Breaking News

Monthly Archives: ಮೇ 2024

ಅಕ್ಷಯ ತೃತೀಯ 2024ರ ಪೂಜಾ ಸಮಯ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಅಕ್ಷಯ ತೃತೀಯವನ್ನು ಹಿಂದೂ ಧರ್ಮದಲ್ಲಿ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಧಾರ್ಮಿಕ ದೃಷ್ಟಿಕೋನದ ಹೊರತಾಗಿ, ಅಕ್ಷಯ ತೃತೀಯ ದಿನವು ಸಂಸ್ಕೃತಿ, ಸಂಪ್ರದಾಯ ಮತ್ತು ಆರ್ಥಿಕ ದೃಷ್ಟಿಕೋನದಿಂದ ಸಹ ಮುಖ್ಯವಾಗಿದೆ. ಏಕೆಂದರೆ ಈ ಶುಭ ದಿನದಂದು, ಶುಭ ಕಾರ್ಯಗಳನ್ನು ಸಹ ಈ ದಿನ ಮಾಡುತ್ತಾರೆ. ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಮತ್ತು ತಾಯಿ ಲಕ್ಷ್ಮಿಗೆ ಸಂಬಂಧಿಸಿದ ಶುಭ ವಸ್ತುಗಳನ್ನು ಶಾಪಿಂಗ್ ಮಾಡುವುದು ಜೀವನದಲ್ಲಿ ಸಂತೋಷ …

Read More »

ವರ್ಗಾವಣೆ ಆಮಿಷವೊಡ್ಡಿ ಅತ್ಯಾಚಾರ: ಪ್ರಜ್ವಲ್‌ ವಿರುದ್ಧ ಮತ್ತೆರಡು ಎಫ್‌ಐಆರ್?

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸರ್ಕಾರದ ಮಹಿಳಾ ಅಧಿಕಾರಿಗಳಿಬ್ಬರು ಹೇಳಿಕೆ ನೀಡಲು ಮುಂದಾಗಿದ್ದು, ಸದ್ಯದಲ್ಲೇ ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಸಂತ್ರಸ್ತರನ್ನು ಗುರುತಿಸಲು ಹಾಗೂ ಅವರಿಂದ ಹೇಳಿಕೆ ಪಡೆಯುವ ಉದ್ದೇಶದಿಂದ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ (6360938947) ಆರಂಭಿಸಿದ್ದಾರೆ.ಕರೆ ಮಾಡಿದವರಿಗೆ ಧೈರ್ಯ ತುಂಬಿ ದೂರು ನೀಡುವಂತೆ ಮನವಿ ಮಾಡುತ್ತಿದ್ದಾರೆ.   ‘ವರ್ಗಾವಣೆ ವಿಚಾರವಾಗಿ ಮಾತನಾಡಲು ಹೋಗಿದ್ದ ಸಂದರ್ಭದಲ್ಲಿ ಪ್ರಜ್ವಲ್ …

Read More »

ಪ್ರಜ್ವಲ್ ಪ್ರಕರಣ: ಬಿಜೆಪಿ -ಜೆಡಿಎಸ್‌ ಮೈತ್ರಿ ಮುರಿದು ಬೀಳುತ್ತಾ? : ಕುಮಾರಸ್ವಾಮಿ ಏನಂದ್ರು?

ಬೆಂಗಳೂರು, ಮೇ 08: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಾಗಿದ್ದು, ಅಬ್ಬರದ ಪ್ರಚಾರ ನಡೆಸುವ ಹೊತ್ತಲಿ ಹಾಸನ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪೆನ್‌ ಡ್ರೈವ್‌ ಪ್ರಕರಣ ಸದ್ದು ಮಾಡಿದೆ. ಇತ್ತ ಪ್ರಜ್ವಲ್‌ ರೇವಣ್ಣ ಅವರ ಪ್ರಕರಣ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಹ ಈ ಕುರಿತು …

Read More »

ಭಾರತ ಸೇರಿ ಏಳು ರಾಷ್ಟಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ -ಶ್ರೀಲಂಕಾ ತೀರ್ಮಾನ

ಕೊಲಂಬೊ (ಪಿಟಿಐ): ಭಾರತ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತವಾಗಿ ಪ್ರವಾಸಿ ವೀಸಾ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಭಾರತವಲ್ಲದೆ ಚೀನಾ, ರಷ್ಯಾ, ಜಪಾನ್‌, ಮಲೇಷ್ಯಾ, ಥಾಯ್ಲೆಂಡ್, ಇಂಡೊನೇಷ್ಯಾ ರಾಷ್ಟ್ರಗಳ ಪ್ರವಾಸಿಗಳಿಗೆ ಶುಲ್ಕರಹಿತವಾಗಿ ವೀಸಾ ಸೇವೆ ನೀಡಲಾಗುತ್ತದೆ ಎಂದು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.’ವಿದೇಶಿಯರಿಗೆ 30 ದಿನ ಅವಧಿಯ ವೀಸಾಗಾಗಿ 50 ಡಾಲರ್ ಶುಲ್ಕ ವಿಧಿಸುವ ಹಾಗೂ ಭಾರತ ಸೇರಿ …

Read More »

ಏರ್ ಇಂಡಿಯಾದ 70ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ

ನವದೆಹಲಿ: ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆವರೆಗೆ 70 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಗೊಳಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಹಿರಿಯ ಸಿಬ್ಬಂದಿ ಸಾಮೂಹಿಕ ಅನಾರೋಗ್ಯದ ರಜೆಯ ಮೇಲೆ ತೆರಳಿದ ನಂತರ ಮಂಗಳವಾರ ರಾತ್ರಿ 70 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ನ ಹಿರಿಯ ಸಿಬ್ಬಂದಿ ಸಾಮೂಹಿಕ ಅನಾರೋಗ್ಯ ರಜೆ ತೆಗೆದುಕೊಂಡ ನಂತರ ಏರ್ ಇಂಡಿಯಾ ಎಕ್ಸ್ಪ್ರೆಸ್ …

Read More »

ವೈದ್ಯಕೀಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ: ಪ್ರಕರಣ ದಾಖಲು

ಮಂಗಳೂರು: ನಗರದ ವೈದ್ಯಕೀಯ ಕಾಲೇಜೊಂದರ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ಚಿತ್ರೀಕರಿಸುತ್ತಿದ್ದುದು ಪತ್ತೆಯಾಗಿದೆ. 17 ವರ್ಷದ ಬಾಲಕನೊಬ್ಬ ಈ ಕೃತ್ಯವೆಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ‘ಈ ಕೃತ್ಯ ವೆಸಗಿದ್ದಾನೆ ಎನ್ನಲಾದ, ಕಾನೂನು ಸಂಘರ್ಷಕ್ಕೆ ಸಿಲುಕಿದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಆತನನ್ನು ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿ ಮುಂದಿನ‌ ಕ್ರಮ ಕೈಗೊಂಡಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮೊಬೈಲ್ ರಿಂಗಿಣಿಸಿತ್ತು. …

Read More »

ಪ್ರಜ್ವಲ್ ಪ್ರಕರಣ; ಸುರ್ಜೇವಾಲ ಕಥೆ, ಸಿದ್ದರಾಮಯ್ಯ ಡೈರೆಕ್ಟರ್, ಶಿವಕುಮಾರ್ ಪ್ರೊಡ್ಯೂಸರ್

ಬೆಂಗಳೂರು:ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸುರ್ಜೇವಾಲ ಕಥೆ ಬರೆದಿದ್ದಾರೆ. ಸಿದ್ದರಾಮಯ್ಯ ಡೈರೆಕ್ಟರ್ ಆಗಿದ್ದರೆ, ಡಿ.ಕೆ.ಶಿವಕುಮಾರ್ ಪ್ರೊಡ್ಯೂಸರ್. ಈ ಮೂವರು ಸೇರಿಯೇ ಪ್ರಕರಣವನ್ನು ಸೃಷ್ಟಿ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುರ್ಜೆವಾಲ, ಸಿದ್ದರಾಮಯ್ಯ ಮತ್ತು ಶಿವಕುಮಾರ್. ಈ ತ್ರಿಬಲ್ ಎಸ್ ಮೂಲಕ ಪ್ಲಾನ್ ಮಾಡಿದ್ದಾರೆ ಎಂದರು. ದೇವರಾಜೇಗೌಡ ಒಬ್ಬ ವಕೀಲ. ಅವರು ಆಡಿಯೋ ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಆಫರ್ ಕೊಟ್ಟಿರೋ ಬಗ್ಗೆ ಮಾತನಾಡಿದ್ದಾರೆ. ಈ ತ್ರಿಬ್ಬಲ್ …

Read More »

ವಿಶ್ವದಾದ್ಯಂತ ಎಲ್ಲಾ ಕೋವಿಶೀಲ್ಡ್ ಲಸಿಕೆ ವಾಪಸ್ ಪಡೆದ ಅಸ್ಟ್ರಾಜೆನಿಕಾ

ನವದೆಹಲಿ: ವಿಶ್ವದಾದ್ಯಂತ ಕೋವಿಶೀಲ್ಡ್ ಎಲ್ಲಾ ಲಸಿಕೆಗಳನ್ನು ಅಸ್ಟ್ರಾಜೆನಿಕಾ ಕಂಪನಿ ವಾಪಸ್ ಪಡೆದುಕೊಂಡಿದೆ. ಲಸಿಕೆ ತಯಾರಿಸುವುದಿಲ್ಲ ಮತ್ತು ಸರಬರಾಜು ಮಾಡುವುದಿಲ್ಲ ಎಂದು ಅಸ್ಟ್ರಾಜೆನಿಕಾ ಕಂಪನಿ ತಿಳಿಸಿದೆ ಲಸಿಕೆ ಹಿಂಡೆದಿರುವುದು ಕಾಕತಾಳಿಯವಷ್ಟೇ. ಅಡ್ಡ ಪರಿಣಾಮದ ಕಾರಣವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.   ಅನೇಕ ರೂಪಾಂತರದ ಕೋವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸಿದ ನಂತರ ಲಭ್ಯವಿರುವ ನವೀಕರಿಸಿದ ಲಸಿಕೆಗಳು ಹೆಚ್ಚುವರಿಯಾಗಿವೆ ಎಂದು ಕಂಪನಿಯು ಹೇಳಿದೆ. ಇತ್ತೀಚೆಗೆ, ಅಸ್ಟ್ರಾಜೆನಿಕಾ UK ಪ್ರಧಾನ ಕಚೇರಿಯು, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಕೋವಿಡ್ …

Read More »

108 ಸಿಬ್ಬಂದಿ ಮುಷ್ಕರದಿಂದ ಹಿಂದೆ ಸರಿದಿದ್ದಾರೆ, ಸರ್ಕಾರದಿಂದ ವೇತನ ಪಾವತಿ ಬಾಕಿ ಇಲ್ಲ: ಸಚಿವ ಗುಂಡೂರಾವ್

108 ಸಿಬ್ಬಂದಿ ಮುಷ್ಕರದಿಂದ ಹಿಂದೆ ಸರಿದಿದ್ದಾರೆ, ಸರ್ಕಾರದಿಂದ ವೇತನ ಪಾವತಿ ಬಾಕಿ ಇಲ್ಲ: ಸಚಿವ ಗುಂಡೂರಾವ್ ಬೆಂಗಳೂರು: 108 ಆಂಬ್ಯುಲೆನ್ಸ್ ಸಿಬ್ಬಂದಿ ತಮ್ಮ ಮುಷ್ಕರದಿಂದ ಹಿಂದೆ ಸರಿದಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಗೂ ಜಿವಿಕೆ ಇಎಂಆರ್ ಸಂಸ್ಥೆಯವರೊಂದಿಗೆ ಚರ್ಚೆ ನಡೆಸಿದ್ದಾರೆ.

Read More »

SIT ಅಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಮ್ & ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್: ಹೆಚ್ಡಿಕೆ ಕಿಡಿ

ಬೆಂಗಳೂರು: SIT ಸಿದ್ದರಾಮಯ್ಯ ಇನ್ವೆಸ್ಟಿಗೇಶನ್ ಟೀಮ್ ಹಾಗೂ ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್ ಆಗಿ ಕೆಲಸ ಮಾಡುತ್ತಿದೆ. ಅವರಿಬ್ಬರೂ ಹಾಗೂ ಪ್ರಭಾವಿ ಸಚಿವರ ಒತ್ತಡಕ್ಕೆ SIT ಸಿಲುಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಪೆನ್ ಡ್ರೈವ್ಹಾಗೂ ಮಹಿಳೆಯರ ವಿಡಿಯೋ ಬಹಿರಂಗ ಮಾಡಿದ ಎರಡೂ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು.

Read More »