ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಏನೆಲ್ಲಾ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ವಿಚಾರ ಬಯಲಾಗಿದೆ. ಮೊನ್ನೆಯಷ್ಟೇ ಆರ್ಆರ್ ನಗರದಲ್ಲಿರುವ ನಟ ದರ್ಶನ್ ಮನೆಯಲ್ಲಿ ಮತ್ತೆ 37 ಲಕ್ಷದ 40 ಸಾವಿರ ಹಣವನ್ನು, ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ.ಹಣವನ್ನು ಸೀಜ್ ಮಾಡಲಾಗಿದೆ. ದರ್ಶನ್ ಮನೆಯ ಬೆಡ್ ರೂಮ್ ನಲ್ಲಿ ಕಬೋಡ್ ನಲ್ಲಿ 37 ಲಕ್ಷ ಹಣ ಸೀಜ್ ಆಗಿದೆ ಎಂದು ವರದಿ ಆಗಿದೆ. ಬ್ಯಾಗ್ ಒಳಗೆ …
Read More »Monthly Archives: ಜೂನ್ 2024
ಜಿಎಸ್‌ಟಿ ಮಂಡಳಿ ಸದಸ್ಯರಾಗಿ ಕೃಷ್ಣ ಬೈರೇಗೌಡ ನೇಮಕ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ತೆರಿಗೆ ಪ್ರಮಾಣ ಸರಳಗೊಳಿಸಲು ರಚಿಸಿರುವ ಏಳು ಸಚಿವರನ್ನು ಒಳಗೊಂಡ ಸಮಿತಿಯನ್ನು ಪುನರ್ ರಚಿಸಲಾಗಿದೆ. ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಸಮಿತಿಯ ಸಂಚಾಲಕರಾಗಿ ನೇಮಕವಾಗಿದ್ದಾರೆ. ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಮಂಡಳಿಯ ವೆಬ್‌ಸೈಟ್‌ನಲ್ಲಿ ಈ ಕುರಿತು ಅಧಿಕೃತವಾಗಿ ಪ್ರಕಟಿಸಲಾಗಿದೆ. ಉತ್ತರಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ಗೋವಾದ ಸಾರಿಗೆ ಸಚಿವ ಮೌವಿನ್ …
Read More »ಚಿನ್ನದ ಬೆಲೆ ₹800, ಬೆಳ್ಳಿ ₹1,400 ಏರಿಕೆ
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯು ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ದರವು ₹800 ಏರಿಕೆಯಾಗಿ, ₹73,350ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ ₹1,400 ಹೆಚ್ಚಳವಾಗಿ, ₹93,700ಕ್ಕೆ ಮುಟ್ಟಿದೆ. ‘ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರವು ಅಂದಾಜಿಗೂ ಮೀರಿ ಇಳಿಕೆಯಾಗಿದೆ. ಹಾಗಾಗಿ, ಪ್ರಸಕ್ತ ವರ್ಷದಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಎರಡು ಬಾರಿ ಬಡ್ಡಿದರ ಕಡಿತಗೊಳಿಸಲಿದೆ ಎಂಬ ನಿರೀಕ್ಷೆ ಹೆಚ್ಚಿದೆ. ಇದು ಹಳದಿ ಲೋಹದ ಬೆಲೆ ಏರಿಕೆಗೆ ಕಾರಣವಾಗಿದೆ’ …
Read More »ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ: ಸಚಿವ ಎಂ.ಬಿ ಪಾಟೀಲ್
ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ: ಸಚಿವ ಎಂ.ಬಿ ಪಾಟೀಲ್ ಬೆಂಗಳೂರು: ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಭಾರೀ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದರು. ಖನಿಜ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ …
Read More »ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ!
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರಿಗೆ ಸಂಕಷ್ಟ ಎದುರಾಗಿದೆ. ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್‌ನ ಖ್ಯಾತ ಗಾಯಕ ಲಕ್ಕಿ ಅಲಿ (Singer Lucky Ali) ಕರ್ನಾಟಕ ಲೋಕಾಯುಕ್ತ (Karnataka Lokayukta) ಪೊಲೀಸರಿಗೆ ದೂರು ನೀಡಿದ್ದಾರೆ. ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ (Sudhir Reddy) ಮತ್ತು ಸೋದರ ಮಾವ ಮಧುಸೂದನ್ ರೆಡ್ಡಿ ತಮ್ಮ ಟ್ರಸ್ಟ್ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ. ಈ …
Read More »ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ: ಅಭಯ ಪಾಟೀಲ ಆರೋಪ
ಬೆಳಗಾವಿ: ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ದೊಡ್ಡ ಪ್ರಮಾಣದ ಮೇವು ಹಗರಣ ನಡೆದಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ಮೇವು ವಿತರಣೆಗೆ ನಿರ್ಧರಿಸಿತ್ತು. ಆದರೆ ದಾಖಲೆಯಲ್ಲಷ್ಟೇ ಮೇವು ವಿತರಿಸಲಾಗಿದೆ. ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ಎಸಗಲಾಗಿದೆ. ಮೇವಿನಲ್ಲಿ ಹಣ ತಿನ್ನುವ ಅಧಿ ಕಾರಿಗಳು ಮತ್ತು ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಇನ್ನು ಮುಂದೆ ಎಲ್ಲ ಹಗರಣಗಳು ಹೊರಗೆ ಬರಲಿವೆ. ಸಿಎಂ …
Read More »ಮೇವು ಹಗರಣ ನಡೆದಿದ್ದರೆ ಸಮಗ್ರ ತನಿಖೆ: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ಮೇವು ಖರೀದಿಯಲ್ಲಿ ಹಗರಣ ನಡೆದಿರುವ ಬಗ್ಗೆ ಇದುವರೆಗೆ ಯಾರು ದೂರು ನೀಡಿಲ್ಲ. ಈ ಬಗ್ಗೆ ಅಕ್ರಮ ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಪಶು ಸಂಗೋಪನೆ ಇಲಾಖೆಯಲ್ಲಿ ಜಿಲ್ಲೆಯಲ್ಲಿ ಮೇವು ಖರೀದಿಗೆ ಮಂಜೂರಾದ 6 ಕೋಟಿ ರೂ. ಅನುದಾನಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಇಲಾಖೆಯಲ್ಲಿ ಏನಾಗಿದೆ, …
Read More »ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು
ಬೆಳಗಾವಿ: ಕರ್ನಾಟಕದ ಗಡಿಭಾಗದಲ್ಲಿ ರುವ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸುತ್ತಿರುವ ಮಹಾರಾಷ್ಟ್ರ ಸರಕಾರವು ಸದ್ದಿಲ್ಲದೆ ಇನ್ನೊಂದು ಪಿತೂರಿ ಮಾಡುತ್ತಿದೆ ಎಂದು ಆರೋಪಿಸ ಲಾಗಿದೆ. ಅದು ಕಳೆದ 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯನ್ನೇ ಮಾಡಿಲ್ಲ ಎನ್ನುವ ಸಂಗತಿ ಈಗ ಹೊರಬಿದ್ದಿದೆ. ಉರ್ದು ಭಾಷಾ ಶಿಕ್ಷಕರ ನೇಮಕಾತಿ ಮಾಡಿದ್ದು, ಕನ್ನಡ ಶಾಲೆಗಳಿಗೆ ಮಾತ್ರ ಅರ್ಹ ಶಿಕ್ಷಕರಿದ್ದರೂ ಮಹಾರಾಷ್ಟ್ರ ಸರಕಾರ ಅವರನ್ನು ಪರಿಗಣಿಸಿಲ್ಲ. 15 ವರ್ಷಗಳಿಂದ ಕನ್ನಡ ಶಾಲೆಗಳಿಗೆ ಶಿಕ್ಷಕರ ನೇಮಕಾತಿ …
Read More »40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಚಿಕ್ಕೋಡಿ: ನೀರಿಲ್ಲದ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಜೀವದಾನ ನಿಡಿದ್ದಾರೆ. ಚಿಕ್ಕೋಡಿ ನಗರದ ವಾಡ ಗಲ್ಲಿಯ ಶ್ರೀನಿವಾಸ್ ದೊಡಮನಿ ಅವರ ಸುಮಾರು 40 ಅಡಿ ಆಳದ ಬಾವಿಯಲ್ಲಿ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಬೆಕ್ಕು ಕಾಲು ಜಾರಿ ಬಿದ್ದಿದೆ. ಹೀಗಾಗಿ ದೊಡಮನಿ ಮನೆಯವರು ಚಿಕ್ಕೋಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಕ್ಕನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ಅಗ್ನಿಶಾಮಕ ದಳದ ಸಿಬ್ಬಂದಿ …
Read More »ಸಿದ್ದು ಸಿಎಂ ಇರುವವರೆಗೆ ಮಾತ್ರ ಕಾಂಗ್ರೆಸ್ ಸರ್ಕಾರ ಸೇಫ್; : ರಮೇಶ್ ಜಾರಕಿಹೊಳಿ
ಬೆಳಗಾವಿ: ಸಿದ್ದರಾಮಯ್ಯ ಸಿಎಂ ಇರುವವರೆಗೆ ಕಾಂಗ್ರೆಸ್ ಸರ್ಕಾರ ಇರುತ್ತದೆ. ಅವರ ಅವ ಧಿ ಮುಗಿದ ನಂತರ ಹೇಳಲಾಗಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಬೆಳಗಾವಿ ನಗರದ ಯೋಗಿಕೊಳ್ಳ ಪ್ರದೇಶದಲ್ಲಿ 6 ಟಿಎಂಸಿ ನೀರು ನಿಲ್ಲಿಸಲು ಉದ್ದೇಶಿಸಿ ಮಾಡಲಾದ ಘಟ್ಟಿ ಬಸವಣ್ಣ ಡ್ಯಾಂ ಯೋಜನೆಯನ್ನು ನಿಲ್ಲಿಸಲು ಮಹಾನಾಯಕ ಪ್ಲಾನ್ ಮಾಡಿದ್ದ. ಯೋಜನೆ ನಿಲ್ಲಿಸಲು ಅಧಿ ಕಾರಿಗಳಿಂದ ಸತೀಶ್ ಜಾರಕಿಹೊಳಿ ಹೆಸರು ಹೇಳಿಸಿದ್ದ. ಆದರೆ ನಾನು ಸತೀಶ ಜತೆ ಮಾತನಾಡಿದಾಗ …
Read More »