Breaking News

Daily Archives: ಜೂನ್ 5, 2024

ಬಿಜೆಪಿಯನ್ನು ಸೋಲಿಸಬಹುದೆಂದು ಲೋಕಸಭೆ ಚುನಾವಣೆ ಫಲಿತಾಂಶ ತೋರಿಸಿದೆ: ಉದ್ಧವ್ ಠಾಕ್ರೆ

ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿಯನ್ನು ಸೋಲಿಸಬಹುದೆಂದು ತೋರಿಸಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದಿರುವ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬುಧವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಹೋಗಲಾಡಿಸಿದ್ದು, ಬಿಜೆಪಿಯನ್ನು ಸೋಲಿಸಬಹುದು ಎಂಬುದನ್ನು ಚುನಾವಣೆ ತೋರಿಸಿದೆ ಎಂದರು. ಚುನಾವಣೆಯಲ್ಲಿ ವಿಜೇತರಾದ ನಾಸಿಕ್ ಕ್ಷೇತ್ರದ ಶಿವಸೇನಾ ಯುಬಿಟಿ ಬಣದ ರಾಜಬಾಹು ಪ್ರಕಾಶ್ ವಾಜೆ, (ಮುಂಬೈ …

Read More »

UGNEET ಫಲಿತಾಂಶ ಪ್ರಕಟ: ಕರ್ನಾಟಕಕ್ಕೆ 5ನೇ ಸ್ಥಾನ, ರಾಜ್ಯದ ಮೂವರಿಗೆ ಮೊದಲ ರ‍್ಯಾಂಕ್‌

ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಮಂಗಳವಾರ(ಜೂನ್ 4) ಸಂಜೆ ತಡವಾಗಿ UGNEET-2024 ಫಲಿತಾಂಶ ಪ್ರಕಟಿಸಿದ್ದು, ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್‌ ಗಳಿಸಿದ 67 ಟಾಪರ್‌ಗಳಲ್ಲಿ ರಾಜ್ಯದ ಮೂವರು ಇದ್ದಾರೆ. ರಾಜ್ಯದ ಕಲ್ಯಾಣ್ ವಿ, ಸ್ಯಾಮ್ ಶ್ರೇಯಸ್ ಜೋಸೆಫ್ ಮತ್ತು ಅರ್ಜುನ್ ಕಿಶೋರ್ ಅವರು ಶೇ. 99.99 ಅಂಕ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 89,088 …

Read More »

ರಾಜೀನಾಮೆ ನೀಡಲು ಮುಂದಾದ ಮಹಾರಾಷ್ಟ್ರ ಡಿಸಿಎಂ! ಫಡ್ನವೀಸ್

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ (Maharashtra state politics) ಮತ್ತೆ ಹೈಡ್ರಾಮಾ ಶುರುವಾಗಿದೆ. ಒಂದೆಡೆ ಏಕನಾಥ್ ಶಿಂಧೆ (Eknath Shinde) ಬಣದ ಶಿವಸೇನೆ (Shiva Sena) ನೂತನ ಸಂಸದರನ್ನು ಸೆಳೆಯಲು ಉದ್ಧವ್ ಠಾಕ್ರೆ (Uddhav Thackeray) ಬಣ ಪ್ರಯತ್ನಿಸುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಅದರ ನಡುವೆ ಇದೀಗ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ (DCM) ಸ್ಥಾನಕ್ಕೆ ರಾಜೀನಾಮೆ ನೀಡಲು ದೇವೇಂದ್ರ ಫಡ್ನವೀಸ್ (Devendra Fadnavis) ಮುಂದಾಗಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ …

Read More »

ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ರಾಜೀನಾಮೆ

ನವದೆಹಲಿ: ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಬುಧವಾರ ರಾಜೀನಾಮೆ ಸಲ್ಲಿಸಿದರು. ತಮ್ಮ ಸಂಪುಟ ಸಹದ್ಯೋಗಿಗಳ ಜೊತೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ರಾಜೀನಾಮೆ ಪತ್ರ ಸ್ವೀಕರಿಸಿದ ದ್ರೌಪದಿ ಮುರ್ಮು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೂ ಪ್ರಧಾನಿಯಾಗಿ ಮುಂದುವರಿಯುವಂತೆ ಅವರು ಸೂಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ. ನಿನ್ನೆ ಕೇಂದ್ರ ಸಚಿವ ಸಂಪುಟವು 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿತ್ತು. ಪ್ರಸ್ತುತ …

Read More »

ಅನ್ನಭಾಗ್ಯ; 25,386 ಪಡಿತರದಾರರು ವಂಚಿತ

ಹುಬ್ಬಳ್ಳಿ: ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಬ್ಯಾಂಕ್‌ ಖಾತೆಯಲ್ಲಿ ಹೆಸರು ಹೊಂದಾಣಿಕೆ ಆಗದೆ ಕಾರಣ ಜಿಲ್ಲೆಯ 25,386 ಪಡಿತರದಾರರು ‘ಅನ್ನಭಾಗ್ಯ’ ಯೋಜನೆಯಿಂದ ವಂಚಿತರಾಗಿದ್ದಾರೆ. ಒಟ್ಟು 3.51 ಲಕ್ಷ ಜನ ಯೋಜನೆಯ ಲಾಭ ಪಡೆದಿದ್ದಾರೆ. 2023ರ ಜುಲೈನಿಂದ ಅನುಷ್ಠಾನಗೊಂಡ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುವ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿಗೆ ₹34ರಂತೆ ಒಬ್ಬ ಸದಸ್ಯನಿಗೆ ₹170 ಅನ್ನು ಖಾತೆಗೆ …

Read More »

ದಿಲ್ಲಿ ಗದ್ದುಗೆ ಏರಲು ‘NDA-INDIA’ ಭರ್ಜರಿ ಕಸರತ್ತು : ನಿತೀಶ್, ನಾಯ್ಡು ಮೇಲೆ ನಿಂತಿದೆ ಮೋದಿ ಭವಿಷ್ಯ!

ನವದೆಹಲಿ : ನಿನ್ನೆ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಎನ್ ಡಿ ಎ ಈ ಬಾರಿ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಮೋದಿ ಹೇಳಿದರು. ಆದರೆ ಕೇವಲ 294 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಯಿತು.ಅದೇ ರೀತಿ ಇಂಡಿಯಾ ಮೈತ್ರಿಕೂಟ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನ ಪಡೆದುಕೊಂಡು ಬಿಜೆಪಿಗೆ ಶೆಡ್ಡು ಹೊಡೆದಿದೆ ಇದೀಗ ದಿಲ್ಲಿ ಗದ್ದುಗೆ ಏರಲು ಎನ್.ಡಿ.ಎ ಹಾಗೂ ಇಂಡಿಯಾ ಮೈತ್ರಿ ಕೂಟ ಕಸರತ್ತು ನಡೆಸುತ್ತಿದ್ದು ಇಂದು ಎರಡು ಪಕ್ಷಗಳು ಮಹತ್ವದ ಸಭೆ …

Read More »

ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡುಗೆ ಕರೆ ಮಾಡಿ ಇಂಡಿಯಾ ಬ್ಲಾಕ್ ಸೇರಲು ಆಫರ್ ನೀಡಿದ ಶರದ್ ಪವಾರ್

ನವದೆಹಲಿ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚುನಾವಣಾ ಫಲಿತಾಂಶಗಳು ಎನ್ಡಿಎ ಮತ್ತು ಭಾರತ ಬಣದ ನಡುವೆ ಬಿಗಿಯಾದ ಸ್ಪರ್ಧೆಯನ್ನು ತೋರಿಸಿದ ನಂತರ ಗುರುವಾರ ಮಧ್ಯಾಹ್ನ ಈ ಕರೆಗಳನ್ನು ಮಾಡಿದರು, ಎನ್ಡಿಎ ಪ್ರತಿಪಕ್ಷಗಳ ಮೈತ್ರಿಕೂಟಕ್ಕಿಂತ ಸ್ವಲ್ಪ ಮೇಲುಗೈ ಸಾಧಿಸಿದೆ. ನಿತೀಶ್ …

Read More »