ಕೋಲಾರ, ಜೂ.12: ಜಿಲ್ಲೆಯ ಶ್ರೀನಿವಾಸಪುರ(Srinivaspur) ತಾಲೂಕಿನ ಗುಡಸವಾರಪಲ್ಲಿ ಗ್ರಾಮದ ಬಳಿ ಇಸ್ಪೀಟ್(Gambling) ಆಡುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿ ತನ್ನ ಜೀವವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ನರಸಿಂಹ (45) ಮೃತ ರ್ದುದೈವಿ. ಗುಡಸವಾರ ಪಲ್ಲಿ ಗ್ರಾಮದ ಕೊಂಡರೆಡ್ಡಿಚೆರವು ಎನ್ನುವ ಕೆರೆಯ ದಡದಲ್ಲಿ ಇಸ್ಪೀಟ್ ಅಡ್ಡೆ ನಡೆಯುತ್ತಿದ್ದು, ಅಲ್ಲಿ ಹತ್ತು ಹನ್ನೆರಡು ಜನ ಇಸ್ಪೀಟ್ ಆಡುತ್ತಿದ್ದರು. ಈ ವೇಳೆ ಪೊಲೀಸರು ಬರ್ತಿದ್ದಾರೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿದ್ದವರೆಲ್ಲ ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಅದರಲ್ಲಿ …
Read More »Daily Archives: ಜೂನ್ 12, 2024
ದರ್ಶನ್ ಸರ್ವನಾಶ ಆಗ್ತಾರೆ ಕರ್ಮ ಬಿಡಲ್ಲ; ರೇಣುಕಾ ಸ್ವಾಮಿ ತಾಯಿ
ರೇಣುಕಾ ಸ್ವಾಮಿ (Renuka Swami) ಸಾವಿನಿಂದ ಅವರ ಕುಟುಂಬಕ್ಕೆ ಸಾಕಷ್ಟು ದುಃಖ ಉಂಟಾಗಿದೆ. ರೇಣುಕಾ ಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ರೇಣುಕಾ ಸ್ವಾಮಿ ಅವರ ತಾಯಿ ರತ್ನಪ್ರಭಾ ದರ್ಶನ್ಗೆ ಹಿಡಿ ಶಾಪ ಹಾಕಿದ್ದಾರೆ. ‘ನನ್ನ ಮಗ ಯಾವಾಗಲೂ ಹೋಗುವಂತೆ ಹೋಗಿದ್ದ. ಅವನ ಕಿಡ್ನ್ಯಾಪ್ ಮಾಡಿದ್ದಾರೆ. ಮದುವೆ ಆದ ಬಳಿಕ ಮನೆ ಕೆಲಸದಲ್ಲೇ ತೊಡಗಿಕೊಳ್ಳುತ್ತಿದ್ದ. ಯಾವಾಗಲೂ ಅವನು ಡಿಸ್ಟರ್ಬ್ ಆದಂತೆ ಕಾಣುತ್ತಿರಲಿಲ್ಲ. ನಮಗೆ ಮಗನ ಬಗ್ಗೆ ಹೇಳಿದ್ರೆ ನಾವೇ ತಿದ್ದಿ ಹೇಳುತ್ತಿದ್ದೆವು. …
Read More »ರೇಣುಕಾಸ್ವಾಮಿ ಹತ್ಯೆ; ಕಠಿಣ ಶಿಕ್ಷೆಗೆ ಒತ್ತಾಯ
ಹುಬ್ಬಳ್ಳಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕುರಿತು ಸಮರ್ಪಕವಾಗಿ ತನಿಖೆ ನಡೆಸಿ, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ಬೇಡ ಜಂಗಮ ಸಂಘಟನೆ ವತಿಯಿಂದ ಆಗ್ರಹಿಸಲಾಯಿತು. ನಗರದ ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಸಂಘಟನೆಯ ಮುಖಂಡರು ಈ ಕುರಿತು ಬುಧವಾರ ಮನವಿ ಸಲ್ಲಿಸಿದರು. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಭದ್ರತೆ ಒದಗಿಸಬೇಕು. ₹1 ಕೋಟಿ ಪರಿಹಾರ ನೀಡಬೇಕು. ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಯುವ …
Read More »ಮುಂಗಾರು: ಚುರುಕುಗೊಂಡ ಬಿತ್ತನೆ
ಉಪ್ಪಿನಬೆಟಗೇರಿ: ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮದ ರೈತಾಪಿ ಜನರು ಮುಂಗಾರು ಬಿತ್ತನೆಗೆ ಸಿದ್ದತೆ ಮಾಡ ತೊಡಗಿದ್ದು, ಗೊಬ್ಬರ, ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ. ಕಳೆದೊಂದು ವಾರ ಸುರಿದ ಮಳೆಗೆ ಕೃಷಿ ಭೂಮಿ ಹಸಿಯಾಗಿ ಈಗ ಹದಕ್ಕೆ ಬಂದಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿವೆ. ಕಳೆದ ಹತ್ತುದಿನಗಳ ಹಿಂದೆ ಅಡ್ಡ ಮಳೆ, ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಕಾರಣ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿತ್ತು. ಈಗ ರೈತಾಪಿ ಜನ ರಾಸಾಯನಿಕ ಗೊಬ್ಬರ …
Read More »ಅಕ್ಷರ ಕಲಿಕೆಗೆ ಮಕ್ಕಳ ಹರಸಾಹಸ
ರಾಮದುರ್ಗ : ಮಳೆ ಬಂದರೆ ಎಲ್ಲರಿಗೂ ಸಂಭ್ರಮ. ಆದರೆ, ತಾಲ್ಲೂಕಿನ ಲಕ್ಷ್ಮಿನಗರದ ಗ್ರಾಮದ ಮಕ್ಕಳಿಗೆ ಇದು ಸಂಕಟ. ಪ್ರತಿ ಮಳೆಗಾಲದಲ್ಲೂ ಈ ಗ್ರಾಮ ನಡುಗಡ್ಡೆ ಆಗುತ್ತದೆ. ಲಕ್ಷ್ಮಿ ನಗರದಲ್ಲಿ ಪ್ರಾಥಮಿಕ ಶಾಲೆ ಇಲ್ಲ. ಹೀಗಾಗಿ ಅಲ್ಲಿನ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ 2 ಕಿ.ಮೀ ನಡೆದು ಪಕ್ಕದ ಉಡಚಮ್ಮನಗರ ಗ್ರಾಮಕ್ಕೆ ಹೋಗಬೇಕು. ಮಳೆ ಬಂದಾಗಲೆಲ್ಲ ಹರಿಯುವ ಸತ್ಯಮ್ಮನ ಹಳ್ಳವನ್ನು ಸುರಕ್ಷಿತವಾಗಿ ದಾಟಿಕೊಂಡು, ಮಕ್ಕಳು ಶಾಲೆಗೆ ತಲುಪಬೇಕು. ಇದು ಅನಿವಾರ್ಯ. ‘ಹಳ್ಳದ ಹರಿವು …
Read More »ತೋಟದಲ್ಲಿ ಮೊಸಳೆ ಕುಟುಂಬ
ಚಿಕ್ಕೋಡಿ: ತಾಲ್ಲೂಕಿನ ಕಲ್ಲೋಳ ಗ್ರಾಮದ ಹೊರ ವಲಯದಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿ ದಡದ ಗ್ರಾಮಗಳಲ್ಲಿ ಮತ್ತೆ ಮೊಸಳೆ ಉಪಟಳ ಹೆಚ್ಚಾಗಿದೆ. ಪ್ರತಿ ಬಾರಿ ಮುಂಗಾರು ಮಳೆ ಆರಂಭಕ್ಕೆ ಕೃಷ್ಣಾ ನದಿ ನೀರಿನೊಂದಿಗೆ ಹರಿದುಬರುವ ಮೊಸಳೆಗಳು ಗ್ರಾಮಸ್ಥರ ನಿದ್ದೆಗೆಡಿಸಿವೆ. ಸಂಗಮ ಸ್ಥಳದಿಂದ 500 ಮೀಟರ್ ದೂರದಲ್ಲಿ ಒಂದು ಹೆಣ್ಣು ಹಾಗೂ ಒಂದು ಗಂಡು ಮೊಸಳೆ ಪತ್ತೆಯಾಗಿವೆ. ಅಲ್ಲದೇ ಏಳು ಮೊಸಳೆ ಮರಿಗಳು ಕೂಡ ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. 5-6 …
Read More »ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಕಲ್ಲೆದ್ದ ರಸ್ತೆಯಲ್ಲೇ ಮಕ್ಕಳ ನಡಿಗೆ!
ಚನ್ನಮ್ಮನ ಕಿತ್ತೂರು: ಕಾಲು ದಾರಿ ಮೇಲೆ ಮುಷ್ಟಿಗಾತ್ರದ ಚೂಪನೆಯ ಕಲ್ಲುಗಳು ಎದ್ದು ಕುಳಿತಿವೆ. ಸ್ಮಶಾನಕ್ಕೂ ಇದೇ ದಾರಿ ಅವಲಂಬನೆ. ಮಳೆಯಾದರೆ ಸಾಕು ಮನೆಯೊಳಗೆ ನೀರು ನುಗ್ಗಿ ಬದುಕೇ ಯಾತನಾಮಯ ಆಗುತ್ತದೆ. ಇದು ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿಮ್ಮಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿ ಮಕ್ಕಳು ಮತ್ತು ನಾಗರಿಕರ ಗೋಳು. ‘ಕಾಲೊನಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಮಕ್ಕಳು ರಸ್ತೆ ಮೇಲೆ ಎದ್ದು …
Read More »ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ತಳಪಾಯ ಗಟ್ಟಿ
ಹುಕ್ಕೇರಿ: ‘ಚಿಕ್ಕೋಡಿ ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು 90 ಸಾವಿರಕ್ಕಿಂತ ಹೆಚ್ಚು ಮತಗಳ ಮುನ್ನಡೆಯಿಂದ ಗೆಲ್ಲಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಪಟ್ಟಣಕ್ಕೆ ಭೇಟಿ ನೀಡಿದ್ದ ಅವರು ಫಲಿತಾಂಶದ ನಂತರ ಕಾರ್ಯಕರ್ತರ ಜತೆ ಚುನಾವಣೆಯ ಫಲಿತಾಂಶ ಕುರಿತು ಚರ್ಚಿಸಿ ಮಾತನಾಡಿದರು. ‘ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತಳಪಾಯ ಗಟ್ಟಿಯಾಗಿದ್ದು, ಆ ತಳಪಾಯವು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ …
Read More »ಕುಡಿಯುವ ನೀರು ಪೂರೈಕೆಗೆ ₹8.40 ಕೋಟಿ ಮಂಜೂರು
ಚಿಕ್ಕೋಡಿ: ‘ತಾಲ್ಲೂಕಿನ ನವಲಿಹಾಳ, ಸಂಕನವಾಡಿ ಹಾಗೂ ತಪಕರವಾಡಿ ಗ್ರಾಮಗಳ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರದಿಂದ ₹8.40 ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬರಲಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು. ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಯೋಜನೆಗೆ ಸಂಬಂಧಿಸಿದ ಆದೇಶ ಪ್ರತಿ ವಿತರಿಸಿ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನ …
Read More »ಬೈಕ್ ಡಿಕ್ಕಿ: ಸವಾರ ಸಾವು
ಹಂದಿಗುಂದ: ಸಮೀಪದ ಪಾಲಬಾವಿಯಲ್ಲಿ ಸೋಮವಾರ ರಾತ್ರಿ ಬೈಕುಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಒಬ್ಬ ಮೃತಪಟ್ಟಿದ್ದಾನೆ. ಸುಲ್ತಾನಪುರ ಗ್ರಾಮದ ರಾಘವೇಂದ್ರ ರಾಮಪ್ಪ ಹಾದಿಮನಿ (28) ಮೃತ ವ್ಯಕ್ತಿ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಬಾವಿ ಗ್ರಾಮದಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಅಪಘಾತ ನಡೆದಿದೆ. ಹಿಂಬದಿಯ ಸವಾರ ಸೌರಭ ತುಕಾರಾಮ ಮಾದರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಾರೂಗೇರಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾರೂಗೇರಿ ಸಿಪಿಐ ರವಿಚಂದ್ರನ ಬಡಪಕೀರಪ್ಪನವರ, ಪಿಎಸ್ಐ …
Read More »