ನವದೆಹಲಿ, ಜೂನ್ 23: ಲೋಕಸಭೆ ಚುನಾವಣೆ 2024ರ ಬಳಿಕ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ 24ರ ಸೋಮವಾರ ಆರಂಭವಾಗಲಿದೆ. ಲೋಕಸಭೆ ಸದಸ್ಯರ ಪ್ರಮಾಣ ವಚನ ಎರಡು ದಿನಗಳ ಕಾಲ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಜೆಪಿ ನಾಯಕ ಮತ್ತು 7 ಅವಧಿಗೆ ಸದಸ್ಯರಾಗಿ ಆಯ್ಕೆಯಾದ ಭರ್ತೃಹರಿ ಮಹತಾಬ್ ಅವರನ್ನು ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿದ್ದಾರೆ. ನೂತನ ಸದಸ್ಯರ ಪ್ರಮಾಣ ವಚನ …
Read More »Monthly Archives: ಜೂನ್ 2024
ಹಾವೇರಿಯಲ್ಲಿ ಮಳೆ ಬರುತ್ತಿಲ್ಲವೆಂದು ‘ಹೂತಿದ್ದ ಶವ’ಗಳನ್ನೇ ಹೊರ ತೆಗೆದ ಜನರು
ಹಾವೇರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡ ನಂತ್ರ, ಸರಿಯಾದ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈ ಗ್ರಾಮದ ಜನರು ತಮ್ಮ ಊರಿನಲ್ಲಿ ಮಳೆ ಬರುತ್ತಿಲ್ಲ ಅನ್ನೋ ಕಾರಣಕ್ಕೆ ಹೂತಿದ್ದಂತ ಶವಗಳನ್ನೇ ಹೊರತೆಗೆದಿರುವಂತ ಶಾಕಿಂಗ್ ಸುದ್ದಿ ತಿಳಿದು ಬಂದಿದೆ. ಹಾವೇರಿ ಜಿಲ್ಲೆಯ ಹಲವೆಡೆ ಮುಂಗಾರು ಮಳೆ ಆರಂಭಗೊಂಡ ನಂತ್ರವೂ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಇದಕ್ಕೆ ಕಾರಣ ಚರ್ಮ ರೋಗ(ತೊನ್ನು) ಇದ್ದಂತ ವ್ಯಕ್ತಿಯನ್ನು ಹೂತು ಹಾಕಿದ್ದೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಮೂಡನಂಬಿಕೆಗೆ ಜೋತು ಬಿದ್ದಂತ …
Read More »ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರೆಸ್ಟ್
ಶಿವಮೊಗ್ಗ: ಯುವತಿಗೆ ಮುದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಗ್ವೆ ಬಂಧಿತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಸಾಗರದ ನಿವಾಸದಲ್ಲಿ ಅರುಣ್ ಕುಗ್ವೆಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವತಿ ಮೊದಲು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಕಾರಣಾಂತರಗಳಿಂದ ಆರೋಪಿ ಅರುಣ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಯುವತಿ ಶಿವಮೊಗ್ಗಕ್ಕೆ ಬಂದು ಮಹಿಳಾ ಠಾಣೆಯಲ್ಲಿ …
Read More »ದರ್ಶನ್ ನ್ಯಾಯಾಂಗ ಬಂಧನ: ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದ ರೇಣುಕಾಸ್ವಾಮಿ ತಂದೆ
ಚಿತ್ರದುರ್ಗ, ಜೂನ್ 22: ನಟ ದರ್ಶನ್ (Darshan) ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು ದರ್ಶನ್ ಜೈಲು ಸೇರಿದ್ದಾರೆ. ಈ ವಿಚಾರವಾಗಿ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ (Renukaswamy) ತಂದೆ ಕಾಶಿನಾಥಯ್ಯ ಪ್ರತಿಕ್ರಿಯಿಸಿದ್ದು, ಪೊಲೀಸರ ನ್ಯಾಯಯುತ ಶ್ರಮದಿಂದ ದರ್ಶನ್ ಜೈಲುಪಾಲಾಗಿದ್ದಾರೆ. ನನ್ನ ಮಗ ಅನುಭವಿಸಿದ ನೋವಿನ ಶಿಕ್ಷೆ ಆರೋಪಿಗಳಿಗೂ ಆಗಬೇಕು. ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆಗೂ ಹೊರತಾದ ಶಿಕ್ಷೆಯಾಗಬೇಕು ಎಂದಿದ್ದಾರೆ. ನನ್ನ ಮಗ ರೇಣುಕಾಸ್ವಾಮಿಗೆ ಯಾವ ರೀತಿ ಗಾಯಗಳು ಆಗಿದ್ದವೋ ಅದೇ ರೀತಿ ಗಾಯ ಆಗಬೇಕು, ವಿದ್ಯುತ್ ಶಾಕ್ …
Read More »ಜೊಲ್ಲೆ ಸೊಕ್ಕಿನಿಂದ ಚಿಕ್ಕೋಡಿಯಲ್ಲಿ ಬಿಜೆಪಿ ಸೋಲು : ಮುತಾಲಿಕ್
ಬೆಳಗಾವಿ : ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಸೋಲು ಆಗಿಲ್ಲ. ಅಲ್ಲಿ ಅಣ್ಣಾಸಾಹೇಬ ಜೊಲ್ಲೆಯ ಸೊಕ್ಕು, ಅಹಂಕಾರದ ಸೋಲಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. ಚಿಕ್ಕೋಡಿಯಲ್ಲಿ ಸೋಲು ಕಂಡಿದ್ದು ಅಣ್ಣಾ ಸಾಹೇಬ ಜೊಲ್ಲೆ ಮಾತ್ರ. ಹಿಂದೂಗಳು, ಬಿಜೆಪಿ ಕಾರ್ಯಕರ್ತರು ಸೋತಿಲ್ಲ. ಯಾವುದೇ ರೀತಿಯ ಕಾರ್ಯಕರ್ತರ ಜೊತೆಗೆ ಸಂಪರ್ಕ ಇಲ್ಲದ ವ್ಯಕ್ತಿ. ಕ್ಷೇತ್ರದದಲ್ಲಿ ಏನೇನೂ ಕೆಲಸ …
Read More »ಸೂರಜ್ ರೇವಣ್ಣ ಪ್ರಕರಣ ಸಿಐಡಿಗೆ ; ಗೃಹ ಸಚಿವ ಪರಮೇಶ್ವರ
ಬೆಂಗಳೂರು : ಜೆಡಿಎಸ್ ಕಾರ್ಯಕರ್ತನ ಮೇಲೆ ಸಲಿಂಗಕಾಮದ ಆರೋಪದ ಮೇಲೆ ಅರೆಸ್ಟ್ ಆಗಿರುವ ಪರಿಷತ್ ಸದಸ್ಯ ಸೂರಜ್ ರೇವಣ್ಣ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇವರು. ರೇವಣ್ಣ ಕುಟುಂಬದ ಮತ್ತೊಂದು ಪ್ರಕರಣ ಸಧ್ಯ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ. ಸಲಿಂಗಕಾಮದ ಆರೋಪದ ಮೇಲೆ ಶನಿವಾರ ಸೂರಜ್ ರೇವಣ್ಣ ಅವರನ್ನು ಹಾಸನ ಪೊಲೀಸರು ವಿಚಾರಣೆಗೆ ಬಂದಾಗ ವಶಕ್ಕೆ ಪಡೆದುಕೊಂಡಿದ್ದಾರೆ. …
Read More »ಮಕ್ಕಳಿಬ್ಬರೂ ಲೈಂಗಿಕ ಆರೋಪಗಳಲ್ಲಿ ಜೈಲು ಸೇರಿದರೂ ರೇವಣ್ಣನ ಮೊಗದಲ್ಲಿ ಮಾಸದ ಮುಗುಳ್ನಗು!
ಮಕ್ಕಳಿಬ್ಬರೂ ಲೈಂಗಿಕ ಆರೋಪಗಳಲ್ಲಿ ಜೈಲು ಸೇರಿದರೂ ರೇವಣ್ಣನ ಮೊಗದಲ್ಲಿ ಮಾಸದ ಮುಗುಳ್ನಗು! ಬೆಂಗಳೂರು: ಲೈಂಗಿಕ ದುರಾಚಾರದ ಆರೋಪಗಳಲ್ಲಿ ತನ್ನಿಬ್ಬರು ಮಕ್ಕಳು ಜೈಲು ಸೇರಿದರೂ ಹೆಚ್ ಡಿ ರೇವಣ್ಣ (HD Revanna) ಅವರ ಮುಖದಲ್ಲಿ ಮುಗುಳ್ನಗು ಮಾಸಿಲ್ಲ. ಇವತ್ತು ಬೆಂಗಳೂರಿಗೆ ಆಗಮಿಸಿದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸೂರಜ್ ರೇವಣ್ಣ (Suraj Revanna) ಬಗ್ಗೆ ಪ್ರಶ್ನೆ ಕೇಳಿದಾಗ ರೇವಣ್ಣ ನಗುತ್ತಲೇ, ನಾನೀಗ ಯಾವುದೇ ಹೇಳಿಕೆ ನೀಡಲ್ಲ. ಇಂಥ ಷಡ್ಯಂತ್ರಗಳಿಗೆಲ್ಲ (conspiracy) ನಾನು ಹೆದರಲ್ಲ, ನನಗೆ ದೇವರ ಮೇಲೆ …
Read More »ಸೂರಜ್ ರೇವಣ್ಣ ಪರ ದೂರು ನೀಡಿದ್ದ ಶಿವಕುಮಾರ್ ನಾಪತ್ತೆ
ಹಾಸನ, (ಜೂನ್ 23): ಇತ್ತ ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತನೋರ್ವ, ಸೂರಜ್ ರೇವಣ್ಣ (Suraj Revanna) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತಿದ್ದಂತೆಯೇ ಇತ್ತ ಹೊಳೆನರಸೀಪುರದಲ್ಲಿ ಸಂತ್ರಸ್ತನ ವಿರುದ್ಧವೇ ದೂರು ದಾಖಲಾಗಿದೆ. ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎನ್ನುವಾತ ಸಂತ್ರಸ್ತನ ವಿರುದ್ಧ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್ ಮೇಲ್ ದೂರು ನೀಡಿದ್ದಾನೆ. ಆದ್ರೆ, ಇದೀಗ ಸಂತ್ರಸ್ತನ ದೂರಿನ ಅನ್ವಯ ಸೂರಜ್ನನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಂತೆಯೇ ಆಪ್ತ ಶಿವಕುಮಾರ್ …
Read More »ಉಪಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ; ಜಮೀರ್ ಅಹ್ಮದ್
ಬೆಂಗಳೂರು: ರಾಜ್ಯದಲ್ಲಿ ಮೂವರು ಉಪ ಮುಖ್ಯಮಂತ್ರಿಗಳ ಸ್ಥಾನ ಸೃಷ್ಟಿ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ. ಸಚಿವ ಸತೀಶ ಜಾರಕಿಹೊಳಿ ಅವರು, ಉಪ ಮುಖ್ಯಮಂತ್ರಿ ಹುದ್ದೆ ಕುರಿತಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತಿಬ್ಬರು ಪ್ರಭಾವಿ ಸಚಿವರಾದ ಜಮೀರ್ ಅಹ್ಮದ್ ಮತ್ತು ಕೆ.ಎನ್. ರಾಜಣ್ಣ ಕೂಡ ಉಪಮುಖ್ಯಮಂತ್ರಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಮೂವರು ಡಿಸಿಎಂ ಮಾಡಿದರೆ ತೊಂದರೆ ಏನು? ರಾಜ್ಯದಲ್ಲಿ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ …
Read More »ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ
ಮೇಷ: ಕೆಲಸಕ್ಕೆ ವಿರಾಮವಾಗಿರುವುದರಿಂದ ಮನಸ್ಸಿಗೂ ವಿರಾಮ. ಸಂಸಾರದ ಆವಶ್ಯ ಕತೆಗಳತ್ತ ಗಮನ. ಉದ್ಯಮಿಗಳಿಗೆ ಅಭಿವೃದ್ಧಿಯ ಮಾರ್ಗಗಳ ಚಿಂತೆ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ. ಸಂಜೆ ಬಂಧು- ಮಿತ್ರರ ಭೇಟಿ. ವೃಷಭ: ಕೆಲವರಿಗೆ ಅನಿರೀಕ್ಷಿತ ಧನಪ್ರಾಪ್ತಿಯ ಸಾಧ್ಯತೆ. ವ್ಯವಹಾರ ವಿಸ್ತರಣೆಗೆ ವಿವಿಧ ಮೂಲಗಳಿಂದ ಸಹಾಯ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತನೆ. ಮಿಥುನ: ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಬಂಧುಗಳ ಆಗಮನ. ಅನವಶ್ಯ ವೆಚ್ಚಗಳ ಬಗ್ಗೆ ಎಚ್ಚರ. …
Read More »