ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬರೆದಿದ್ದ ಪತ್ರಕ್ಕೆ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಂದಿಸಿ ಉತ್ತರ ಬರೆದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಸೇರಿದಂತೆ ಈ ಹಿಂದೆ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿ ಪತ್ರ ಬರೆದಿದ್ದರು, ಇದೀಗ ಗೃಹ ಸಚಿವರ ಕಡೆಯಿಂದ ಸ್ಪಂದನೆ ಸಿಕ್ಕಿದ್ದು, ಹಲವರಿಗೆ ನಡುಕ ಶುರುವಾಗಿದೆ. ವಿಜಯಪು, (ಜೂನ್ 28): ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ …
Read More »Daily Archives: ಜೂನ್ 29, 2024
CBSE, ICSE ಸೇರಿ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: CBSE, ICSE, ಅಂತರರಾಷ್ಟ್ರೀಯ ಮಂಡಳಿ ಸೇರಿದಂತೆ ಕೇಂದ್ರೀಯ ಪಠ್ಯಕ್ರಮದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಭೋದಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ನಿಯಮಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರದಿಂದ ರಾಜ್ಯ ಪತ್ರ ಹೊರಡಿಸಲಾಗಿದೆ. ಈ ನಿಯಮ ಅನುಸರಿಸಿದಲ್ಲಿ ಮಾತ್ರ ಖಾಸಗಿ ಶಾಲೆಗಳನ್ನು ನಡೆಸಲು ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪತ್ರ ದೊರೆಯಲಿದೆ ಎಂದು ಹೇಳಲಾಗಿದೆ. ಈ ಹಿಂದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ …
Read More »ಪ್ರಜ್ವಲ್ ಬಳಿ ಇತ್ತು 15 ಸಿಮ್ ಕಾರ್ಡ್ʼಗಳು.! ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್
ಬೆಂಗಳೂರು: ಜೈಲಿನಲ್ಲಿರುವ ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಒಂದೊಂದೇ ಕೃತ್ಯಗಳು ಬಯಲಿಗೆ ಬರುತ್ತಿವೆ. ಪ್ರಜ್ವಲ್ ರೇವಣ್ಣ ಬಳಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಸಿಮ್ ಗಳು ಇತ್ತಂತೆ. ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ ನಿಂದ ಕಾಲ್. ಹೀಗೆ ಪ್ರಜ್ವಲ್ ರೇವಣ್ಣ ಬರೋಬ್ಬರಿ 15 ಸಿಮ್ ಕಾರ್ಡ್ ಹೊಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್‍ಗೆ ಟಾರ್ಗೆಟ್. ಕೆಲಸ ಕೇಳಿಕೊಂಡು, ಮಕ್ಕಳಿಗೆ ಸೀಟ್ ಕೇಳಿಕೊಂಡು …
Read More »170 ಲಕ್ಷ ಕೋಟಿ ಮೀರಿದ ಕೇಂದ್ರದ ಸಾಲ
ಕೇಂದ್ರ ಸರ್ಕಾರದ ಒಟ್ಟು ಸಾಲವು 2024ರ ಮಾರ್ಚ್ ಅಂತ್ಯದ ವೇಳೆಗೆ ₹171.78 ಲಕ್ಷ ಕೋಟಿಗೆ ಏರಿಕೆಯಾಗಿದೆ. 2023ರ ಡಿಸೆಂಬರ್ ಅಂತ್ಯದಿಂದ ಆರಂಭಗೊಂಡು 2024ರ ಮಾರ್ಚ್ ಅಂತ್ಯದ ವೇಳೆದ ವೇಳೆ ಶೇ 3.4ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಸಾರ್ವಜನಿಕ ಸಾಲದ ನಿರ್ವಹಣಾ ತ್ರೈಮಾಸಿಕ ವರದಿಯಲ್ಲಿ (ಜನವರಿ-ಮಾರ್ಚ್, 2024) ಹೇಳಲಾಗಿದೆ ₹166.14 ಲಕ್ಷ ಕೋಟಿ;2023ರ ಡಿಸೆಂಬರ್ ಅಂತ್ಯದಲ್ಲಿ ಇದ್ದ ಸಾಲದ ಮೊತ್ತ ₹171.78 ಲಕ್ಷ ಕೋಟಿ;2024ರ ಮಾರ್ಚ್ ಅಂತ್ಯದ ವೇಳೆ ಇದ್ದ …
Read More »ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್ ನಂಟು
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಹಿಂದೆ ಹನಿಟ್ರ್ಯಾಪ್ ಇದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ. ಆಂಧ್ರಪ್ರದೇಶದ ಸತ್ಯನಾರಾಯಣ ವರ್ಮ ಎಂಬಾತ ಈ ಪ್ರಕರಣದ ಸೂತ್ರಧಾರ. ವರ್ಮ ಒಬ್ಬ ವೃತ್ತಿಪರ ಕೇಡಿ ಎನ್ನುವ ಮಾಹಿತಿಯಿದೆ. ಹಲವು ರಾಜ್ಯಗಳಲ್ಲಿ ನಡೆದ ಅಕ್ರಮಗಳಲ್ಲಿ ಈತನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಈತನಿಗೆ ನಮ್ಮ ರಾಜ್ಯದ ಸಚಿವರು, ಶಾಸಕರು, …
Read More »ಪ್ರಜ್ವಲ್ ಧ್ವನಿ ಬದಲಾಯಿಸಲು ಯತ್ನ
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿರುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಸಂಬಂಧ ಇತ್ತೀಚೆಗೆ ಅವರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಿದಾಗ ಕೊಂಚ ಧ್ವನಿ ಬದಲಾಯಿಸಿ ಮಾತನಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು. ಹಾಸನದ ಅಶ್ಲೀಲ ಚಿತ್ರವಿರುವ ಪೆನ್‌ಡ್ರೈವ್ ಕೇಸ್ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಚುರುಕುಗೊಳಿಸಿದ್ದು ಪ್ರಜ್ವಲ್ ವಿರುದ್ಧ ದಾಖಲಾಗಿರುವ ಸಾಲು-ಸಾಲು ದೂರುಗಳ ಪೈಕಿ ಒಂದೊಂದೇ ಪ್ರಕರಣದ ಸಾಕ್ಷ್ಯ ಕಲೆ ಹಾಕಲಾಗುತ್ತಿದೆ. …
Read More »ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು
ಗದಗ: ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕರೆದೊಯ್ಯುವ ವೇಳೆ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಗರದ ಬೆಟಗೇರಿಯ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಜಯನಗರದಲ್ಲಿ ನಡೆದಿದ್ದ ಸರಣಿಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಜಾಡು ಹಿಡಿದು ನಗರಕ್ಕೆ ಆಗಮಿಸಿದ್ದ ಗಂಗಾವತಿ ಶಹರ ಪೊಲೀಸ್ ಠಾಣೆಯ ಪೊಲೀಸರು ಸ್ಥಳೀಯ ಎಸ್.ಎಂ. ಕೃಷ್ಣ ನಗರದಲ್ಲಿ ವಾಸವಿದ್ದ ಅಮ್ಜದ್ …
Read More »ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ ಎರಡು ಕಾರುಗಳು ನುಜ್ಜುಗುಜ್ಜಾಗಿದ್ದು ದೇಹಗಳು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿ
ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಮಂದಿ ದುರ್ಮರಣ, ನಾಲ್ವರು ಗಂಭೀರ ಮುಂಬಯಿ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟು ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಜಲ್ನಾದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಶುಕ್ರವಾರ ರಾತ್ರಿ ಸುಮಾರು ಹನ್ನೊಂದು ಗಂಟೆಯ ಸುಮಾರಿಗೆ ಕಾರು ಚಾಲಕ ಕಾರಿಗೆ ಪೆಟ್ರೋಲ್ ಹಾಕಲೆಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾರನ್ನು ಚಲಾಯಿಸಿದ ಪರಿಣಾಮ ಎದುರಿನಿಂದ ವೇಗವಾಗಿ ಬರುತಿದ್ದ ಮತ್ತೊಂದು ಕಾರು …
Read More »ಕೋತಿ ದಾಳಿಗೆ ಊರಿನ 15 ಜನರಿಗೆ ಗಾಯ
ಕುಷ್ಟಗಿ: ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಕೋತಿಯ ಹುಚ್ಚಾಟಕ್ಕೆ ಜನ ಆತಂಕಗೊಂಡಿದ್ದಾರೆ. ಕೋತಿ ಕಚ್ಚುವಿಕೆ ಮುಂದುವರಿದ ಹಿನ್ನೆಲೆಯಲ್ಲಿ ಜೂ.29ರ ಶನಿವಾರ ಶಾಲೆಗೆ ರಜೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಜೂನ್ 27 ರಿಂದ ಕೋತಿಯ ಉಪಟಳ ಜಾಸ್ತಿಯಾಗಿದೆ. ಗಿಡ, ಮನೆಯ ಮಾಳಿಗೆಯ ಮೇಲೆ ಕೂರುವ ಕೋತಿ ಜನರ ಮೇಲೆ ಏಕಾಏಕಿ ದಾಳಿ ಮಾಡಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದೆ. ಹುಚ್ಚು ಕೋತಿಯ ದಾಳಿಗೆ ಮಕ್ಕಳಿಂದ ಹಿಡಿದು ವೃದ್ದರವರೆಗೆ ಒಟ್ಟು 15 …
Read More »ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ
ಶಿವಮೊಗ್ಗ: ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದ ಹಗರಣ ನಡೆದಿದೆ. ವಾಲ್ಮೀಕಿ ಸಮಾಜಕ್ಕೆ ಮೀಸಲಿಟ್ಟ ಹಣವನ್ನು ಸರ್ಕಾರ ಲೂಟಿ ಮಾಡಿದೆ. ಸರ್ಕಾರಿ ಹಣ ಲೂಟಿ ಮಾಡಿರುವ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಶರಣ ಪ್ರಕಾಶ್ ಪಾಟೀಲ್, ಬೋರ್ಡ್ ಅಧ್ಯಕ್ಷರು ಸೇರಿ ಮುಖ್ಯಮಂತ್ರಿ ಗಳು ಸಹ ರಾಜೀನಾಮೆ ಕೊಡಬೇಕಾಗುತ್ತದೆ. ಸಿಎಂ ಅವರೇ ಹಣಕಾಸಿನ ಸಚಿವರಾಗಿದ್ದಾರೆ. ಅವರ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು. …
Read More »