Breaking News

Daily Archives: ಜೂನ್ 24, 2024

ಫಿಟ್ನೆಸ್ ಮೇಂಟೇನೂ ಇಲ್ಲ, ಚಿಕನ್, ಮಟನ್ನೂ ಇಲ್ಲ! ಒಗ್ಗದ ಜೈಲೂಟ ತಿನ್ನಲು ದರ್ಶನ್ ಪರದಾಟ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್ (Actor Darshan and Gang) ಮತ್ತು ಸಹಚರರು ಜೈಲು ಪಾಲಾಗಿದ್ದಾರೆ. ಆದರೆ ನಟ ದರ್ಶನ್ ಜೈಲೂಟ ತಿನ್ನಲು ಒಗ್ಗದೆ ಪರದಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನಿಂದ ಹೊರಗಿದ್ದಾಗ ಐಷಾರಾಮಿ ಜೀವನದ ಜೊತೆಗೆ ಬಿಂದಾಸ್ ಆಗಿ ಇರುತ್ತಿದ್ದ ದರ್ಶನ್, ಫಿಟ್ನೆಸ್ ಮೇಂಟೈನ್ ಮಾಡಲು‌ ಚಿಕನ್, ಮಟನ್, ಪ್ರೂಟ್ಸ್ ಜೊತೆಗೆ ಜ್ಯೂಸ್ ಸೇವಿಸುತ್ತಿದ್ದರು. ಆದರೆ ಈಗ ಜೈಲಿನಲ್ಲಿ ಸರಿಯಾಗಿ …

Read More »

ರಾಡ್ ನಿಂದ ಹೊಡೆದು ಯುವಕನ ಬರ್ಬರ ಹತ್ಯೆ

ಬೆಂಗಳೂರು: ಬೆಂಗಳೂರಿನಲ್ಲಿ 17 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಂಜುನಾಥ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಅಬ್ಬಿಗೆರೆ ಬಳಿಯ ಖಾಲಿ ಜಾಗದಲ್ಲಿ ಶವ ಪತ್ತೆಯಾಗಿದೆ. ರಾಡ್ ನಿಂದ ಹೊಡೆದು ಮಂಜುನಾಥ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿ ವಿಚಾರಕ್ಕೆ ಮಂಜುನಾಥನ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Read More »

ನವದೆಹಲಿ: ಏಳು ಬಾರಿ ಸಂಸದರಾಗಿರುವ ಬಿಜೆಪಿಯ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವ ವಿರೋಧ-ಗದ್ದಲದ ನಡುವೆ, 18 ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗುತ್ತಿದೆ. ಇಂದು ವಿಶೇಷ ಸಂಸತ್ ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲ ಸೇರಿದಂತೆ ಹೊಸದಾಗಿ ಚುನಾಯಿತರಾದ 280 ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಉಳಿದ 264 ಸಂಸದರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 26 ರಂದು ಲೋಕಸಭಾ ಸ್ಪೀಕರ್ ಆಯ್ಕೆ ಮತ್ತು ಜೂನ್ 27 ರಂದು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ನೂತನ ಸ್ಪೀಕರ್ ಆಯ್ಕೆಯ ತನಕ ಸದನದ ಕಲಾಪಗಳನ್ನು ಕೈಗೊಳ್ಳಲು ಮಹತಾಬ್‌ಗೆ ಸಹಾಯ ಮಾಡಲು ಮೂವರು ವಿರೋಧ ಪಕ್ಷದ ಸಂಸದರು ಅಧ್ಯಕ್ಷರ ಸಮಿತಿಯಿಂದ ಹಿಂದೆ ಸರಿಯಲು ಪರಿಗಣಿಸಿರುವುದರಿಂದ ಹಂಗಾಮಿ ಸ್ಪೀಕರ್ ನೇಮಕ ಕುರಿತ ಗದ್ದಲ ಇಂದು ಸದನದಲ್ಲಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಕಳೆದ ವಾರದ ಆರಂಭದಲ್ಲಿ ರಾಷ್ಟ್ರಪತಿಗಳು ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದರು. ಮಹತಾಬ್ ಅವರಿಗೆ ಸಹಾಯ ಮಾಡಲು ಕಾಂಗ್ರೆಸ್‌ನ ಕೋಡಿಕುನ್ನಿಲ್ ಸುರೇಶ್, ಡಿಎಂಕೆ ಸಂಸದ ಟಿ ಆರ್ ಬಾಲು, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಮತ್ತು ಬಿಜೆಪಿ ನಾಯಕರಾದ ರಾಧಾ ಮೋಹನ್ ಸಿಂಗ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ ಸೇರಿದಂತೆ ಹಿರಿಯ ಸಂಸದರ ಸಮಿತಿಯನ್ನು ನಾಮನಿರ್ದೇಶನ ಮಾಡಿದರು. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಕೆ.ಸುರೇಶ್, ಸಮಿತಿಯನ್ನು ಬಹಿಷ್ಕರಿಸುವ ಕುರಿತು ಸೋಮವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಮಹತಾಬ್ ನೇಮಕದ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಎಂಟನೇ ಅವಧಿಯ ಸಂಸದ ಕೆ.ಸುರೇಶ್‌ ಅವರ ಸ್ಥಾನದ ಹಕ್ಕನ್ನು ಸರ್ಕಾರ ಬೈಪಾಸ್ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಈ ಮಧ್ಯೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು, ಮಹತಾಬ್ ಅವರು ಲೋಕಸಭೆ ಸದಸ್ಯರಾಗಿ ಏಳು ಬಾರಿ ಆಯ್ಕೆಯಾಗಿದ್ದು, ಹಂಗಾಮಿ ಲೋಕಸಭಾ ಹುದ್ದೆಗೆ ಅರ್ಹರಾಗಿದ್ದಾರೆ. ಕಾಂಗ್ರೆಸ್ ನವರು ಜನರ ದಾರಿತಪ್ಪಿಸುತ್ತಿದ್ದಾರೆ ಎಂದರು. ಸಭಾಧ್ಯಕ್ಷ ಮತ್ತು ಉಪಸಭಾಪತಿ ಹುದ್ದೆಗಳ ಆಯ್ಕೆ ವಿಚಾರದಲ್ಲಿ ಪ್ರತಿಪಕ್ಷಗಳು ಮತ್ತು ಸರಕಾರಗಳು ಜಟಾಪಟಿ ನಡೆಸುವ ಸಾಧ್ಯತೆ ಇದೆ. ಸರ್ಕಾರ ತನ್ನ ಸ್ಪೀಕರ್ ಅಭ್ಯರ್ಥಿಯ ಬಗ್ಗೆ ಗೌಪ್ಯವಾಗಿ ಉಳಿದಿದೆ, ಆದರೆ ಪ್ರತಿಪಕ್ಷಗಳು ಉಪಸಭಾಪತಿ ಹುದ್ದೆಗೆ ತನ್ನ ಹಕ್ಕನ್ನು ಪ್ರತಿಪಾದಿಸಲು ಮುಂದಾಗಿವೆ. ಜೂನ್ 28 ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯು ಸದನದಲ್ಲಿ ಭಾರೀ ಗದ್ದಲ-ಕೋಲಾಹಲಕ್ಕೆ ಕಾರಣವಾಗಬಹುದು. NEET-UG ಮತ್ತು UGC-NET ಪರೀಕ್ಷೆಗಳು, ಹೊಸ ಕ್ರಿಮಿನಲ್ ಕಾನೂನುಗಳು ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್ ಅಪಘಾತ ಸೇರಿದಂತೆ ವಿವಿಧ ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಮುಂದಾಗಿವೆ. ಸಿದ್ಧತೆ ಮಾಡಿಕೊಂಡಿವೆ. ಜುಲೈ 2 ಅಥವಾ 3 ರಂದು ಪ್ರಧಾನ ಮಂತ್ರಿಗಳು ಸದನದಲ್ಲಿ ಚರ್ಚೆಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ನಂತರ ಸಂಸತ್ ಕಲಾಪ ಅಲ್ಪ ವಿರಾಮ ಪಡೆದು ಜುಲೈ 22ರಂದು ಬಜೆಟ್ ಮಂಡನೆ ವೇಳೆ ಮತ್ತೆ ಸೇರಲಿದೆ.

18ನೇ ಲೋಕಸಭೆ ಮೊದಲ ಅಧಿವೇಶನ ಇಂದು ಆರಂಭ: ನೂತನ ಸದಸ್ಯರ ಪ್ರಮಾಣ ವಚನ, ಹಂಗಾಮಿ ಸ್ಪೀಕರ್ ನೇಮಕ ಗದ್ದಲ ಸಾಧ್ಯತೆ   ನವದೆಹಲಿ: ಏಳು ಬಾರಿ ಸಂಸದರಾಗಿರುವ ಬಿಜೆಪಿಯ ಭರ್ತೃಹರಿ ಮಹತಾಬ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವ ವಿರೋಧ-ಗದ್ದಲದ ನಡುವೆ, 18 ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗುತ್ತಿದೆ. ಇಂದು ವಿಶೇಷ ಸಂಸತ್ ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿ ಮಂಡಲ ಸೇರಿದಂತೆ …

Read More »