Breaking News

Daily Archives: ಜೂನ್ 10, 2024

ಬೀನ್ಸ್‌ ಬೆಲೆ ಇಳಿಕೆ; ಟೊಮೆಟೊ ದುಬಾರಿ

ಮೈಸೂರು: ದ್ವಿಶತಕ ದಾಟಿದ್ದ ಬೀನ್ಸ್‌ ಬೆಲೆಯು ಈ ವಾರ ಅರ್ಧದಷ್ಟು ಇಳಿಕೆ ಆಗಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಟೊಮೆಟೊ ಧಾರಣೆ ಏರುಮುಖವಾಗಿದೆ. ವಾರದ ಹಿಂದಷ್ಟೇ ಬೀನ್ಸ್‌ ಪ್ರತಿ ಕೆ.ಜಿ.ಗೆ ₹200ರವರೆಗೆ ಮಾರಾಟವಾಗಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿತ್ತು. ರಾಜ್ಯದಾದ್ಯಂತ ಕಳೆದೊಂದು ತಿಂಗಳಿಂದ ಹದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬೀನ್ಸ್‌ ಬೆಳೆಯಲು ಆರಂಭಿಸಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ಏರತೊಡಗಿದೆ. ಈ ಹಿನ್ನೆಲೆಯಲ್ಲಿ ಇದರ ಬೆಲೆ ಗಣನೀಯ ಇಳಿಕೆ ಕಂಡಿದೆ. ಮೈಸೂರು …

Read More »

ವರ್ಷದ ಬಳಿಕ ಬಾಗಿಲು ತೆರೆಯಲಿದೆ ಸಂಸದರ ಕಚೇರಿ

ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರ ಅಧಿಕೃತ ಕಚೇರಿಯು ಸುಮಾರು ಒಂದು ವರ್ಷದ ಬಳಿಕ ಬಾಗಿಲು ತೆರೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದೆ. ಜನರು ದೂರು, ಅಹವಾಲು ಸಲ್ಲಿಕೆಗೆ ಅನುಕೂಲವಾಗುವಂತೆ ಜಿಲ್ಲಾಕೇಂದ್ರದಲ್ಲಿ ಸಂಸದರ ಅಧಿಕೃತ ಕಚೇರಿ ತೆರೆಯಲಾಗುತ್ತದೆ. ಉತ್ತರ ಕನ್ನಡ ಸಂಸದರ ಕಚೇರಿ ಕಳೆದ ಹಲವು ತಿಂಗಳುಗಳಿಂದ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿತ್ತು ಎಂಬ ಆರೋಪಗಳಿದ್ದವು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯ ಬಾಗಿಲು …

Read More »

ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆ, 27.5 ಲಕ್ಷ ರೈತರಿಗೆ ಬರ ಪರಿಹಾರ: ಕೃಷಿ ಸಚಿವ ಮಾಹಿತಿ

ಬೆಂಗಳೂರು, ಜೂನ್​ 10: 5 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾದರೆ, 4 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ (Rain) ಆಗಿದೆ. ಆ ಮೂಲಕ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 78ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ(Krishna Byre Gowda)ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷದ ಮುಂಗಾರು ಪರಿಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಜೂ.2ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ. ಹೀಗಾಗಿ ಮುಂದಿನ 15 ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆ …

Read More »

ಯಾರಿಗೇ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ: ಬೊಮ್ಮಾಯಿ

ಬೆಂಗಳೂರು, : ಶಿಗ್ಗಾಂವಿ ಕ್ಷೇತ್ರಕ್ಕೆ(Shiggaon)ಯಾರು ಅಭ್ಯರ್ಥಿ ಆಗಬೇಕೆಂದು ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷ ಯಾರನ್ನೇ ನಿಲ್ಲಿಸಿದರೂ ನಮ್ಮ ಬೆಂಬಲ ಇದೆ ಎಂದು ನೂತನ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಹೆಸರು ಕೇಳಿ ಬರೋದು ಸಹಜ. ಆದರೆ ಆಥರದ ಪ್ರಸ್ತಾವನೆ ನಮ್ಮ ಕಡೆಯಿಂದ ಇಲ್ಲ. ಇದರಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಉದಾಸಿಗೇ ಕೊಡಲಿ, ಯಾರಿಗೇ ಕೊಡಲಿ ಅದು …

Read More »

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಕೇಸ್: ಬಂಧಿತ ಕಿಂಗ್ ಪಿನ್ ಅಬ್ದುಲ್ ಅಸಲಿಗೆ ವೈದ್ಯನೇ ಅಲ್ಲ

ಬೆಳಗಾವಿ, ಜೂನ್​ 10: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣದಲ್ಲಿ(Child Trafficking)ಈಗಾಗಲೇ ಪೊಲೀಸರು ವೈದ್ಯ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆದರೆ ಅಸಲಿಗೆ ಬಂಧಿತ ವೈದ್ಯ ಕಿಂಗ್​ಪಿನ್ (Kingpin) ಅಬ್ದುಲ್ ಗಫರ್ ಲಾಡಖಾನ್ ವೈದ್ಯನೇ ಅಲ್ಲ. ಯಾವುದೇ ಅನುಮತಿ ಪಡೆಯದೆ ಕಳೆದ 10 ವರ್ಷಗಳಿಂದ ಕಿತ್ತೂರು ಪಟ್ಟಣದಲ್ಲಿ ಆರ್‌ಎಂಪಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ಈತನ ಬಗ್ಗೆ ಹಲವು ಬಾರಿ ಸ್ಥಳೀಯರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇನ್ನು ಮಕ್ಕಳ ಮಾರಾಟ ಅಷ್ಟೇ …

Read More »

ಮಾವು ಕೀಳಲು ಹೋದಾಗ ವಿದ್ಯುತ್‌ ತಗುಲಿ ವಿದ್ಯಾರ್ಥಿ ಸಾವು

ಹೊಸಕೋಟೆ: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ವಿದ್ಯಾರ್ಥಿಯೊಬ್ಬ ಮಾವು ಕೀಳಲು ಹೋಗಿ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾನೆ. ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿಯ ಸಾಯಿಭುವನ್(13) ಮೃತ ವಿದ್ಯಾರ್ಥಿ. ಈತ 9ನೇ ತರಗತಿಯಲ್ಲಿ ಕಲಿಯುತ್ತಿದ್ದ. ವಿದ್ಯಾರ್ಥಿನಿಲಯ ಕಟ್ಟಡದ ಮೇಲೆ ಬಟ್ಟೆ ಒಣಗಿಸುವ ವೇಳೆ ಪಕ್ಕದಲ್ಲಿದ್ದ ಮಾವಿನ ಮರದಲ್ಲಿದ್ದ ಮಾವಿನ ಹಣ್ಣು ಕೀಳಲು ಹೋಗಿದ್ದ. ಮಾವಿನ ಹಣ್ಣು ಕೀಳಲು ಬಳಸಿದ ಕಂಬಿಗೆ ಮರದ ಸಮೀಪ ಹಾದುಹೋಗಿದ್ದ 11 ಕೆ.ವಿ. ವಿದ್ಯುತ್‌ ತಗುಲಿ …

Read More »

ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆ: ಡಿ.ಕೆ.ಶಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆಯಾಗಿದೆ. ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂಬುದನ್ನು ಪರಾಮರ್ಶೆ ನಡೆಸಿ ಅದನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸ್ಜಿವಕುಮಾರ್, ಲೋಕಸಭಾ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರ ಜೊತೆ ಪರಾಮರ್ಶನಾ ಸಭೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಏಕೆ ಹೆಚ್ಚುಕಮ್ಮಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಬೇರೆ ಬೇರೆ ಜಿಲ್ಲೆಗಳ ಪರಾಮರ್ಶೆಗೆ ಶೀಘ್ರವೇ …

Read More »

ಮಗಳ ಜೊತೆ ನೇಣಿಗೆ ಕೊರಳೊಡ್ಡಿದ ತಾಯಿ

ರಾಯಚೂರು: ಅನಾರೋಗ್ಯಕ್ಕೆ ಬೇಸತ್ತು ತಾಯಿಯೊಬ್ಬರು ಮಗಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದಿದೆ. ಮಾಳಮ್ಮ (45) ಹಾಗೂ ಅಮೃತ (12) ಮೃತರು. ತಾಯಿ ಹಾಗೂ ಮಗಳ ಶವ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಾಯಿ ಮಾಳಮ್ಮ ಕೂಲಿ ಕೆಲಸ ಮಡುತ್ತಿದ್ದರು. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೊಯದಿಂದ ಮನನೊಂದು ಮಗಳ ಸಮೇತ ನೇಣಿಗೆ ಕೊರಳೊಡ್ಡಿದ್ದಾರೆ. ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ …

Read More »

ಮಳೆಗಾಲದಲ್ಲಿ ಜಲಪಾತಗಳಿಗೆ ಇಳಿಯುವ ಮುನ್ನ ಎಚ್ಚರ, ಹೆಬ್ಬೆ ಫಾಲ್ಸ್ ನಲ್ಲಿ ಜಾರಿಬಿದ್ದು ಯುವಕ ಸಾವು..!

ಚಿಕ್ಕಮಗಳೂರು : ಸೆಲ್ಪಿ ಕ್ರೇಜ್ ಗೆ ಯುವಕ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಫಾಲ್ಸ್ ನಲ್ಲಿ ನಡೆದಿದೆ. ಮೃತ ಯುವಕನನ್ನು ಶ್ರವಣ್ (25) ಎಂದು ಗುರುತಿಸಲಾಗಿದೆ. ಫಾಲ್ಸ್ ನಲ್ಲಿ ಸೆಲ್ಪಿ ತೆಗೆಯುವ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More »

ದೇಶದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರ

ಬೆಂಗಳೂರು : ದೇಶದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಈ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ಕರ್ನಾಟಕ ಆನೆಗಳ ನೆಚ್ಚಿನ ತಾಣವಾಗಿದೆ. ದೇಶದಲ್ಲೇ ಅತಿ ಹೆಚ್ಚು ಆನೆಗಳು ಇರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಸುಮಾರು 6,300ಕ್ಕೂ ಹೆಚ್ಚು ಆನೆಗಳಿವೆ. 14 ಆನೆ ಶಿಬಿರಗಳಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

Read More »