Breaking News

Monthly Archives: ಜೂನ್ 2024

ನಾಗನೂರ ಪಟ್ಟಣದಲ್ಲಿ ನೂತನ ಸಂಸದರಿಗೆ ಅಭಿನಂದನೆ

ನಾಗನೂರ ಪಟ್ಟಣದಲ್ಲಿ ನೂತನ ಸಂಸದರಿಗೆ ಅಭಿನಂದನೆ ಕಾಂಗ್ರೆಸ್ಸಿಗೆ ಕೈ ಕೊಟ್ಟ ಮತದಾರ, ಗ್ಯಾರಂಟಿ ಯೋಜನೆಗೆ ಸರಕಾರದಿಂದ ಬ್ರೇಕ್- ಜಗದೀಶ ಶೆಟ್ಟರ್ ಅರಭಾವಿಮಠದಿಂದ ಲೋಕಾಪೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಾಗೂ ಅರಭಾವಿ ಕ್ಷೇತ್ರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಸಂಸದರಲ್ಲಿ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ   ಮೂಡಲಗಿ: ಮತದಾರರ ಮುಂದೆ ಕಾಂಗ್ರೇಸಿನವರು ಒಡ್ಡಿದ ಹಣಬಲ, ತೋಳಬಲ, ಆಸೆ-ಆಮಿಷಗಳ ಆಟ ನಡೆಯಲಿಲ್ಲ. ಜೊತೆಗೆ ಕಾಂಗ್ರೇಸ್ಸಿನ ಗ್ಯಾರಂಟಿ ಯೋಜನೆಗಳ ಫಲ ನೀಡಲಿಲ್ಲ. ಗೆಲುವಿಗೆ …

Read More »

ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಿತ್ತೂರು ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಕಿತ್ತೂರು: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮ ಸರ್ಕಲ್ ನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡ ಹಾಗೂ ಲಕ್ಷ್ಮೀ ಇನಾಮದಾರ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.   ಇದೇ ವೇಳೆ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ದ್ವಿಚಕ್ರ ವಾಹನಕ್ಕೆ …

Read More »

ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಯೋಗಭ್ಯಾಸ

ಆನಂದಪುರ: ಯೋಗವನ್ನು ಚಿಕ್ಕವಯಸ್ಸಿನಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದರಿಂದ ಬಹಳಷ್ಟು ಅನುಕೂಲಗಳಿವೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಈಶ್ವರಪ್ಪ ಹೇಳಿದರು. ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಯೋಗ ಅಭ್ಯಾಸವನ್ನು ವಿದ್ಯಾರ್ಥಿಗಳಿಗೆ ಮಾಡಿಸಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗ ಮಾಡುವುದರಿಂದ ಮನಸ್ಸು ಮತ್ತು ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಯೋಗದಿಂದ ಸಕಲವೂ ಸಾಧಿಸಬಹದು. ಇದನ್ನು ವಿದ್ಯಾರ್ಥಿಗಳು ದಿನನಿತ್ಯ ಮನೆಯಲ್ಲಿ ಮಾಡಬೇಕು ಎಂದು ಹೇಳಿದರು.

Read More »

ಈ ಬಾರಿ ‘ಪಂಚಘಾತಕ’ಗಳು ಸಂಭವಿಸಲಿವೆ: ‘ಕೋಡಿಮಠ ಶ್ರೀ’ ಶಾಕಿಂಗ್ ಭವಿಷ್ಯ |

ಚಿಕ್ಕಬಳ್ಳಾಪುರ: ರಾಜ್ಯ, ದೇಶದಲ್ಲಿ ಈ ಬಾರಿ ಪಂಚಘಾತಕಗಳು ಸಂಭವಿಸಲಿದ್ದಾವೆ. ಇವುಗಳನ್ನು ಗೆಲ್ಲೋದು ತುಂಬಾನೇ ಕಷ್ಟ ಎಂಬುದಾಗಿ ಶಾಕಿಂಗ್ ಭವಿಷ್ಯವನ್ನು ಕೋಡಿಮಠದ ಶ್ರೀಗಳು ನುಡಿದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿಮಠದ ಶಿವಾನಂದ ಸ್ವಾಮೀಜಿಯವರು, ಕ್ರೋಧಿನಾಮ ಸಂವಸ್ತರದಲ್ಲಿ ಕ್ರೋಧ, ದ್ವೇಷ, ಮಧ, ಅಸೂಯೆಗಳು ಹೆಚ್ಚಾಗಲಿವೆ ಅಂತ ತಿಳಿಸಿದ್ದಾರೆ.   ಪಂಚಾಘಾತಕಗಳು ಅಂದ್ರೆ ಭೂಕಂಪ, ಅಗ್ನಿ, ಜಲಕಂಟಕ, ವಾಯುವಿನಿಂದಲೂ ಆಪತ್ತು ದೇಶ, ರಾಜ್ಯಕ್ಕೆ ಎದುರಾಗಲಿದೆ. ಈ ಕ್ರೋಧಿನಾಮ ಸಂವತ್ಸರದಲ್ಲಿ ಗುರು ಶಿಷ್ಯನಾಗುತ್ತಾನೆ. ಶಿಷ್ಯ ಗುರುವಾಗುತ್ತಾನೆ. …

Read More »

ಪರಪ್ಪನ ಅಗ್ರಹಾರ ಜೈಲಲ್ಲಿ ಪವಿತ್ರಾಗೌಡ

ಬೆಂಗಳೂರು, ಜೂ.21- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಗೌಡ ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆಯಿಲ್ಲದೆ ಚಡಪಡಿಸಿದ್ದಾರೆ. ನಿನ್ನೆ ಪವಿತ್ರಗೌಡ ಸೇರಿದಂತೆ 9 ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು. ಆರೋಪಿ ಪವಿತ್ರ ಗೌಡಗೆ ನಿನ್ನೆ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. 11 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದ ಅವರು, ಸರಿಯಾಗಿ ನಿದ್ದೆ ಬಾರದೆ ಪದೇ ಪದೇ ಎದ್ದು ಕುಳಿತಿದ್ದಾರೆ. …

Read More »

ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ KSRTC ಶಾಕ್: ಬರೋಬ್ಬರಿ 3754 ಮಂದಿಗೆ ದಂಡ

ಬೆಂಗಳೂರು: ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ ಪ್ರಯಾಣಿಕರಿಗೆ ಕೆ ಎಸ್ ಆರ್ ಟಿಸಿ ಬಿಗ್ ಶಾಕ್ ಎನ್ನುವಂತೆ, ಬರೋಬ್ಬರಿ 3754 ಮಂದಿಗೆ ದಂಡವನ್ನು ವಿಧಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಮೇ-2024 ರ ಮಾಹೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 42,680 ವಾಹನಗಳನ್ನು ತನಿಖೆಗೊಳಪಡಿಸಿ 3708 ಪ್ರಕರಣಗಳನ್ನು …

Read More »

ಪೆಟ್ರೋಲ್ ಹಾಕಿಸಿಕೊಳ್ಳಲು ಗೋವಾಗೆ ತೆರಳುತ್ತಿರುವ ಗಡಿ ಜಿಲ್ಲೆಯ ಜನ

ಉತ್ತರ ಕನ್ನಡ, ಜೂ.20: ರಾಜ್ಯ ಸರ್ಕಾರ(State government) ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಹೆಚ್ಚಳದಿಂದ ಪೆಟ್ರೋಲ್ ನೂರರ ಗಡಿ ದಾಟಿದೆ. ಇನ್ನು ಡಿಸೇಲ್ ಕೂಡ ಗೋವಾ ರಾಜ್ಯಕ್ಕಿಂತ ಹೆಚ್ಚಾಗಿದ್ದು, ವಾಹನ ಸವಾರರ ಜೇಬು ಬಿಸಿ ಮಾಡುತ್ತಿದೆ. ಆದ್ರೆ, ಗೋವಾ ಗಡಿಗೆ ಹೊಂದಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ(Karwar)ದಲ್ಲಿ ಸಸ್ತಾ ಗೋವಾ ಮದ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಪೆಟ್ರೋಲ್​ಗೆ ಮುಗಿ ಬೀಳುತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗೋವಾಕ್ಕೆ ಸಮೀಪವೇ ಇದ್ದು, ಕಾರವಾರದಿಂದ …

Read More »

ಮುಂದಿನ 7 ದಿನ ಭಾರಿ ಮಳೆ ಎಚ್ಚರಿಕೆ!

ಮಳೆ ಅಬ್ಬರಿಸುತ್ತಿದ್ದು, ಎಲ್ಲೆಲ್ಲೂ ಮಳೆರಾಯ ತನ್ನ ರೌದ್ರಾವತಾರ ತೋರಿಸುತ್ತಿದ್ದಾನೆ. ಈ ನಡುವೆ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ಮಳೆ ಅಬ್ಬರ ಸ್ವಲ್ಪ ಕಡಿಮೆ ಆಗಿದೆ ಅಂತಾ ಕೊರಗುವ ಸಮಯದಲ್ಲೇ ಮತ್ತೊಮ್ಮೆ ಭರ್ಜರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಿಗೆ ಭರ್ಜರಿ ಮಳೆ ಬೀಳಲಿದೆ? ಮುಂದಿನ 7 ದಿನಗಳ ಕಾಲ ಮಳೆ ಅಬ್ಬರಿಸುವ ಕರ್ನಾಟಕದ ಜಿಲ್ಲೆಗಳು ಯಾವುವು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ. ಕರ್ನಾಟಕ ರಾಜ್ಯದಲ್ಲಿ ತುಂತುರು ಮಳೆ, ಗುಡುಗು, …

Read More »

40 ಲಕ್ಷಕ್ಕೆ ನೀಟ್‌ ಪ್ರಶ್ನೆಪತ್ರಿಕೆ ಬಿಕರಿ

ಪಟ್ನಾ: ನೀಟ್‌-ಯುಜಿ ಅಕ್ರಮ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ನಿಜ ಎಂದು ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪರೀಕ್ಷೆಯ ಹಿಂದಿನ ದಿನ ರಾತ್ರಿಯೇ ನಮಗೆ ಪ್ರಶ್ನೆಪತ್ರಿಕೆಯನ್ನು ನೀಡಿ, ಉತ್ತರಗಳನ್ನು ನೆನಪಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು. ಮಾರನೇ ದಿನ ಪರೀಕ್ಷೆ ವೇಳೆ ಅದೇ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಬಂಧಿತ ನೀಟ್‌ ಆಕಾಂಕ್ಷಿ ಹೇಳಿದ್ದಾರೆ. ನೀಟ್‌ ಅವ್ಯವಹಾರ ಸಂಬಂಧ ಬಿಹಾರದಲ್ಲಿ ನೀಟ್‌ ಆಕಾಂಕ್ಷಿ ಅನುರಾಗ್‌ ಯಾದವ್‌, ಆತನ ಸಂಬಂಧಿ, ದಾನಾಪುರ ಮುನ್ಸಿಪಲ್‌ …

Read More »

ಕಾನ್‌ಸ್ಟೇಬಲ್‌ ಮೇಲೆಯೂ ನಟ ದರ್ಶನ್‌ ಗ್ಯಾಂಗ್‌ ಹಲ್ಲೆ

ಮದ್ದೂರು: ಕೊಲೆ ಆರೋಪದಲ್ಲಿ ಬಂಧನವಾಗಿರುವ ನಟ ದರ್ಶನ್‌ ಹಾಗೂ ಅವರ ಗ್ಯಾಂಗ್‌ನ ಕೃತ್ಯಗಳು, ಪುಂಡಾಟ ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ. ದರ್ಶನ್‌ ಗ್ಯಾಂಗ್‌ ಕಾನ್‌ಸ್ಟೆಬಲ್‌ ಮೇಲೆಯೂ ಹಲ್ಲೆ ನಡೆಸಿತ್ತು ಎಂಬ ಆರೋಪ ಕೇಳಿಬಂದಿದೆ. ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ಎಂ. ಉದಯ್‌ ಮನೆಯಲ್ಲೇ ಶಾಸಕರ ಗನ್‌ಮ್ಯಾನ್‌ ಆಗಿದ್ದ ಡಿಎಆರ್‌ ಕಾನ್‌ಸ್ಟೆಬಲ್‌ ನಾಗೇಶ್‌ ಮೇಲೆ ದರ್ಶನ್‌ ಕಡೆಯವರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಎ. 27ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ …

Read More »