Breaking News

Daily Archives: ಜೂನ್ 17, 2024

ಬೆಲೆ ಏರಿಕೆ: ಎತ್ತಿನಗಾಡಿ, ಸೈಕಲ್‌ನಲ್ಲಿ ಪ್ರಯಾಣಿಸಿ ಪ್ರತಿಭಟನೆ

ಕೊರಟಗೆರೆ: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಎನ್‌ಡಿಎ ಕಾರ್ಯಕರ್ತರು ಎತ್ತಿನ ಗಾಡಿ, ಸೈಕಲ್‌ನಲ್ಲಿ ಪ್ರಯಾಣಿಸಿ ಸೋಮವಾರ ಪ್ರತಿಭಟಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬದಲಾಗಿ ಗ್ಯಾರಂಟಿಗಳ ಗುಂಗಲ್ಲಿ ಕಾಲ ಹರಣ ಮಾಡುತ್ತಿದೆ. ಈಗ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿ ಜನ ಸಾಮಾನ್ಯರಿಗೆ ಬರೆ …

Read More »

ಬೀದಿನಾಯಿ ದಾಳಿ: ಮಹಿಳೆ ಸಾವು

ಗುಬ್ಬಿ: ಬೀದಿನಾಯಿ ದಾಳಿಗೆ ತಾಲ್ಲೂಕಿನ ಕಡಬ ಹೋಬಳಿ, ಕಲ್ಲೂರು ಗ್ರಾಮದ (65) ವೃದ್ಧೆ ಗಂಗಮ್ಮ ಭಾನುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ಗ್ರಾಮದ ನಾಲ್ವರಿಗೆ ಬೀದಿ ನಾಯಿಯೊಂದು ತೀವ್ರವಾಗಿ ಕಡಿದು ಹಲ್ಲೆ ಮಾಡಿತ್ತು. ಎಲ್ಲರನ್ನೂ ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗಂಗಮ್ಮ ಅವರನ್ನು ಹೊರತುಪಡಿಸಿ ಉಳಿದ ಎಲ್ಲರೂ ಚೇತರಿಸಿಕೊಂಡಿದ್ದರು. ಗಂಗಮ್ಮ ಅವರು ತೀವ್ರ ಅಸ್ವಸ್ಥರಾಗಿದ್ದರಿಂದ ತುಮಕೂರು ನಂತರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿದರೂ ನಿಧನರಾಗಿದ್ದರೆ. ಗ್ರಾಮದಲ್ಲಿ ಬೀದಿನಾಯಿ …

Read More »

ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಜು.15 ರಿಂದ ಆರಂಭ

ಬೆಂಗಳೂರು: ಕರ್ನಾಟಕ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಜುಲೈ 15 ರಿಂದ ನಡೆಯುವ ಸಾಧ್ಯತೆಗಳಿವೆ. ಜುಲೈ 15 ರಿಂದ 10 ದಿನ ಅಧಿವೇಶನ ನಡೆಸಲು ವಿಧಾನಸಭಾಧ್ಯಕ್ಷರ ಕಚೇರಿಯಲ್ಲಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಕೆಂಗಲ್ ಗೇಟ್ ನಿಂದ ವಿಧಾನಸಭೆ ಸಭಾಂಗಣ ಪ್ರವೇಶಿಸುವ ಮುಖ್ಯ ದ್ವಾರವನ್ನು ರೋಜ್ ವುಡ್‌ನಿಂದ ನಿರ್ಮಿಸಲಾಗಿದ್ದು, ಅಧಿವೇಶನದ ವೇಳೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಉತ್ತಮ ವಾತಾವರಣಕ್ಕೆ ಒತ್ತು ಈ ಬಾರಿ ವಿಧಾನಸಭೆ ಅಧಿವೇಶನ ನಡೆಯುವ ಹಾಗೂ ವಿಧಾನಸೌಧದ …

Read More »

ಕಲ್ಲಿದ್ದಲು ಆಮದು ಶೇ 13.2ರಷ್ಟು ಹೆಚ್ಚಳ

ನವದೆಹಲಿ: ಏಪ್ರಿಲ್‌ ತಿಂಗಳಲ್ಲಿ 2.61 ಕೋಟಿ ಟನ್‌ ಕಲ್ಲಿದ್ದಲು ದೇಶಕ್ಕೆ ಆಮದಾಗಿದೆ ಎಂದು ಇ-ವಾಣಿಜ್ಯ ಸಂಸ್ಥೆ ಎಂ-ಜಂಕ್ಷನ್‌ ಸರ್ವಿಸಸ್‌ ಲಿಮಿಟೆಡ್‌ ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 2.30 ಕೋಟಿ ಟನ್‌ ಕಲ್ಲಿದ್ದಲು ಆಮದಾಗಿತ್ತು. ಈ ಆಮದಿಗೆ ಹೋಲಿಸಿದರೆ ಶೇ 13.2ರಷ್ಟು ಏರಿಕೆಯಾಗಿದೆ. ಕೋಕಿಂಗ್‌ ಅಲ್ಲದ (ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಬಳಸುವ ಕಲ್ಲಿದ್ದಲು) ಕಲ್ಲಿದ್ದಲು 1.74 ಕೋಟಿ ಟನ್‌ ಮತ್ತು 49.7 ಲಕ್ಷ ಟನ್‌ ಕೋಕಿಂಗ್‌ (ಉತ್ತಮ ಗುಣಮಟ್ಟ) ಕಲ್ಲಿದ್ದಲು …

Read More »

ಪಂಪ್ ಹೌಸ್ ಬಳಿ ಅಕ್ರಮವಾಗಿ ಕಟ್ಟಿಹಾಕಿದ್ದ 22 ಜಾನುವಾರುಗಳ ರಕ್ಷಣೆ

ದಾಂಡೇಲಿ: ಅಕ್ರಮವಾಗಿ ಕಟ್ಟಿಟ್ಟಿದ್ದ 22 ಜಾನುವಾರುಗಳನ್ನು ಹಿಂದೂಪರ ಸಂಘಟನೆಗಳ ಆಗ್ರಹ ಹಾಗೂ ಪೋಲಿಸರ ಸಹಕಾರದಿಂದ ರಕ್ಷಣೆ ಮಾಡಿದ ಘಟನೆ ನಗರದ 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಭಾನುವಾರ ರಾತ್ರಿ ನಡೆದಿದೆ. ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿಗಾಗಿ ಎಂದು ಅನುಮಾನಿಸಿ ಅನಧಿಕೃತವಾಗಿ ಗೋವುಗಳನ್ನು ಹಾಗೂ ಸಣ್ಣ ಕರುಗಳನ್ನು 3ನಂ ಗೇಟ್ ವ್ಯಾಪ್ತಿಯ ಪಂಪ್ ಹೌಸ್ ಹತ್ತಿರ ಖಾಲಿ ಜಾಗದಲ್ಲಿ ಕಟ್ಟಿ ಇಟ್ಟಿರಬಹುದೆಂದು ಹಿಂದೂಪರ ಸಂಘಟನೆಯವರು ಪೋಲಿಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ …

Read More »

ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ.: ಬಿ.ಸಿ.ಪಾಟೀಲ್ ಆಕ್ರೋಶ

ಹಾವೇರಿ: ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿದ್ದು ದೊಡ್ಡ ಆಘಾತವಾಗಿದೆ. ನೇರವಾಗಿ ರಾಬರಿ ಮತ್ತು ಡಕಾಯತಿ ಇದು. ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ. ಸಾರ್ವಜನಿಕರ ಜೇಬಿಗೆ ಸರಕಾರ ಕತ್ತರಿ ಹಾಕಿದೆ. ಗ್ಯಾರಂಟಿ ಕೊಟ್ಟರೂ ಜನರು ಕೈ ಹಿಡಿಯಲಿಲ್ಲ ಎಂದು ಹತಾಶರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,187 ಕೋಟಿ ಭ್ರಷ್ಟಾಚಾರ ಮಾಡಿ ಆಂಧ್ರ ಪ್ರದೇಶದ ಚುನಾವಣೆಗೆ ಬಳಸಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕೈವಾಡವಿದೆ. ನಾಗೇಂದ್ರ ಅವರ …

Read More »

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

ಹುಬ್ಬಳ್ಳಿ: ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಮೌಲಾನಾ ಜಹೀರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಮೊಹಮ್ಮದ ಯುಸೂಫ ಸವಣೂರ, ಅಲ್ತಾಫ ಹಳ್ಳೂರ, ಬಸೀರ ಗೂಡಮಾಲೆ, ಮೆಹಮೂದ ಕೋಳೂರ, ಶಿರಾಜ‌ಅಹ್ಮದ ಕುಡಚಿವಾಲೆ, ಸಲೀಂ ಸುಂಡಕೆ, ಶಾರೂಖಖಾನ ಮುಲ್ಲಾ, ಮಲ್ಲಿಕ ಸಿಕಂದರ, ಕೆ.ಡಿ. ಕಮ್ಮಾರ ಸೇರಿದಂತೆ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮುಸ್ಲಿಂ …

Read More »

ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಗದಗ: ಡೀಸೆಲ್‌, ಪೆಟ್ರೋಲ್ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮಹಿಳೆಯರು ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ವಾಹನ ಸವಾರರ ಮೇಲೆ ಬರೆ ಎಳೆದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಜನಸಾಮಾನ್ಯರಿಗೆ ಹೊರೆಯಾದ ಕಾಂಗ್ರೆಸ್ …

Read More »

ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

ನವದೆಹಲಿ: 2017ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನೆಕ್ಸಾನ್‌(Tata Nexon), 2021ರಿಂದ 2023ರವರೆಗೆ ಸತತ ಮೂರು ವರ್ಷಗಳ ಕಾಲ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ ಯುವಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.   ಟಾಟಾ ನೆಕ್ಸಾನ್‌ ಮಾರುಕಟ್ಟೆಗೆ ಬಿಡುಗಡೆಗೊಂಡ ಏಳು ವರ್ಷಗಳಲ್ಲಿ ಟಾಟಾ ನೆಕ್ಸಾನ್‌ ಏಳು ಲಕ್ಷ ಮಾರಾಟ ಕಂಡಿರುವುದು ಟಾಟಾ ಮೋಟಾರ್ಸ್‌ ಸಂಭ್ರಮಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ 2018ರಲ್ಲಿ ಗ್ಲೋಬಲ್‌ NCAPನಿಂದ 5 ಸ್ಟಾರ್‌ ರೇಟಿಂಗ್‌ ಪಡೆದ ಭಾರತದ ಮೊದಲ ಕಾರು …

Read More »

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ. BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಬಾಗಲಕೋಟೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಸಿಐಡಿ ವಿಚಾರಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಧೋಳದಲ್ಲಿ ಮಾತನಾಡಿದ ಅವರು ಲೈಂಗಿಕ ಕಿರುಕುಳ ನೀಡಿರುವ ವಿಚಾರದ ಬಗ್ಗೆ ಯಡಿಯೂರಪ್ಪ ಅವರನ್ನು ಇಲಾಖೆ ವಿಚಾರಣೆ ಮಾಡುತ್ತಿದೆ, ತನಿಖೆಯಲ್ಲಿ ಸತ್ಯಾಸತ್ಯತೆ ಏನಿದೆಯೋ ಹೊರಬರಲಿ ಎಂದು ಹೇಳಿದ್ದಾರೆ. ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಆಗಬಾರದು. ಇದು ಒಳ್ಳೆಯದೂ ಅಲ್ಲ, …

Read More »