Breaking News

Daily Archives: ಜೂನ್ 24, 2024

ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹ

ನವದೆಹಲಿ: ಎಂಟನೆಯ ವೇತನ ಆಯೋಗ ರಚಿಸಬೇಕು, ವೇತನ ಪಡೆಯುವ ವರ್ಗದವರಿಗೆ ಆದಾಯ ತೆರಿಗೆ ವಿನಾಯಿತಿ ಹೆಚ್ಚು ಮಾಡಬೇಕು ಮತ್ತು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು ಎನ್ನುವ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿರಿಸಿದ್ದಾರೆ. ನಿರ್ಮಲಾ ಅವರು ಕೇಂದ್ರ ಬಜೆಟ್‌ಗೆ ಪೂರ್ವಭಾವಿಯಾಗಿ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಸೋಮವಾರ ಸಭೆ ನಡೆಸಿದರು. ಕೇಂದ್ರ ಸರ್ಕಾರದ ಮಾಲೀಕತ್ವದ ಉದ್ದಿಮೆಗಳ ಖಾಸಗೀಕರಣವನ್ನು ಸ್ಥಗಿತಗೊಳಿಸಬೇಕು …

Read More »

ಭಾರತೀಯ ತರಕಾರಿ ಜಾಗತಿಕ ಮಟ್ಟದಲ್ಲಿ ಮಾರಾಟ ಆಗುವಂತೆ ಆಗಬೇಕು;ಆರ್.ಬಿ.ತಿಮ್ಮಾಪುರ

ಬಾಗಲಕೋಟೆ: ‘ವಿಶೇಷ ಔಷಧ ಗುಣಗಳುಳ್ಳ ತರಕಾರಿಗಳತ್ತ ಜನರು ವಾಲುತ್ತಿದ್ದಾರೆ. ಅಂತಹ ಭಾರತೀಯ ತರಕಾರಿ ಜಾಗತಿಕ ಮಟ್ಟದಲ್ಲಿ ಮಾರಾಟ ಆಗುವಂತೆ ಆಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ತೋಟಗಾರಿಕೆ ಸಂಶೋಧನಾ ವಿಸ್ತರಣಾ ಕೇಂದ್ರದಿಂದ ಮುಖ್ಯ ಆವರಣದಲ್ಲಿ ಸೋಮವಾರದಿಂದ ಆರಂಭವಾದ ಮೂರು ದಿನಗಳ ಸಸ್ಯ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ತರಕಾರಿ ಬೆಳೆಗಳಿಗೆ ವಿಷಕಾರಿ ಔಷಧ ಉಪಯೋಗಿಸುವುದು ವಾಡಿಕೆಯಾಗಿದೆ. ಜವಾರಿ ಎನಿಸಿಕೊಂಡ ಜೋಳ ಕೂಡ …

Read More »

ಮದ್ಯ ಅಕ್ರಮ ಮಾರಾಟ ನಿಷೇಧಕ್ಕೆ ಮಹಿಳೆಯರ ಆಗ್ರಹ: ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ

ದೇವರಹಿಪ್ಪರಗಿ: ಪಟ್ಟಣ, ದೇವೂರ ಗ್ರಾಮ ಸೇರಿದಂತೆ ತಾಲ್ಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ಹಾಗೂ ಪಾನ್‌ ಶಾಪ್‌ಗಳಲ್ಲಿ ಗಾಂಜಾ ಮಿಶ್ರಿತ ಮಾವಾ ಎಂಬ ಮಾದಕ ಪದಾರ್ಥ ಮಾರಾಟ ತಡೆಯಬೇಕೆಂದು ಮಹಿಳೆಯರು ಆಗ್ರಹಿಸಿದರು. ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ಸೋಮವಾರ ದೇವೂರ ಹಾಗೂ ವಿವಿಧ ಗ್ರಾಮಗಳ ಮಹಿಳೆಯರು ಆಗಮಿಸಿ, ತಹಶೀಲ್ದಾರ್‌ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು. ರೇಣುಕಾ ಪಾಟೀಲ ಮಾತನಾಡಿ, ಪಟ್ಟಣದ ಹಲವು ಅಂಗಡಿ ಹಾಗೂ ದೇವೂರ ಗ್ರಾಮದ ವಿವಿಧೆಡೆ ಮದ್ಯ …

Read More »

ಮಾನಗೇಡಿ ಕೆಲಸ ಮಾಡು ಎಂದು ನಾವು ಹೇಳಿದ್ದೆವಾ?ತಿಮ್ಮಾಪುರ

ಬಾಗಲಕೋಟೆ: ಮಾನಗೇಡಿ ಕೆಲಸ ಮಾಡು ಎಂದು ನಾವು ಹೇಳಿದ್ದೆವಾ? ಪ್ರಜ್ವಲ್ ಮತ್ತು ಸೂರಜ್ ಆ ಕೆಲಸ ಮಾಡಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವದರೂ ಹೇಳಲಿ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಹೇಳಿದರು. ನಗರದಲ್ಲಿ ಕೆಡಿಪಿ ಸಭೆಯ ಮುಂಚೆ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ ಎಚ್ ಡಿಡಿ ಕುಟುಂಬ ಮುಗಿಸಲು ಹುನ್ನಾರ ನಡಿತಿದೆಯೆಂಬ ಎಚ್ ಡಿಕೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಎಚ್ ಡಿಕೆ ಕೇಂದ್ರ …

Read More »

ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ. ತಪ್ಪಿದ ಅನಾಹುತ

ಮುಧೋಳ: ಸಿಲಿಂಡರ್ ಸ್ಫೋಟಗೊಂಡು ಮನೆಗೆ ಹಾನಿಯಾಗಿರುವ ಘಟನೆ ಸಮೀಪದ ಶಿರೋಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಸಿದ್ದಪ್ಪ ಮುಂಡಗನೂರ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ‌ ಸಿಲಿಂಡರ್ ಸ್ಫೋಟಗೊಂಡಿದ್ದು ಸ್ಫೋಟದ ಭಿಕರತೆಗೆ ಮನೆಯ ಮೇಲ್ಛಾವಣಿ ಹಾರಿಹೋಗಿದೆ. ತಪ್ಪಿದ ಅನಾಹುತ: ಮಧ್ಯಾಹ್ನದ ಸಮಯದಲ್ಲಿ‌ ಮನೆಯ ಮಂದಿಯೆಲ್ಲ ಬೀಗ ಹಾಕಿಕೊಂಡು ಕೂಲಿ‌ ಕೆಲಸಕ್ಕೆ ತೆರಳಿದ್ದರು, ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಮನೆಯ ಕೆಲ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ದಿನವನ್ನು ವಿರೋಧಿಸಿ, ಕಾಂಗ್ರೆಸ್ ಕ್ಷಮೆ ಕೋರುವಂತೆ ಆಗ್ರಹಿಸಿ ಕಚೇರಿಗೆ ಭಿತ್ತಿ ಪತ್ರ ಅಂಟಿಸಲು ಹೊರಟ್ಟಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.   ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಾಸಕ ಅಭಯ ಪಾಟೀಲ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ಹೊತ್ತುಕೊಂಡು ಪೊಲೀಸ್ ವಾಹನದಲ್ಲಿ ಎತ್ತಿ ಹಾಕಿದರು. ಸಂವಿಧಾನವನ್ನು ಬಿಜೆಪಿ ಬದಲಿಸಲಿದೆ ಎಂದು ಕಾಂಗ್ರೆಸ್ ನಾಯಕರು ಸುಳ್ಳು ಹೇಳುತಿದ್ದಾರೆ. …

Read More »

ಕಾಂಗ್ರೆಸ್ ಮುಖಂಡರನ್ನು ಮತ್ತು ಕಾರ್ಯಕರ್ತರನ್ನ ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಿದ ;ಕು. ಪ್ರಿಯಾಂಕಾ ಜಾರಕಿಹೊಳಿ

ಅಥಣಿ : ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಥಣಿ ಮತಕ್ಷೇತ್ರಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ನೂತನ ಸಂಸದೆ ಕು. ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಮುಖಂಡರನ್ನು ಮತ್ತು ಕಾರ್ಯಕರ್ತರನ್ನ ಭೇಟಿ ಮಾಡಿ ಅಭಿನಂದನೆ ಸ್ವೀಕರಿಸಿದರು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಪುತ್ತಳಿ ಸೇರಿದಂತೆ ಅಥಣಿ ಪಟ್ಟಣದ ಎಲ್ಲ ಮಹಾತ್ಮರ ಪುತ್ತಳಿಗೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಅಥಣಿಯ ಆರಾಧ್ಯ ದೈವ ಶ್ರೀ ಸಿದ್ದೇಶ್ವರ …

Read More »

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಮುಂದಿನ ಮೂರು ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ, ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬರೆದಿದ್ದಾನೆ. ಹಾಗೆಯೇ ಮುಂದಿನ ಮೂರು ಗಂಟೆಗಳ ಕಾಲ ಅಂದರೆ ಇನ್ನು ಕೆಲವೇ ಕ್ಷಣಗಳಲ್ಲಿ ಕರಾವಳಿ ಕರ್ನಾಟಕದ …

Read More »

ಚನ್ನಪಟ್ಟಣ ಉಪಚುನಾವಣೆ: ಶಾಕಿಂಗ್ ಸುದ್ದಿ ಕೊಟ್ಟ ಮಾಜಿ ಸಂಸದ ಡಿಕೆ ಸುರೇಶ್!

ಬೆಂಗಳೂರು, ಜೂನ್.24: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿಕೆ ಸುರೇಶ್ ಅವರು ತಮ್ಮ ಸೋಲಿನಿಂದ ಬೇಸರದಲ್ಲಿದ್ದಾರೆ ಎಂಬುದು ಎಲ್ಲರಿಗೂ ತಿಳಿಯುತ್ತಿದೆ. ತಮ್ಮನನ್ನು ಮತ್ತೆ ರಾಜಕೀಯಕ್ಕೆ ಕರೆತರಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಹೀಗಾಗಿಯೇ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಾವೇ ಕಣಕ್ಕಿಳಿಯುವ ಬಗ್ಗೆ ಮಾತನಾಡಿದ್ದಾರೆ. ಆದರೆ, ಲೋಕಸಭಾ ಚುನಾವಣಾ ಸೋಲಿನಿಂದ ಒತ್ತಡದಲ್ಲಿದ್ದ ಮಾಜಿ ಸಂಸದ ಡಿಕೆ ಸುರೇಶ್ ರಾಜಕೀಯದಿಂದ ದೂರ ಸರಿಯುವ ಬಗ್ಗೆ ಮಾತನಾಡಿ ಎಲ್ಲರಿಗೂ ಅಚ್ಚರಿ …

Read More »

ಲೋಕಸಭೆಯಲ್ಲಿ ಹೆಚ್‌ಡಿಕೆ ಕನ್ನಡಲ್ಲಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ, ಜೂ.24-ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಲೋಕಸಭಾ ಸದಸ್ಯರಾಗಿ ಕನ್ನಡ ಭಾಷೆಯಲ್ಲಿ ಪ್ರಮಾವಣ ವಚನ ಸ್ವೀಕರಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಅವರು, ಇಂದು ಲೋಕಸಭೆಯಲ್ಲಿ ದೇವರ ಹೆಸರಿನಲ್ಲಿ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಕುಮಾರಸ್ವಾಮಿ ಅವರು, 18ನೇ ಲೋಕಸಭೆಯ ಸದಸ್ಯನಾಗಿ, ಮಂಡ್ಯ ಮಹಾಜನತೆಯ ಪ್ರತಿನಿಧಿಯಾಗಿ ಲೋಕಸಭೆಯ ಹಂಗಾಮಿ ಸಭಾಧ್ಯಕ್ಷರಾದ ಭತೃಹರಿ …

Read More »