ಬಳಕೆ ಮಾಡುತ್ತಿವೆ ಎಂದು ರೆಡ್ಡಿ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ. ‘ಭಾರತದ ಪ್ರಜಾತಂತ್ರ ವ್ಯವಸ್ಥೆಯ ನಿಜವಾದ ಆಶಯವನ್ನು ಎತ್ತಿಹಿಡಿಯಲು ನಾವು ಕೂಡ ಮತಪತ್ರಗಳ …
Read More »ದೇಶದ ಹಲವು ವಿಮಾನ ನಿಲ್ದಾಣಗಳಿಗೆ ‘ಬಾಂಬ್ ಬೆದರಿಕೆ
ನವದೆಹಲಿ: ಮುಂಬೈ, ಜೈಪುರ ಮತ್ತು ಪಾಟ್ನಾ ವಿಮಾನ ನಿಲ್ದಾಣಗಳು ಸೇರಿದಂತೆ ದೇಶಾದ್ಯಂತ 40 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಸುದ್ದಿ ವಾಹಿನಿಗಳ ಮೂಲಗಳ ಪ್ರಕಾರ, ಇತರ ನಗರಗಳ ಜೊತೆಗೆ ಜೈಪುರದಲ್ಲಿ ವಿಮಾನ ನಿಲ್ದಾಣವನ್ನು ಸ್ಫೋಟಿಸಲು ಟ್ರೀಟ್ ಮೇಲ್ ಸ್ವೀಕರಿಸಲಾಗಿದೆ. ಮೇಲ್ ಸ್ವೀಕರಿಸಿದ ಕೂಡಲೇ ಭದ್ರತೆಯನ್ನು ಬಿಗಿಗೊಳಿಸಲಾಯಿತು, ನಂತರ ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದಾಗ್ಯೂ, ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, …
Read More »1419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ
1419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿ ಆರಂಭ ಬೆಂಗಳೂರು: 2024-25ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ/ ಇತರ ಮಾಧ್ಯಮದ ಜೊತೆ ಆಂಗ್ಲ ಮಾಧ್ಯಮ (ದ್ವಿಭಾಷಾ) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. 2000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ(ಕನ್ನಡ ಮತ್ತು ಇಂಗ್ಲೀಷ್) ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು 2024-25ನೇ ಸಾಲಿನ(ಫೆಬ್ರವರಿ) ಅಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿಯವರು ಘೋಷಿಸಿದ್ದಾರೆ. ಸರ್ಕಾರಿ ಶಾಲೆಗಳ ಶೈಕ್ಷಣಿಕ ಬಲವರ್ಧನೆಗಾಗಿ ಹಾಲಿ ನಡೆಯುತ್ತಿರುವ …
Read More »ಮೀನುಗಾರಿಕೆ ಇಲಾಖೆ ಸಂಕಷ್ಟ್ ಪರಿಹಾರ ನಿಧಿ ಆದೇಶ ಪತ್ರ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಯಮಕನಮರಡಿ ಗ್ರಾಮದ ದಿ ಗುಡುಸಾಬ ಚಿಕ್ಕೋಡಿ ಇವರಿಗೆ ಮಂಜೂರಾದ ಮೀನುಗಾರಿಕೆ ಇಲಾಖೆ ಸಂಕಷ್ಟ್ ಪರಿಹಾರ ನಿಧಿ ಮಂಜೂರಾದ ರೂ 3.00 ಲಕ್ಷ ಗಳ ಆದೇಶ ಪತ್ರವನ್ನು ಮೃತರ ವಾರಸುದಾರ ಮಸಾಬಿ ಗುಡುಸಾಬ ಚಿಕ್ಕೋಡಿ ಮತ್ತು ಅಮಾನುಲ್ಲಾ ರಿಯಾಜ ಸೊಲ್ಲಾಪುರೆ ಇವರಿಗೆ ವೈದ್ಯಕೀಯ ವೆಚ್ಚ ರು 19581/- ಆದೇಶ ಪತ್ರವನ್ನು ವಿತರಿಸಿದರು ವಸಂತ ಹೆಗಡೆ ಮೀನುಗಾರಿಕೆ ಉಪ …
Read More »ಸಿ.ಟಿ.ರವಿ ವಿರುದ್ಧ ಕೇಸ್ ದಾಖಲು
ಹುಬ್ಬಳ್ಳಿ: ಭಾಷಣದ ಬರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ದೂರು ದಾಖಲಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದೇ ವೇಳೆ ನಿನ್ನೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆದಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿ.ಟಿ.ರವಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಹಿಗ್ಗಾಮುಗ್ಗಾ ಕಿಡಿಕಾರಿದ್ದರು. ಮೂರು ಬಿಟ್ಟವರು ಭಂಡತನದ ಸಮರ್ಥನೆ …
Read More »