Breaking News

Monthly Archives: ಮೇ 2024

ಅಂಜಲಿ ಕುಟುಂಬಕ್ಕೆ ಜೋಳಿಗೆ ಹಣ: ಚಂದ್ರಶೇಖರ್ ಸ್ವಾಮೀಜಿ

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಹುಬ್ಬಳ್ಳಿಯಲ್ಲಿ ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಹುಕ್ಕೇರಿ ಹಿರೇಮಠದಲ್ಲಿ ನಡೆದ ಲಿಂಗದೀಕ್ಷೆ (ಶಿವದೀಕ್ಷಾ) ಪಡೆದ ವಟುಗಳು ಭೀಕ್ಷಾಟನೆ ಮೂಲಕ ಜೋಳಿಗೆಯಲ್ಲಿ ತಂದ ₹ 50 ಸಾವಿರ ನೀಡುವುದಾಗಿ ಸ್ಥಳೀಯ ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಹೇಳಿದರು.   ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಜಂಗಮದೀಕ್ಷೆ ಕಾರ್ಯಕ್ರಮದಲ್ಲಿ ಜಂಗಮರ ಜೋಳಿಗೆಯಲ್ಲಿ ಬಂದ ಹಣವನ್ನು ಮಠಕ್ಕಾಗಿ ಬಳಸುತ್ತೇವೆ. ಆದರೆ ಕುಟುಂಬ ಸಾಗಿಸುತ್ತಿದ್ದ ಅಂಜಲಿ ಅಂಬಿಗೇರ ಅವರ ಹತ್ಯೆಯಿಂದ ಕುಟುಂಬ …

Read More »

ವೀರಯ್ಯಸ್ವಾಮಿ ಶಾಸ್ತ್ರಿಮಠ ಇನ್ನಿಲ್ಲ: ನಾಳೆ ಅಂತ್ಯಕ್ರಿಯೆ

ಬೆಂಗಳೂರು: ಜಗದ್ಗುರು ದಾರುಕಾಚಾರ್ಯ ಆಶ್ರಮ ಸ್ಥಾಪಕ ವೀರಯ್ಯಸ್ವಾಮಿ ಶಾಸ್ತ್ರಿಮಠ (91) ಭಾನುವಾರ ಬೆಳಗ್ಗೆ ಶಿವಕ್ಯರಾದರು. ಸ್ವಾತಂತ್ಯ ಹೋರಾಟಗಾರರಾಗಿದ್ದ ಇವರು ನೇತಾಜಿ ಸುಭಾಸ್​ಚಂದ್ರ ಬೋಸ್​ ಟ್ರಸ್ಟ್​ ಸೇರಿ ಹಲವು ಸಂ ಸಂಸ್ಥೆಗಳಲ್ಲಿ ಸಕ್ರಿಯಯಾಗಿದ್ದರು. ಸನಾತನ ಧರ್ಮದ ಬಗ್ಗೆ ಪ್ರವರ್ಚನ ನೀಡುತ್ತಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ರಾಜಾಜಿನಗರದ ಮನೆಯಲ್ಲಿ ಭಕ್ತಾಧಿಗಳಿಗೆ ದರ್ಶನ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ( ಮೇ 20) ಬೆಳಗ್ಗೆ ಮಾಗಡಿ ರಸ್ತೆಯ ಕನ್ನಹಳ್ಳಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Read More »

ಶಂಕರ್ ಬಿದರಿ ಫೇಸ್‌ಬುಕ್ ಮತ್ತೆ ಹ್ಯಾಕ್

ಬೆಂಗಳೂರು: ಫೇಸ್‌ಬುಕ್ ಹ್ಯಾಕ್ ಮಾಡಿ ಮೋಸ ಮಾಡುವ ಸೈಬರ್ ಕಳ್ಳರ ಕಾಟ ನಿವೃತ್ತ ಡಿಜಿ-ಐಜಿಪಿ ಶಂಕರ್ ಬಿದರಿ ಅವರಿಗೂ ತಪ್ಪಿಲ್ಲ. ಕೆಲ ದಿನಗಳ ಹಿಂದೆ ಶಂಕರ್‌ಬಿದರಿ ಫೇಸ್‌ಬುಕ್ ಹ್ಯಾಕ್ ಮಾಡಿದ್ದ ಸೈಬರ್ ಕಳ್ಳರು ಟ್ರೇಟಿಂಗ್ ವ್ಯವಹಾರದಲ್ಲಿ ಹಣ ತೊಡಗಿಸಿದರೇ ಹೆಚ್ಚಿನ ಲಾಭಾಂಶ ಸಿಗಲಿದೆ ಎಂಬ ಪೋಸ್ಟ ಮಾಡಿದ್ದರು. ಜತೆಗೆ ಲಿಂಕ್ ಸಹ ಕಳುಹಿಸಿ ಅದರ ಮೇಲೆ ಕ್ಲಿಕ್ ಮಾಡಿ ಹೂಡಿಕೆ ಮಾಡುವಂತೆ ಶಂಕರ್ ಬಿದರಿ ಅವರೇ ಸಲಹೆ ಕೊಟ್ಟಂತೆ ಮಾಡಿದ್ದರು. ಕಳೆದ …

Read More »

ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು

ಕಾರ್ಕಳ:/ಅಜೆಕಾರು: ಮೀನು ಹಿಡಿಯಲು ತೆರಳಿದ್ದ ಒಂದೆ ಕುಟುಂಬದ ಇಬ್ಬರು ಸದಸ್ಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ದರ್ಖಾಸು ನಿವಾಸಿ ವಿವಾಹಿತ ಹರೀಶ್ ಪೂಜಾರಿ( 43) ಮತ್ತು ಸಹೋದರಿ ಮಗ ಕೆರ್ವಾಶೆಯ ಪಾಚಾರಬೆಟ್ಟು ನಿವಾಸಿ ಬಾಲಕ ರಿತೇಶ್(17) ಮೃತ ದುರ್ದೈವಿಗಳು. ಶಿರ್ಲಾಲುವಿನ ಮೂಡಯಿಗುಡ್ಡೆ ದರ್ಖಾಸು ನಿವಾಸಿ, ಸೇತು ಪೂಜಾರಿ ಕಮಲ ದಂಪತಿಗಳ ಪುತ್ರರಾಗಿರುವ ಹರೀಶ್ ಪೂಜಾರಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರು. …

Read More »

ಶ್ರೀಮಂತರ ಸಾಲ ಮನ್ನಾ ದೇಶಕ್ಕೆ ಲಾಭವಾಗುತ್ತಿದೆಯೇ..? : ಕಾಂಗ್ರೆಸ್‌‍ ಪ್ರಶ್ನೆ

ಬೆಂಗಳೂರು, ಮೇ 19- ಬಡವರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಯೋಜನೆಗಳಿಂದ ಆರ್ಥಿಕ ದಿವಾಳಿಯಾಗುತ್ತಿದೆ ಎಂದು ಪ್ರತಿಪಾದಿಸುವ ಪ್ರಧಾನಿಯವರಿಗೆ ಶ್ರೀಮಂತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಲಾಭವಾಗುತ್ತಿದೆಯೇ ಎಂದು ಕಾಂಗ್ರೆಸ್‌‍ ಪ್ರಶ್ನಿಸಿದೆ. ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌‍ ಪಕ್ಷ ಶ್ರೀಮಂತ ಉದ್ಯಮಿಗಳ 20 ಲಕ್ಷ ಕೋಟಿ ಸಾಲವನ್ನು ರೈಟಾಫ್ ಮಾಡಿದರೆ ದೇಶದ ಪ್ರಗತಿಗೆ ಮಾರಕ ಆಗಲಿಲ್ಲವೇ? ಎಂದು ಕಿಡಿಕಾರಿದೆ.     ಶ್ರೀಮಂತ ಉದ್ಯಮಿಗಳ ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸಿ ದೇಶದ …

Read More »

ಬಿತ್ತನೆ ಬೀಜ ಖರೀದಿಗೆ ರೈತರಿಗೆ ಸಲಹೆಗಳು

ಬೆಂಗಳೂರು, ಮೇ 19: ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಪೂರ್ವ ಮುಂಗಾರು, ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದೆ. ನೈಋತ್ಯ ಮುಂಗಾರು ಹಂಗಾಮು 2024 ಸಹ ಆರಂಭವಾಗಲು ಕೆಲವೇ ದಿನ ಉಳಿದಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕಳೆದ ವರ್ಷದ ಮಳೆ ಕೊರತೆ, ಬೆಳೆ ನಷ್ಟ, ಬೇಸಿಗೆಯಿಂದ ಕಂಗಾಲಾಗಿದ್ದ ರೈತರಿಗೆ ಪೂರ್ವ ಮುಂಗಾರು ಮಳೆ ಕೊಂಚ ನೆಮ್ಮದಿ ತಂದಿದೆ. ನೈಋತ್ಯ ಮುಂಗಾರು ಮಳೆ ಸಹ ಉತ್ತಮವಾಗಿ ಸುರಿಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಕೃಷಿ ಚಟುವಟಿಕೆಗೆ …

Read More »

ನಾಳೆ 5ನೇ ಹಂತದ ಲೋಕಸಭೆ ಚುನಾವಣೆ: ರಾಜನಾಥ್, ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಒಮರ್ ಅಬ್ದುಲ್ಲಾ ಭವಿಷ್ಯ ನಿರ್ಧಾರ

ನವದೆಹಲಿ: 18ನೇ ಲೋಕಸಭೆ ಚುನಾವಣೆ ಐದನೇ ಹಂತದ ಮತದಾನವು ಮೇ 20 ಸೋಮವಾರದಂದು ನಡೆಯಲಿದೆ. ಐದನೇ ಹಂತದಲ್ಲಿ ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 49 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಲಡಾಖ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಜಾರ್ಖಂಡ್,) ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ. ಐದನೇ ಹಂತದ ಚುನಾವಣೆಯ ಕೆಲವು ಪ್ರಮುಖ ಕ್ಷೇತ್ರಗಳೆಂದರೆ ಲಕ್ನೋ, ರಾಯ್ ಬರೇಲಿ, ಅಮೇಥಿ, ಫತೇಪುರ್, ಫೈಜಾಬಾದ್ ಮತ್ತು ಉತ್ತರ ಪ್ರದೇಶದ …

Read More »

ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

ಬೀದರ್: ಬ್ಯಾಂಕ್‌ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್ ಟ್ಯಾಂಕ್ ಕವರ್ ನಲ್ಲಿ ಇಟ್ಟಿದ್ದ 1.37 ಲಕ್ಷ ರೂ‌ ಕಳವಾಗಿದೆ. ಬಸವಕಲ್ಯಾಣ ನಗರದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ಇಲ್ಲಿನ ನಬಿಯುದ್ದೀನ್ ಶೇಖ್ ಎಂಬುವರಿಗೆ ಸೇರಿದ ಹಣ ಕಳುವಾಗಿದೆ. ಸಿಸಿ ಟಿವಿಯಲ್ಲಿ ಹಣ ದೋಚಿದ ದೃಶ್ಯ ಸೆರೆಯಾಗಿದೆ. ಬ್ಯಾಂಕ್ ನಲ್ಲಿ ಹಣ ತುಂಬಲು ಬಂದಿದ್ದ ನಬಿಯುದ್ದೀನ್ …

Read More »

ಪ್ರಜ್ವಲ್ ರೇವಣ್ಣಗೆ ಅರೆಸ್ಟ್ ವಾರಂಟ್ ನೀಡಿದ ಕೋರ್ಟ್‌

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಅಸಲಿ ಸಂಕಷ್ಟ ಶುರುವಾಗಿದೆ. ವಿದೇಶದಲ್ಲಿರುವ ಪ್ರಜ್ವಲ್‌ ಸೆರೆಗೆ ಎಸ್‌ಐಟಿ ಸರ್ಜಿಕಲ್ ಸ್ಟ್ರೈಕ್‌ ಆರಂಭಿಸಿದ್ದು, ಇದೀಗಹೊಳೆನರಸೀಪುರ ಕೇಸ್‌ನಲ್ಲಿ(Prajwal Revanna Case) ಪ್ರಜ್ವಲ್‌ ಬಂಧನಕ್ಕೆ ಅರೆಸ್ಟ್ ವಾರಂಟ್ ಪಡೆದಿದೆ. ಜತೆಗೆ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಲು ಕೂಡ ಕೋರ್ಟ್ ಅನುಮತಿ ನೀಡಿದೆ. ನಗರದ 42ನೇ ಎಸಿಎಂಎಂ ಕೋರ್ಟ್‌, ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಹೊರಡಿಸಿದ್ದ ನೋಟಿಸ್‌ಗಳ ಬಗ್ಗೆ ಕೋರ್ಟ್‌ ಮಾಹಿತಿ ಕೇಳಿತ್ತು. ಈ …

Read More »

ಪೋಷಕರಿಗೆ ಗುಡ್ ನ್ಯೂಸ್ : ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ‘LKG, UKG’ ಆರಂಭ!

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. 4-5 ನೇ ವರ್ಷದ ಮಕ್ಕಳಿಗಾಗಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರವು ಈ ವರ್ಷ ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿಯ ಹಾಗೂ ದ್ವಿಭಾಷಾ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ತರಗತಿಗಳನ್ನು …

Read More »